UN NETWORKS ಕುರ್ನಾಡು : ಹೊರೆಕಾಣಿಕೆ ಮೆರವಣಿಗೆ ಹಿಂದುತ್ವದ ಶಕ್ತಿಯಾಗಿ, ಇನ್ನೊಂದು ಧರ್ಮಕ್ಕೂ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅತ್ಯಂತ ಅದ್ದೂರಿಯಾಗಿ ನಡೆದು ಇತಿಹಾಸ ಸೃಷ್ಟಿಯಾಗುವಂತೆ ಭಕ್ತರು ನೋಡಿಕೊಳ್ಳಬೇಕಾಗಿದ್ದು, ಅಂದಿನ ದಿನ ಯಾವುದೇ ಕೆಲಸವಿದ್ದರೂ ರಜೆ ತೆಗೆದುಕೊಳ್ಳಬೇಕಾಗಿದೆ ಎಂದು ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ರೈ ಬೋಳಿಯಾರ್ ಹೇಳಿದರು. ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಹೊರೆಕಾಣಿಕೆ ಮೆರವಣಿಗೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಬ್ರಹ್ಮಕಲಶದಲ್ಲಿ 30 ಸಾವಿರಕ್ಕೂ ಅಧಿಕ ಭಕ್ತರು ಅನ್ನದಾನ ಸ್ವೀಕರಿಸಲಿದ್ದಾರೆ. ಅನ್ನದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಅಕ್ಕಿ ನೀಡಲು ಬಯಸುವವರು ಒಂದೇ ರೀತಿಯ ಅಕ್ಕಿಗೆ ಆದ್ಯತೆ ನೀಡಬೇಕು. ಬಾಳೆಎಲೆ ಕೊರತೆ ಇರುವುದರಿಂದ ತೋಟ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಎಲೆ ನೀಡಲು ಮುಂದಾಗಬೇಕು. ಜಾತಿ, ಭೇದಕ್ಕೆ ಅವಕಾಶ ನೀಡದೆ ಪ್ರತಿಯೊಬ್ಬರು ಒಂದೇ ತಾಯಿಯ ಮಕ್ಕಳಂತೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ಎಂದು ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಜಯರಾಮ ಸಾಂತ ಬೋಳ್ಯಾರುಗುತ್ತು ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಸೇರಿದ ಭಕ್ತರನ್ನು ಕಂಡಾಗ ಯಶಸ್ಸು ಖಚಿತ.…
Author: UllalaVani
UN NETWORKS ತೊಕ್ಕೊಟ್ಟು: ಸರಕಾರ ಜಾರಿಗೊಳಿಸಿರುವ ಸಾಮಾಜಿಕ ಸುರಕ್ಷಾ ಸಂಹಿತಿ ಮಸೂದೆ ಜಾರಿಗೊಂಡರೆ ಕಟ್ಟಡ ಮತ್ತು ಇತರೆ ಕಾರ್ಮಿಕರು ಹಲವು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಈ ಕೂಡಲೇ ಮಸೂದೆಯನ್ನು ಸರಕಾರ ಹಿಂಪಡೆಯಬೇಕು ಎಂದು ಸಿಐಟಿಯು ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಹೇಳಿದರು. ಸಾಮಾಜಿಕ ಸುರಕ್ಷಾ ಮಸೂದೆ ಕರಡು ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ತೊಕ್ಕೊಟ್ಟುವಿನಲ್ಲಿ ಇತ್ತೀಚೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಉಳ್ಳಾಲ ವಲಯ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ 2006ರಲ್ಲಿ ರಚನೆಯಾದ ಕಲ್ಯಾಣ ಮಂಡಳಿಯಲ್ಲಿ ಸುಮಾರು 3 ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಫಲಾನುಭವಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ 1996ರ ಅಡಿಯಲ್ಲಿ ಸಂಗ್ರಹವಾಗಿರುವ 7500 ಕೋಟಿ ಹಣದಲ್ಲಿ ಪಿಂಚಣಿ, ಮದುವೆ, ಶೈಕ್ಷಣಿಕ, ವೈದ್ಯಕೀಯ ಹಾಗೂ ಹೆರಿಗೆ ಸೇರಿ ಸುಮಾರು 10 ಸೌಲಭ್ಯಗಳನ್ನು ಪಡೆಯುವ ಮೂಲಕ ಕುಟುಂಬದ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸರಕಾರ ಸಂಘಟಿತ ಹಾಗೂ ಅಸಮಘಟಿತ ಕಾರ್ಮಿಕರನ್ನು…
