Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರ ಕುದ್ರೋಳಿ ಇದರ ಬ್ರಹ್ಮಕಲಶೋತ್ಸವ ಹಾಗೂ ಹೊರೆಕಾಣಿಕೆ ಮೆರವಣಿಗೆಗೆ ಸಂಬಂಧಿಸಿದಂತೆ ಉಳ್ಳಾಲ ವಲಯಮಟ್ಟದ ಸಭೆಯು ಗುರುವಾರ ನಡೆಯಿತು. ಶ್ರೀ ಗೋಕಾರ್ಣಾಥೇಶ್ವರ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಸಾಯಿರಾಂ ಮತ್ತು ಕೊಶಾಧಿಕಾರಿ ಪದ್ಮರಾಜ್ ಅವರು ಸಭೆಯ ನೇತೃತ್ವವನ್ನು ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಆನಂದ್ ಎಸ್. ಕೊಂಡಾಣ ಅವರು ವಹಿಸಿದ್ದರು.ಗೌರವಾಧ್ಯಕ್ಷರಾದ ಡಾ.ರಾಮಾನುಜಂ, ಕಾರ್ಯದರ್ಶಿ ರಾಘವ ಡಿ.ಎನ್, ಕೋಶಾಧಿಕಾರಿ ಜಯಂತ್ ಪಿ.ಎಸ್, ಉಪಾಧ್ಯಕ್ಷರಾದ ಶಶಿಕಾಂತ್, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ,ಬಿಲ್ಲವ ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ನಮಿತಾ ಶ್ಯಾಂ, ಸತೀಶ್ ಕುಂಪಲ. ಮೋಹನ್ ರಾಜ್ ಕನೀರುತೋಟ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ, ತಲಪಾಡಿ ಬಿಲ್ಲವ ಸಂಘದ ಚಂದ್ರಹಾಸ್, ಪ್ರಮುಖರಾದ ನಾರಾಯಣ ಪೂಜಾರಿ, ಚಂದ್ರಹಾಸ್ ಸಾಲ್ಯಾನ್, ಸುರೇಶ್ ಭಂಡಾರಮನೆ, ಜಯಂತ್ ಕಿನ್ಯ, ಜಗನ್ನಾಥ ಪೂಜಾರಿ, ಕುಸುಮಾಕರ ಕುಂಪಲ ಮೊದಲಾದವರು ಉಪಸ್ಥಿತರಿದ್ದರು. ಹೊರೆಕಾಣಿಕೆ ಮತ್ತು ಬ್ರಹ್ಮಕಲಶೋತ್ಸವದ ಉಳ್ಳಾಲ ವಲಯ…

Read More

UN NETWORKS ತೊಕ್ಕೊಟ್ಟು: ಆದಿ ಕ್ರಿಯೇಷನ್ಸ್ ಪ್ರಸ್ತುತ ಪಡಿಸಿದ ಅಬ್ಬಕ್ಕ ಟಿ.ವಿ ಪ್ರಸಾರದ ಲಿಟ್ಲ್ ಚ್ಯಾಂಪ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮತ್ತು ಅಬ್ಬಕ್ಕ ಟಿವಿ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರಧಾನ ಸಮಾರಂಭ ಜ.27 ಭಾನುವಾರ ಸಂಜೆ 5.30 ಕ್ಕೆ ತೊಕ್ಕೊಟ್ಟು ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ನಿರ್ದೇಶಕ ಪ್ರಕಾಶ್ ಸಿಂಫೋನಿ ತಿಳಿಸಿದ್ದಾರೆ. ದೇರಳಕಟ್ಟೆ ಅಬ್ಬಕ್ಕ ಟಿ.ವಿ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. 2018 ಜನವರಿಯಲ್ಲಿ ಆರಂಭಗೊಂಡ ಆಡಿಶನ್ ಮೂರು ಸುತ್ತುಗಳನ್ನು ದಾಟಿ ಇದೀಗ ನೃತ್ಯ ಸ್ಪರ್ಧೆಯ ಅಂತಿಮ ಹಣಾಹಣಿ ನಡೆಯಲಿದೆ. 46 ಸ್ಪರ್ಧಿಗಳ ಪೈಕಿ 17 ಪ್ರತಿಭೆಗಳು ಫೈನಲ್ ನಲ್ಲಿ ಭಾಗವಹಿಸುತ್ತಿವೆ ಎಂದರು. ಅಬ್ಬಕ್ಕ ಟಿ.ವಿ ನಿರ್ದೇಶಕ , ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ 6ನೇ ವಾರ್ಷಿಕೋತ್ಸವದ ಸಂದರ್ಭ ಹೆಸರಾಂತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಇವರಿಗೆ ಅಬ್ಬಕ್ಕ ಟಿ.ವಿ ಪ್ರಶಸ್ತಿ, ಸ್ವಾವಲಂಬಿ ಮಹಿಳೆ ಕುಸುಮಾ ಹೆಚ್.ದೇವಾಡಿಗ, ಪಾರಂಪರಿಕ ವೈದ್ಯರಾದ ಬ್ರ.ಎಲ್ಡೋ, ಯಕ್ಷಗಾನ ಕಲಾವಿದೆ ವಸುಂಧರಾ ಹರೀಶ್,…

