Author: UllalaVani

Kannada News From Coastal Karnataka

UN NETWORKS ಅಡ್ಯಾರು: ಗುಣ ಶ್ರೀ ವಿದ್ಯಾಲಯ ಅಡ್ಯಾರು ಇಲ್ಲಿ ವಾರ್ಷಿಕ ಕ್ರೀಡೋತ್ಸವ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಇವರು ಇವತ್ತು ಅದೆಷ್ಟೋ ವಿದ್ಯಾಸಂಸ್ಥೆಗಳು ವಾರ್ಷಿಕೋತ್ಸವವನ್ನು ಮಾಡುತ್ತವೆ. ಆದರೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವ ಕ್ರೀಡೋತ್ಸವವನ್ನು ಸಂಘಟನೆ ಮಾಡದಿರುವುದು ದುರಂತವೇ ಸರಿ. ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಕ್ರೀಡೆ ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ಅದೆಷ್ಟೋ ಶಾಲೆಗಳು ಮೈದಾನವಿಲ್ಲ ಎನ್ನುವ ಕಾರಣ ತೋರಿಸಿ, ದೈಹಿಕ ಶಿಕ್ಷಣ ಶಿಕ್ಷಕರನ್ನೂ ನೇಮಿಸದೇ, ಯಾವುದೇ ಕ್ರೀಡೆಗೆ ಪೂರಕವಾದ ಚಟುವಟಿಕೆಗಳನ್ನು ಮಾಡದೇ ಕೇವಲ ಪಠ್ಯಕ್ಕೆ ಹೆಚ್ಚಿನ ಒತ್ತನ್ನು ಕೊಡುವುದನ್ನು ಕಾಣುತ್ತೇವೆ. ಇದರಲ್ಲಿ ನಾವೆಲ್ಲರೂ ಪರಿವರ್ತನೆಯನ್ನು ಹೊಂದಬೇಕು ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಗಂಗಾಧರ್ ಮಾಣಿಯವರು ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿ ಈಡೇರಲು ಸದಾ ಪ್ರಯತ್ನವನ್ನು ಮಾಡಬೇಕು.ಇದರಿಂದ ಯಶಸ್ಸು ಕಾಣಬಹುದು ಎಂದರು.…

Read More

UN NETWORKS ಉಳ್ಳಾಲ: ಡ್ರೈವಿಂಗ್ ಶಾಲೆಯೊಂದರ ಶಿಕ್ಷಕ ದಂಪತಿ ಮೇಲೆ 50 ಮಂದಿಯ ತಂಡವೊಂದು ದಾಳಿ ನಡೆಸಿ ಕಾರು ಪುಡಿಗೈದು ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ಪ್ರಕರಣ ಸಂಬಂಧ ನಾಲ್ವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಡಿಪು ಸ್ಮಾರ್ಟ್ ಮೋಟಾರ್ ಡ್ರೈವಿಂಗ್ ಶಾಲೆಯ ಥೋಮಸ್(45) ಎಂಬವರಿಗೆ ಗಂಭೀರ ಹಲ್ಲೆ ನಡೆಸಲಾಗಿದೆ. ಘಟನೆ ವಿವರ: ಥೋಮಸ್ ಮತ್ತು ಅವರ ಪತ್ನಿ ಕಾರನ್ನು ಚಲಾಯಿಸುತ್ತಿದ್ದ ಸಂದರ್ಭ, ಅದೇ ಕಾರಿನಲ್ಲಿ ಕಾರು ಕಲಿಯಲು ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರಿದ್ದರು. ಇದರ ಬಗ್ಗೆ ಕೆಂಗಣ್ಣು ಬೀರಿದ ನೈತಿಕ ಪೊಲೀಸರ ತಂಡವೊಂದು ಕಾರನ್ನು ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ತಡೆದಿದ್ದಾರೆ. ಬಳಿಕ ಕಲ್ಲಿನಿಂದ ಕಾರಿನ ಗಾಜು ಪುಡಿಗೈದು ಹಾನಿಗೊಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಥೋಮಸ್ ಅವರಿಗೆ ಗಂಭೀರ ಹಲ್ಲೆ ನಡೆಸಿ ಪತ್ನಿಗೂ ದಾಳಿ ನಡೆಸಿದ್ದಾರೆ. ಸುಮಾರು 50 ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರಿನಲ್ಲಿ…