UN NETWORKS ಉಳ್ಳಾಲ: ಮಹಿಳೆ ಕುಟುಂಬದ ಆರೋಗ್ಯದ ಕಡೆ ಗಮನ ನೀಡುವುದರ ಜೊತೆಗೆ ತನ್ನ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕು, ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೂ ಆರೋಗ್ಯವಾಗಿದ್ದಂತೆ ಎಂದು ಯೆನಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕೌನ್ಸಿಲರ್ ಮತ್ತು ವಿದ್ಯಾರ್ಥಿಗಳ ಕ್ಷೇಮಪಾಲನಾ ಅಧಿಕಾರಿ ಸುನಿತಾ ಪ್ರಭು ಹೇಳಿದರು. ಜೈ ಹನುಮಾನ್ ಕ್ರೀಡಾ ಮಂಡಳಿ ಬಟ್ಟೆದಡಿ ಕುತ್ತಾರ್ ಇದರ ಮಹಿಳಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕುತ್ತಾರಿನಲ್ಲಿ ಭಾನುವಾರ ನಡೆದ “ಆರೋಗ್ಯ ಮತ್ತು ಕೌಟುಂಬಿಕ ಸಲಹಾ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕುಟುಂಬ ಜೀವನ, ಪ್ರೀತಿ, ಪೋಷಕರ ಪಾತ್ರ, ಮಹಿಳೆಯರ ಆರೋಗ್ಯ ಹಾಗೂ ಮಹಿಳೆಯರ ಜೀವನ ಶೈಲಿಯ ಸಮತೋಲನ ಹಾಗೂ ಉತ್ತಮ ಆರೋಗ್ಯದ ಗುಟ್ಟು ಯಶಸ್ವೀ ಜೀವನವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಿತಿಯ ಅಧ್ಯಕ್ಷೆ ಪ್ರಮೀಳಾ ಗಾಣದಮನೆ ವಹಿಸಿದ್ದರು. ಭಾಗೀರಥಿ ಪ್ರಾಸ್ತವಿಕವಾಗಿ ಮಾತನಾಡಿದರು. ಕುಮಾರಿ ಲಿಮಿತ ಸ್ವಾಗತಿಸಿದರು. ತೇಜಶ್ರಿ ಕಂಪ ವಂದಿಸಿದರು.
UN NETWORKS ಉಳ್ಳಾಲ: ಕೈರಂಗಳದ ಅಮೃತಧಾರೆ ಗೋಶಾಲೆಯಿಂದ ತಲವಾರು ತೋರಿಸಿ ದನ ಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ರೌಡಿ ನಿಗ್ರಹದ ದಳದ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಮಂಜೇಶ್ವರ ಪೈವಳಿಕೆಯ ಅಬ್ದುಲ್ ಸಲಾಂ ಯಾನೆ ತುಡ್ವ ಸಲಾಂ ಬಂಧಿತ. ಈತ 2018ರ ಮಾರ್ಚ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾರಾಂ ಭಟ್ ಅವರಿಗೆ ಸೇರಿದ ಪುಣ್ಯಕೋಟಿ ಗೋ ಆಶ್ರಮದಿಂದ ದನ ಕಳವು ನಡೆಸಿದ್ದ. ಘಟನೆ ಸಂಬಂಧ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಆಶ್ರಮದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆದಿತ್ತು. ಜಿಲ್ಲೆಯ ಘಟಾನುಘಟಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದರು. ಬಳಿಕ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವ ಮೂಲಕ ಆಶ್ರಮದ ರೂವಾರಿ ಭಟ್ ಉಪವಾಸ ಕೈಬಿಡುವ ಮೂಲಕ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಬಂಧಿಸುವ ಮೂಲಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಸಲಾಂ ವಿರುದ್ಧ ಉಳ್ಳಾಲದಲ್ಲಿ ಮೂರು,…
