UN NETWORKS ಉಳ್ಳಾಲ : ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿರುವ ಹರಮ್ ಯೂನಿಟ್ ವತಿಯಿಂದ ಹರಮಿನ ಕ್ಲಾಕ್ ಟವರ್ ನ ಮೂರನೇ ಮಹಡಿಯಲ್ಲಿ ಯೂನಿಟ್ ಅಧ್ಯಕ್ಷ ಅಶ್ರಫ್ ಮಂಜನಾಡಿಯವರ ಅಧ್ಯಕ್ಷತೆಯಲ್ಲಿ ಬೃಹತ್ ಇಫ್ತಾರ್ ಸಂಗಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಯುವ ಪ್ರಭಾಷಣಗಾರ ಕಾಂತಪುರಂ ಅಬ್ದುಲ್ ಲತೀಫ್ ಸಖಾಫಿ ರಂಝಾನಿನ ಸಂದೇಶ ನೀಡಿ, ನಬಿ ಮದ್ಹ್ ಗೀತೆ ದುಆಃ ಮಜ್ಲಿಸ್ ನಡೆಸಿ ಕೊಟ್ಟರು. ಈ ಸಂದರ್ಭ ಕೆಸಿಎಫ್ ಜಿದ್ದಾ ಝೋನ್, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ನೇತಾರರು ಹಾಗೂ ಸೆಕ್ಟರ್ ನ ಯೂನಿಟ್ ಗಳ ಕಾರ್ಯಕರ್ತರು ಹಾಗೂ ಮೊದಲಾದ ನೇತಾರರು ಸಾರ್ವಜನಿಕರು ಉಪಸ್ಥಿತರಿದ್ದರು. ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಯೂನಿಟ್ ಪ್ರ. ಕಾರ್ಯದರ್ಶಿ ಮುಜೀಬುರ್ರಹ್ಮಾನ್ ಹರೇಕಳ ವಂದಿಸಿದರು.
Author: UllalaVani
UN NETWORKS ಅಸೈಗೋಳಿ : ತುಳುನಾಡು ಎಂದರೆ ದೈವ ದೇವರ ನೆಲೆವೀಡು ಹಾಗೂ ಪುಣ್ಯದ ನಾಡು. ಇತ್ತೀಚೆಗೆ ತುಳುನಾಡಿನಲ್ಲಿ ದೈವ ದೇವಸ್ಥಾನ ದ ಜೀರ್ಣೋದ್ಧಾರದ ಕಾರ್ಯ ಹೆಚ್ಚೆಚ್ಚು ನಡೆಯುತ್ತಿದ್ದು ಇಂತಹ ಕೆಲಸಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಉದ್ಯಮಿ ವಿವೇಕ್ ಶೆಟ್ಟಿ ಬೊಳ್ಯಗುತ್ತು ಅವರು ಹೇಳಿದರು. ಅವರು ಅಸೈಗೋಳಿಯ ಶ್ರೀ ಅಯ್ಯಪ್ಪ ಮಂದಿರದ ಬ್ರಹ್ಮಕಲಶೋತ್ಸವ ದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶೈಕ್ಷಣಿಕ ಸಂಸ್ಥೆಯಾಗಲಿ, ದೇವಸ್ಥಾನ ಕಟ್ಟುವ ಕಾರ್ಯವಾಗಲೀ ಬಹಳ ಕಷ್ಟದ ಕಾರ್ಯ ಹಾಗೆಯೇ ಪುಣ್ಯದ ಕೆಲಸವೂ ಹೌದು. ನಾವು ಮನುಷ್ಯನಾಗಿ ಹುಟ್ಟಿದ ನಂತರ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಅಲ್ಲದೆ ಇತ್ತೀಚೆಗೆ ಮಹಿಳೆಯರು ಕೂಡ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕುಟುಂಬದ ಮಹಿಳೆ ಶೈಕ್ಷಣಿಕವಾಗಿ, ಧಾರ್ಮಿಕ ವಾಗಿ ಮುನ್ನಡೆದರೆ ಅದರ ಫಲ ಕುಟುಂಬದವರೆಲ್ಲರಿಗೂ ದೊರೆತಂತೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ಪ್ರತಿಯೊಬ್ಬರೂ ಹೃದಯ…
UN NETWORKS ಅಸೈಗೋಳಿ : ಕೊಣಾಜೆ ಗ್ರಾಮದ ಅಸೈಗೋಳಿಯ ಶ್ರೀ ಅಯ್ಯಪ್ಪ ಮಂದಿರದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಶನಿವಾರ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಿಂದ ಅಸೈಗೋಳಿಯವರೆಗೆ ನಡೆಯಿತು. ಹಸಿರು ಹೊರೆಕಾಣಿಕೆ ಮೆರವಣಿಗೆಯನ್ನು ಕೊಣಾಜೆ ಬೀಡು ಸತ್ಯನಾರಾಯಣ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೈವ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯ ಕ್ಕೆ ಅನುಸಾರವಾಗಿ ಕೊಡುಗೆ ನೀಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ಕಾರ್ಯ ಗಳಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೇರಳಕಟ್ಟೆ ಅಯ್ಯಪ್ಪ ದೇವಾಲಯದ ಗುರುಸ್ವಾಮಿ ವಿಶ್ವನಾಥ ಕಾಯೆರ್ ಪಳಿಕೆ, ಉದ್ಯಮಿ ದೇವಣ್ಣ ಶೆಟ್ಟಿ, ಪುರುಷೋತ್ತಮ ಅಂಚನ್, ವಸಂತ್ ಶೆಟ್ಟಿ, ಮುಖಂಡರಾದ ರಾಜೇಶ್ ಶೆಟ್ಟಿ ಪಜೀರುಗುತ್ತು, ಪ್ರಶಾಂತ್ ಕಾಜವ, ಪ್ರಸಾದ್ ರೈ ಕಲ್ಲಿಮಾರ್, ಬ್ರಹ್ಮಕಲಶೋತ್ಸವ ಸಮಿತಿಯ ಶೀನ ಶೆಟ್ಟಿ, ರವೀಂದ್ರ ಪಟ್ಟೋರಿ, ತ್ಯಾಗಂ ಹರೇಕಳ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಸಿರು ಹೊರೆಕಾಣಿಕೆ ಮೆರವಣಿಗೆಯು ದೇರಳಕಟ್ಟೆ ಅಯ್ಯಪ್ಪ ದೇವಾಲಯದಿಂದ ಅಸೈಗೋಳಿಯವರೆಗೆ…
UN NETWORKS ಕೊಣಾಜೆ : ಕೊಣಾಜೆ ಬೆಳ್ಮ ಕೆಳಗಿನ ಮನೆಯ ಶ್ರೀ ಬ್ರಹ್ಮಸನ್ನಿಧಿ-ನಾಗ ಪರಿವಾರ ಕ್ಷೇತ್ರದ ಜೀರ್ಣೋದ್ದಾರದ ಅಂಗವಾಗಿ ಕ್ಷೇತ್ರದಲ್ಲಿ ಶುಕ್ರವಾರ ಶಿಲಾನ್ಯಾಸವನ್ನು ಕುಡುಪು ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ ತಂತ್ರಿ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ತುಳುನಾಡು ನಾಗಾರಾಧನೆ, ದೈವ-ದೇವಾರಾಧನೆಯ ಮೂಲಕ ವಿಭಿನ್ನ ಸಂಸ್ಕೃತಿಯನ್ನು ಬೆಳೆಸಿಕೊಂಡಿರುವ ಪ್ರದೇಶವಾಗಿದೆ ಪ್ರಾಚೀನ ಕಾಲದಿಂದ ಇರುವ ನಾಗಬ್ರಹ್ಮರ ಆರಾಧನೆಯೂ ತುಳುನಾಡಿನಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಅವರು ಹೇಳಿದರು.ನಮ್ಮ ತುಳುನಾಡಿನಲ್ಲಿ ಈಗಾಗಲೇ ಸಾವಿರಾರು ದೈವ ದೇವಸ್ಥಾನಗಳಿವೆ. ಹೊಸದಾಗಿ ನಿರ್ಮಿಸುವ ದೇವಸ್ಥಾನ, ದೈವಸ್ಥಾನದ ಬದಲು ಹಳೆಯ ದೈವ-ದೇವಸ್ಥಾನಗಳನ್ನು ಜೀರ್ಣೋದ್ದಾರಗೊಳಿಸಿದರೆ ಪುಣ್ಯ ಜಾಸ್ತಿ ಇರುತ್ತದೆ. ಹಾಗೆಯೇ ಕೊಣಾಜೆ ಕೆಳಗಿನ ಮನೆಯ ನಾಗಪರಿವಾರ ಕ್ಷೇತ್ರದ ಬ್ರಹ್ಮ ಸನ್ನಿಧಿ ಕ್ಷೇತ್ರವು ಕೂಡಾ ಪುರಾತನ ಕ್ಷೇತ್ರವಾಗಿದ್ದು ಜೀರ್ಣೋದ್ದಾರ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಕೊಣಾಜೆಯ…
UN NETWORKS ಯೆನೆಪೋಯ : ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಅಧೀನದ ಆಸ್ಪತ್ರೆ ಹಾಗೂ ಆರೋಗ್ಯ ಸೇವಾದಾತರ ರಾಷ್ಟ್ರೀಯ ಮಾನ್ಯತಾ ಮಂಡಳಿಯು (ಎನ್‍ಎಬಿಎಚ್) ಮಂಗಳೂರು ತಾಲೂಕಿನಲ್ಲಿರುವ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಾನ್ಯತೆಯನ್ನು ನೀಡಿರುತ್ತದೆ. ಈ ಮಾನ್ಯತೆಯು 2019 ಮಾರ್ಚ್ 31 ರಿಂದ 2022 ಮಾರ್ಚ್ 30ರ ತನಕ ಜಾರಿಯಲ್ಲಿರುತ್ತದೆ. ಈ ಮಾನ್ಯತೆಯನ್ನು ಎನ್‍ಎಬಿಎಚ್ ನಿರ್ದಿಷ್ಟಪಡಿಸಿದ ಗುಣಮಟ್ಟ ಮಾನದಂಡಗಳನ್ನು ಆಸ್ಪತ್ರೆಯು ನಿರಂತರವಾಗಿ ಕಾಯ್ದುಕೊಳ್ಳುವ ಬದ್ಧತೆ, ರೋಗಿಗಳ ಸುರಕ್ಷತೆ, ರೋಗಿಗಳ ಕಾಳಜಿಯಲ್ಲಿ ದಕ್ಷತೆ ಮತ್ತು ಉತ್ತರದಾಯಿತ್ವವನ್ನು ಯಾವತ್ತೂ ಕಾರ್ಯಗತಗೊಳಿಸುವ ಆಧಾರದ ಮೇಲೆ ನೀಡಲಾಗಿದೆ. ಮೇ 4 ರಂದು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದ ಕುಲಪತಿ ವೈ. ಅಬ್ದುಲ್ಲ ಕುಂಞಿ ಅವರು ಎನ್.