UN NETWORKS ದೇರಳಕಟ್ಟೆ: ಜಮಾಅತೆ ಇಸ್ಲಾಮಿ ಹಿಂದ್ ದೇರಳಕಟ್ಟೆ ವಲಯ ಇದರ ಆಶ್ರಯದಲ್ಲಿ, ಸನ್ಮಾರ್ಗ ಪತ್ರಿಕೆ ನಡೆಸಿದ ಸೀರತ್ ಕ್ವಿಜ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅಧ್ಯಾಪಕ ಹಿದಾಯತುಲ್ಲಾ ಅವರಿಗೆ ಸನ್ಮಾನ ಕಾರ್ಯಕ್ರಮ ದೇರಳಕಟ್ಟೆ ಚಿಂತನಾ ಗ್ರಂಥಾಲಯದಲ್ಲಿ ಇತ್ತೀಚೆಗೆ ನಡೆಯಿತು. ಧಾರ್ಮಿಕ ಆಚಾರ-ವಿಚಾರಗಳ ಬಗ್ಗೆ ಜನರಿಗೆ ತಿಳುವಳಿಕೆ ಬರಬೇಕು, ಜನರಿಗೆ ಓದುವ ಅಭ್ಯಾಸ ಬೆಳೆಯಬೇಕು ಎಂಬ ಸದುದ್ದೇಶದಿಂದ ಮಂಗಳೂರು ಶಾಂತಿ ಪ್ರಕಾಶನದ ಸನ್ಮಾರ್ಗ ವಾರ ಪತ್ರಿಕೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ನವಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸೀರತ್ ಕ್ವಿಜ್ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ವೃತ್ತಿಯಲ್ಲಿ ಅಧ್ಯಾಪಕರಾಗಿ,ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸುತ್ತಿರುವ ಹಿದಾಯತುಲ್ಲರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಚಿಂತನಾ ಗ್ರಂಥಾಲಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ದೇರಳಕಟ್ಟೆ ವಲಯ ನಡೆಸಿತು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಹಿದಾಯತುಲ್ಲಾರನ್ನು ಸನ್ಮಾನಿಸಿದರು. ಓದುವ ಅಭ್ಯಾಸವನ್ನು ಬೆಳೆಸಬೇಕು ಎನ್ನುವ ಸದುದ್ದೇಶದಿಂದ ನಡೆಸಿದ ಕ್ವಿಜ್ ಸ್ಪರ್ಧೆಯಲ್ಲಿ ಅಧ್ಯಾಪಕರು ಗೆದ್ದದ್ದು ನಿಜವಾಗಿಯೂ ಅಭಿನಂದನಾ ವಿಷಯ. ಓದುವ…
Author: UllalaVani
UN NETWORKS ಹರೇಕಳ : ತೆರಿಗೆ ಹಣ ಚೆಕ್ ರೂಪದಲ್ಲಿ ಅವ್ಯವಹಾರ ಆಗಿದ್ದರೂ ಇಷ್ಟು ವರ್ಷ ತನಿಖೆಯಾಗದಿರುವುದು ನಿಜಕ್ಕೂ ದುರಂತ. ಈ ಬಗ್ಗೆ ಜೊತೆಯಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮಾಹಿತಿ ನೀಡೋಣ. ನಿಮ್ಮ ದಿನ ತಿಳಿಸಿ ಒಟ್ಟಿಗೆ ಹೋಗೋಣ, ಯಾವುದೇ ಕಾರ್ಯಕ್ರಮ ಇದ್ದರೂ ರದ್ದುಪಡಿಸಿ ಬರುತ್ತೇನೆ’ ಹೀಗೆಂದವರು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ. ವಿವಿಧ ಕಾರಣಗಳಿಂದ ವರ್ಷ ಬಳಿಕ ಶನಿವಾರ ಪಂಚಾಯಿತಿ ವಠಾರದಲ್ಲಿ ನಡೆದ ಹರೇಕಳ ಗ್ರಾಮಸಭೆಯಲ್ಲಿ ಡಿವೈಎಫ್‍ಐ ಮುಖಂಡ ರಫೀಕ್ ಹರೇಕಳ ಅವರು, ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದ ಒಂಬತ್ತು ಲಕ್ಷ ರೂಪಾಯಿ ಅವ್ಯವಹಾರದ ಬಗ್ಗೆ ಪ್ರಶ್ನಿಸಿ, ತನಿಖೆಯ ಭರವಸೆ ನೀಡಿದರೂ ಪ್ರಯೋಜನ ಆಗಿಲ್ಲ. ಪೋಲಾಗಿರುವುದು ಗ್ರಾಮಸ್ಥರು ತೆರಿಗೆ ಕಟ್ಟಿದ ಹಣ ಅಲ್ಲವೇ ಎನ್ನುವ ಪ್ರಶ್ನೆಗೆ ಜಿ.ಪಂ. ಸದಸ್ಯೆ ಉತ್ತರ ನೀಡಿದರು. ಈ ಬಾರಿ ಜಿ.ಪಂ.ನ ಎಲ್ಲಾ ಸದಸ್ಯರ ಹೋರಾಟದ ಫಲವಾಗಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಬಂದಿದೆ. ಪಕ್ಷ ಬೇಧವಿಲ್ಲದೆ ನಾಲ್ಕು ಗ್ರಾಮಕ್ಕೆ ಅನುದಾನ ಸಮಾನವಾಗಿ ಹಂಚುತ್ತೇನೆ.…
