Author: UllalaVani

Kannada News From Coastal Karnataka

UN NETWORKS ಉಳ್ಳಾಲ : ವಿಕಲಚೇತನರಿಗೆ ಸ್ವಾವಲಂಬಿ ಜೀವನ ನಡೆಸಲು ದ್ವಿಚಕ್ರ ವಾಹನ ಪೂರಕವಾಗಿದ್ದು, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಇನ್ನಷ್ಟು ವಿಕಲಚೇತನ ಯುವಜನರನ್ನು ಸರ್ವೇ ನಡೆಸಿ ಅವರಿಗೆ ದ್ವಿಚಕ್ರ ವಾಹನ ಪೂರೈಸಲು ಬದ್ಧನಾಗಿದ್ಧೆನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ನಗರಸಭಾ ಕಾರ್ಯಾಲಯದ ಬಳಿ ಗುರುವಾರ ಶಾಸಕರ ನಿಧಿಯಡಿ ಮಂಗಳೂರು ವಿಧಾನಸಭಾ ಕ್ಷೇತ್ರದ 13 ಮಂದಿ ಫಲಾನುಭವಿ ವಿಕಲಾಂಗರಿಗೆ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದರು. ಕಳೆದ ವರ್ಷ ಮೂವರು ಫಲಾನುಭವಿಗಳಿ ದ್ವಿಚಕ್ರ ವಾಹನ ನೀಡಲಾಗಿತ್ತು. ವಿಕಲ ಚೇತನರ ಬೇಡಿಕೆಯಿಂದ ಹೆಚ್ಚಿನ ದ್ವಿಚಕ್ರ ವಾಹನವನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಕಲೇತನರು ಸ್ವಾವಲಂಬಿ ಜೀವನ ನಡೆಸುವ ಉದ್ಧೇಶದಿಂದ ಅವರಿಗೆ ಸರಕಾರದಿಂದ ಸಿಗುವ ಸವಲತ್ತು ನೀಡಲು ಸರಕಾರ ಬದ್ಧವಾಗಿದ್ದು, ದ್ವಿಚಕ್ರ ವಾಹನವನ್ನು ವಿಶೇಷ ಅನುದಾನದಿಂದ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಜಬ್ಬಾರ್ ಬೋಳಿಯಾರ್, ಮುಖಂಡರಾದ ಸುರೇಶ್ ಭಟ್ನಗರ,…

Read More

UN NETWORKS ಉಳ್ಳಾಲ: ರಿಕ್ಷಾ ಢಿಕ್ಕಿ ಹೊಡೆದು ವೃದ್ಧ ಮಹಿಳೆ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಕುಂಪಲ ಮೂರುಕಟ್ಟೆ ನಿವಾಸಿ ಪ್ಯಾಟ್ರಿಕ್ ವಿಕ್ಟರ್ ಡಿಸೋಜ ಎಂಬವರ ಪತ್ನಿ ಬೆನ್ನಿ ಡಿಸೋಜ(76) ಮೃತರು. ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಔಷಧಿಗೆಂದು ನಡೆದುಕೊಂಡು ಬಂದು ಕಾಪಿಕಾಡು ಸಮೀಪ ರಾಷ್ಟ್ರೀಯ ಹೆದ್ದಾರಿ-66 ನ್ನು ಅಡ್ಡದಾಟುತ್ತಿದ್ದಾಗ, ಕೋಟೆಕಾರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿದೆ. ಪರಿಣಾಮ ಬೆನ್ನಿ ಡಿಸೋಜಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಚ್ಚು ಬಸ್ಸಿನಲ್ಲಿ ಪ್ರಯಾಣಿಸದ ಬೆನ್ನಿ ಡಿಸೋಜ ಅವರು ಕುಂಪಲದಿಂದ ತೊಕ್ಕೊಟ್ಟು ಸುಮಾರು 5 ಕಿ.ಮೀ ನಡೆದುಕೊಂಡು ಬಂದು, ವಾಪಸ್ಸಾಗುತ್ತಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಬ್ಬರು ಪುತ್ರರು ಇಸ್ರೇಲ್ ಮತ್ತು ಮಸ್ಕತ್ ನಲ್ಲಿ ಇರುವುದರಿಂದ ಅಂತಿಮ ಸಂಸ್ಕಾರಕ್ಕೆ ಅವರು ಬರುವವರೆಗೆ ಕಾಯಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.