ಎ.ಬಿ.ಎಚ್ ನೀಡಿರುವ ಮಾನ್ಯತೆಯ ದೃಢಪತ್ರವನ್ನು ಅನಾವರಣಗೊಳಿಸಿದರು. ಯಾವತ್ತೂ ನಿರಂತರವಾಗಿ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆಯನ್ನು ರೋಗಿಗಳಿಗೆ ನೀಡಲು ಸರ್ವರು ದುಡಿಯಬೇಕೆಂದು ಅವರು ಕರೆ ನೀಡಿದರು. ಸಹ ಕುಲಪತಿ ಫರಾದ್ ಯೆನೆಪೋಯ, ಉಪ…
UN NETWORKS ಬಂಟ್ವಾಳ : ಬಂಟ್ವಾಳದ ಅಣ್ಣಳಿಕೆ-ಹಿರ್ಣಿ ನಡುವಿನ ಕುಮೇರ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತರಾದ ಮಹಿಳೆ ಪಂಡಿತ್‍ಹೌಸ್ ಪ್ರಕಾಶನಗರ ನಿವಾಸಿ ರಾಜೇಶ್ ಎಂಬವರ ಪತ್ನಿ ಜಯಲಕ್ಷ್ಮೀ (36) ಅವರು ಮೂರು ದಿನಗಳ ಹಿಂದಷ್ಟೇ ಬಂಟ್ವಾಳದ ಹಿರ್ಣಿಯಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಮಕ್ಕಳಿಗೆ ಶಾಲೆ ರಜೆಯಿರುವ ಹಿನ್ನೆಲೆಯಲ್ಲಿ ತೆರಳಿದ್ದರು. ಕೆಲ ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ದ ತನ್ನ ಸಹೋದರಿಯ ಪುತ್ರ ಸುರೇಂದ್ರ ಅವರಿಗೆ ಹುಡುಗಿ ನೋಡಲೆಂದು ಸ್ಥಳೀಯ ದೇವಸ್ಥಾನಕ್ಕೆ ಚಿಕ್ಕಮ್ಮನ ಜತೆಗೆ ಸುರೇಂದ್ರ ಬೈಕಿನಲ್ಲಿ ತೆರಳಿದ್ದರು. ಈ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ರಾಜೇಶ್ – ಜಯಲಕ್ಷ್ಮೀ ದಂಪತಿಗೆ 5 ಮತ್ತು 10ರ ಹರೆಯದ ಇಬ್ಬರು ಇಳೆಯ ವಯಸ್ಸಿನ ಹೆಣ್ಮಕ್ಕಳಿದ್ದಾರೆ. ರಾಜೇಶ್ ಉಳ್ಳಾಲದ ಬೀಡಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
UN NETWORKS ಕುಕ್ಕಾಜೆ : ಕುಕ್ಕಾಜೆ ಕಾಪಿಕಾಡ್ ತಾಜುಲ್ಉಲಮಾ ಸುನ್ನೀ ಸೆಂಟರ್ ನಲ್ಲಿ ಬೃಹ ತ್ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ರವರ ನೇತೃತ್ವದಲ್ಲಿ ನಡೆಯಿತು. ಕಯ್ಯೂರು ಸುನ್ನೀ ಮಹಲ್ ಸಾರಥಿ ಅಬೂಬಕ್ಕರ್ ಲತೀಫಿ ಎಣ್ಮೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, SYS ಕುಕ್ಕಾಜೆ ಬ್ರಾಂಚ್ ಅಧ್ಯಕ್ಷ ಮೊಯ್ದು ಕುಂಞ ನಾಡಾಜೆ, SYS ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ,ಬಾಯಾರ್ ಮುಜಮ್ಮಹ್ ಮುದರ್ರಿಸ್ ಅಬ್ದುರ್ರಹ್ಮಾನ್ ಸಅದಿ, ಪಂಜಿಕ್ಕಲ್ ಖತೀಬರಾದ ಅಬೂಬಕರ್ ಮದನಿ,S K ಬದ್ರುದ್ದೀನ್ ಹಾಜಿ ಕುಕ್ಕಾಜೆ, ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ, ಅಬೂಬಕರ್ ಸಿದ್ದೀಕ್ ಫಾಳಿಲಿ, ಅಬ್ದುಲ್ ಹಮೀದ್ ಮದನಿ ಕುಕ್ಕಾಜೆ , ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ ಬೈಲ್ , ಉಸ್ಮಾನ್ ಮುಸ್ಲಿಯಾರ್ ಪಂಜಾಲ್, MJM ಕುಕ್ಕಾಜೆ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ದರ್ಭೆ, MJM ಮಂಚಿ ಅಧ್ಯಕ್ಷ ಬದ್ರುದ್ದೀನ್ ಮಂಚಿ, ತಾಜುಲ್ ಉಲಮಾ ಸುನ್ನಿ ಸೆಂಟರ್ ಕಾಪಿಕಾಡ್ ಅಧ್ಯಕ್ಷರಾದ…
