Author: UllalaVani

Kannada News From Coastal Karnataka

UN NETWORKS ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಚಾಪ್ಟರ್ ಜಿದ್ದಾ ಇದರ ವತಿಯಿಂದ ಫ್ರೆಟರ್ನಿಟಿ ಫೆಸ್ಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಬೃಹತ್ ಕುಟುಂಬ ಸಮ್ಮಿಲನ “ ಸಂಭ್ರಮ 2019” ಇತ್ತೀಚಿಗೆ ಜಿದ್ದಾದ ಮದ್ಹಲ ಸಭಾಂಗಣದಲ್ಲಿ ನಡೆಯಿತು. ಇಂಡಿಯಾ ಫ್ರೆಟರ್ನಿಟಿ ಫಾರಂ ರೀಜನಲ್ ಅಧ್ಯಕ್ಷ ಫಯಾಝುದ್ದೀನ್ ಚೆನ್ನೈ ಕಾರ್ಯಕ್ರಮದ ಉದ್ಘಾಟಿಸಿದರು. ಐ ಎಫ್ ಎಫ್ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಮಜೀದ್ ವಿಟ್ಲಾ ದಿಕ್ಸೂಚಿ ಭಾಷಣ ಮಾಡಿದರು. ಐ ಎಫ್ ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮ ದಲ್ಲಿ ಪತ್ರಕರ್ತ ಆರೀಫ್ ಕಲ್ಕಟ್ಟ ರನ್ನು ಐ ಎಫ್ ಎಫ್ ವತಿಯಿಂದ ಸನ್ಮಾನಿಸಲಾಯಿತು.ಮುಖ್ಯ ಅಥಿತಿಗಳಾಗಿ ಲುಲು ಹೈಪರ್ ಮಾರ್ಕೆಟ್ ಜನರಲ್ ಮ್ಯಾನೇಜರ್ ಮುಹಮ್ಮದ್ ಅಶ್ರಫ್ ಕೆ ಸಿ ರೋಡ್, ಇಂಡಿಯನ್ ಸೋಶಿಯಲ್ ಫಾರಂ ಪಶ್ಚಿಮ ವಲಯ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್, ಐ ಎಫ್ ಎಫ್ ಕಾರ್ಯದರ್ಶಿ ಆರಿಫ್ ಬಜ್ಪೆ,ಉದ್ಯಮಿ ಲಿಯಾಖತ್ ಮಾಸ್ಟರ್…

Read More

UN NETWORKS ಮಂಗಳೂರು: ಬೇಸಿಗೆ ರಜೆ ಕಡಿತ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮಾ.21 ರಂದು ಕೈಗೊಂಡಿರುವ ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿಗೆ ದಕ್ಷಿಣ ಕನ್ನಡ ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಸರಕಾರಿ ಕಾಲೇಜುಗಳ ಉಪನ್ಯಾಸಕರ ಸಂಘ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ ಹಾಗೂ ಉತ್ತರಪತ್ರಿಕೆಯನ್ನು ತಿದ್ದುವ ಸಂದರ್ಭದಲ್ಲಿ ಯಾರದರೂ ಅಡ್ಡಿಪಡಿಸಿದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ಸ್ಪಷ್ಟಪಡಿಸಿದೆ. ಪ್ರತಿಬಾರಿಯೂ ಮೌಲ್ಯ ಮಾಪನ ಸಮಯದಲ್ಲೇ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ನಡೆಸುವ ಮೂಲಕ ವಿದ್ಯಾರ್ಥಿಗಳ ಹಾಗೂ ಹೆತ್ತವರ ಜೀವನದಲ್ಲಿ ಆಟವಾಡುವ ಕೆಲಸವಾಗುತ್ತಿದೆ. ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಹಿಂದೆ ಪ್ರಾಂಶುಪಾಲರ ಸಂಘದ ಅಧ್ಯಕ್ಷರೇ ಆಗಿದ್ದಂತಹ ಶ್ರೀಕಂಠೇಗೌಡ ಹಾಗೂ ಬೋಜೇ ಗೌಡ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿ ಕಳುಹಿಸಲಾಗಿದೆ. ಭೋಜೇಗೌಡ ಅವರು ವರ್ಷವಿಡೀ ಮುಖ್ಯಮಂತ್ರಿಗಳ ಜತೆಗೆ ಇರುವವರು. ಆದರೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳನ್ನು ಸರಕಾರದ, ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸಾಧ್ಯವಾಗದೇ…