Read More

UN NETWORKS ತಲಪಾಡಿ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ದ ಮಂಗಳೂರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಂಗಳೂರಿನ ತಲಪಾಡಿಯಿಂದ ಪಂಪ್ ವೆಲ್ ವರೆಗೆ ಪಾದಯಾತ್ರೆ ಎಂಟು ವರ್ಷಗಳಿಂದ ಪೂರ್ಣವಾಗದ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಸಂಸದ ನಳಿನ್ ಕುಮಾರ್ ಬೇಜವಾಬ್ದಾರಿ ಖಂಡಿಸಿ ಪಾದಯಾತ್ರೆ ಸಚಿವ ಯು.ಟಿ.ಖಾದರ್ ರಿಂದ ಪಾದಯಾತ್ರೆಗೆ ಚಾಲನೆ ಸಂಜೆ ಪಂಪ್ ವೆಲ್ ನಲ್ಲಿ ಸಮಾರೋಪಗೊಳ್ಳಲಿರುವ ಪಾದಯಾತ್ರೆ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿ ಕಾಂಗ್ರೆಸ್ ನಾಯಕರು ಭಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಪಾದಯಾತ್ರೆ. ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಸಿದ್ದ ಹೇಳಿಕೆ ವಿಚಾರ ಮಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿಕೆ ಖಂಡಿತವಾಗಿಯೂ ಇಲ್ಲ, ಸಿಎಂ, ಡಿಸಿಎಂ, ಸಿದ್ದರಾಮಯ್ಯ ಎಲ್ಲರೂ ಇರೋ ಸಮನ್ವಯ ಸಮಿತಿ ಇದೆ.ಈ ಸಮನ್ವಯ ಸಮಿತಿಯಿಂದ ಸರ್ಕಾರ ಚೆನ್ನಾಗಿ ನಡೆಯುತ್ತಿದೆ.ಎಲ್ಲರೂ ಪ್ರೀತಿ ವಿಶ್ವಾಸದಿಂದ ಟೀಮ್ ವರ್ಕ್ ಆಗಿ ಕೆಲಸ ಮಾಡುತ್ತಿದ್ದೇವೆ ಹೀಗಾಗಿ ನಮ್ಮಲ್ಲಿ ಯಾವುದೇ ಗೊಂದಲಗಳು ಇರಲು ಸಾಧ್ಯವೇ ಇಲ್ಲ .ಈ ವಿಚಾರದಲ್ಲಿ ಸಿಎಂಗೆ ಯಾವುದೇ…

Read More

UN NETWORKS ಸೋಮೇಶ್ವರ: ಹಿಂದೂ ಯುವ ಸೇನೆ , ಪಾಂಚಜನ್ಯ ಶಾಖೆ ತೊಕ್ಕೊಟ್ಟು ಇದರ ವತಿಯಿಂದ ಸೋಮೇಶ್ವರ ದೇವಸ್ಥಾನದ ಅಶ್ವತ ಕಟ್ಟೆಯಲ್ಲಿ ಜೋತಾಡಿಸಿದ ಅಯ್ಯಪ್ಪ ಮಾಲೆಗಳನ್ನು ಹಾಗು ಹಳೆಯ ದೇವರ ಫೊಟೋಗಳನ್ನು ತೆಗೆದು ನೇತ್ರಾವತಿ ನದಿಯಲ್ಲಿ ವಿಸರ್ಜಿಸುವ ಕೆಲಸ ಆದಿತ್ಯವಾರ ಬೆಳಿಗ್ಗೆ ನಡೆಯಿತು. ಕಾರ್ಯಕ್ರಮದಲ್ಲಿ ಸೋಮೇಶ್ವರ ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಶ್ವನಾಥ ಗಟ್ಟಿ ವಗ್ಗ ಪಾಲ್ಗೊಂಡು, ಕಠಿನ ವೃತಾಚರಣೆಯಲ್ಲಿ ಅಯ್ಯಪ್ಪ ಮಾಲೆದರಿಸಿ ನಂತರ ಅದನ್ನು ತೆಗೆದು ಪವಿತ್ರವಾದ ಅಶ್ವತ ಮರದಲ್ಲಿ ಜೋತಾಡಿಸುವುದು ನಮ್ಮ ನಂಬಿಕೆಗೆ ಅಪಚಾರ, ಹಾಗೆಯೇ ಮನೆಯಲ್ಲಿ ಪೂಜಿಸಿದ ದೇವರ ಫೊಟೋಗಳನ್ನು ಕಟ್ಟೆಯಲ್ಲಿ ಬಿಟ್ಟು ಹೋಗುವುದರಿಂದ ನಮಗೆ ನಾವೇ ಗೃಹಚಾರ ತಂದುಕೊಂಡ ಹಾಗೆ, ಅದನ್ನು ಹರಿಯುವ ನದಿಯಲ್ಲಿ ಜಲಸ್ತಂಬನಗೊಳಿಸಿದರೆ ಮುಕ್ತಿ ಸಿಗುತ್ತದೆ ಎಂದು ತಿಳಿಸಿ ಆ ಕಾರ್ಯವನ್ನು ತೊಕ್ಕೊಟ್ಟು ಹಿಂದೂ ಯುವ ಸೇನೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಅದ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಹಿಂದೂ ಯುವ ಸೇನೆ…