UN NETWORKS ತೊಕ್ಕೊಟ್ಟು : ತುಳುನಾಡ ರಕ್ಷಣಾ ವೇದಿಕೆಯ ದಶ ಸಂಭ್ರಮವನ್ನು ಅವಿಸ್ಮರಣೀಯಗೊಳಿಸಲು “ವಿಶ್ವ ತೌಳವ ಉಚ್ಚಯ” (ವಿಶ್ವ ತುಳುವರ ಸಮ್ಮಿಲನ) ಕಾರ್ಯಕ್ರಮ ಮಾ.29,30,31 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಆ ಪ್ರಯುಕ್ತ ಮಾ.14 ರಂದು ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ಸಾರ್ವಜನಿಕ ಸಮಾಲೋಚನ ಸಭೆ ನಡೆಯಲಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಎಂ ಸಿರಾಜ್ ಅಡ್ಕರೆ ಹೇಳಿದರು. ತೊಕ್ಕೊಟ್ಟುವಿನಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ತು.ರ.ವೇ ಆರಂಭಗೊಂಡು 10 ವರ್ಷಗಳಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹುಭಾಷಾ ಕವಿಗೋಷ್ಟಿ, ತುಳುನಾಡು ನಡೆದು ಬಂದುದರ ಬಗೆಗೆ ವಿಚಾರ ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನ, ಗುಡಿಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನಗಳು, ತುಳುನಾಡ ದಿಬ್ಬಣ, ತುಳುನಾಡಿನ ಆಹಾರೋತ್ಸವ, ತುಳುನಾಡ ರಾಜದರ್ಬಾರ್, ಜನಮೈತ್ರಿಸಂಗಮ, ದೇಹದಾಡ್ಯ ಪ್ರದರ್ಶನ, ತುಳುಹಾಸ್ಯ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ನೃತ್ಯ, ಕೋಸ್ಟಲ್‍ವುಡ್ ಸಿನೇಮಾ ಪರ್ಬ(ರಂಗಭೂಮಿಯಿಂದ ಬೆಳ್ಳಿ ಪರದೆಯವರೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಚಿತ್ರ…
UN NETWORKS ಕೊಣಾಜೆ: ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಶಿಕ್ಷಣ ಸೇರಿದಂತೆ ಹಲವಾರು ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಮುನ್ನಡೆದರೆ ಸ್ವಾವಲಂಬೀ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಪ್ರೊ.ಮರಿಯಾ ಸಿ.ಡಿ.ಕಾಸ್ಟ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಸೇನಾಪಡೆ, ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆಯನ್ನು ನಾವು ಕಾಣಬಹುದಾಗಿದೆ. ಸಮಾನತೆಯ ಚಿಂತೆನೆಯು ಪ್ರತಿಯೊಬ್ಬರಲ್ಲೂ ಬೆಳೆದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರವು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು, ಇಂದು ಜಗ್ತತು ಮುಂದುವರಿದಿದ್ದರೂ ಅಸಮಾನತೆಯು ಸಂಪೂರ್ಣ ಕಡಿಮೆಯಾಗಿಲ್ಲ. ಇಂದಿಗೂ…
