UN NETWORKS ದೇರಳಕಟ್ಟೆ: ಗಣಕ ಯಂತ್ರ ಆಧಾರಿತವಾಗಿ ವಿನ್ಯಾಸ ಮಾಡುವುದರಿಂದ ನೂತನ ಔಷಧ ಸಂಶೋಧನೆಯ ವಿಷಯಗಳನ್ನು ಅತ್ಯಂತ ತ್ವರಿತವಾಗಿ ಮಾಡಲು ಸಾಧ್ಯ. ಹಾಗೆಯೇ ಅತಿ ಕಡಿಮೆ ಖರ್ಚು ಹಾಗೂ ಅಲ್ಪ ಸಮಯದಲ್ಲಿ ಔಷಧ ಉತ್ಪಾದನೆ ಸಾಧ್ಯ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಂ ಶೆಟ್ಟಿ,ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಅಧೀನದ ಪಾನೀರ್ ಕ್ಯಾಂಪಸ್ ನಲ್ಲಿರುವ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾ ವಿದ್ಯಾಲಯದ ಔಷಧೀಯ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಶ್ರೋಡಿಂಜರ್ ಕಂಪೆನಿಯ ಸಹಭಾಗಿತ್ವದಲ್ಲಿ “ಗಣಕ ಯಂತ್ರ ಆಧಾರಿತ ಔಷಧ ವಿನ್ಯಾಸ ಹಾಗೂ ಸಂಶೋಧನೆ’ ಯ ಬಗ್ಗೆ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಎಸ್. ಶಾಸ್ತ್ರಿ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ. ಈಶ್ವರ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಜೇನಿ ಪಿ. ಜೇಮ್ಸ್ ವಂದಿಸಿದರು.
Author: UllalaVani
UN NETWORKS ಪಾವೂರು: ಉಳಿಯ -ಅಡ್ಯಾರ್ ಸಂಪರ್ಕಿಸುವ ತೂಗುಸೇತುವೆಯನ್ನು ಹಾನಿಗೈದ ಕೃತ್ಯವನ್ನು ಡಿವೈಎಫ್‍ಐ ಖಂಡಿಸಿದ್ದು, ಆರೋಪಿಗಳ ಬಂಧನ ಹಿನ್ನೆಲೆಯಲ್ಲಿ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಡಿವೈಎಫ್‍ಐ ಜಿಲ್ಲಾ ಸಮಿತಿಯ ನಿಯೋಗ ಸೇತುವೆ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ದ್ವೀಪ ನಿವಾಸಿಗಳು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸೇತುವೆ ನಾಶಗೊಳಿಸಿದ ದುಷ್ಕರ್ಮಿಗಳು ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ವ್ಯಕ್ತಿಗಳನ್ನು ಬಂಧಿಸದಿದ್ದರೆ ಉಳಿಯ ಪ್ರದೇಶದ ನಾಗರಿಕರ ಹೋರಾಟಕ್ಕೆ ಡಿವೈಎಫ್‍ಐ ಸಂಪೂರ್ಣ ಬೆಂಬಲ ನೀಡಲಿದೆ. ಒಂದು ವಾರದೊಳಗೆ ಆರೋಪಿಗಳ ಬಂಧನವಾಗದಿದ್ದರೆ ನಾಗರಿಕರ ಜೊತೆ ಸೇರಿ ಮುಂದಿನ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ನಿಯೋಗದಲ್ಲಿ ರಫೀಕ್ ಹರೇಕಳ ಹಾಗೂ ಅಶ್ರಫ್ ಕೆ.ಸಿ.ರೋಡ್ ಉಪಸ್ಥಿತರಿದ್ದರು. ಜೆಡಿಎಸ್‍ನಿಂದ ಮಾಹಿತಿ ಸಂಗ್ರಹ ಮಂಗಳೂರು ಕ್ಷೇತ್ರ ಜಾತ್ಯಾತೀತ ಜನತಾದಳದ ನಿಯೋಗ ಸೋಮವಾರ ಉಳಿಯಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ. ಸೇತುವೆಗೆ ಹಾನಿಮಾಡಿದ ದುಷ್ಕರ್ಮಿಗಳನ್ನ ಪತ್ತೆಹಚ್ಚಿ…
