UN NETWORKS
ಉಳ್ಳಾಲ: ಇತಿಹಾಸ ಪ್ರಸಿದ್ಧ ಅಳೇಕಲ ಹಝ್ರತ್ ಅಸ್ಸಯ್ಯದ್ ಅಚ್ಚಿ ಸಾಹಿಬ್ ವಲಿಯುಲ್ಲಾಹ್ (ಖ.ಸಿ) ಉರೂಸ್ ಸಮಾರಂಭವು ಫೆ. 4ರಿಂದ ನಡೆಯಲಿದೆ. ಅಳೇಕಲ ಮಸೀದಿಯ ಮಾಜಿ ಅಧ್ಯಕ್ಷ ಯು.ಎ. ಇಸ್ಮಾಯಿಲ್ ಕೌನ್ಸಿಲರ್ ಉರೂಸ್ ಸಮಿತಿಗೆ ಮುಖ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ಹಾಗೂ ವಾಗ್ಮಿಗಳು ಭಾಗವಹಿಸಲಿದ್ದಾರೆ. ಉಳ್ಳಾಲ ಖಾಝೀ ಅಸ್ಸಯ್ಯದ್ ಫಝಲ್ ಕೊಯಮ್ಮ ಕೂರತ್ ತಂಙಳ್ ದುಆ ಮೂಲಕ ಆಶೀರ್ವದಿಸಲಿದ್ದಾರೆ. ಪೊಸೋಟ್ ಶಹೀರ್ ತಂಙಳ್ ರಾತೀಬ್ ಮಜ್ಲಿಸ್ಗೆ ನೇತೃತ್ವ ವಹಿಸಲಿದ್ದಾರೆ ಎಂದು ಅಳೇಕಲ ಮಸೀದಿಯ ಅಧ್ಯಕ್ಷ ಯು.ಎಸ್. ಹಂಝ ಹಾಜಿ ತಿಳಿಸಿದ್ದಾರೆ.


