Author: UllalaVani

Kannada News From Coastal Karnataka

UN NETWORKS ದೇರಳಕಟ್ಟೆ: ತಂತುಕೋಶಗಳಲ್ಲಿರುವ ನ್ಯೂನ್ಯತೆಗಳನ್ನು ಪತ್ತೆಹಚ್ಚುವ ಸಲುವಾಗಿ ಹಲವು ರೀತಿಯ ಸಂಶೋಧನೆಗಳು ನಡೆಯುತ್ತಿದೆ. ನೋವು ಕಂಡುಬರುವ ತಂತುಕೋಶವನ್ನು ಪತ್ತೆಹಚ್ಚಲು ಆಧುನಿಕ ತಂತ್ರಜ್ಞಾನಗಳಿಂದ ಸಾಧ್ಯ ಎಂದು ಫಿಲಿಪೇನ್ಸ್ ಮನಿಲಾದ ಸ್ಯಾಂಟೋ ಟೊಮಸ್ ವಿ.ವಿ. ಯ ಡಾ. ವೆಲೆಂಟಿನ್ ಸಿ ಡೋನ್ಸ್111 ಅಭಿಪ್ರಾಯಪಟ್ಟರು. ಇಂಡಿಯನ್ ಎಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ಸ್, ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಜಂಟಿ ಆಶ್ರಯದಲ್ಲಿ ಚಿಂತನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಜನತೆ ತಂತುಕೋಶಗಳ ಕುರಿತು ಹೆಚ್ಚು ಗಮನ ಹರಿಸುತ್ತಿಲ್ಲ. ಬೆನ್ನು, ಕುತ್ತಿಗೆ, ಮಾಂಸ ಖಂಡ ಎಲುಬಿನಲ್ಲಿ ನೋವು ಕಂಡು ಚಿಕಿತ್ಸೆ ಪಡೆಯುತ್ತಾರೆ. ಆದರೆ ವಾಸ್ತವವಾಗಿ ತಂತುಕೋಶಗಳಲ್ಲಿರುವ ದೋಷವನ್ನು ಪರಿಹರಿಸಲು ಚಿಕಿತ್ಸೆ ಪಡೆದುಕೊಂಡರೆ ನೋವು ನಿವಾರಣೆ ಸಾಧ್ಯ. ಕಾಲಿನಡಿಯ ತಂತುಕೋಶದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ತಂತುಕೋಶಗಳಲ್ಲಿನ ದೋಷಗಳನ್ನು ಕಂಡುಹಿಡಿಯಲು ಅಲ್ಟ್ರಾಸೌಂಡ್ ವಿಧಾನಗಳು ಕಾರ್ಯಚರಿಸುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ಅರಿಯಲು ಹೆಚ್ಚಿನ ಸಂಶೋಧನೆಗಳು ಮುಂದುವರಿದಿದೆ ಎಂದು ನುಡಿದರು. ಕಾರ್ಯಕ್ರಮಕ್ಕೆ ಚಾಲನೆ…

Read More

UN NETWORKS ತಲಪಾಡಿ: ಶಾರ್ಟ್ ಸರ್ಕ್ಯುಟ್‍ನಿಂದಾಗಿ ಚಲಿಸುತ್ತಿದ್ದ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರಿನ ಚಾಲನಾ ಕ್ಯಾಬಿನ್‍ನಲ್ಲಿ ಬೆಂಕಿ ಹತ್ತಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ರಾ.ಹೆ. 66ರ ತಲಪಾಡಿ ಸಮೀಪದ ಕೆ.ಸಿ. ರೋಡ್ ಜಂಕ್ಷನ್‍ನಲ್ಲಿ ಬುಧವಾರ ಸಂಜೆ ನಡೆದಿದೆ. ಮಂಗಳೂರಿನಿಂದ ಕೇರಳದ ಕೊಯಮತ್ತೂರಿನ ಕಡೆಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‍ನ ಮುಂಭಾಗದ ಕ್ಯಾಬಿನ್‍ನಲ್ಲಿ ಶಾರ್ಟ್ ಸರ್ಕ್ಯುಟ್‍ನಿಂದಾಗಿ ಬೆಂಕಿ ಹತ್ತಿಕೊಂಡಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಬೆಂಕಿಯನ್ನು ಕಂಡು ಬೊಬ್ಬೆ ಹೊಡೆದಿದ್ದಾರೆ. ತಕ್ಷಣ ಜಾಗೃತರಾದ ಟ್ಯಾಂಕರ್ ಚಾಲಕ ಕೃಷ್ಣಮೂರ್ತಿ ಅವರು ಚಾಲನೆಯಲ್ಲೇ ಬೆಂಕಿ ನಂದಿಸಿ ಟ್ಯಾಂಕರನ್ನು ಬದಿಗೆ ನಿಲ್ಲಿಸಿ ಕ್ಯಾಬಿನ್ ಒಳಗಿದ್ದ ಅಡುಗೆ ತಯಾರಿಯ ಗ್ಯಾಸ್ ಸಿಲಿಂಡರನ್ನು ಹೊರಗಡೆ ಎಸೆದು ಸಮಯ ಪ್ರಜ್ನೆ ಮೆರೆದಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಲು ಚಾಲಕನಿಗೆ ಸಹಕರಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದವರು ಬಂದಿದ್ದು ಅದಾಗಲೆ ಬೆಂಕಿಯನ್ನು ನಂದಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಗ್ಯಾಸ್ ಟ್ಯಾಂಕರ್ ಕ್ಯಾಬಿನ್‍ನಲ್ಲಿ ತಾಂತ್ರಿಕ ಕಾರಣದಿಂದ ಬೆಂಕಿ ಹತ್ತಿದನ್ನು ಕಂಡ ಕೆಲವರು…