Read More

UN NETWORKS ಉಳ್ಳಾಲ: ಮಂಗಳೂರು/ಕಾಸರಗೋಡು ಆರ್ಯ ಯಾನೆ ಮರಾಠ ಸಮಾಜ ಸಂಘದ ವಾರ್ಷಿಕ ಕ್ರೀಡಾ ಕೂಟ ಇತ್ತೀಚೆಗೆ ಬೋಂದೆಲ್ ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಜರಗಿತು. 4 x 100 ಮೀಟರ್ ರಿಲೇ ಓಟ ದಲ್ಲಿ ಮೂಕಾಂಬಿಕಾ ತಂಡ ಪ್ರಥಮ ಸ್ಥಾನ ಗಳಿಸಿದರೆ ಛತ್ರಪತಿ ತಂಡ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.ತಂಡ ಕ್ರೀಡೆಗಳಲ್ಲಿ ಪುರುಷರ ಕ್ರಿಕೆಟ್ ನಲ್ಲಿ ಮೂಕಾಂಬಿಕಾ ತಂಡ ಗ್ರೇಟ್ ಮರಾಠ ತಂಡವನ್ನು ಸೋಲಿಸಿ ವಿಜಯಿ ತಂಡವಾಗಿ ಹೊರ ಹೊಮ್ಮಿತು.ಮಹಿಳಾ ಕ್ರಿಕೆಟ್ ನಲ್ಲಿ ಕ್ವೀನ್ಸ್ ಎಲೆವೆನ್ ಕುಡ್ಲ ಎ ಮತ್ತು ಬಿ ತಂಡ ಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.ಮಹಿಳೆಯರ ತ್ರೋ ಬಾಲ್ ನಲ್ಲಿ ಛತ್ರಪತಿ ಪಡೀಲ್ ತಂಡ ಪ್ರಥಮ ಸ್ಥಾನ ಪಡೆದರೆ ಯುವ ಮರಾಠ ಕುಂಪಳ ದ್ವಿತೀಯ ಸ್ಥಾನ ಗೆದ್ದುಕೊಂಡರು.ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳೆರಡೂ ಕಾಸರಗೋಡು ಮರಾಠ ಟೈಗರ್ ಪಾಲಾದರೆ ಮಹಿಳೆಯರ ವಿಭಾಗದಲ್ಲಿ ವೆಸ್ಟ್ ಆರ್ಯನ್ಸ್ ಪ್ರಥಮ ಹಾಗೂ…

Read More

UN NETWORKS ಉಳ್ಳಾಲ: ಬೆಳ್ಮ ಗ್ರಾ.ಪಂ. ವ್ಯಾಪ್ತಿಯ ಕಾನಕರೆಯಲ್ಲಿ ಸೃಷ್ಟಿಯಾಗಿರುವ ಕುಡಿಯುವ ನೀರಿನ ಸಮಸ್ಯೆ ವಿಚಾರಕ್ಕೆ ಸಂಬಂದಿಸಿ ಗುರುವಾರ ಬೆಳ್ಮ ಗ್ರಾ.ಪಂ. ಕಚೇರಿಯಲ್ಲಿ ನಡೆದ ಗಾಮ ಸಭೆಯಲ್ಲಿ ಭಾರೀ ಚರ್ಚೆ ನಡೆದು ಗ್ರಾಮಸ್ಥರು ಅಧ್ಯಕ್ಷರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸಭೆ ಆರಂಭವಾವಾದಾಗಲೇ ಗ್ರಾಮಸ್ಥರು ಗ್ರಾಮಸಭೆಗೆ ಪರಿಸರ ಇಲಾಖೆಯ ಅಧಿಕಾರಿಗಳು ಬಾರದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಕಾನಕರೆಯಲ್ಲಿ ಕಲುಷಿತ ನೀರು ತುಂಬಿ ಸೊಳ್ಳೆ ಉತ್ಪತಿಯಾಗಿದ್ದು, ಪರಿಸರ ಹಾಳಾಗಿದೆ ಅಧಿಕಾರಿಗಳು ಇಲ್ಲದ ಕಾರಣ ಈ ಬಗ್ಗೆ ನಾವು ಯಾರಲ್ಲಿ ಕೇಳಬೇಕು ಎಂಬ ಗ್ರಾಮಸ್ಥರ ಪ್ರಶ್ನೆಗೆ ನೋಡಲ್ ಅಧಿಕಾರಿಯವರು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪೆಟ್ರೋಲ್ ಬಂಕ್ ನಿಂದಾಗಿ ಬಾವಿ ನೀರು ಕಲುಷಿತಗೊಂಡು ಕಾನಕೆರೆ ನಿವಾಸಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಇದಕ್ಕೆ ಪರ್ಯಾಯವಾಗಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರೂ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಪರಿಸರದಲ್ಲಿ ಕೊಳಚೆ ನೀರು ತುಂಬಿ ಸೊಳ್ಳೆಗಳು ಉತ್ಪತ್ತಿಯಾಗಿದೆ. ಈ ಬಗ್ಗೆ ಮನವಿಗಳನ್ನು ಸಲ್ಲಿಸಿ…

