UN NETWORKS ನರಿಂಗಾನ : ಗ್ರಾಮೀಣ ಭಾಗದ ಯುವಕ ಮಂಡಲವೊಂದು ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆಯುವುದರ ಜೊತೆಗೆ ಕಳೆದ ನಾಲ್ಕು ದಶಕಗಳಿಂದ ಸಮಾಜಮುಖಿ ಕೆಲಸ ಮಾಡುತ್ತಾ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಉದ್ಯಮಿ ಚಂದ್ರಹಾಸ್ ಪಂಡಿತ್‍ಹೌಸ್ ಅಭಿಪ್ರಾಯಪಟ್ಟರು. ತೌಡುಗೋಳಿಯಲ್ಲಿರುವ ನರಿಂಗಾನ ಯುವಕ ಮಂಡಲದ ಕಲಾ ಮಂದಿರದಲ್ಲಿ ಶನಿವಾರ ನಡೆದ 41ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಮುಖಿಯಾಗಿ ಕೆಲಸ ಮಾಡುವ ಯಾವುದೇ ಸಂಘಟನೆಗಳಲ್ಲೂ ಇರುವವರು ಒಂದೇ ಮನಸ್ಸು ಹೊಂದಿದ್ದರೆ ಅಂತಹ ಸಂಘ- ಸಂಸ್ಥೆಗಳು ಜನರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಜೊತೆಗೆ ಸಾಧಕರನ್ನು ಸನ್ಮಾನಿಸುತ್ತಾ ಅವರಿಂದಲೂ ಇನ್ನಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುವಂತೆ ಮಾಡುವ ಕಾರ್ಯ ನಿಜಕ್ಕೂ ಮೆಚ್ಚತಕ್ಕದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೊಂಟೆಪದವು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್ ಹಾಗೂ ತೌಡುಗೋಳಿಯ ಶ್ರೀ ಕಾವೀ ಸುಬ್ರಹ್ಮಣ್ಯ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ ಕೆ. ಅವರನ್ನು ಸನ್ಮಾನಿಸಲಾಯಿತು. ಶಾಂತಿಪಳಿಕೆ…
Author: UllalaVani
UN NETWORKS ಕೊಣಾಜೆ: ಗ್ಯಾಸ್ ಸಿಲಿಂಡರ್ ಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಇಳಿಜಾರಾದ ಬೃಹತ್ ಕಂದಕಕ್ಕೆ ಉರುಳಿ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ಪಜೀರು ಗ್ರಾಮದ ಅರ್ಕಾಣದ ಎಚ್‍ಪಿ ಗ್ಯಾಸ್ ಗೋದಾಮು ಬಳಿ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಅವಘಡದ ನಡುವೆ ಲಾರಿಯೊಳಗಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಪಜೀರಿನ ಅರ್ಕಾಣದ ಬಳಿ ಇರುವ ಪಯಾಝ್ ಅವರಿಗೆ ಸೇರಿದ ಎಚ್‍ಪಿ ಎಲ್‍ಪಿಜಿ ಗೋದಾಮಿನ ಬಳಿ ಈ ಅಪಘಾತ ಸಂಭವಿಸಿದೆ. ಎಲ್‍ಪಿಜಿ ಗೊದಾಮಿನ ಎದುರು ಲಾರಿಯಲ್ಲಿ ಗ್ಯಾಸ್ ತುಂಬಿರುವ ಗ್ಯಾಸ್ ಸಿಲಿಂಡರ್‍ನನ್ನು ತುಂಬಲಾಗಿದ್ದು ಬೆಳಿಗ್ಗೆ ಕಾರಿನ ಚಾಲಕ ಖಾದರ್ ಎಂಬವರು ಲಾರಿಯನ್ನು ಗೋದಾಮಿನಿಂದ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಗೋದಾನಿನ ಆವರಣಗೋಡೆಗೆ ಡಿಕ್ಕಿ ಹೊಡೆದು ಬಳಿಕ ಬೃಹತ್ ಕಂದಕಕ್ಕೆ ಉರುಳಿದೆ. ಈ ಸಂದರ್ಭದಲ್ಲಿ ಮರವೊಂದು ಅಡ್ಡ ಸಿಕ್ಕಿದ ಪರಿಣಾಮ ಲಾರಿ ಪಲ್ಟಿಯಾಗುವುದು ತಪ್ಪಿದೆ. ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…
UN NETWORKS ಉಳ್ಳಾಲ : ಸಾಕ್ಷರತಾ ಆಂದೋಲನ ಸಂದರ್ಭ, ಮುನ್ನೂರು ಯುವಕ ಮಂಡಲ ಉಳ್ಳಾಲದಾದ್ಯಂತ ಇಡೀ ಪ್ರದೇಶದ ಪ್ರಾತಿನಿಧ್ಯ ವಹಿಸಿ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಂತಹ ಏಕೈಕ ಸಂಸ್ಥೆ. ಪ್ರಜಾಸತ್ತಾತ್ಮಕ ನಿಲುವಿನ ತೀರ್ಮಾನದಿಂದ ಯುವಕ ಮಂಡಲ ಸುವರ್ಣ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸುವಂತಾಗಿದೆ ಎಂದು ಪತ್ರಕರ್ತ ಹಾಗೂ ಸಿನಿಮಾ ನಟ ಮೈಮ್ ರಾಮದಾಸ್ ಹೇಳಿದರು. ಅವರು ಕುತ್ತಾರುಪದವು ಮುನ್ನೂರು ಯುವಕ ಮಂಡಲ ಕಲಾವೇದಿಕೆಯಲ್ಲಿ ಭಾನುವಾರ ಜರಗಿದ ಕುತ್ತಾರು ಮುನ್ನೂರು ಯುವಕ ಮಂಡಲ ಇದರ ಸುವರ್ಣ ಮಹೋತ್ಸವದ ಸಂಭ್ರಮದ 11ನೇ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೆ ಶಿಕ್ಷಣ ಕೊಡುವ ಉದ್ಧೇಶದಿಂದ ಯುವಕಮಂಡಲಗಳು ಹುಟ್ಟಿಕೊಂಡಿತ್ತು. ಅನೇಕ ಶಿಕ್ಷಣ ವಂಚಿತರಿಗೆ ಶಿಕ್ಷಣದ ತರಬೇತಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನ ಉಳ್ಳಾಲ ಭಾಗದಲ್ಲಿ ಮುನ್ನೂರು ಯುವಕ ಮಂಡಲದ ಮೂಲಕ ಆಗಿದೆ. ಸದಸ್ಯರ ಬದ್ಧತೆಯಿಂದಾಗಿ ಯುವಕಮಂಡಲ ವರ್ಷಗಳಿಂದ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಸಮಾಜಮುಖಿ ಕಾರ್ಯಚಟುವಟಿಕೆಗಳಿಂದ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.…
