UN NETWORKS
ಉಳ್ಳಾಲ: ಗಾಳದ ಕೊಂಕಣಿ ಸಮಾಜ ಬಾಂಧರಿಂದ ಗೋವಾ ರಾಜ್ಯದ ದಾರ್ಗಲ್ ನಲ್ಲಿರುವ ಕುಲದೇವಿ ಶ್ರೀ ಶಾಂತಾದುರ್ಗಾ ದೇವಿಗೆ ಸುಮಾರು 2.16 ಲಕ್ಷ ರೂ.ವೆಚ್ಚದ ಹವಳದ ಚಿನ್ನದ ಚಿನ್ನ ಸರವನ್ನು ಸಮರ್ಪಿಸಲಾಯಿತು.
ಮಂಗಳೂರು,ಬಂಟ್ವಾಳ,ಮುಂಬೈ,ಬೆಂಗಳೂರಿನ ಕುಲಬಾಂಧವರು ಗೋವಾದ ಶ್ರೀ ಶಾಂತಾದುರ್ಗಾ ದೇವಳದ ಆರ್ಚಕ ಗುರುಪ್ರಸಾದ ಜೋಷಿ ಅವರ ಮಾರ್ಗದರ್ಶನದಲ್ಲಿ ವಿವಿಧ ಪೂಜಾವಿಧಿವಿಧಾನ, ವಿಶೇಷಪೂಜೆಯ ಬಳಿಕ ದೇವಿಗೆ ಹವಳದ ಚಿನ್ನದ ಸರವನ್ನು ಸಮರ್ಪಣೆಗೈಯಲಾಯಿತು. ಹಾಗೆಯೇ ನಾಗೇಶ್ರೀ ಮಹಾರುದ್ರ ದೇವಸ್ಥಾನಕ್ಕೆ ದೀಪವನ್ನು ಕೂಡ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ, ಶ್ರೀ ಕೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯ್ಕ್,ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು, ಶ್ರೀ ಸೋಮೇಶ್ವರಿ ಸೌ.ಸ.ನಿ.ದ ಅಧ್ತಕ್ಷ ಉಮಾನಾಥ ನಾಯ್ಕ್ ಉಳ್ಳಾಲ, ಮುಂಬೈ ಸಜ್ಜನ್ ಸೇವಾ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ , ಗುರಿಕಾರ ರಾಮಚಂದ್ರನಾಯ್ಕ, ಪದಾಧಿಕಾರಿಗಳಾದ ಕೋಡಿ ಜಯ ನಾಯ್ಕ್, ಶ್ರೀರಿಷ್ ನಾಯ್ಕ್ ಕಾಪಿಕಾಡ್,ವೆಂಕಟೇಶ್ ಬಂಟ್ವಾಳ,ವಿಶ್ವನಾಥ ನಾಯ್ಕ್ ಬಂಟ್ವಾಳ, ಹರಿಣ್ ಬಜಾಲ್, ಶರಣ್ ಶಕ್ತಿನಗರ, ಮನೋಜ್ ಮುಂಬೈ,ವೈಕುಂಠ ಮುಂಬೈ,ಸತೀಶ್ ನಾಯ್ಕ್ ಮುಂಬೈ ,ವೈ.ರವೀಂದ್ರ ನಾಯ್ಕ್ ಮುಂಬೈ ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಹೇಮ ಮಂಕಿಸ್ಟ್ಯಾಂಡ್,ಜಯಶೀಲ ನಾಯ್ಕ್ ರಜನಿ ಬಂಟ್ವಾಳ,ಉಷಾ ಕಲ್ಲಾಪು,ಮಾದಲಾದ ಪ್ರಮುಖರು ಉಪಸ್ಥಿತರಿದ್ದರು.