UN NETWORKS ಕೊಣಾಜೆ : ಪ್ರತಿಪಕ್ಷದ ಕೆಲವರು ಮಂಗಳೂರು ಕ್ಷೇತ್ರಕ್ಕೆ ರಸ್ತೆ ಬಿಟ್ಟರೆ ಬೇರೆ ಅಭಿವೃದ್ಧಿ ಕೆಲಸ ಆಗಲಿಲ್ಲ ಎಂದು ಆರೋಪಿಸುತ್ತಿದ್ದರು. ತಾಲೂಕು ಮಟ್ಟಕ್ಕೆ ಸೀಮಿತವಾಗಿರುವ ಅಗ್ನಿಶಾಮಕ ಠಾಣೆ, ತಾಲೂಕು ಕ್ರೀಡಾಂಗಣದಂತಹ ಸೌಲಭ್ಯಗಳನ್ನು ಉಳ್ಳಾಲ ಹೋಬಳಿ ಆಗಿದ್ದರೂ ಲಭ್ಯವಾಗಿಲ್ಲ ಎಂದು ಟೀಕಿಸುತ್ತಾ ಒಂದು ಪಥದಲ್ಲಿ ನನಗೆ ಬಹಳಷ್ಟು ಯೋಜನೆ ತರಲು ಪ್ರೇರಣೆ ಆಗಿದ್ದಾರೆ. ಟೀಕಿಸುವವರಿಗೆ ಅಭಿವೃದ್ಧಿ ಮಾಡಿ ಉತ್ತರಿಸಿದ್ದೇನೆ. ಅವರಿಗೆ ನನ್ನ ಪರವಾಗಿ ಧನ್ಯವಾದಗಳು. ಹಾಗೆಯೇ ಉಳ್ಳಾಲ ತಾಲೂಕಿಗೆ 29 ಸರಕಾರಿ ಇಲಾಖೆಗಳು, ಆರ್ ಟಿ ಒ, ಅಗ್ನಿಶಾಮಕ ಠಾಣೆ, ತಾಲೂಕು ಕೋರ್ಟ್ ಮೊದಲಾದ ಎಲ್ಲ ಸೌಲಭ್ಯಗಳನ್ನು ನಮ್ಮ ಹಕ್ಕಾಗಿ ಬರಲಿದ್ದು ಅವೆಲ್ಲವನ್ನು ಇಂತಿಷ್ಟು ದೂರದಲ್ಲಿ ನಿರ್ಮಿಸುವ ಮೂಲಕ ಉಳ್ಳಾಲದ ಸಮಗ್ರ ಅಭಿವೃದ್ಧಿ ಕಣ್ತುಂಬಿಸಿಕೊಳ್ಳಲಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಉಳ್ಳಾಲ ನೂತನ ತಾಲೂಕು ಆಗಿ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಶ್ರಮಿಸಿದ ಸಚಿವ ಯು.ಟಿ. ಖಾದರ್ ಅವರನ್ನು ಅಭಿನಂದಿಸುವ ಪ್ರಯುಕ್ತ ಸಾರ್ವಜನಿಕ ಅಭಿನಂದನೆ…
UN NETWORKS ನರಿಂಗಾನ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯಿತಿನಲ್ಲಿ ಜಾಗೃತಿ ಜಾಥದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ನರಿಂಗಾನ ಗ್ರಾಮ ಪಂಚಾಯಿತಿ, ಜನಶಿಕ್ಷಣ ಟ್ರಸ್ಟ್, ಸುಗ್ರಾಮ ಜಾಗೃತಿ ವೇದಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಜಾಗೃತಿ ಜಾಥದೊಂದಿಗೆ ಆರಂಭವಾಯಿತು. ಪಂಚಾಯಿತಿ ವಠಾರ ಮತ್ತು ಪೊಟ್ಟೋಳಿಕೆ ಜನವಸತಿ ಪ್ರದೇಶದಲ್ಲಿ ಸಾಗಿದ ಜಾಗೃತಿ ಜಾಥದಲ್ಲಿ ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ, ಗ್ರಾಮ ಸ್ವಚ್ಛತೆ, ಮತದಾನದ ಮಹತ್ವದ ಕುರಿತ ಘೋಷಣೆ, ಭಿತ್ತಿಪತ್ರಗಳ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಳಿನಾಕ್ಷಿ ಮಹಿಳೆಯರು ಜಾಗೃತರಾಗಿ ತಮ್ಮ ಹಕ್ಕುಗಳ ರಕ್ಷಣೆ, ಮಕ್ಕಳ ಶಿಕ್ಷಣ, ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾವಲಂಬನೆಯಿಂದ ಬದುಕುವ ಸಂಕಲ್ಪ ಮಾಡಿ ಕಾರ್ಯ ಸಾಧಿಸಲು ಸಿದ್ಧರಾಗಬೇಕು ಎಂದರು. ಮಹಿಳಾ ಸಾಧಕಿಯರ ಸಂವಾದ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರುಗಳಾದ ಬೇಬಿ, ಹರಿಣಾಕ್ಷಿ, ಸೆಫಿಯಾ, ಉಷಾ, ಆದಿವಾಸಿ ಸಮುದಾಯದ ಗಿರಿಜಾ, ಬೇಬಿ ತಮ್ಮ ಕಾರ್ಯ…