Read More

UN NETWORKS ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರು ಆದಿಸ್ಥಳ ಶ್ರೀ ರಕ್ತೇಶ್ವರೀ ಎಳುವೆರ್ ಸಿರಿಕುಲು ಕೊರಗಜ್ಜ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರೀ ಹಾಗೂ ಕೊರಗಜ್ಜ ಕ್ಷೇತ್ರದ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಜ. 27ರಂದು ನಡೆಯಲಿದೆ. ಕ್ಷೇತ್ರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ನಿರ್ಮಾಣ ಸಮಿತಿಯ ಪ್ರಮುಖರಾದ ಹರೀಶ್ ಕುತ್ತಾರ್ ಮಾಹಿತಿ ನೀಡಿ ಈ ಈ ಪ್ರದೇಶದಲ್ಲಿ ಜನರು ಕಷ್ಟ ನಷ್ಟ ಅನುಭವಿಸಿ, ರೋಗ ರುಜಿನಗಳಿಂದ ಬಳಲಿದ್ದು, ಹಲವಾರು ದುರ್ಮರಣಗಳು ನಡೆದ ಹಿನ್ನಲೆಯಲ್ಲಿ ಊರಿನ ಹಿರಿಯರು ಮತ್ತು ಆಸ್ತಿಕ ಬಂಧುಗಳಅಷ್ಟಮಂಗಳ ಮತ್ತು ತಾಂಬೂಲ ಪ್ರಶ್ನೆಗಳ ಚಿಂತೆ ನಡೆಸಿದಾಗ ಈ ಸ್ಥಳವು ರುಷಿ ಮುನಿಗಳಿದ್ದ ತಪೋಭೂಮಿಯೆಂದು ತಿಳಿದು ಬಂದಿದ್ದು, ಶ್ರೀ ಆದಿಮಾಯೆ ರಕ್ತೇಶ್ವರೀ ಮಾತೆಯ ಆದಿಸ್ಥಳವಾಗಿದ್ದು, ಕೊರಗಜ್ಜ ದೈವದ ಮೂಲ ನೆಲೆಯಾಗಿದ್ದು, ಶ್ರೀ ಕ್ಷೇತ್ರ ನಿರ್ಮಾಣ ನಡೆಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ವಿವಿಧ ಧಾರ್ಮಿಕ ವಿ„ ವಿಧಾನಗಳನ್ನು ಪೂರೈಸಿದ್ದು, ಶ್ರೀ ಕ್ಷೇತ್ರದಲ್ಲಿ ಮವಂತೂರು ಶ್ರೀ ರಾಜಾರಾಮ ಭಟ್ ಅವರ ಪೌರೋಹಿತ್ಯದಲ್ಲಿ…