UN NETWORKS ಉಳ್ಳಾಲ: ಆರೋಗ್ಯ ಸಂಬಂಧ ಮಾಹಿತಿ ದಾಖಲೀಕರಣ ತಂತ್ರಜ್ಞಾನ, ವೈದ್ಯರಿಂದ ರೋಗಗಳ ಕುರಿತು ವೈಯಕ್ತಿಕ ಮಾರ್ಗದರ್ಶನ ಪಡೆಯುವಲ್ಲಿ ಮೊಬೈಲ್ ಆ್ಯಪ್ ಗಳ ಸೇವೆ ದೇಶದೆಲ್ಲೆಡೆ ಆರಂಭವಾಗಬೇಕಿದೆ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಯನ್ ಚಿಪ್ಲುಂಕರ್ ಹೇಳಿದರು. ಅವರು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸಿ ಕಾಲೇಜು ವತಿಯಿಂದ ಪಾನೀರು ಕ್ಯಾಂಪಸ್ ನ ಆಡಿಟೋರಿಯಂ ನಲ್ಲಿ ಶನಿವಾರ ಜರಗಿದ ‘ ಪರ್ಸ್‍ಪೆಕ್ಟಿವ್ಸ್ ಆಫ್ ಕ್ವಾಲಿಟಿ ಇನ್ ಫಾರ್ಮಸಿಟಿಕಲ್ ಇಂಡಸ್ಟ್ರಿ ‘ ವಿಚಾರದ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡುವ ಸಲುವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳ ಆರೋಗ್ಯ ಕುರಿತ ಮಾಹಿತಿ ದಾಖಲೀಕರಣ ಅಗತ್ಯವಿದೆ. ಈ ಮೂಲಕ ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ವರ್ಗದ ಜನರಿಗೂ ಒದಗಲು ಸಾಧ್ಯ. ಆರೋಗ್ಯ ಕ್ಷೇತ್ರದ ಉದ್ಯಮದಲ್ಲಿ ಹಲವು ಅಡೆಚಣೆಗಳಿವೆ. ಸರಕಾರದ ಹಲವು ನೀತಿಗಳಿಂದ ಕ್ಷೇತ್ರದ ಉದ್ಯಮಿಗಳು ತೊಂದರೆ…
UN NETWORKS ಯೇನೆಪೊಯ: ಕೆಲವು ದಶಕಗಳ ಹಿಂದೆ ವೈದ್ಯಕೀಯ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗಾಗಿ ಸಿನಿಮಾ, ಸಿಡಿ, ವಿಡಿಯೋ ಮೂಲಕ ಅಧ್ಯಯನ ಮಾಡುತ್ತಿದ್ದು ನಂತರ ಗ್ರಂಥಾಲಯ ಬಳಕೆಗೆ ಬಂತು. ಆ ದಿನಗಳಲ್ಲಿ ಗ್ರಂಥಾಲಯಗಳ ಸಂಖ್ಯೆ ಹಾಗೂ ಕಡಿಮೆ ಪುಸ್ತಕ ಸಂಗ್ರಹವಿದ್ದರೂ ಅದನ್ನೇ ಅವಲಂಬಿಸಿದ್ದರು. ಕೆಲವೇ ಪುಸ್ತಕಗಳನ್ನು ಓದಲು ಜನರು ಸಾಕಷ್ಟು ಸಮಯ ಕಾಯುವಂತಹ ಪರಿಸ್ಥಿತಿ ಇತ್ತು. ಹಾಗಿದ್ದರೂ ಓದುವ ಆಸಕ್ತಿ ಎಲ್ಲೂ ಕುಂಠಿತವಾಗಿರಲಿಲ್ಲ ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಾ. ಸಚ್ಚಿದಾನಂದ ಅಭಿಪ್ರಾಯಪಟ್ಟರು. ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಎಸೋಸಿಯೇಶನ್(ಕೆಎಚ್‍ಎಸ್‍ಎಲ್‍ಎ) ಹಾಗೂ ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲ್ಪಟ್ಟ ವಿವಿ ಆಶ್ರಯದಲ್ಲಿ ಯೇನೆಪೊಯ ವಿವಿ ಒಳಾಂಗಣ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಎಸೋಸಿಯೇಶನ್‍ನ 11ನೆಯ ವಾರ್ಷಿಕ ಸಮ್ಮೇಳನ ಕೆಎಚ್‍ಎಸ್‍ಎಲ್‍ಎ – 2019ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಗ್ರಂಥಾಲಯ ಜಗತ್ತಿನಲ್ಲಿ ಅಭೂತಪೂರ್ವವಾದ ಬದಲಾವಣೆಗಳಾಗಿದೆ. ಮೊಬೈಲ್ ಆ್ಯಪ್‍ಗಳ ಮೂಲಕ ಸ್ವಂತ ಜ್ಞಾನ ಹೆಚ್ಚಿಸಲು…