UN NETWORKS ಉಳ್ಳಾಲ : ಹಳೆ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಕಟ್ಟಿ ಹಾಕಿದ್ದ ಮೀನುಗಾರಿಕಾ ಬೋಟಿನ ಹಗ್ಗ ತುಂಡಾಗಿ ಉಳ್ಳಾಲದ ಅಳಿವೆಬಾಗಿಲು ಸಮೀಪ ಬಂಡೆಗಳಿಗೆ ಸಿಲುಕಿ ಬೋಟು ಮುಳುಗಡೆಯಾಗಿದೆ. ಹಗ್ಗವನ್ನು ದುಷ್ಕರ್ಮಿಗಳು ತುಂಡರಿಸಿದ್ದಾರೆ ಅನ್ನುವ ಸಂಶಯ ಬೋಟ್ ಮಾಲೀಕರು ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ `ಪ್ರಾವಿಡೆನ್ಸ್’ ಹೆಸರಿನ ಮೀನುಗಾರಿಕಾ ಟ್ರಾಲ್‍ಬೋಟ್ ಇದಾಗಿದೆ. ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಂದು ಸಂಶಯಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್ ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಬೋಟ್ ಮಾಲಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಬೋಟ್ ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲಕರು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
UN NETWORKSಉಳ್ಳಾಲ: ಸಮುದ್ರತೀರಕ್ಕೆ ಗೆಳೆಯನ ಜತೆಗೆ ವಿಹಾರಕ್ಕೆಂದು ಬಂದು ಸಮುದ್ರಪಾಲಾಗಿದ್ದ ಬೆಂಗಳೂರು ಶಿವಾಜಿನಗರ ಮೂಲದ ರಿಝ್ವಾನ್ (40) ಮೃತದೇಹ ಸೋಮವಾರ ರಾತ್ರಿ ಉಳ್ಳಾಲ ಬೀಚ್ ತೀರದಲ್ಲಿ ಪತ್ತೆಯಾಗಿದೆ. ಗೆಳೆಯನ ಜತೆಗೆ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ಅಲೆ ಅಪ್ಪಳಿಸಿ ರಿಝ್ವಾನ್ ಸಮುದ್ರಪಾಲಾಗಿದ್ದರು. ಮೃತದೇಹಕ್ಕಾಗಿ ಸ್ಥಳೀಯ ಶಿವಾಜಿ ಈಜುರಕ್ಷಕ ಸಂಘದ ಸದಸ್ಯರು, ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ಸಂಜೆ ಮೃತದೇಹ ದಡ ಸೇರಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ತೊಕ್ಕೊಟ್ಟು : ಬ್ರಹ್ಮಶ್ರೀ ಬಿಲ್ಲವ ವೇದಿಕೆ ತೊಕ್ಕೊಟು ಇದರ 17 ವರುಷದ ಶೈಕ್ಷಣಿಕ ದತ್ತು ಸ್ವೀಕಾರ ,ಬ್ರಹ್ಮಶ್ರೀ ಪ್ರಶಸ್ತಿ ಪ್ರಧಾನ, ಅಭಿನಂದನ ಕಾರ್ಯಕ್ರಮ ದ ಆಮಂತ್ರಣ ಪತ್ರ ಬಿಡುಗಡೆ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ ನೆರವೇರಿಸಿದರು. ಕಾರ್ಯಧ್ಯಕ್ಷರಾದ ಸತೀಶ್ ಕರ್ಕೇರ, ಸಂಚಾಲಕರಾದ ಚಂದ್ರಶೇಖರ ಉಚ್ಚಿಲ್, ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು, ದತ್ತು ಸಂಚಾಲಕರಾದ, ಉಪಾಧ್ಯಕ್ಷರಾದ ಹರೀಶ್ ಮುಂಡೋಳಿ, ಆನಂದ್ ಕೆ.ಅಸೈಗೋಳಿ,ನಾರಾಯಣ ಪೂಜಾರಿ,ಲಕ್ಷಣ್ ಪೂಜಾರಿ, ವಿಜಯ ಪಾವೂರು ಇನ್ನಿತರರು ಉಪಸ್ಥಿತರಿದ್ದರು.