Read More

UN NETWORKS ತಲಪಾಡಿ:ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಹಳೆ ಆರ್.ಟಿ.ಒ ಬಳಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಒಂದರಿಂದ ಗ್ಯಾಸ್ ಸೋರಿಕೆ ಕಂಡು ಬಂದಿದೆ. ಮಂಗಳವಾರ ಸಂಜೆ 6 ಘಂಟೆಯ ಸುಮಾರಿಗೆ ಘಟನೆ ನಡೆದಿದೆ.ಕೂಡಲೇ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸುರಕ್ಷಾ ಕಾರ್ಯ ನಡೆಸಿದ್ದಾರೆ.ಗ್ಯಾಸ್ ಸೋರಿಕೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

Read More

UN NETWORKS ಕೊಣಾಜೆ: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್, ಎಸ್ಕೆಎಸ್ಸೆಸ್ಸೆಫ್ ನಡುಪದವು ಪಟ್ಟೋರಿ ಹಾಗೂ ಯು.ಟಿ.ಫರೀದ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಕಣಚೂರು ಮೆಡಿಕಲ್ ಕಾಲೇಜು ಹಾಗೂ ಪ್ರಸಾದ್ ನೇತ್ರಾಲಯ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡುಪದವಿನ ಪಿ.ಎ.ಕಾಲೇಜು ಕ್ಯಾಂಪಸ್‍ನಲ್ಲಿ ನಡೆಯಿತು. ಇಸ್ಲಾಮಿಕ್ ಸೆಂಟರ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ನಡುಪದವು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಳಿಕ ಮಾತನಾಡಿದ ಅವರು ಸಮಾಜದ ಅಭಿವೃದ್ಧಿಗಾಗಿ ಸಂಘಟನೆಗಳು ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದು ಈ ನಿಟ್ಟಿನಲ್ಲಿ ನಡುಪದವಿನಲ್ಲಿ ಪರಿಸರದ ಎಲ್ಲರಿಗೂ ಅನುಕೂಲವಾಗುವಂತೆ ಉಚಿತ ಆರೊಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮವನ್ನು ಅಲ್ ಹಾಜ್ ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿಯವರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ, ಹಾಜಿ. ಎಚ್.ಅಬ್ದುಲ್ ಖಾದರ್, ಎಸ್ಸಿಲರ್ ವಿಷನ್ ಐ ಫೌಂಡೇಶನ್ ಐ ಪೌಂಡೇಶನ್ ಇದರ ಹಿರಿಯ ವ್ಯವಸ್ಥಾಪಕರಾದ ಧರ್ಮ ಪ್ರಸಾದ್ ರೈ, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ರೋಹಿತ್ , ಪಂಚಾಯಿತಿ ಸದಸ್ಯರಾದ ಎನ್.ಎಸ್.…

Read More

UN NETWORKS ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿದ ಅಧೀನ ಸಂಸ್ಥೆ ನಿಟ್ಟೆ ಉಷಾ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸೋಮವಾರ ನಡೆಯಿತು. “ಥಿಂಕ್ ಈಖ್ವಲ್, ಬಿಲ್ಟ್ ಸ್ಮಾರ್ಟ್, ಇನ್ನೊವೇಟ್ ಫಾರ್ ಚೇಂಜ್” ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಿತು.ನಿಟ್ಟೆ ವಿವಿಯ ಸಂಶೋಧನೆ ವಿಭಾಗ ನಿರ್ದೇಶಕಿ ಪ್ರೊಫೆಸರ್ ಡಾ. ಇಂದ್ರಾಣಿ ಕರುಣಾಸಾಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದಲ್ಲಿ ಮತ್ತು ವಿದೇಶದಲ್ಲಿ ಲಿಂಗ ಸಮಾನತೆಯ ಕುರಿತು ವಿವರಿಸಿ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಮಹಿಳೆಯ ಸಮಾನತೆಗಾಗಿ ಹೇಗೆ ಹೋರಾಡಬೇಕು ಎಂದು ತಿಳಿಸಿದರು.ಸ್ವೀಡನ್ ನ ಗೊಥೆನ್ ಬರ್ಗ್ ವಿವಿಯ ಸಂಶೋಧನಾ ವಿದ್ಯಾರ್ಥಿ ಜೋಸ್ಟಿನ್ ಹಾಗೂ ಇಂಗ್ಲೆಂಡ್ ನ ಪ್ಲೈ ಮೌತ್ ವಿವಿಯ ಡಾ. ಎಲೆನಾ ಉಪಸ್ಥಿತರಿದ್ದರು. ಮುಖ್ಯ ಗ್ರಂಥಪಾಲಕಿ ಜಾನವಿ ಸ್ವಾಗತಿಸಿದರು. ಅಕೌಂಟೆಂಟ್ ಶ್ವೇತಾ ನಿರೂಪಿಸಿದರು. ಕಂಪ್ಯೂಟರ್ ಸಹಾಯಕ ಕಂಪ್ಯೂಟರ್ ಸಹಾಯಕಿ ಅಶ್ವಿನಿ ವಂದಿಸಿದರು. ಬೋಧನೆ ಮತ್ತು ಬೋಧನಾ ಸಿಬ್ಬಂದಿಗಳು ಮಹಿಳಾ ಘಟಕದ ವಿವಿಧ…