Read More

UN NETWORKS ಇನೋಳಿ: ಇನೋಳಿ ಬಾರ್ಲ ನಿವಾಸಿ, ಪಾವೂರು ಗ್ರಾಪಂ ಮಾಜಿ ಸದಸ್ಯ ನಾಗಪ್ಪ ಶೆಟ್ಟಿ ಇನೋಳಿ (80) ರವಿವಾರ ರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾದರು. ಮೂರು ಅವಧಿಗೆ ಪಾವೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಜನಾನುರಾಗಿಯಾಗಿದ್ದ ನಾಗಪ್ಪ ಶೆಟ್ಟಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದರು. ಸ್ಥಳೀಯ ದೇವಸ್ಥಾನ ಸಮಿತಿಯ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಎಂಟು ಮಂದಿ ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Read More

UN NETWORKS ಉಳ್ಳಾಲ: ಗಾಳದ ಕೊಂಕಣಿ ಸಮಾಜ ಬಾಂಧರಿಂದ ಗೋವಾ ರಾಜ್ಯದ ದಾರ್ಗಲ್ ನಲ್ಲಿರುವ ಕುಲದೇವಿ ಶ್ರೀ ಶಾಂತಾದುರ್ಗಾ ದೇವಿಗೆ ಸುಮಾರು 2.16 ಲಕ್ಷ ರೂ.ವೆಚ್ಚದ ಹವಳದ ಚಿನ್ನದ ಚಿನ್ನ ಸರವನ್ನು ಸಮರ್ಪಿಸಲಾಯಿತು. ಮಂಗಳೂರು,ಬಂಟ್ವಾಳ,ಮುಂಬೈ,ಬೆಂಗಳೂರಿನ ಕುಲಬಾಂಧವರು ಗೋವಾದ ಶ್ರೀ ಶಾಂತಾದುರ್ಗಾ ದೇವಳದ ಆರ್ಚಕ ಗುರುಪ್ರಸಾದ ಜೋಷಿ ಅವರ ಮಾರ್ಗದರ್ಶನದಲ್ಲಿ ವಿವಿಧ ಪೂಜಾವಿಧಿವಿಧಾನ, ವಿಶೇಷಪೂಜೆಯ ಬಳಿಕ ದೇವಿಗೆ ಹವಳದ ಚಿನ್ನದ ಸರವನ್ನು ಸಮರ್ಪಣೆಗೈಯಲಾಯಿತು. ಹಾಗೆಯೇ ನಾಗೇಶ್ರೀ ಮಹಾರುದ್ರ ದೇವಸ್ಥಾನಕ್ಕೆ ದೀಪವನ್ನು ಕೂಡ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ, ಶ್ರೀ ಕೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯ್ಕ್,ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು, ಶ್ರೀ ಸೋಮೇಶ್ವರಿ ಸೌ.ಸ.ನಿ.ದ ಅಧ್ತಕ್ಷ ಉಮಾನಾಥ ನಾಯ್ಕ್ ಉಳ್ಳಾಲ, ಮುಂಬೈ ಸಜ್ಜನ್ ಸೇವಾ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ , ಗುರಿಕಾರ ರಾಮಚಂದ್ರ‌ನಾಯ್ಕ, ಪದಾಧಿಕಾರಿಗಳಾದ ಕೋಡಿ ಜಯ ನಾಯ್ಕ್, ಶ್ರೀರಿಷ್ ನಾಯ್ಕ್ ಕಾಪಿಕಾಡ್,ವೆಂಕಟೇಶ್ ಬಂಟ್ವಾಳ,ವಿಶ್ವನಾಥ ನಾಯ್ಕ್ ಬಂಟ್ವಾಳ,…