UN NETWORKS ದುಬೈ : ದುಬೈ ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಪವಿತ್ರ ಖುರ್ಆನ್ ಸ್ಪರ್ಧೆ ಹಾಗೂ ಅವಾರ್ಡ್ ದಾನದ ಅಂಗವಾಗಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಬಾರಿಯ ಮುಖ್ಯ ಭಾಷಣಕಾರರಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಆಹ್ವಾನಿತರಾಗಿದ್ದಾರೆ. ಮೇ 10 ರಂದು ಶುಕ್ರವಾರ ತರಾವೀಹ್ ನಮಾಝ್ ಬಳಿಕ ದುಬೈ ಊದ್ ಮೇತ ಅಲ್ ವಾಸಲ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುವ ಸದರಿ ಕಾರ್ಯದರ್ಶಿದಲ್ಲಿ “ಸಹಿಷ್ಣುತೆಯ ಸೌಂದರ್ಯ” ಎಂಬ ವಿಷಯದಲ್ಲಿ ಅವರು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಭಾಷಣ ಮಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ದುಬೈ ಸರ್ಕಾರದ ನೋಂದಣಿ ಹೊಂದಿರುವ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯಃ ಈ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದು, ಕಾರ್ಯಕ್ರಮದಲ್ಲಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಅವರನ್ನು ಕರ್ನಾಟಕ…
UN NETWORKS ಉಳ್ಳಾಲ : ಉಳ್ಳಾಲ ಸಯ್ಯದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಫ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್(82) ಅವರು ಸೋಮವಾರ ತಡರಾತ್ರಿ 2 ಗಂಟೆಯ ವೇಳೆಗೆ ಸ್ವಗೃಹದಲ್ಲಿ ನಿಧನರಾದರು. ಉಳ್ಳಾಲ ಸೆಯ್ಯದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಫ್ರೊಫೆಸರ್ ಆಗಿ ಸುಮಾರು 49 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಕನ್ನಂಗಾರ್ ಜುಮಾ ಮಸೀದಿಯಲ್ಲಿ ಎರಡು ವರ್ಷ, ಬಜಪೆ ಮಸೀದಿಯಲ್ಲಿ ಒಂದು ವರ್ಷ, ಮೊಗ್ರಾಲ್ ಮಸೀದಿಯಲ್ಲಿ ಒಂದು ವರ್ಷ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ಉಳ್ಳಾಲ ಅರೆಬಿಕ್ ಕಾಲೇಜಿನಲ್ಲಿ ಫ್ರೊಫೆಸರ್‍ಆಗಿ ಸೇವೆಯಲ್ಲಿದ್ದ ವೇಳೆ 12 ವರ್ಷಗಳ ಕಾಲ ಮುಕಚೇರಿ ಅಬೂಬಕರ್ ಸಿದ್ದೀಕ್ ಮಸೀದಿಯಲ್ಲಿ ಖತೀಬ್ ಆಗಿ ದುಡಿದಿದ್ದರು. ಇವರು ತಮಿಳುನಾಡಿನ ದೇವಬಂಧು ಎಂಬಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು.