UN NETWORKS ತೊಕ್ಕೊಟ್ಟು: ಮತ್ತೊಮ್ಮೆ ಮೋದಿ ಅನ್ನುವ ಘೋಷವಾಕ್ಯದೊಂದಿಗೆ ಜಿಲ್ಲೆಯ ಸಂಸದರಿಗೆ ಜನ ಬೆಂಬಲಿಸುವ ಉದ್ದೇಶದೊಂದಿಗೆ ಫೆ. 24 ರಂದು ಸಂಜೆ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ಅಸೈಗೋಳಿವರೆಗೆ ಕೊಣಾಜೆ ಶಕ್ತಿಕೇಂದ್ರದ ಆಶ್ರಯದಲ್ಲಿ ಜನಬೆಂಬಲ ಯಾತ್ರೆ ನಡೆಯಲಿದೆ ಎಂದು ಕೊಣಾಜೆ ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಅಂಬ್ಲಮೊಗರು ತಿಳಿಸಿದರು.ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು. ಸಂಜೆ 4 ಕ್ಕೆ ವಾಹನಾ ಜಾಥಾಕ್ಕೆ ಚಾಲನೆ ನೀಡಲಾಗುವುದು. ಅಸೈಗೋಳಿಯ ಗಣೇಶ್ ಮಹಲಿನಲ್ಲಿ ನೂತನ ಶಕ್ತಿಕೇಂದ್ರದ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದರು. ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಮಂಗಳೂರು…
UN NETWORKS ಕುರ್ನಾಡು : ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದರ ಅಷ್ಟಬಂಧ ಸಹಸ್ರಕುಂಭಾಭಿಷೇಕ ಮಾ.27 ರಿಂದ ಎ.1 ರವರೆಗೆ ನಡೆಯಲಿದೆ ಎಂದು ಕುರ್ನಾಡು ಶ್ರೀ ಸೋಮನಾಥೇಶ್ವರ ಕ್ಷೇತ್ರ ಸಂಚಾಲಕ ಜಯರಾಮ ಶಾಂತ ಹೇಳಿದರು. ಅವರು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ವಿವರ ನೀಡಿದರು. ಮಾ.27 ರಂದು ವೈದಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಮುಖ್ಯ ಸಲಹೆಗಾರ ರಘುರಾಮ ತಂತ್ರಿ ಚಾಲನೆ ನೀಡಲಿದ್ದಾರೆ. ಸಂಜೆ ಕುರ್ನಾಡುಗುತ್ತು ಎಚ್.ರಾಮಯ್ಯ ನಾಯ್ಕ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ ಕುರ್ನಾಡು ಇವರಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಮಾ.28 ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬಶುದ್ಧಿ ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಪ್ರೋಕ್ತ ಹೋಮ, ಹೋಮಕಲಶಾಭಿಷೇಕ ರಾತ್ರಿ ಅಂಕುರ ಮತ್ತು ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ವೈಭವ, ಭಕ್ತಿಗೀತೆ ರಸಮಂಜರಿ, ಕದಂಬ ಕೌಶಿಕೆ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.29 ರಂದು