Read More

UN NETWORKS ದೇರಳಕಟ್ಟೆ: ಆಸ್ಕಿ ಕೇಂದ್ರವನ್ನು ಕ್ಷೇಮದಲ್ಲಿ 2004ರಲ್ಲಿ ಆರಂಭಿಸಲಾಗಿದ್ದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಕಿ ಎದುರಿಸುವುದು ಕಠಿಣವಾಗಿದ್ದರೂ ಪಾರದರ್ಶಕವಾಗಿರುವುರಿಂದ ಈ ಕೇಂದ್ರದಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದು ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ಕ್ಷೇಮ ಮೆಡಿಕಲ್ ಅಕಾಡೆಮಿಯ ಇಎನ್‍ಟಿ ವಿಭಾಗದ ಆಶ್ರಯದಲ್ಲಿ ಶನಿವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ನಡೆದ ಕ್ಷೇಮ ಇಎನ್‍ಟಿ-ಒಎಸ್‍ಸಿಇ ಕಾರ್ಯಗಾರ-2019, ಸ್ನಾತಕೋತ್ತರ ಬೋಧನಾ ಕಾರ್ಯಕ್ರಮ ಹಾಗೂ 15ನೇ ಒಎಸ್‍ಸಿಇ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಕೇಂದ್ರ ಆರಂಭವಾಗಿ ನಿರಂತರ ಕಾರ್ಯಗಾರ ನಡೆಯುತ್ತಿದ್ದರೆ ಅದು ಪರೀಕ್ಷಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಠಿಣ ಸ್ಪಧೆಋಗಳು ಸವಲುಗಳು ಎದುರಗುತ್ತಿದ್ದು ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಸ್ಕಿ ಪ್ರಯೋಜನಕರಿ ಎಂದು ಮಂಗಳೂರಿನ ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಡೀನ್ ಪ್ರೊ. ಡಾ. ಜೆ.ಪಿ. ಆಳ್ವ ಹೇಳಿದರು. ಕ್ಷೇಮ ಮೆಡಿಕಲ್ ಕಾಲೇಜು ಡೀನ್ ಡಾ.ಪಿ.ಎಸ್. ಪ್ರಕಾಶ್ ಮಾತನಾಡಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಉನ್ನತ…

Read More

UN NETWORKS ಹರೇಕಳ: ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸರಕಾರದಿಂದ ನೀಡಲ್ಪಡುವ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಎಂಟನೇ ತರಗತಿಯ ಸುಮಾರು 93 ಮಕ್ಕಳಿಗೆ ಸೈಕಲನ್ನು ವಿತರಿಸಿ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನುರವರು, ಶಾಲಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರಕಾರವು ಹೊರತಂದಿದ್ದು ಅವುಗಳೆಲ್ಲಾವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳ್ಳಬೇಕು ಹಾಗೂ ವ್ಯಕ್ತಿತ್ವ ವಿಕಸನಕ್ಕೆಪೂರಕವಾದ ಅಂಶಗಳಾದ ಧೈರ್ಯ, ತಾಳ್ಮೆ, ಏಕಾಗ್ರತೆ ಮತ್ತು ದೈಹಿಕ ಬೆಳವಣಿಗೆ ಮುಂತಾದ ಗುಣಗಳನ್ನು ಉತ್ತಮ ಪಡಿಸಿಕೊಳ್ಳಲು ಸರಕಾರವು ಈ ಯೋಜನೆಯನ್ನು ಹಮ್ಮಿಕೊಂಡಿದೆ.ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ಡಿ’ ಸೋಜ ಇವರು ವಿದ್ಯಾರ್ಥಿಗಳು ಮನೆಯ ಅಂಗಳದಲ್ಲಿ ಮೊದಲು ಸೈಕಲ್ ತುಳಿಯಲು ಅಭ್ಯಾಸವನ್ನು ಮಾಡಿ ಅದರ ನಂತರವೇ ದಾರಿಗೆ ಸೈಕಲ್ ಸವಾರಿ ಮಾಡುವುದು ಒಳಿತು. ಆರೋಗ್ಯ ದೃಷ್ಟಿಯಲ್ಲಿ ಉತ್ತಮವೆಂದರೂ ಸೈಕಲ್…