Read More

UN NETWORKS ಉಳ್ಳಾಲ: ಅವಿವಾಹಿತೆ ಮಹಿಳೆಯೋರ್ವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮುಳಿಹಿತ್ಲು ನಿವಾಸಿ ಸುಶೀಲಾ (48) ಆತ್ಮಹತ್ಯೆ ಮಾಡಿಕೊಂಡವರು. ತೊಕ್ಕೊಟ್ಟು ಅಂಬಾವನ ನಿವಾಸಿ ಸಹೋದರಿ ಮನೆಗೆ ಬುಧವಾರ ಬಂದಿದ್ದ ಅವರು ಇಂದು ಬೆಳಗ್ಗಿನಿಂದ ನಾಪತ್ತೆಯಾಗಿದ್ದರು. ಅವಿವಾಹಿತರಾಗಿದ್ದ ಸುಶೀಲಾ ಸಹೋದರಿ ಮನೆಗೆ ಆಗಾಗ್ಗ ಬಂದು ಹೋಗುತ್ತಿದ್ದರು. ಅವಿವಾಹಿತೆಯಾಗಿರುವ ಸುಶೀಲಾ ಅವರಿಗೆ ಆರೋಗ್ಯದ ಸಮಸ್ಯೆ ಇದ್ದುದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಡೆಸಿದ್ದಾರೆಂದು ಮನೆಮಂದಿ ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಉಳ್ಳಾಲ: ಸ್ವಚ್ಫ ಸರ್ವೆಕ್ಷಣ 2019ರ ಸಮೀಕ್ಷೆಯಡಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆಯು ಕರ್ನಾಟಕ ರಾಜ್ಯಕ್ಕೆ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಸ್ವಚ್ಫ ಸರ್ವೆಕ್ಷಣೆ 2019ರ ಸರ್ವೆಯಲ್ಲಿ ನಾಲ್ಕು ಹಂತದ ಸಮೀಕ್ಷೆಗೆ ಒಟ್ಟು 5000 ಅಂಕಗಳನ್ನು ನಿಗದಿಪಡಿಸಿತ್ತು. ಉಳ್ಳಾಲ ನಗರಸಭೆಯು ಕ್ರಮವಾಗಿ ನಾಲ್ಕು ಹಂತಗಳಡಿಯಲ್ಲಿ ನೇರ ವೀಕ್ಷಣೆಯಡಿಯಲ್ಲಿ 1250ರಲ್ಲಿ 1037, ಸೇವಾ ಹಂತದ ಪ್ರಗತಿಯಲ್ಲಿ 1250ರಲ್ಲಿ 369, ಜನಾಭಿಪ್ರಾಯದಲ್ಲಿ 1250ರಲ್ಲಿ 838 ಹಾಗೂ ಪ್ರಮಾಣೀಕರಣ 1250ರಲ್ಲಿ 150 ಒಟ್ಟು 2393 ಅಂಕಗಳನ್ನು ಗಳಿಸಿದೆ. ಈ ಮೂಲಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ತಮಿಳುನಾಡು, ಕೇರಳ, ಗೋವಾ ಪಾಂಡಿಚೇರಿ ರಾಜ್ಯಗಳನ್ನೊಳಗೊಂಡ ದಕ್ಷಿಣ ವಲಯದ 1118 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆಯು 41ನೇ ಸ್ಥಾನವನ್ನು ಹಾಗೂ ರಾಜ್ಯದ 253 ಸ್ಥಳೀಯ ಸಂಸ್ಥೆಗಳಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸತತ 2ನೇ ಬಾರಿಗೂ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು…