ವೈದಿಕ…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‍ನ ಗುಡ್ಡ ಪ್ರದೇಶಕ್ಕೆ ಗುರುವಾರ ರಾತ್ರಿ ಬೆಂಕಿ ಬಿದ್ದ ಪರಿಣಾಮ ನೂರಾರು ಮರಗಿಡಗಳು ಬೆಂಕಿಗಾಹುತಿಯಾದವು. ಅಗ್ನಿಶಾಮಕದಳವು ಮಂಗಳೂರಿನಿಂದ ಸ್ಥಳಕ್ಕೆ ಬರುವ ವೇಳೆ ಹಲವಾರು ಎಕರೆ ಪ್ರದೇಶದಲ್ಲಿ ಬೆಂಕಿಯು ಹರಡಿಕೊಂಡು ಪರಿಸರದ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು.
UN NETWORKS ಉಳ್ಳಾಲ: ನೊಂದವರ ಹಾಗೂ ಅಶಕ್ತರ ಪಾಲಿನ ಆಶಾದಾಯಕರಾಗಿದ್ದವರು ಶ್ರೀ ರಮಾನಂದ ಸ್ವಾಮೀಜಿಯವರ ಕಾರ್ಯ ಮರೆಯಲಾಗದು. ಎಲ್ಲರಿಗೂ ಅವರ ಸೇವೆ ಸ್ಫೂರ್ತಿದಾಯಕವಾಗಿದೆ. ಅವರ ಮಠ , ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಭಕ್ತ ಸಮೂಹದಿಂದ ಆಗಬೇಕಿದೆ ಎಂದು ಗುರುಪುರ ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಇದರ 31ನೇ ವಾರ್ಷಿಕ ಪ್ರತಿಷ್ಠಾನ ಮಹೋತ್ಸವ ದ ಪ್ರಯುಕ್ತ ಇತ್ತೀಚೆಗೆ ಕೊಲ್ಯದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಎಲ್ಲೇ ಅವಘಡ ಸಂಭವಿಸಿದರೂ ತಕ್ಷಣ ತನ್ನಿಂದಾದ ಸಹಾಯ ಮಾಡುವ ಮೂಲಕ ಮನೆಮಂದಿಗೆ ಧೈರ್ಯ ಹೇಳುತ್ತಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಶಾಲೆಯ ಅಭಿವೃದ್ಧಿ ಮತ್ತು ದೇವಸ್ಥಾನದ ನಿತ್ಯ ಪೂಜಾ ಕಾರ್ಯಗಳಿಗೆ ಭಕ್ತರ ಸಹಕಾರ ಅತ್ಯಗತ್ಯ ಆ ಮೂಲಕ ಅವರ ಆಶಯ ಈಡೇರಿಸುವಂತೆ ವಿನಂತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ಹಾಗೂ ಮುಖ್ಯ ವ್ಯೆದ್ಯಾಧಿಕಾರಿ ಡಾ| ಅಣ್ಣಯ್ಯ ಕುಲಾಲ್ ಮಾತನಾಡಿ,…
UN NETWORKS ಉಳ್ಳಾಲ: ` ಸಮಸ್ತ ಸಮಾಜ ಹಾಗೂ ರಾಣಿ ಅಬ್ಬಕ್ಕ ಚರಿತ್ರೆ’ ಸಾಮಾಜಿಕ ಪೌರಾಣಿಕ ಐತಿಹಾಸಿಕ ಕೃತಿ ಬಿಡುಗಡೆ ಸಮಾರಂಭ ಇತ್ತೀಚೆಗೆ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಕೃತಿ ಬಿಡುಗಡೆಗೊಳಿಸಿದರು. ಕೆ.ವಿಠಲದಾಸ್ ಗಟ್ಟಿ ಕಾಯಂಗಳ ಇವರ ಸಾಹಿತ್ಯದಲ್ಲಿ ಕೃತಿ ರಚನೆಯಾಗಿದೆ. ಈ ಸಂದರ್ಭ ಗಟ್ಟಿ ಸಮಾಜದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಉಳ್ಳಾಲ ನಗರಸಭೆ ಸದಸ್ಯ ದಿನಕರ್ ಉಳ್ಳಾಲ್, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಮತಾ ಡಿ.ಯಸ್ ಗಟ್ಟಿ, ರವೀಂದ್ರನಾಥ ಪೂಂಜಾ, ನ್ಯಾಯವಾದಿ ಪುಷ್ಪಲತಾ, ಟಿ.ಎಲ್ ಗಟ್ಟಿ, ಕೃಷ್ಣ ಗಟ್ಟಿ ಕೋಟೆಕಾರು, ಪದ್ಮನಾಭ ಬಜಿಲಕೇರಿ, ಪದ್ಮಾವತಿ ಕಾಯಂಗಳ, ನವೀನ್ ಗಟ್ಟಿ ಬೆಂಗಳೂರು ಉಪಸ್ಥಿತರಿದ್ದರು.ಬಿ. ನಾರಾಯಣ ಕುಂಪಲ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.