UN NETWORKS ಉಳ್ಳಾಲ : ಸರ್ಕಾರಿ, ಕನ್ನಡ ಮತ್ತು ಅನುದಾನಿತ ಶಾಲೆಗಳಿಗೆ ನೀಡುವ ಸಹಾತ ನೇರವಾಗಿ ಸಮಾಜದ ಬಡ, ಹಿಂದುಳಿದ ವರ್ಗದ ಸಮೂಹಕ್ಕೆ ನೀಡಿದಂತೆ. ಸಮಾಜದಿಂದ ಗಳಿಸಿಕೊಂಡದ್ದರಲ್ಲಿ ಸ್ವಲ್ಪ ಭಾಗವನ್ನು ತಿರುಗಿ ಸಮಾಜಕ್ಕೆ ನೀಡುವುದರ ಮೂಲಕ ಲಯನ್ಸ್ ಸಂಸ್ಥೆ ಆದರ್ಶಪ್ರಾಯವಾಗಿದೆ ಎಂದು ಲಯನ್ಸ್ ಜಿಲ್ಲೆ 317ಡಿ ಇದರ ರಾಜ್ಯಪಾಲ ದೇವದಾಸ ಭಂಡಾರಿ ಅಭಿಪ್ರಾಯಪಟ್ಟರು. ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಇದರ ಕೊಡುಗೆಯಾಗಿ ಉಳ್ಳಾಲದ ಭಾರತ್ ವಿದ್ಯಾಸಂಸ್ಥೆಗೆ ನೀಡಿದ ಹೆಣ್ಮಕ್ಕಳ ಸುಸಜ್ಜಿತ ಶೌಚಗೃಹ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪಡೀಲ್ ಲಯನ್ಸ್ ಕ್ಲಬ್ ಇದರ ಅಧ್ಯಕ್ಷೆ ಉಮಾ ಬಾಲಕೃಷ್ಣ ಹೆಗ್ಡೆ ಮಾತನಾಡಿ, ಒಳ್ಳೆಯ ಕೆಲಸಗಳನ್ನು ಮಾಡಿದಾಗ ಸಿಗುವ ಸನ್ಮಾನದ ಆತ್ಮತೃಪ್ತಿ ಕೆಲಸ ಮಾಡಿದಕ್ಕಿಂತಲೂ ಮಿಗಿಲು. ಲಯನ್ಸ್ ಕೊಡುಗೆಯಾಗಿ ನೀಡಿರುವ ಶೌಚಗೃಹ ಸ್ವಚ್ಛವಾಗಿಟ್ಟು ಮುಂದಿನ ವಿದ್ಯಾರ್ಥಿಗಳಿಗೂ ಬಳಕೆಯಾಗುವಂತೆ ಮಾಡಿದಾಗ ವಿದ್ಯಾರ್ಥಿಗಳಿಂದಲೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು. ಮುಖ್ಯಶಿಕ್ಷಕಿ ವಿನಯ ಕುಮಾರಿ ಮಾತನಾಡಿ, ಹಿಂದೆ ನಮ್ಮ ಶಿಕ್ಷಣ ಸಂಸ್ಥೆಗೆ ಲಯನ್ಸ್ ನೀಡಿರುವ ಸ್ಮಾರ್ಟ್‍ಕ್ಲಾಸನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ…