UN NETWORKS ಉಳ್ಳಾಲ: ಜಿಲ್ಲೆಯ ಉಸ್ತುವಾರಿ ಸಚಿವರ ಪ್ರೇರಣೆಯಿಂದಲೇ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರ ಆಪ್ತರು, ಬಾಬರಿ ಮಸೀದಿ ಮೇಲೆ ಅಭಿಮಾನ ಇರುವ ಕಾಂಗ್ರೆಸ್ಸಿಗನ ಮೂಲಕವೇ ಗಮನಕ್ಕೆ ಬಂದಿದೆ ಎಂದು ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ನಾಯಕರ ಹಾಗೂ ಇತರರ ಮೇಲೆ ದಾಖಲಾದ ಸ್ವಯಂಪ್ರೇರಿತ ಪ್ರಕರಣ ಹಿಂತೆಗೆಯಲು ಒತ್ತಾಯಿಸಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಉಳ್ಳಾಲ ಆರಕ್ಷಕ ಠಾಣೆ ಎದುರು ಮಂಗಳವಾರ ಜರಗಿದ ಬೃಹತ್ ಮಟ್ಟದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಬಾಬರಿ ಮಸೀದಿ ಧ್ವಂಸ ಪ್ರಕರಣ ಮುಸಲ್ಮಾನರ ಸಮಸ್ಯೆಯಲ್ಲ, ದೇಶದ ಜಾತ್ಯಾತೀತವಾದಿಗಳಿಗೆ ಮಾಡಿದ ಅವಮಾನವಾಗಿದೆ. ಸಂವಿಧಾನ ವಿರೋಧಿ ಕೃತ್ಯವಾಗಿದೆ. ಜಾತ್ಯಾತೀತ ವ್ಯಕ್ತಿಗಳು ಜಾಗರೂಕರಾಗಬೇಕು ಅನ್ನುವ ಉದ್ದೇಶದಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಉಳ್ಳಾಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಬಾಬರಿ ಮಸೀದಿ ಧ್ವಂಸ ವಿಚಾರದಲ್ಲಿ ಸಂಘಪರಿವಾರಕ್ಕಿಂತ ಹೆಚ್ಚು ಆಸಕ್ತಿ ಜಾತ್ಯಾತೀತ ಕಾಂಗ್ರೆಸ್ ಪಕ್ಷಕ್ಕಿದೆ ಇರುವಂತೆ ಇದೆ. ಧ್ವಂಸ ಸಂದರ್ಭದಲ್ಲಿಯೂ…
UN NETWORKS ಉಳ್ಳಾಲ: ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧಾ ಕೂಟದ 83ಕೆಜಿ ವಿಭಾಗದಲ್ಲಿ ಮಿಥುನ್ ಕುಮಾರ್ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರು ಭಟ್ನಗರ ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.
UN NETWORKS ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ, ತೊಕ್ಕೊಟ್ಟು ಉಳ್ಳಾಲ ಇದರ ವತಿಯಿಂದ ಫೆ.24ರಂದು ತೊಕ್ಕೊಟ್ಟು ಮಂಗಳೂರ್ ವನ್ ಶಾಲಾ ಮೈದಾನದಲ್ಲಿ ನಡೆಯಲಿರುವ ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ಕೋಟಿಚೆನ್ನಯ್ಯ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣರವರು ವೇದಿಕೆಯ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ವೇದಿಕೆಯ ಕಾರ್ಯಾದ್ಯಕ್ಷ ಸತೀಶ್ ಕರ್ಕೇರ, ನಿರ್ದೇಶಕರುಗಳಾದ ಬಾಬು ಶಾಸ್ತಾ ಕಿನ್ಯಾ, ಸುರೇಶ್.ಕೆ.ಪಿ ಮಾಡೂರು, ಪಾಧಾದಿಕಾರಿಗಳಾದ ಜೀವನ್ ಕುಮಾರ್ ತೊಕ್ಕೊಟ್ಟು, ಲಕ್ಷ್ಮಣ್ ಪೂಜಾರಿ, ಹರೀಶ್ ಮುಂಡೋಳಿ, ಆನಂದ.ಕೆ.ಅಸೈಗೋಳಿ, ಯು. ರಾಜೇಶ್ ಕೆರೆಬೈಲ್, ಹರೀಶ್ ಅಂಬ್ಲಮೊಗರು, ಪ್ರವೀಣ್.ಎಸ್.ಕುಂಪಲ ಉಪಸ್ಥಿತರಿದ್ದರು.