Read More

UN NETWORKS ಉಳ್ಳಾಲ: ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರಿಸುವ ಪ್ರಯತ್ನದಲ್ಲಿ ಭಾಷಾವಿಷಯಕವಾದ ಶಾಸ್ತ್ರಗ್ರಂಥಗಳು ಹಾಗೂ ಪದಕೋಶಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಿಟ್ಟೆ ವಿವಿ ತುಳುಭಾಷಾ ಪೀಠ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಅವರ ಐದು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಹೊರತಂದಿರುವ ತುಳುಜ್ಞಾತಿ ಪದಕೋಶ ಸಂಶೋದನಾಸಕ್ತರಿಗೆ ಹಾಗೂ ಅಧ್ಯಯನ ನಡೆಸುವವರಿಗೆ ಬಹಳ ಉಪಯುಕ್ತವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಸೆಮಿನಾರ್ ಹಾಲ್ ನಲ್ಲಿ ಮಂಗಳವಾರ ನಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳುಜ್ಞಾತಿ ಪದಕಶೋಶ ರಚನೆಗೆ 2014ರಲ್ಲಿ ನಿಟ್ಟೆ ವಿವಿಯ ಕುಲಾಧಿಪತಿ ವಿನಯ್ ಹೆಗ್ಡೆ ಅವರು ಚಾಲನೆ ನೀಡುವ ಮೂಲಕ ಯೋಜನೆಯ ನಿಟ್ಟೆ ವಿವಿಯ ಪ್ರಾಯೋಜಿತ ಯೋಜನೆಯಾಗಿ ರೂಪುಗೊಂಡಿತು. ಗಣಕಯಂತ್ರಕ್ಕೆ ಭಾರತೀಯ ಲಿಪಿಗಳನ್ನು ಅಳವಡಿಸಿದ ಪ್ರೊ.ಕೆ.ಪಿ. ರಾವ್ ಅವರು ತಾವು ರೂಪಿಸಿದ “ಅಪಾರ’ಹೆಸರಿನ ಫಾಂಟ್ ತಂತ್ರಾಂಶವನ್ನುತುಳುಜ್ಞಾತಿಪದಕೋಶಕ್ಕೆ ಒದಗಿಸಿದ ಡಾ. ಪದ್ಮನಾಭ ಕೇಕುಣ್ಣಾಯ ಅಕ್ಷರಶಃ ರೂಪುರೇಶೆಯನ್ನು…

