UN NETWORKS
ಉಳ್ಳಾಲ: ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ.66 ರ ಕಲ್ಲಾಪುವಿನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಕುಂಪಲ ಆಶ್ರಯಕಾಲನಿ ನಿವಾಸಿ ಯತೀಶ್ (24) ಮೃತರು. ಎಂಸಿ ಎಫ್ ನಲ್ಲಿ ಉದ್ಯೋಗ ಹೊಂದಿದ್ದ ಇವರು ಬೈಕಿನಲ್ಲಿ ಮಂಗಳೂರಿನಿಂದ ಕುಂಪಲ ಕಡೆಗೆ ತೆರಳುವ ಸಂದರ್ಭ ಕಲ್ಲಾಪು ಸಮೀಪ ಕಂಟೈನರ್ ಲಾರಿಯಡಿ ಬಿದ್ದು ಮೃತ ಪಟ್ಟಿದ್ದಾರೆ . ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