UN NETWORKS ಕುರ್ನಾಡು: ಗ್ರಾಮಾಭಿವೃದ್ಧಿಗೆ ಪೂರಕವಾದ ಸೇವೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸ್ವಚ್ಛತಾ ಅಂದೋಲನದಂತಹ ಪ್ರಮುಖ ಕಾರ್ಯಕ್ರಮಗಳಿಗೆ ಉತ್ತೇಜನ ಪಂಚಾಯಿತಿ ವತಿಯಿಂದ ನೀಡುತ್ತೇವೆ. ಆದರೆ ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೇ ದೈನಂದಿನ ಕಾರ್ಯಚಟುವಟಿಕೆಯಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಕುರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಅಭಿಪ್ರಾಯಪಟ್ಟರು. ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು (ಸಿಒಡಿಪಿ) ಆಶ್ರಯದಲ್ಲಿ ಕುರ್ನಾಡು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪ್ರಗತಿ ಮಹಿಳಾ ಸಂಘದ ಸದಸ್ಯ ಸ್ವಸಹಾಯ ಸಂಘಗಳ ಮಹಿಳಾ ದಿನಾಚರಣೆಯ ಪ್ರಯುಕ್ತ ಕುರ್ನಾಡು ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಸ ಹಾಕುವುದು, ತೆಗೆಯುವುದು ಕೆಲಸವಲ್ಲ. ಕಸಹಾಕುವ ಮುನ್ನ ಜಾಗೃತಿ ಮೂಡಿಸಬೇಕು. ಒಣ ಕಸ, ಹಸಿ ಕಸವನ್ನು ಪತ್ಯೇಕವಾಗಿ ಶೇಖರಿಸಿಟ್ಟು ಅದನ್ನು ತಿಂಗಳಿಗೊಮ್ಮೆ ತೆಗೆಯುವ ಕೆಲಸ ಆಗಬೇಕು. ವಾರದ ಮೂರನೇ ಶನಿವಾರ ಸ್ವಚ್ಛತೆ ಅಭಿಯಾನ ನಡೆಸಲು ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಪ್ರತ್ಯೇಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಯಾಗಬೇಕು ಎಂದು…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2018-19ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಹಾಗೂ ಕೃತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರಸಿದ್ಧ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಹಾಗೂ ಬಡಗುತಿಟ್ಟಿನ ಹಿರಿಯ ಯಕ್ಷಗಾನ ವೇಷಧಾರಿ ಗೋಡೆ ನಾರಾಯಣ ಹೆಗಡೆ ಅವರು ಯಕ್ಷಮಂಗಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿದ್ವಾಂಸರಾದ ಪ್ರೊ.ಜಿ.ಎಸ್.ಭಟ್ಟ ಸಾಗರ ಅವರ ‘ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಕೃತಿಯು ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ತಲಾ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರೊ.ಎಂ.ಎಲ್.ಸಾಮಗ, ಡಾ.ಚಂದ್ರಶೇಖರ್ ದಾಮ್ಲೆ , ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಡಾ.ಧನಂಜಯ ಕುಂಬ್ಳೆ ಇವರನ್ನೊಳಗೊಂಡ ಸಮಿತಿ ಸಾಧಕರನ್ನು ಆಯ್ಕೆ ಮಾಡಿದೆ. ಮಾ.15ರಂದು ಪ್ರಶಸ್ತಿ ಪ್ರದಾನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.15ರಂದು ಅಪರಾಹ್ನ…