Read More

UN NETWORKS ಉಳ್ಳಾಲ: ರಾಜ್ಯ ಸರಕಾರ ಹುತಾತ್ಮರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಹೊರಟು 10 ವರ್ಷಗಳು ಕಳೆದಿವೆ. ಈವರೆಗೂ ಯೋಜನೆ ಅನುಷ್ಠಾನವಾಗದಿರುವುದು ದುರಾದೃಷ್ಟ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಖೇದ ವ್ಯಕ್ತಪಡಿಸಿದರು. ಅವರು ನಿಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಆಯೋಜಿಸಲಾದ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸಂಬಂಧಿಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಮಹಾತ್ಮ ಗಾಂಧಿ ಮಡಿದ ದಿನ, ಹುತಾತ್ಮರ ದಿನ ಆಚರಿಸುವಂತಹ ದಿನವಲ್ಲ. ಹುತಾತ್ಮರ ಸ್ಮರಿಸುವ ಹಾಗೂ ಮನೆಮಂದಿಯನ್ನು ಗೌರವಿಸುವ ದಿನವಾಗಿ ಮುಂದುವರಿಯಬೇಕಿದೆ. ಯುವಸಮುದಾಯ ಜಾಗೃತರಾಗಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದವರ ಕುರಿತು ಒಂದು ದಿನವಾದರೂ ಸ್ಮರಿಸುವ ಕಾರ್ಯ ಅಗತ್ಯ ಎಂದರು. ಈ ಸಂದರ್ಭ ಭಾರತೀಯ ಸೇನೆಯಲ್ಲಿ ಕರ್ತವ್ಯ ಸಂದರ್ಭ ಹುತಾತ್ಮರಾದ ಬಜಪೆ ನಿವಾಸಿ ಹವಾಲ್ದಾರ್ ಗಿರೀಶ್ ಅವರ ಪತ್ನಿ ರೇಖಾ, ಪುತ್ರ ಗಗನ್ , ಮಡಿಕೇರಿ ಬಲಂಬಿ ನಿವಾಸಿ ಲ್ಯಾನ್ಸ್ ನಾಯ್ಕ್ ಶಿವರಾಂ ಕೆ.ಪಿ ಅವರ ಪತ್ನಿ…