UN NETWORKS ಅಲೇಕಳ: ಇಸ್ಲಾಂ ಧರ್ಮ ಯಾರೋ ಸ್ಥಾಪಿಸಿದ್ದಲ್ಲ, ಇಸ್ಲಾಂ ಹೆಸರನ್ನು ಹೇಳಿಕೊಂಡು ದುರಾಚಾರ ನಡೆಸುವ ಹಕ್ಕು ಯಾರಿಗೂ ಇಲ್ಲ. ಅಲ್ಲಾಹನ ವಿರುದ್ಧ, ಪ್ರವಾದಿ(ಸ) ಸಂದೇಶದ ವಿರುದ್ಧ ಮಾಡಿದ ಕೃತ್ಯ ಎಸಗಿರುವ ಉಗ್ರರ ಮೇಲೆ ದೇವನ ಶಾಪವಿದೆ ಎಂದು ಉಳ್ಳಾಲ ನಗರಸಭೆಯ ಸದಸ್ಯ ಅಯೂಬ್ ಮಂಚಿಲ ಅಭಿಪ್ರಾಯಪಟ್ಟರು. ಅಲೇಕಳ ನುಸ್ರತುಲ್ ಮಸಾಕೀನ್ ಟ್ರಸ್ಟ್, ಸಫರ್ ಮಂಚಿಲ, ಅಲೇಕಳ ಸ್ಪೋಟಿಂಗ್, ಬಿ ಬಾಯ್ಸ್, ಮಾರ್ಗತ್ತಲೆ ಯುನೈಟೆಡ್ ಚಾರಿಟೇಬಲ್ ಟ್ರಸ್ಟ್, ಸೆವೆನ್ ಸ್ಟಾರ್, ನಜತ್ ಕ್ರಿಕೆಟರ್ಸ್ ಅಲೇಕಳ, ಯಂಗ್ ಬಾಯ್ಸ್, ಯಂಗ್ ಫ್ರೆಂಡ್ಸ್, ಮೆಹಫಿಲ್ ಗಯ್ಸ್, ಗಡಗಡ ಗಯ್ಸ್ ಅಲೇಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಯೋಧರ ಹತ್ಯೆಯನ್ನು ಖಂಡಿಸಿ ಅಲೇಕಳದಲ್ಲಿ ಗುರುವಾರ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದರು. ಕಾಶ್ಮೀರ ಭಾರತ ಸ್ವರ್ಗ, ಇಲ್ಲಿ ಇಸ್ಲಾಮಿನ ಹೆಸರು ಹೇಳಿಕೊಂಡು ನಡೆಸಿರುವ ದಾಳ ಅತ್ಯಂತ ಹೇಯ ಕೃತ್ಯವಾಗಿದೆ. ಆಧುನಿಕ ವಸ್ತ್ರಗಳನ್ನು ಸರ್ಕಾರ ದೊರಕಿಸಿ ಕೊಡಲು ಮುಂದಾಗಬೇಕು ಎಂದು ಹೇಳಿದರು. ಮುಖಂಡ ಯು.ಕೆ.ಮುಸ್ತಫ ಮಾತನಾಡಿ,…