Read More

UN NETWORKS ಇರಾ : ಇರಾ ಗ್ರಾಮದ ಕುಕ್ಕಾಜೆ ತೋಟ-ಕಾಪಿಕಾಡು ಹಾಗೂ ದರ್ಬೆ-ಸುವರ್ಣಬೈಲು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಸದಸ್ಯ ಹೈದರ್ ಕೈರಂಗಳ, ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ಸದಸ್ಯೆ ಮಮತಾ ಡಿ. ಎಸ್ ಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷಅಬ್ದುಲ್ ರಝಾಕ್ ಕುಕ್ಕಾಜೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸಿರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಬಿ’ ಉಮ್ಮರ್, ಮೊಯ್ದೀನ್ ಕುಂಞ, ಸ್ಥಳದಾನಿ ರಾಮಣ್ಣ, ಸುರೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ. ಎಚ್. ಮಹಮ್ಮದ್, ಪದ್ಮನಾಭ ನರಿಂಗಾನ, ನಾಸಿರ್, ಅರುಣ್ ಡಿ ಸೋಜ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಸೂತ್ರಬೈಲ್ ಉಪಸ್ಥಿತರಿದ್ದರು.

Read More

UN NETWORKS ಮಂಗಳೂರು : “ರಾಷ್ಟ್ರೀಯ ದಂತ ವೈದ್ಯರ ದಿನಾಚರಣೆ’ ಪ್ರಯುಕ್ತ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಮಂಗಳೂರಿನ ಕಾಪಿಕಾಡಿನಲ್ಲಿರುವ ಬಿಜೈ ಕಾಪಿಕಾಡಿನ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ದೇಹದ ಆರೋಗ್ಯಕ್ಕೆ ದಂತದ ಆರೋಗ್ಯ ಅತೀ ಅವಶ್ಯಕ. ಬೆಳೆಯುವ ಮಕ್ಕಳು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಂಡರೆ ಪರಿಪೂರ್ಣ ದೈಹಿಕ ಆರೋಗ್ಯಕ್ಕೆ ಪೂರಕ ವಾತವಾರಣ ಸೃಷ್ಠಿಯಾಗಿ ಆರೋಗ್ಯವಂತ ಮಕ್ಕಳು ಹುಟ್ಟಿಕೊಳ್ಳುತ್ತಾರೆ. ಆರೋಗ್ಯವಂತ ಮಕ್ಕಳೇ ದೇಶದ ಆಸ್ತಿ. ಆ ಕಾರಣದಿಂದ ದಂತ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.ಮುಖ್ಯ ಶಿಕ್ಷಕಿ ಪಾವನಾ, ಶಿಕ್ಷಕರುಗಳಾದ ಜಯಲಕ್ಷ್ಮಿ ಎ, ಅರುಣಾ ಕುಮಾರಿ, ಸಿಸಿಲಿಯಾ ಹಾಗೂ ಜಗದೀಶ ನಾವಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 35 ಮಕ್ಕಳಿಗೆ ಉಚಿತವಾಗಿ ಟೂತ್‍ಪೇಸ್ಟ್ ಮತ್ತು ಮೌತ್‍ವಾಶ್‍ಗಳನ್ನು ಹಂಚಲಾಯಿತು.