Read More

UN NETWORKS ತೊಕ್ಕೊಟ್ಟು: ಆದಿ ಕ್ರಿಯೇಷನ್ಸ್ ಪ್ರಸ್ತುತಿಯ ಲಿಟ್ಲ್ ಚ್ಯಾಂಪ್ ಕಾರ್ಯಕ್ರಮವನ್ನು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ್, ಧರ್ಮದರ್ಶಿ ಭಾಸ್ಕರ ಐತಾಳ್, ನಟಿ ಕರೀಷ್ಮಾ ಅಮೀನ್ ಉದ್ಘಾಟಿಸಿದರು. ಉದ್ಯಮಿ ಸೌಂದರ್ಯ ರಮೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಣ ಪ್ರೇಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಉದ್ಯಮಿಗಳಾದ ದುರ್ಗಾದಾಸ್, ಯೋಗೀಶ್ ಸಾಲ್ಯಾನ್ , ಲಿಟ್ಲ್ ಚ್ಯಾಂಪ್ ತೀರ್ಪುಗಾರರಾದ ರಾಜೇಶ್ ಕಣ್ಣೂರು, ಇಸ್ಮಾಯಿಲ್, ರೋಶಲ್ ಸಿಂಫೋನಿ, ಸೂರಜ್ ಶೆಟ್ಟಿ, ಬಾಲ ನಟಿಯರಾದ ಸಪ್ತಾ ಪಾವೂರು, ವಂಶಿ ರತ್ನಕುಮಾರ್, ಆರ್.ಜೆ.ರಶ್ಮಿ ಉಳ್ಳಾಲ್ ಹಾಗೂ ಚಿತ್ರನಟಿ ಶೈಲಶ್ರೀ ಮಧುರಾಜ್ ಭಾಗವಹಿಸಿದ್ದರು.ಹಣಾಹಣಿಯ ರಿಯಾಲಿಟಿ ಶೋ ನಡೆಯಿತು. ಒಟ್ಟು15ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ನಂತರ ನಡೆದ ಅಬ್ಬಕ್ಕ ಟಿವಿ ವಾರ್ಷಿಕೋತ್ಸವದಲ್ಲಿ ಹೆಸರಾಂತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸ್ವಾವಲಂಬಿ ಮಹಿಳೆ ಕುಸುಮಾ ಎಚ್. ದೇವಾಡಿಗ, ಪಾರಂಪರಿಕ ವೈದ್ಯ ಬ್ರದರ್ ಎಲ್ಡೋ, ಪ್ರತಿಭಾವಂತ ಕಲಾವಿದೆ ವಸುಂಧರಾ ಹರೀಶ್, ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ, ಮಾಧ್ಯಮ ಕ್ಷೇತ್ರದಲ್ಲಿ ವಸಂತ…

Read More

UN NETWORKS ಮೇರಿಹಿಲ್‍: ಮೇರಿಹಿಲ್‍ನ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನಿಟ್ಟು ದೀಪ ಬೆಳಗಿಸಿ, ಎರಡು ನಿಮಿಷದ ಮೌನಾಚರಣೆ ಮಾಡಲಾಯಿತು. ಬಳಿಕ ಮಾತನಾಡಿದ ಜಿಲ್ಲಾ ಸಮಾದೇಷ್ಠ ಡಾ. ಮುರಲೀ ಮೋಹನ ಚೂಂತಾರು ಗಾಂಧೀಜಿಯವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ. ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಎ. ರತ್ನಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ದಲಾಯತ್ ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರ್ ಮತ್ತು ಸನತ್, ಸುನೀಲ್ , ರಮೇಶ್ ಭಂಡಾರಿ. ದಿವಾಕರ, ಮಹೇಶ್ ಹಾಗೂ ಹರಿಪ್ರಸಾದ್ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಇತಿಹಾಸ ಪ್ರಸಿದ್ಧ ಅಳೇಕಲ ಹಝ್ರತ್ ಅಸ್ಸಯ್ಯದ್ ಅಚ್ಚಿ ಸಾಹಿಬ್ ವಲಿಯುಲ್ಲಾಹ್ (ಖ.ಸಿ) ಉರೂಸ್ ಸಮಾರಂಭವು ಫೆ. 4ರಿಂದ ನಡೆಯಲಿದೆ. ಅಳೇಕಲ ಮಸೀದಿಯ ಮಾಜಿ ಅಧ್ಯಕ್ಷ ಯು.ಎ. ಇಸ್ಮಾಯಿಲ್ ಕೌನ್ಸಿಲರ್ ಉರೂಸ್ ಸಮಿತಿಗೆ ಮುಖ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ಹಾಗೂ ವಾಗ್ಮಿಗಳು ಭಾಗವಹಿಸಲಿದ್ದಾರೆ. ಉಳ್ಳಾಲ ಖಾಝೀ ಅಸ್ಸಯ್ಯದ್ ಫಝಲ್ ಕೊಯಮ್ಮ ಕೂರತ್ ತಂಙಳ್ ದುಆ ಮೂಲಕ ಆಶೀರ್ವದಿಸಲಿದ್ದಾರೆ. ಪೊಸೋಟ್ ಶಹೀರ್ ತಂಙಳ್ ರಾತೀಬ್ ಮಜ್ಲಿಸ್ಗೆ ನೇತೃತ್ವ ವಹಿಸಲಿದ್ದಾರೆ ಎಂದು ಅಳೇಕಲ ಮಸೀದಿಯ ಅಧ್ಯಕ್ಷ ಯು.ಎಸ್. ಹಂಝ ಹಾಜಿ ತಿಳಿಸಿದ್ದಾರೆ.