Read More

UN NETWORKS ಹರೇಕಳ : ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಂಗಳೂರಿನ ಕಾರ್ಪೊರೇಷನ್ ಬ್ಯಾಂಕ್‍ನ ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಉಚಿತ ವೈದಕೀಯ ತಪಾಸಣಾ ಶಿಬಿರವು ನಡೆಯಿತು. ಕಾರ್ಪೊರೇಷನ್ ಬ್ಯಾಂಕ್‍ನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಈ ಶಿಬಿರದ ಉದ್ಘಾಟನೆಯನ್ನು ಬ್ಯಾಂಕ್‍ನ ಉಪಮಹಾಪ್ರಬಂಧಕರಾದ ಎ.ಎನ್. ರವಿಶಂಕರ್ ನೆರವೇರಿಸಿ, ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕು. ರೋಗ ಬಂದ ಮೇಲೆ ಡಾಕ್ಟರ್ ಹತ್ತಿರ ಹೋಗುವ ಬದಲು, ರೋಗಗಳು ಬಾರದೆ ಹಾಗೆ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ವಿಚಾರದಲ್ಲೂ ಶ್ರದ್ಧೆ ಇದ್ದರೆ ಉತ್ತಮ ಆರೋಗ್ಯ, ಉತ್ತಮ ಜ್ಞಾನ, ಉತ್ತಮ ಯಶಸ್ಸು ನಿಮ್ಮದಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಕಾರ್ಪೊರೇಷನ್ ಬ್ಯಾಂಕ್‍ನ ಸಹಾಯಕ ಮಹಾಪ್ರಬಂಧಕರಾದ ರವಿಕುಮಾರ್ ಅವರು ಉಪಸ್ಥಿತರಿದ್ದರು. ಪ್ರಸ್ತಾವನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆ.ರವೀಂದ್ರ ರೈ ಅವರು ನೆರವೇರಿಸಿ ಸರ್ವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕೆ.ಎಂ.ಸಿ ಅತ್ತಾವರದ ಮಕ್ಕಳ ತಜ್ಞೆ ಡಾ. ಮೊನಿಕ ಮತ್ತು ಅವರ ತಂಡ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು…

Read More

UN NETWORKS ಉಳ್ಳಾಲ: ಸೋಮೇಶ್ವರ ಗ್ರಾಮ ದಾರಂದಬಾಗಿಲು ಪಿಲಾರ್ ಯುವಕ ಮಂಡಲದ 44ನೇ ವಾರ್ಷಿಕೋತ್ಸವ, ಪಿಲಾರ್ ಶ್ರೀಪಂಜದರಾಯ ದೈವದ ನೇಮೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಯೋಧ, ನಿವೃತ್ತ ಡಿವೈಎಸ್ಪಿ ರಾಜೇಂದ್ರಕುಮಾರ್ ಅವರು, ಪಂಜದರಾಯ ದೈವದ ನೇಮೋತ್ಸವದ ಸಂದರ್ಭದಲ್ಲಿ ಪಿಲಾರ್ ಯುವಕ ಮಂಡಲದವರು ಈ ಬಾರಿ ಯೋಧರನ್ನು ಗೌರವಿಸುವ ಕಾರ್ಯಕ್ರಮ ನಡೆಸಿದ್ದಾರೆ. ಇದು ನಿಜವಾಗಿ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ ಎಂದರು. ಈ ಸಂದರ್ಭ ಸಮಾಜಸೇವಕ ಬಾಬು ಪಿಲಾರ್ , ಪೊಲೀಸ್ ಇಲಾಖೆಯಲ್ಲಿ ದಕ್ಷಸೇವೆ ಸಲ್ಲಿಸಿ ಮುಖ್ಯಮಂತ್ರಿ ಪದಕ ಪಡೆದ ಚಂದ್ರಶೇಖರ್ ಎನ್.ಎ., ವಿಶ್ರಾಂತ ಯೋಧರಾದ ಪ್ರವೀಣ್ ಶೆಟ್ಟಿ ಮೇಗಿನ ಮನೆ, ಎಂ. ವಿಶ್ವನಾಥ ಗಟ್ಟಿ, ದೇವಸ್ಯ ಪಿ.ಪಿ. , ಶೀನಪ್ಪಗೌಡ, ಪುರುಷೋತ್ತಮ ಗೌಡ, ಜೋಸೆಫ್ ಕೆ.ಯವರ ಪರವಾಗಿ ಅವರ ಧರ್ಮಪತ್ನಿ ವೀಣಾ ಜೋಸೆಫ್ , ಸುದೇಶ್ ಕುಮಾರ್, ರಾಜೇಶ್ ಲಕ್ಷ್ಮೀಗುಡ್ಡೆ ಅವರನ್ನು ಸನ್ಮಾನಿಸಲಾಯಿತು.ಬಳಿಕ ಪರಿಸರದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ…