Read More

UN NETWORKS ಇರಾ : ಇರಾ ಗ್ರಾಮದ ಬಾಳೆಪುಣಿ-ಬಡದಲ-ಎರ್ಮಾಜೆ ಸಂಪರ್ಕಿಸುವ ಕಾಂಕ್ರೀಟಿಕೃತ ರಸ್ತೆಯನ್ನು ನಗರಾಭಿವೃಧ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಂಗಳವಾರ ಉದ್ಘಾಟಿಸಿದರು. ‌ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಹೈದರ್ ಕೈರಂಗಳ, ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ಸದಸ್ಯೆ ಮಮತಾ ಡಿ .ಎಸ್ ಗಟ್ಟಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, , ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಟುಗೋಳಿ, ಉಪಾಧ್ಯಕ್ಷ ನಾಸಿರ್ ನಡುಪದವು, ಇರಾ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಬಿ. ಉಮ್ಮರ್ ಹಾಗೂ ಮೊಯ್ದೀನ್ ಕುಂಞಿ, ಮಾಜಿ ಸದಸ್ಯ ಸಿ. ಎಚ್. ಮಹಮ್ಮದ್, ಕಾಂಗ್ರೆಸ್ ಮುಖಂಡರುಗಳಾದ ಪದ್ಮನಾಭ ನರಿಂಗಾನ, ನಾಸಿರ್ ಹಾಗೂ ಅರುಣ್ ಡಿಸೋಜ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಸೂತ್ರಬೈಲ್ ಉಪಸ್ಥಿತರಿದ್ದರು.

Read More

UN NETWORKS ಮುಡಿಪು : ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ 92ಲಕ್ಷ ರೂ. ವೆಚ್ಚದಲ್ಲಿ ಮೂರು ಲ್ಯಾಬ್ ಹಾಗೂ ಒಂದು ತರಗತಿ ಕೊಠಡಿಗೆ ಅನುದಾನ ಬಿಡುಗಡೆ ಮಾಡಿದ್ದು ಆ ಮೂಲಕ ಇಲ್ಲಿನ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ 92ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಪ್ರಯೋಗಾಲಯ ಕೊಠಡಿ ಹಾಗೂ ಒಂದು ತಗರತಿ ಕೊಠಡಿಗೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಿಲನ್ಯಾಸಗೈದು ಮಾತನಾಡಿದರು.ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಮಾತ್ರವಲ್ಲದೆ ಗಡಿನಾಡಿನ ಜನಸಾಮಾನ್ಯರ ಮಕ್ಕಳು ಕೂಡಾ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ಸಂಯುಕ್ತವಾಗಿ ಕಾರ್ಯಾಚರಿಸುತ್ತಿದ್ದು ಎಲ್ಲರು ಹೊಂದಾಣಿಕೆಯಲ್ಲಿ ಸಾಗುತ್ತಿದ್ದಾರೆ. ಕೆಲವೊಂದು ತರಗತಿಗಳಿಗೆ ಕೊಠಡಿ ಕೊರತೆ ಇದ್ದರೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಇದುವರೆಗೆ ನಿಭಾಯಿಸಿಕೊಂಡಿರುವುದು ನಿಜಕ್ಕೂ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ ಎಂದರು.ಇಲ್ಲಿನ ಪ್ರಥಮ ದರ್ಜೆ ಕಾಲೇಜಿಗೆ ಈಗಾಗಲೇ ನಾಲ್ಕು ಕೋಟಿ ರೂ. ಮಂಜೂರಾಗಿದೆ.…