Read More

UN NETWORKS ಉಳ್ಳಾಲ: ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ಧಾರವಾಡ, ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ವೈದ್ಯನಾಥ, ನಾಗಬ್ರಹ್ಮಶ್ರೀ ಮಹಾಗಣಪತಿ ದೇವಸ್ಥಾನ, ಬೈದೆರೆ ಪಾಲು ಸುಂದರಿಬಾಗ್ ಉಳ್ಳಾಲ ಇವರ ಸಂಯುಕ್ತಾಶ್ರಯದಲ್ಲಿ ದೇವಳದ ವಠಾರದಲ್ಲಿ ಸ್ಥಳೀಯ ಹಾಗೂ ಆಸುಪಾಸಿನ ವಿವಿಧ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಉಚಿತ “ದಿಶಾ ” ಉದ್ಯಮ ಶೀಲತಾ ಜಾಗೃತಿ ಶಿಬಿರ ವ್ಯಾಯಾಮ ಶಾಲೆಯ ದೈಹಿಕ ಶಿಕ್ಷಕರಾದ  ವಿಜಯ ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಇಲಾಖೆಯ ಜಂಟಿ ನಿರ್ದೇಶಕರಾದ  ಅರವಿಂದ ಬಾಲೇರಿಯವರು ಮುಖ್ಯಅತಿಥಿಗಳಾಗಿ ಭಾಗವಹಿಸಿದರು.ದೇವಳದ ಪ್ರಧಾನ ಅರ್ಚಕರಾದ ಶ್ರೀಲಕ್ಷ್ಮೀಶ ಪುತ್ತೂರಾಯ ಶಿಬಿರಕ್ಕೆ ಚಾಲನೆ ನೀಡಿದರು.ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಮಹಾಲಕ್ಷ್ಮಿ, ಹರಿಶ್ಚಂದ್ರ ಅಡ್ಕ, ಕೌಶಲ್ಯ ತರಬೇತಿದಾರರು ಹಾಗೂ ಸ್ಥಳೀಯ ಉದ್ಯಮಿ ಶ್ರೀಧರ್ ಕುಂಬ್ಳೆ ಭಾಗವಹಿಸಿ ಮಾತನಾಡಿದರು.ಸಿಡಾಕ್ ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಹಾಗೂ ಸಿಡಾಕ್ ಕೇಂದ್ರ ವ್ಯವಸ್ಥಾಪಕ ವಿನಾಯಕ ಪ್ರಭು ಇವರು ಉದ್ಯಮ ಶೀಲತೆ ಹಾಗೂ ದಿಶಾ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.…

Read More

UN NETWORKS ತಲಪಾಡಿ: ತಲಪಾಡಿಯ ಮೆಟ್ರೋ ಫರ್ನಿಚರ್ ವಲ್ರ್ಡ್ ಶೋರೂಮ್‍ನಲ್ಲಿ `ಮೆಟ್ರೋ ಸೋಫಾ ಎಕ್ಸ್‍ಚೇಂಜ್ ಮೇಳ’ ಆಯೋಜಿಸಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಮನೆಯಲ್ಲಿರುವ ಹಳೇ ಸೋಫಾವನ್ನು ಹೊಸ ಸೋಫಕ್ಕೆ ಬದಲಾಯಿಸಲು ಗ್ರಾಹಕರಿಗೆ ಉತ್ತಮ ಅವಕಾಶವಿದ್ದು, ಹಳೇಯ ಸೋಫಾವನ್ನು ಎಕ್ಸ್ ಚೇಂಜ್ ಮಾಡುವವರಿಗೆ 10 ಶೇಕಡಾ ಹೆಚ್ಚುವರಿ ರಿಯಾಯಿತಿಯೊಂದಿಗೆ ಫ್ರಿಪಿಕ್ ಆಂಡ್ ಡೆಲಿವರಿ ಸೌಕರ್ಯವನ್ನು ಮೆಟ್ರೋದಲ್ಲಿ ಏರ್ಪಡಿಸಲಾಗಿದೆ. ಬೆಲೆ ಕಡಿಮೆಯಲ್ಲಿ ಹಾಗೂ ಗುಣಮಟ್ಟದಲ್ಲಿ ಉತ್ತರ ಕೇರಳದ ಮತ್ತು ದಕ್ಷಿಣ ಕನ್ನಡದ ಗ್ರಾಹಕರ ಪ್ರಶಂಸೆಗಳಿಸಿದ ಸಂಸ್ಥೆಯಾಗಿದೆ. ಮೆಟ್ರೋ ಫರ್ನಿಚರ್ ವಲ್ರ್ಡ್ ಸೋಫಾಸೆಟ್, ಡೈನಿಂಗ್ ಸೆಟ್, ಬೆಡ್ ರೂಂ ಸೆಟ್ ಮುಂತಾದುವುಗಳ ವಿಶಾಲವಾದ ಕಲೆಕ್ಷನ್ ಇಲ್ಲಿ ಲಭ್ಯವಿದ್ದು, ತಲಪಾಡಿ ಟೋಲ್ ಗೇಟ್‍ನ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಾಲ್ಕು ಮಹಡಿಗಳಲ್ಲಿ 30,000 ಚದರ ವಿಸ್ತೀರ್ಣದ ಶೋರೂಂನಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಸೋಫಾ ಸೇರಿದಂತೆ ಫರ್ನೀಚರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Read More