Read More

UN NETWORKS ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ70ನೇ ಗಣರಾಜೋತ್ಸವವನ್ನು ಸಂಭ್ರ್ರಮದಿಂದಆಚರಿಸಲಾಯಿತು. ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್‍ತ್ವಾಹ ಬೆಳಿಗ್ಗೆ 8.30ಕ್ಕೆ ದರ್ಗಾ ವಠಾರದಲ್ಲಿದ್ವಜಾರೋಹಣಗೈದರು. ಸಯ್ಯಿದ್ ಮದನಿ ಅರಬಿಕ್‍ಕಾಲೇಜು ಪ್ರಾಂಶುಪಾಲರಾದಉಸ್ಮಾನ್ ಪೈಝಿತೋಡಾರ್‍ಉಸ್ತಾದ್‍ದುಆಗೈದರು, ಅರಬಿಕ್‍ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲಿಮೋನು, ಎಚ್.ಕೆ ಮುಹಮ್ಮದ್ ಮತ್ತಿತ್ತರರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರ್ ಮುಂಡೋಳಿ ಪರಿಸರದ ಆದಿಸ್ಥಳ ಶ್ರೀ ರಕ್ತೇಶ್ವರಿ ಏಳುವರೆ ಸಿರಿಗಳು ಕೊರಗಜ್ಜ ಕ್ಷೇತ್ರ ನಿರ್ಮಾಣ ಆಗುತ್ತಿರುವ ಜಾಗದಲ್ಲಿ ವಾಸ್ತವವಿದ್ದ ಸುಂದರಿಯವರ ಮನೆಯನ್ನು ಕ್ಷೇತ್ರದ ನಿರ್ಮಾಣದ ಪ್ರಯುಕ್ತ ತೆರವು ಮಾಡಿದ ಹಿನ್ನೆಲೆಯಲ್ಲಿ ಸಮಿತಿಯವರು ಕೊಟ್ಟ ಮಾತಿನಂತೆ ಅವರಿಗೆ ರಕ್ತೇಶ್ವರಿ ಕ್ಷೇತ್ರದ ಬಳಿ ನಿರ್ಮಿಸಲಾದ ಹೊಸ ಮನೆಯ ಹಸ್ತಾಂತರ ಶನಿವಾರ ನಡೆಯಿತು. ಸಮಿತಿಯ ಅಧ್ಯಕ್ಷ ಉದ್ಯಮಿ ಹರೀಶ್ ಕುತ್ತಾರ್ ಮನೆಯ ಕೀಲಿಕೈ ಸುಂದರಿಯವರ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಮನೆಯವರಿಗೆ ಕೊಟ್ಟ ಭಾಷೆಯನ್ನು ಪಾಲಿಸಿ ಶಿಲಾನ್ಯಾಸಕ್ಕಿಂತ ಮೊದಲೇ ಹೊಸ ಮನೆಯನ್ನು ನಿರ್ಮಿಸಿಕೊಟ್ಟಿದ್ದೇವೆ ಶ್ರೀ ರಕ್ತೇಶ್ವರಿ, ಏಳುವರೆ ಸಿರಿಗಳು ಕೊರಗಜ್ಜ ದೈವದ ಅನುಗ್ರಹದಲ್ಲಿ ಮನೆಯ ಕೆಲಸ ಆಗಿದೆ ಎಂದರು. ರಮಾನಾಥ ದಿನೇಶ್ ಕಾಜವ, ಸದಾಶಿವ ಆಚಾರ್ಯ, ಮಧುಸೂದನ, ಭವಾನಿ ಶಂಕರ್, ಉದಯಶಂಕರ್, ನಾಗೇಶ್ ಗಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗೃಹಪ್ರವೇಶದ ಪ್ರಯುಕ್ತ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ , ಅನ್ನ ಸಂತರ್ಪಣೆ ನಡೆಯಿತು.

Read More