UN NETWORKS ಕಿನ್ಯಾ : ಸುವರ್ಣ ಮಹೋತ್ಸವ ಆಚರಣೆಗೆ ಸಜ್ಜಾಗಿರುವ ಕಿನ್ಯಾ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಕಾರ್ಯಕ್ರಮ ಚಿನ್ನದಂತೆ ನಡೆಯಲಿ, ವರ್ಷ ಪೂರ್ತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಘ ಇನ್ನಷ್ಟು ಬೆಳೆಯಲಿ ಎಂದು ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪಂಜಳ ಆರ್ಶೀವನದ ಸಂದೇಶ ನೀಡಿದರು. ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ 49ನೇ ವಾರ್ಷಿಕೋತ್ಸವ- ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮವನ್ನು ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪಂಜಳ ಉದ್ಘಾಟಿಸಿ ಮಾತನಾಡಿದರು.ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಮೋಹನ್ ಆಳ್ವ ತೇವುನಾಡ್‍ಗುತ್ತು ಸುವರ್ಣ ಮಹೋತ್ಸವದ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದರು. ಕಿನ್ಯ ಬೆಳರಿಂಗೆ ಶ್ರೀ ಮಲರಾಯ ದೈವದ ಪಾತ್ರಿ ಮೈಂದ ಪೂಜಾರಿ ಮಿತ್ತಡ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ಯಕ್ಷರಂಗದಲ್ಲಿ ನಾಟ್ಯ ಅಭಿನಯದಲ್ಲಿ ಇನ್ನಷ್ಟು…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳ ನೇತೃತ್ವದಲ್ಲಿ `ಆಹಾರೋತ್ಸವ-2019’ವು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೇ ಪ್ರಥಮ ಬಾರಿ ಇಂತಹ ಆಹಾರೋತ್ಸವವನ್ನು ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ವಿವಿಯ ಪ್ರಭಾರ ಕುಲಪತಿ ಪ್ರೊ.ಈಶ್ವರ್ ಪಿ ಅವರು ಆಹಾರೋತ್ಸವಕ್ಕೆ ಚಾಲನೆ ನೀಡಿ ಶುಭಹಾರೈಸಿ ವಿದ್ಯಾರ್ಥಿಗಳ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಆಹಾರೋತ್ಸವದಲ್ಲಿ ವಿವಿಧ ಬಗೆಯ ಖಾದ್ಯಗಳು ಆಹಾರೋತ್ಸವದಲ್ಲಿ ಕರ್ನಾಟಕ, ಕೇರಳ ಶೈಲಿ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಬಹಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಸಸ್ಯಹಾರಿ ವಿಭಾಗದಲ್ಲಿ ಸೇಮೆ, ಅಪ್ಪಮ್, ನೀರುದೋಸೆ, ಗೀರೈಸ್, ಪನೀರ್ ಮಸಾಲ, ಗೋಬಿ ಮಂಚೂರಿ, ಬೇಬಿ ಕಾರ್ನ್ ಚಿಲ್ಲಿ, ವೆಜ್ ಬಿರಿಯಾನಿ, ವೆಜ್ ತಾಲಿ, ಕ್ಯಾರೆಟ್ ಹಲ್ವ, ಗುಲಾಬ್ ಜಾಮೂನ್, ಕಬ್ಬಿನ ಜ್ಯೂಸ್ ಹಾಗೂ ಮಾಂಸಾಹಾರ ವಿಭಾಗದಲ್ಲಿ ಚಿಕನ್ ಮಸಾಲ, ಚಿಕನ್ ಚಿಲ್ಲಿ,…
UN NETWORKS ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಾಂಧವರ ಅಭಿವೃದ್ದಿಯೊಂದಿಗೆ ಶೈಕ್ಷಣಿಕ, ಕ್ರೀಡಾ ಪ್ರತಿನಿಧಿಗಳಿಗೆ ಪ್ರೋತ್ಸಾಹ ನೀಡಲು ಸಿದ್ಧವಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಗಳನ್ನು ಸಂಘ ಅನುಷ್ಠಾನಗೊಳಿಸಲಿದೆ ಎಂದು ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯ, ಬಂಟರ ಸಂಘ ತಲಪಾಡಿ ಗ್ರಾಮ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ, ಸಿರಿ ಸ್ವ ಸಹಾಯ ಸಂಘ ಸಹಯೋಗದೊಂದಿಗೆ ತಲಪಾಡಿ ಗ್ರಾಮ ಮಟ್ಟದ ಸಮಾಜ ಭಾಂದವರಿಗೆ ತಲಪಾಡಿ ವಿವೇಕಾನಂದನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ `ಗೊಬ್ಬುದ ಪಂತೊ’ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಳ್ಳಾಲ ವಲಯ ಒಕ್ಕೂಟದ ಹದಿನಾಲ್ಕು ಗ್ರಾಮಗಳಲ್ಲಿ ಅತೀಕ್ರಿಯಾಶೀಲ ಗ್ರಾಮ ಸಮಿತಿ ತಲಪಾಡಿ ಗ್ರಾಮ ಸಮಿತಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸುವುದರೊಂದಿಗೆ ಮುಂಚೂಣಿಯಲ್ಲಿದ್ದು, ಪ್ರತೀ ಗ್ರಾಮ ಸಮಿತಿಗಳು ಕರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಇನ್ನಷ್ಟು ಸಮಾಜದ ಬಾಂಧವರನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಎಂದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ…
UN NETWORKS ಕೊಣಾಜೆ:ಯುವ ಸಮುದಾಯ ಸಮಾಜ ಕಟ್ಟುವ, ಧಾರ್ಮಿಕ ಕಾರ್ಯಕ್ರಮಗಳನ್ನು ಗಟ್ಟಿಗೊಳಿಸುವ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವಲ್ಲಿ ಶ್ರಮದಾನ ಮಾಡುವ ಮೂಲಕ ಸಮಾಜ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಿಂದೂ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ದಕ್ಷ ಯುವ ಬಳಗ ಕಳೆದ ದಶ ವರ್ಷಗಳಿಂದ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಣಾಜೆ ಕೋಟಿಪದವು ಶ್ರೀ ರಾಮ ಮಂದಿರದ ವಠಾರದಲ್ಲಿ ಕೊಣಾಜೆ ಗ್ರಾಮಚಾವಡಿ ದಕ್ಷ ಯುವ ಬಳಗ ಇದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಹಿಂದೆ ಯುವ ಸಮುದಾಯ ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜ ನಿರ್ಮಾಣದಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂದಿನ ಮೊಬೈಲ್ ಯುಗದಲ್ಲಿ ಯುವ ಜನತೆ ವಾಟ್ಸಪ್‍ಗಳ ಮೂಲಕ ಸಂಘಟಿತರಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯವನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ…
UN NETWORKS ಮಂಜನಾಡಿ : ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳನ್ನು ಗುರುತಿಸಿ ಅವರಿಗೆ ವಿವಾಹ ನೆರವೇರಿಸುವ ಕಾರ್ಯ ಪವಿತ್ರವಾದ ಕೆಲಸ. ಎಷ್ಟೋ ಜನ ಮದುವೆಗಾಗಿ ಸಾಲ ಮಾಡಿ ಇಡೀ ಜೀವನವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ತನ್ನ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಹೆಣ್ಮಕ್ಕಳಿಗೆ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಜನಾಡಿ ನರಿಂಗಾನದ ಅಲ್ ಮದೀನಾ ಸಂಸ್ಥೆಯ ಬೆಳ್ಳಿಹಬ್ಬ ಪ್ರಯುಕ್ತ ನಡೆದ 25ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಾದಿ ಭಾಗ್ಯ ಯೋಜನೆಯನ್ನು ಯಡಿಯೂರಪ್ಪ ಮತ್ತು ಶೋಭಾ ಅವರು ವಿರೋಧಿಸಿದ್ದರು. ಬಡ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ-ಪಂಗಡದವರ ಮತ್ತು ಹಿಂದುಳಿದವರ ಕೆಲಸ ಮಾಡುವಾಗ ನಾನು ಯಾರಿಗೂ ಹೆದರುವುದಿಲ್ಲ. ನನಗೆ ಶಕ್ತಿ ಕೊಟ್ಟವರು ಅವರೇ ಆಗಿದ್ದಾರೆ. ದುರ್ಬಲ ಜನರಿಗೆ ಶಕ್ತಿ ತುಂಬುವ ಕೆಲಸ ಸರಕಾರದ ಜವಾಬ್ದಾರಿಯಾಗಿದೆ. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ ನಾಡಿನ ಸಂಪತ್ತನ್ನು ಬಡವರಿಗೆ ವಿನಿಯೋಗಿಸುವ ಪ್ರಯತ್ನ ಆಗಿದೆ. ಸಂವಿಧಾನದ ಜವಾಬ್ದಾರಿಯನ್ನು…