Read More

UN NETWORKS ಬೋಳಿಯಾರ್ : ಬೋಳಿಯಾರ್ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ಬಾಲಕನೋರ್ವನಿಗೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೃತ ಬಾಲಕನನ್ನು ಬೋಳಿಯಾರ್ ಅಮ್ಮೆಮ್ಮಾರ್ ನಿವಾಸಿ ಶಂಕರ್ ಎಂಬವರ ಪುತ್ರ ಪ್ರತ್ಯುಶ್ (7) ಎಂದು ಗುರುತಿಸಲಾಗಿದೆ. ಕಲ್ಲಡ್ಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತನನ್ನು ಆತನ ತಾಯಿ ಶಾಲಾ ವಾಹನಕ್ಕೆ ಹತ್ತಿಸಲು ರಸ್ತೆ ಬದಿಗೆ ಬಂದಿದ್ದರು. ಈ ಸಂದರ್ಭ ಬಸ್ ಚಾಲಕ ಸಣ್ಣ ವಿದ್ಯಾರ್ಥಿಗಳಿಗೆ ರಜೆ ಎಂದು ತಿಳಿಸಿದ ಕಾರಣ ಬಾಲಕ ರಸ್ತೆ ದಾಟಿ ಬದಿಯಲ್ಲಿ ನಿಂತಿದ್ದಾಗ ಮರಳು ತುಂಬಿದ್ದ ಪಿಕಪ್ ಢಿಕ್ಕಿ ಹೊಡದಿದೆ. ಇದರಿಂದ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟಿದ್ದಾನೆ. ಪಿಕಪ್ ಚಾಲಕನ ವಿರುದ್ಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾರ್ಥಿಯಾಗಿದ್ದ ಯಶುಕುಮಾರ್ ಡಿ ಇವರು ಪ್ರೊ. ಅಭಯ ಕುಮಾರ ಕೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ತುಳು ನಾಡಿನ ಅವಳಿವೀರರ ಆರಾಧನೆ” : ಸಾಮಾಜಿಕ ಸಂಬಂಧಗಳು ಮತ್ತು ಚಾರಿತ್ರಿಕತೆ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ಕೃಷ್ಣಾಪುರ ನಿವಾಸಿ ಹಾಗೂ ಬಿ ಎಸ್ ಎನ್ ಎಲ್ ಉದ್ಯೋಗಿ ದೇವದಾಸ ಮತ್ತು ಸುಂದರಿ ಇವರ ಪುತ್ರ.

Read More

UN NETWORKS ಬೆಂಗಳೂರು: ಕರ್ನಾಟಕ ಸಂಗೀತ , ನೃತ್ಯ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ 2018-19ನೇ ಸಾಲಿನ `ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನಾಟ್ಯನಿಕೇತನ ಕೊಲ್ಯ ಇಲ್ಲಿನ ನೃತ್ಯಗುರು ವಿದುಷಿ ರಾಜಶ್ರೀ ಉಳ್ಳಾಲ್ ಅವರಿಗೆ ಪ್ರದಾನ ಮಾಡಲಾಯಿತು.

Read More

UN NETWORKS ಕೊಣಾಜೆ: ಕೊಣಾಜೆ ಗ್ರಾಮದ ಬೆಳ್ಮ ಕೆಳಗಿನ ಮನೆ ಬಳಿಯ ಶ್ರೀ ಬ್ರಹ್ಮ ಸನ್ನಿಧಿ-ನಾಗ ಪರಿವಾರ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ವಿಜ್ಞಾಪಣಾ ಪತ್ರದ ಬಿಡುಗಡೆ ಕಾರ್ಯಕ್ರಮವು ನಡೆಯಿತು. ವಿಜ್ಞಾಪಣಾ ಪತ್ರವನ್ನು ಅರ್ಚಕರಾದ ಜಗದೀಶ್ ಭಟ್ ಅಂಡಾಲ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಘುರಾಮ ಗಟ್ಟಿಯವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೋಳಾರ ಸಾಯಿ ಟ್ರಸ್ಟ್‍ನ ಅಧ್ಯಕ್ಷರಾದ ಸೂರಜ್ ಕುಮಾರ್, ಕೊಣಾಜೆ ಪಂಚಾಯಿತಿ ಸದಸ್ಯೆ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಪಯ್ಯಗಟ್ಟಿ ಕುಟುಂಬದ ಹಿರಿಯರಾದ ಗಣೇಶ್ ಗಟ್ಟಿ ತುಂಬೆ, ಉಪನ್ಯಾಸಕರಾದ ಸತೀಶ್ ಗಟ್ಟಿ, ಕೋಟಿಪದವು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸೀತಾರಾಮ ಬಂಗೇರ, ಯಾದವ ಬಿ.ಬೊಳ್ಳೆಕುಮೇರ್, ಸಪ್ತಸ್ವರ ಕಲಾತಂಡದ ಅಧ್ಯಕ್ಷರಾದ ನರೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾಯದರ್ಶಿ ಅಚ್ಯುತಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Read More