UN NETWORKS ಕೊಣಾಜೆ : ಕೊಣಾಜೆ ಸಪ್ತಸ್ವರ ಕಲಾ ತಂಡದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಎಂ. ಆಯ್ಕೆಯಾಗಿದ್ದಾರೆ.ಸುರೇಂದ್ರ ಪೂಜಾರಿ ಬೊಳ್ಳೆಕುಮೇರು ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ 2018- 2019ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಹರಿದಾಸ್ ಬಿ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಬಿ, ಕೋಶಾಧಿಕಾರಿಯಾಗಿ ಶೇಖರ್ ಕೊಪ್ಪಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಿತೇಶ್ ಶೆಟ್ಟಿ ಹೊಸಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಮಂಜುನಾಥ ಕಲ್ಲಿಮಾರು ಹಾಗೂ ಭಜನಾ ಸಂಚಾಲಕರಾಗಿ ಮಂಜುನಾಥ ಪುಳಿಂಚಾಡಿ ಆಯ್ಕೆಮಾಡಲಾಯಿತು.

Read More

UN NETWORKS ಯೇನೆಪೊಯ : ಯೇನೆಪೊಯ ವಿಶ್ವವಿದ್ಯಾನಿಲಯದ ಯೇನೆಪೊಯ ದಂತ ಮಹಾವಿದ್ಯಾಲಯದ ಪ್ರೊಸ್ತೊಡೊಂಟಿಕ್ಸ್ ವಿಭಾಗದ ಆಶ್ರಯದಲ್ಲಿ ಪ್ರೊಸ್ಥೊಡೊಂಟಿಕ್ಸ್ ಡೇ (ಕೃತಕ ದಂತ ವೈದ್ಯಕೀಯ ದಿನ)ವನ್ನು ಆಚರಿಸಲಾಯಿತು. ಯೇನೆಪೊಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ| ಬಿ. ಹೆಚ್. ಶ್ರೀಪತಿರಾವ್ ಮತ್ತು ಪ್ರೊಸ್ತೊಡೊಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಸನತ್ ಶೆಟ್ಟಿ, ಪ್ರಾಧ್ಯಾಪಕರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಪ್ರೊಸ್ಥೋಡೊಂಟಿಕ್ಸ್ ಡೇ ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹಲವಾರು ಬಡರೋಗಿಗಳಿಗೆ ಹಲವು ಬಗೆಯ ಕೃತಕದಂತ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಯಿತು.

Read More

UN NETWORKS ತೊಕ್ಕೊಟ್ಟು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಮಹಿಳಾ ಮೋರ್ಚಾದ ಕ್ಷೇತ್ರ ಕಾರ್ಯಕಾರಿಣಿ ಸಭೆ ತೊಕ್ಕೊಟಿನ ಬಿ.ಜೆ.ಪಿ ಕಚೇರಿಯಲ್ಲಿ ನಡೆಯಿತು. ಮಹಿಳಾ ಮೋರ್ಚಾದ ಅಧ್ಯಕ್ಷ ರಮಣಿ ಸೋಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷ ಪೂಜಾ ಪೈ, ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ, ಬೂತ್ ಮಟ್ಟದಲ್ಲಿ ಸಕ್ರೀಯ ಸದಸ್ಯರನ್ನು ಗುರುತಿಸುವ ಬಗ್ಗೆ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹಿಳಾ ಪರ ಯೋಜನೆ ಮತ್ತು ಇನ್ನಿತರ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಹಿಳಾ ಮೋರ್ಚಾದಿಂದ ಆಗಬೇಕೆಂದು ಎಂದು ಸಲಹೆ ನೀಡಿದರು. ಕ್ಷೇತ್ರ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಕಾರ್ಯದರ್ಶಿ ವೀಣಾ ಮಂಗಳ, ಕ್ಷೇತ್ರ ಉಪಾಧ್ಯಕ್ಷ ಜಯಶ್ರೀ ಕರ್ಕೇರಾ, ಕೋಟೆಕಾರು ಪಟ್ಟಣ ಪಂಚಯಿತಿ ಉಪಾಧ್ಯಕ್ಷ ಭಾರತಿ ಗಟ್ಟಿ, ಪೂರ್ಣಿಮಾ ಪ್ರಶಾಂತ್, ಉಳ್ಳಾಲ ನಗರಸಭೆ ಸದಸ್ಯರುಗಳಾದ…

Read More