UN NETWORKS ಮಾಡೂರು : ರಂಜಾನ್ ತಿಂಗಳಲ್ಲಿ ಕಿಟ್ ವಿತರಣೆಯಂತಹ ಕಾರ್ಯಕ್ರಮವನ್ನು ಮಾಡೂರು ಗಲ್ಫ್ ಫ್ರೆಂಡ್ಸ್ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಇದರಿಂದ ಬಹಳಷ್ಟು ಬಡ ಕುಟುಂಬಗಳಿಗೆ ಸಹಕಾರಿಯಾಗಲಿದೆ. ಇಂತಹ ಕಾರ್ಯ ಇನ್ನು ಕೂಡಾ ಯಶಸ್ವಿಯಾಗಲಿ ನಡೆಯಲಿ ಎಂದು ಮಾಡೂರು ಇಮಾಮುದ್ದೀನ್ ಜುಮಾ ಮಸೀದಿ ಖತೀಬ್ ಬಶೀರ್ ಅಹ್ಸನಿ ತೋಡಾರು ಹೇಳಿದರು. ಅವರು ಮಾಡೂರು ಜುಮಾ ಮಸೀದಿ ಬಳಿ ಮಾಡೂರು ಗಲ್ಫ್ ಫ್ರೆಂಡ್ಸ್ ಆಶ್ರಯದಲ್ಲಿ ಭಾನುವಾರ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು. ಕೋಟೆಕಾರ್ ಪ.ಪಂ. ಕೌನ್ಸಿಲರ್ ಹಮೀದ್ ಹಸನ್ ಮಾಡೂರು ಮಾತನಾಡಿ. ವಿದೇಶದಲ್ಲಿರುವ ಮಾಡೂರಿನ ಯುವಕರು ಸಂಘಟಿತರಾಗಿ ಕಿಟ್ ವಿತರಣೆಯಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಇದಕ್ಕೆ ಊರಿನ ಎಲ್ಲ ಜನರು ಕೈಜೋಡಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದರು. ಮಾಡೂರು ಗಲ್ಫ್ ಫ್ರೆಂಡ್ಸ್‍ನ ಅಧ್ಯಕ್ಷ ಎಂ.ಎ. ಶಾಕೀರ್, ಉಪಾಧ್ಯಕ್ಷ ಹಫೀಝ್, ಮಾಡೂರು ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್, ಅಬ್ದುಲ್ ರಹ್ಮಾನ್, ಅರಬ್ಬಿ ಹಾಜಿ, ಹಝ್ರತ್ ಕ್ವಾರೀ ಇರ್ಫಾನ್, ಎಂ.ಎ. ಬಶೀರ್, ಹಸೈನಾರ್…
UN NETWORKS ಉಳ್ಳಾಲ : ಸಮುದ್ರದಲ್ಲಿ ಎಲ್ಲಾ ಚಿಪ್ಪಿನಲ್ಲೂ ಮುತ್ತು ಇರುವುದಿಲ್ಲ, ಅದೇ ರೀತಿ ಪ್ರತಿಭೆ ಎಂಬುದೂ ಎಲ್ಲರಲ್ಲೂ ಇರೋದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಶಿಬಿರಗಳ ಮೂಲಕ ಪ್ರತಿಭೆಯನ್ನು ಹೊರಹಾಕಬಹುದು ಎಂದು ಕೆ.ಸಿ.ರೋಡು ಎಸ್ ವೈಎಸ್ ಅಧ್ಯಕ್ಷ ಎನ್.ಎಸ್.ಉಮರಬ್ಬ ಮಾಸ್ಟರ್ ಅಭಿಪ್ರಾಯಪಟ್ಟರು. ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖೆಯ ವತಿಯಿಂದ ಭಾನುವಾರ ಹಿದಾಯತ್ ನಗರ ಮದರಸ ಸಭಾಂಗಣದಲ್ಲಿ ನಡೆದ ಇರ್ಷಾದಿಯ್ಯ 2ಕೆ19 ಕಾರ್ಯಾಗಾರದ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಸಂಪನ್ಮೂಲ ವ್ಯಕ್ತಿಗಳು ಹೇಳಿದ ಮಾತುಗಳನ್ನು ಮನಸ್ಸಿಟ್ಟು ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮನೆ, ಕುಟುಂಬ, ಸಮಾಜ ಹಾಗೂ ದೇಶದ ಉತ್ತಮ ಪ್ರಜೆಯಾಗಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು. ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖಾಧ್ಯಕ್ಷ ಶಬೀರ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ವಲಯ ಕೋಶಾಧಿಕಾರಿ ಜಿ.ಎ.ಇಬ್ರಾಹಿಂ, ಹಿದಾಯತ್ ನಗರ ಮಸೀದಿಯ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಸಖಾಫಿ ಹಾಗೂ ಖತೀಬ್ ಅಹ್ಮದ್ ಕಬೀರ್ ಸಾದಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅಲ್ ಹಿದಾಯ ಜುಮಾ ಮಸೀದಿಯ…
