UN NETWORKS
ಕೋಟೆಕಾರು : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಕೆ.ಸಿ.ರೋಡ್ ಘಟಕದ ವತಿಯಿಂದ ಸಾಂತ್ವನ ಯೋಜನೆಯಡಿ 7ನೇ ವರ್ಷದ 7 ಜೊತೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಡಿ.30ರಂದು ಬೆಳಗ್ಗೆ 10.00 ಗಂಟೆಗೆ ಕೋಟೆಕಾರ್ ನೂರ್ಮಹಲ್ನಲ್ಲಿ ನಡೆಯಲಿದೆ.
ಕಾಸರಗೋಡು ಜಾಮಿಆ ಸಅದಿಯಾ ಪ್ರೊಫೆಸರ್ ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆ ಸಂಯುಕ್ತ ಖಾಝಿ ಅಲ್ಹಾಜ್ ಅಲ್ಫುಖಾಹಾಅ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ನಿಖಾಹ್ ನೇತೃತ್ವ ವಹಿಸಲಿರುವರು. ಸಿ.ಟಿ.ಎಮ್. ಸೈಯ್ಯದ್ ಮುಹಮ್ಮದ್ ಸಲೀಮ್ ಅಸ್ಸಖಾಫ್ ತಂಙಳ್ ಕೆ.ಸಿ.ರೋಡ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಅಲ್ಹಾಜ್ ಜಿ.ಎಮ್.ಮುಹಮ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಮ್ಎಸ್ಎಮ್ ಅಬ್ದುರಶೀದ್ ಝೈನಿ ಅಲ್ಕಾಮಿಲ್ ಎಮ್.ಎ, ಎಸ್.ವೈ.ಎಸ್. ದ.ಕ. ಜಿಲ್ಲಾಧ್ಯಕ್ಷ ಅಲ್ಹಾಜ್ ಉಸ್ಮಾನ್ ಸಅದಿ ಪಟ್ಟೋರಿ, ಮ್ಯಾರೇಜ್ ಸೆಲ್ನ ಅಧ್ಯಕ್ಷ ಯು.ಬಿ. ಮುಹಮ್ಮದ್ ಇನ್ನಿತರರು ಭಾಗವಹಿಸಲಿದ್ದಾರೆ.
ಕೆ.ಸಿ.ರೋಡು ಎಸ್ವೈಎಸ್ ಕಳೆದ ಹತ್ತು ವರ್ಷಗಳಿಂದ 125 ಮನೆಗಳಿಗೆ ತಲಾ 10ಕೆ.ಜಿ.ಯಂತೆ ಬಡವರಿಗೆ ಅಕ್ಕಿ ವಿತರಣೆ, ಮನೆ ದುರಸ್ತಿಗೆ ಸಹಾಯ, ವಿಧವೆಯರಿಗೆ ಸಹಾಯ, ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಸಾಂಸ್ಕೃತಿಕ ಪರಿಕರ (ದಫ್ ಪರಿಕರ) ವಿತರಣೆ, ರಕ್ತದಾನ ಶಿಬಿರ, ರೋಗಿಗಳಿಗೆ ಔಷಧಿಗೆ ಸಹಾಯ ಮಾಡುತ್ತಾ ಬಂದಿದೆ. ವರ್ಷಾಂತ್ಯದ ಅಂಗವಾಗಿ ಈಗಾಗಲೇ 39 ಮದುವೆಗಳನ್ನು ನಡೆಸಲಾಗಿದ್ದು, ಈ ವರ್ಷ 10 ಮದುವೆ ನಡೆಸಲು ತೀರ್ಮಾನಿಸಿ, ಅದರಲ್ಲಿ ಈಗಾಗಲೇ 1 ಮದುವೆ ಮನೆಯಲ್ಲೇ ನಡೆಸಿಕೊಡಲಾಗಿದೆ. ಎರಡು ಮದುವೆ ಘಟಕ ವ್ಯಾಪ್ತಿಯೊಳಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಸ್ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