Read More

UN NETWORKS ಮುಡಿಪು : ಮುಡಿಪು ಮುಖ್ಯ ರಸ್ತೆಯಿಂದ ಮೂಳೂರು ಇರಾ ಮಂಚಿ ಸಾಲೆತ್ತೂರು ಸಂಪರ್ಕಿಸುವ ಮುಖ್ಯ ರಸ್ತೆಗೆ ಈಗಾಗಲೇ 10ಕೋಟಿ ರೂ. ಅನುದಾನ ಬಿಡಿಗಡೆಗೊಂಡು, ಪ್ರಥಮ ಹಂತದ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದ್ದು ಇರಾ ಮೂಳೂರು ರಸ್ತೆ ಶೀಘ್ರದಲ್ಲಿಯೇ ಅತ್ಯುತ್ತಮ ಮಾದರಿ ರಸ್ತೆಯಾಗಿ ಬದಲಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಮುಡಿಪು-ಮೂಳೂರು ಕೈಗಾರಿಕೆ ಪ್ರದೇಶ ಸಂಪರ್ಕಿಸುವ ಒಂದು ಕಿ. ಮೀ. ವಿಸ್ತೀರ್ಣದ ರಸ್ತೆ ಕಾಂಕ್ರಿಟೀಕರಣಕ್ಕೆ ಮಂಗಳವಾರ ಅವರು ಶಿಲನ್ಯಾಸಗೈದು ಮಾತನಾಡಿ ಮುಡಿಪು ಮೂಳೂರು ಪ್ರದೇಶಗಳು ಈ ಹಿಂದೆ ಇದ್ದ ಉಳ್ಳಾಲ ವಿಧಾನ ಸಭಾ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಬಳಿಕ ಮಂಗಳೂರು ಕ್ಷೇತ್ರಕ್ಕೆ ಸೇರ್ಪಡೆಗೊಂಡವು. ಆಗ ಈ ಭಾಗಕ್ಕೆ ಕಾರಿನಲ್ಲಿ ಬಂದಾಗ ಈ ರಸ್ತೆಯಲ್ಲಿ ಸಂಚರಿಸಲು ಜೀಪಿನಲ್ಲಿ ಹೋಗುವಂತಹ ಪರಿಸ್ಥಿತಿ ಇತ್ತು. ಚುನಾವಣೆಯಲ್ಲಿ ಗೆದ್ದ ತಕ್ಷಣ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲು ಹಾಕುವ ಮೂಲಕ ಮೂಳೂರಿನಿಂದ ಮುಂದಕ್ಕೆ ಕಾಂಕ್ರಿಟೀಕರಣ ಮಾಡಿ ತಾತ್ಕಾಲಿಕ ಕಾಮಗಾರಿ ಮಾಡಿ ಮುಗಿಸಿದ್ದೆ ಎಂದರು.ತದನಂತರ ಮುಡಿಪಿನಿಂದ…

Read More

UN NETWORKS ಕೊಣಾಜೆ : ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹೋನ್ನತವಾದ ಕೊಡುಗೆ ನೀಡಿದ ಮಹಾನ್ ಸಾಧಕ ಎಂದು ಚಿಂತಕ ಡಿ.ಎಸ್. ನಾಗಭೂಷಣ ಶಿವಮೊಗ್ಗ ಅಭಿಪ್ರಾಯಪಟ್ಟರು. ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಸಮಿತಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ವಿವಿ ಹಳೆಸೆನೆಟ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿ-2019 ಪ್ರದನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಎಸ್‍ವಿಪಿಯವರ ಬಗ್ಗೆ ತಿಳಿದುಕೊಂಡು ಸಾಹಿತ್ಯ, ಕವನಗಳನ್ನು ಓದಿಕೊಂಡು ಬೆರಗಾಗಿದ್ದೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನೀಡಲ್ಪಡುವ ಪ್ರಶಸ್ತಿಯನ್ನು ಅತ್ಯಂತ ಪ್ರೀತಿಯಿಂದ ಮತ್ತು ನಮ್ರತೆಯಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು. ಮಹಾತ್ಮ ಗಾಂಧೀಜಿ ಹಾಗೂ ಲೋಹಿಯಾ ಅವರು ಸಮಾಜವಾದದ ಕಲ್ಪನೆಗಳು ನನ್ನಲ್ಲಿಯೂ ಜಾಗೃತಿ ಮೂಡಿಸಿತ್ತು. ನಮ್ಮದು ಪರಸ್ಪರ ಅವಲಂಬನೆಯ ಸಮಾಜವಾಗಿದೆ. ಪರಿಸರ ಮತ್ತು ನಾವು ಪೂರಕವಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯ. ಆದರೆ ಆಧುನಿಕ…

Read More