UN NETWORKS ಪಾನೀರ್ : ಯಾವುದೇ ಸಂಸ್ಥೆಯಲ್ಲಿ ಕಾರ್ಮಿಕರು ಎಂಟು ಗಂಟೆ ಕೆಲಸ ಮಾಡಿದರೆ ಕನಿಷ್ಠ ವೇತನ ನೀಡಬೇಕಿದ್ದು, ಹೆಚ್ಚು ಅವಧಿ ಕೆಲಸ ಮಾಡಿದರೆ ಹೆಚ್ಚು ವೇತನ ಹಾಗೂ ವಾರಕ್ಕೊಂದು ರಜೆ ವೇತನ ಸಹಿತ ನೀಡದಿದ್ದರೆ ಕಾರ್ಮಿಕ ಇಲಾಖೆಗೆ ದೂರು ನೀಡಬಹುದು ಎಂದು ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಹೇಳಿದರು. ಪಾನೀರ್ ಮೆರ್ಸಿಯಮ್ಮನವರ ದೇವಾಲಯ ಹಾಗೂ ಕೆಥೊಲಿಕ್ ಸಭಾ ಪಾನೀರ್ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನದ ಪ್ರಯುಕ್ತ ಭಾನುವಾರ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಲಾಭಾಂಶದಲ್ಲಿ 8.33 ಬೋನಸ್, 50 ಕಾರ್ಮಿಕರಿದ್ದರೆ ಸ್ಕಾಲರ್ ಶಿಪ್, ಮತದಾನ, ಕಾರ್ಮಿಕರ ದಿನ, ರಾಷ್ಟ್ರೀಯ ಹಬ್ಬಗಳ ಸಂದರ್ಭ ರಜೆ ನೀಡದಿದ್ದರೆ ದುಪ್ಪಟ್ಟು ವೇತನ ನೀಡಬೇಕಿದೆ. ಅಸಂಘಟಿತ ಕಾರ್ಮಿಕರಿಗೆ ಇರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆ ರಾಜ್ಯದಲ್ಲೇ ಉತ್ತಮ ಹೆಸರು ಪಡೆದಿದೆ. ಒಂದು ಕಟ್ಟಡದಲ್ಲಿ…
UN NETWORKS ಕೊಣಾಜೆ: ಅಂಬಿಗರ ಚೌಡಯ್ಯರವರು ಅಂದಿನ ಕಾಲದಲ್ಲಿಯೇ ಜಾತಿ, ಅಸ್ಪ್ರಶ್ಯತೆಯ ಬಗ್ಗೆ ದ್ವನಿಯೆತ್ತಿದ ನಾಯಕರಾಗಿದ್ದರು. ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿಯೂ ನಾವು ಅಂಬಿಗರ ಚೌಡಯ್ಯರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅವರ ವಚನಗಳ ಮಹತ್ವವನ್ನು ನಾವು ಅರಿತುಕೊಳ್ಳುವ ಅನಿವಾರ್ಯತೆ ಇದೆ ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿವಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದನಂಬಿಗರ ಅಂಬಿಗ’ ನಾಟಕ ಪ್ರದರ್ಶನಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ನಂಬಿಗರ ಅಂಬಿಗ ನಾಟಕ ನೋಡಿದ ನಂತರ ನಮಗೆ ಇಂದಿನ ಕಾಲಕ್ಕೂ ಅವರ ವಚನಗಳು ಎಷ್ಟು ಪ್ರಸ್ತುತವಾಗುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಅಲ್ಲದೆ ನಾಟಕದಲ್ಲಿ ಪಾತ್ರ ಮಾಡಿದ ವಿದ್ಯಾರ್ಥಿಗಳು ಕೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂತಹ ನಾಟಕಗಳು ಹೆಚ್ಚೆಚ್ಚು ಪ್ರದರ್ಶನವಾಗಬೇಕು ಎಂದು ಹೇಳಿದರು. ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಮಾತನಾಡಿ, ಇಂದಿನ ಕಾಲದಲ್ಲಿಯೂ ಸಮಾಜದಲ್ಲಿ ಜಾತ್ಯಾತೀತ…