Read More

UN NETWORKS ಅಸೈಗೋಳಿ: ಅಯ್ಯಪ್ಪ ಸ್ವಾಮಿ ಮಂದಿರ ಇರುವ ಊರಿನಲ್ಲಿ ಒಂದು ರೀತಿಯ ನೆಮ್ಮದಿ, ಶಾಂತಿಯ ಜೊತೆ ಪ್ರದೇಶದಲ್ಲಿ ಶಕ್ತಿಯೂ ತುಂಬಿರುತ್ತದೆ. ಭಜನೆಯಿಂದಾಗಿ ಸಂಸ್ಕೃತಿಯೂ ಮೇಳೈಸುತ್ತದೆ ಎಂದು ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷ ಮಾಧವ ಮಾವೆ ಅಭಿಪ್ರಾಯಪಟ್ಟರು.ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಮಾತನಾಡಿ, ಗ್ರಾಮದಲ್ಲಿ ಹೆಚ್ಚು ಜನಸಂಖ್ಯೆ ಇರುವುದು ಅಸೈಗೋಳಿಯಲ್ಲಾಗಿದೆ. ಇಲ್ಲಿನ ಜನರ ನೆಮ್ಮದಿಗಾಗಿ ಅತ್ಯಗತ್ಯವಾ ಮಂದಿರ ಎಲ್ಲರ ಸಹಕಾರದಿಂದ ಎದ್ದು ನಿಂತಿದೆ. ಆಮಂತ್ರಣ ಪತ್ರಿಕೆ ದೊಡ್ಡ ಶಕ್ತಿಯಾಗಿದ್ದು ಪ್ರತಿಯೊಬ್ಬರಿಗೂ ತಲುಪಿದಾಗ ಬ್ರಹ್ಮಕಲಶ ಅದ್ಧೂರಿಯಾಗಿ ನಡೆಸಲು ಸಾಧ್ಯ ಎಂದರು. ಕೊಣಾಜೆಯ ಮಾಜಿ ಪಟೇಲ್ ರಘುರಾಮ ಕಾಜವ ಉದ್ಘಾಟಿಸಿದರು. ಧಾರ್ಮಿಕ ಮುಖಂಡ ಸೀತಾರಾಮ ಶೆಟ್ಟಿ ದಡಸ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಂದ್ರಶೇಖರ ಮಂಟಮೆ, ಉದ್ಯಮಿ ದೇವಣ್ಣ ಶೆಟ್ಟಿ, ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್,…

Read More

UN NETWORKS ಉಳ್ಳಾಲ : ವಿದಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದೇ ಸ್ಥಾನ ಪಡೆದಿದೆ ಎನ್ನುವ ಕಾರಣಕ್ಕೆ ಧೃತಿಗೆಡಬೇಡಿ, ಈ ಚುನಾವಣೆಯಲ್ಲಿ ಹೇಡಿಗಳದೆ ಧೈರ್ಯ, ಆತ್ಮವಿಶ್ವಾಸದಿಂದ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಅತ್ಯಧಿಕ ಮತಗಳ ಮುನ್ನುಡೆ ದೊರಕಿಸಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್ ಕರೆ ನೀಡಿದರು. ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಆಶ್ರಯದಲ್ಲಿ ಸೋಮವಾರ ಕಲ್ಲಾಪುವಿನಲ್ಲಿ ನಡೆದ ಕಾರ್ಯಕರ್ತರ ಸಭೆ ಮತ್ತು ಹಿರಿಯ ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಇದೀಗ ಉಳ್ಳಾಲವನ್ನು ತಾಲೂಕು ಮಾಡುವ ಮೂಲಕ ಕ್ಷೇತ್ರ ಸದೃಢವಾಗಿ ಬೆಳೆಯುವಂತಾಗಿದೆ. ಲೋಕಸಭಾ ಚುನಾವಣೆ ಘೋಷಣೆ ಆಗಿರುವುದರಿಂದ ಕಾರ್ಯಕರ್ತರು ಜಾಗೃತರಾಗಿರಬೇಕು. ಮತ ಕೇಳುವುದು ಹೇಗೆ ಎನ್ನುವ ಬಗ್ಗೆ ಯೋಜನೆ ರೂಪಿಸಬೇಕು ಎಂದು ಹೇಳಿದರು.ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್…

Read More