UN NETWORKS ಕಿನ್ಯಾ : ಸುವರ್ಣ ಮಹೋತ್ಸವ ಆಚರಣೆಗೆ ಸಜ್ಜಾಗಿರುವ ಕಿನ್ಯಾ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಕಾರ್ಯಕ್ರಮ ಚಿನ್ನದಂತೆ ನಡೆಯಲಿ, ವರ್ಷ ಪೂರ್ತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಘ ಇನ್ನಷ್ಟು ಬೆಳೆಯಲಿ ಎಂದು ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪಂಜಳ ಆರ್ಶೀವನದ ಸಂದೇಶ ನೀಡಿದರು. ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ 49ನೇ ವಾರ್ಷಿಕೋತ್ಸವ- ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮವನ್ನು ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪಂಜಳ ಉದ್ಘಾಟಿಸಿ ಮಾತನಾಡಿದರು.ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಮೋಹನ್ ಆಳ್ವ ತೇವುನಾಡ್‍ಗುತ್ತು ಸುವರ್ಣ ಮಹೋತ್ಸವದ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದರು. ಕಿನ್ಯ ಬೆಳರಿಂಗೆ ಶ್ರೀ ಮಲರಾಯ ದೈವದ ಪಾತ್ರಿ ಮೈಂದ ಪೂಜಾರಿ ಮಿತ್ತಡ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ಯಕ್ಷರಂಗದಲ್ಲಿ ನಾಟ್ಯ ಅಭಿನಯದಲ್ಲಿ ಇನ್ನಷ್ಟು…
Author: UllalaVani
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳ ನೇತೃತ್ವದಲ್ಲಿ `ಆಹಾರೋತ್ಸವ-2019’ವು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೇ ಪ್ರಥಮ ಬಾರಿ ಇಂತಹ ಆಹಾರೋತ್ಸವವನ್ನು ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ವಿವಿಯ ಪ್ರಭಾರ ಕುಲಪತಿ ಪ್ರೊ.ಈಶ್ವರ್ ಪಿ ಅವರು ಆಹಾರೋತ್ಸವಕ್ಕೆ ಚಾಲನೆ ನೀಡಿ ಶುಭಹಾರೈಸಿ ವಿದ್ಯಾರ್ಥಿಗಳ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಆಹಾರೋತ್ಸವದಲ್ಲಿ ವಿವಿಧ ಬಗೆಯ ಖಾದ್ಯಗಳು ಆಹಾರೋತ್ಸವದಲ್ಲಿ ಕರ್ನಾಟಕ, ಕೇರಳ ಶೈಲಿ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಬಹಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಸಸ್ಯಹಾರಿ ವಿಭಾಗದಲ್ಲಿ ಸೇಮೆ, ಅಪ್ಪಮ್, ನೀರುದೋಸೆ, ಗೀರೈಸ್, ಪನೀರ್ ಮಸಾಲ, ಗೋಬಿ ಮಂಚೂರಿ, ಬೇಬಿ ಕಾರ್ನ್ ಚಿಲ್ಲಿ, ವೆಜ್ ಬಿರಿಯಾನಿ, ವೆಜ್ ತಾಲಿ, ಕ್ಯಾರೆಟ್ ಹಲ್ವ, ಗುಲಾಬ್ ಜಾಮೂನ್, ಕಬ್ಬಿನ ಜ್ಯೂಸ್ ಹಾಗೂ ಮಾಂಸಾಹಾರ ವಿಭಾಗದಲ್ಲಿ ಚಿಕನ್ ಮಸಾಲ, ಚಿಕನ್ ಚಿಲ್ಲಿ,…
UN NETWORKS ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಾಂಧವರ ಅಭಿವೃದ್ದಿಯೊಂದಿಗೆ ಶೈಕ್ಷಣಿಕ, ಕ್ರೀಡಾ ಪ್ರತಿನಿಧಿಗಳಿಗೆ ಪ್ರೋತ್ಸಾಹ ನೀಡಲು ಸಿದ್ಧವಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಗಳನ್ನು ಸಂಘ ಅನುಷ್ಠಾನಗೊಳಿಸಲಿದೆ ಎಂದು ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯ, ಬಂಟರ ಸಂಘ ತಲಪಾಡಿ ಗ್ರಾಮ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ, ಸಿರಿ ಸ್ವ ಸಹಾಯ ಸಂಘ ಸಹಯೋಗದೊಂದಿಗೆ ತಲಪಾಡಿ ಗ್ರಾಮ ಮಟ್ಟದ ಸಮಾಜ ಭಾಂದವರಿಗೆ ತಲಪಾಡಿ ವಿವೇಕಾನಂದನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ `ಗೊಬ್ಬುದ ಪಂತೊ’ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಳ್ಳಾಲ ವಲಯ ಒಕ್ಕೂಟದ ಹದಿನಾಲ್ಕು ಗ್ರಾಮಗಳಲ್ಲಿ ಅತೀಕ್ರಿಯಾಶೀಲ ಗ್ರಾಮ ಸಮಿತಿ ತಲಪಾಡಿ ಗ್ರಾಮ ಸಮಿತಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸುವುದರೊಂದಿಗೆ ಮುಂಚೂಣಿಯಲ್ಲಿದ್ದು, ಪ್ರತೀ ಗ್ರಾಮ ಸಮಿತಿಗಳು ಕರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಇನ್ನಷ್ಟು ಸಮಾಜದ ಬಾಂಧವರನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಎಂದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ…
UN NETWORKS ಕೊಣಾಜೆ:ಯುವ ಸಮುದಾಯ ಸಮಾಜ ಕಟ್ಟುವ, ಧಾರ್ಮಿಕ ಕಾರ್ಯಕ್ರಮಗಳನ್ನು ಗಟ್ಟಿಗೊಳಿಸುವ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವಲ್ಲಿ ಶ್ರಮದಾನ ಮಾಡುವ ಮೂಲಕ ಸಮಾಜ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಿಂದೂ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ದಕ್ಷ ಯುವ ಬಳಗ ಕಳೆದ ದಶ ವರ್ಷಗಳಿಂದ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಣಾಜೆ ಕೋಟಿಪದವು ಶ್ರೀ ರಾಮ ಮಂದಿರದ ವಠಾರದಲ್ಲಿ ಕೊಣಾಜೆ ಗ್ರಾಮಚಾವಡಿ ದಕ್ಷ ಯುವ ಬಳಗ ಇದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಹಿಂದೆ ಯುವ ಸಮುದಾಯ ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜ ನಿರ್ಮಾಣದಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂದಿನ ಮೊಬೈಲ್ ಯುಗದಲ್ಲಿ ಯುವ ಜನತೆ ವಾಟ್ಸಪ್‍ಗಳ ಮೂಲಕ ಸಂಘಟಿತರಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯವನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ…
UN NETWORKS ಮಂಜನಾಡಿ : ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳನ್ನು ಗುರುತಿಸಿ ಅವರಿಗೆ ವಿವಾಹ ನೆರವೇರಿಸುವ ಕಾರ್ಯ ಪವಿತ್ರವಾದ ಕೆಲಸ. ಎಷ್ಟೋ ಜನ ಮದುವೆಗಾಗಿ ಸಾಲ ಮಾಡಿ ಇಡೀ ಜೀವನವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ತನ್ನ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಹೆಣ್ಮಕ್ಕಳಿಗೆ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಜನಾಡಿ ನರಿಂಗಾನದ ಅಲ್ ಮದೀನಾ ಸಂಸ್ಥೆಯ ಬೆಳ್ಳಿಹಬ್ಬ ಪ್ರಯುಕ್ತ ನಡೆದ 25ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಾದಿ ಭಾಗ್ಯ ಯೋಜನೆಯನ್ನು ಯಡಿಯೂರಪ್ಪ ಮತ್ತು ಶೋಭಾ ಅವರು ವಿರೋಧಿಸಿದ್ದರು. ಬಡ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ-ಪಂಗಡದವರ ಮತ್ತು ಹಿಂದುಳಿದವರ ಕೆಲಸ ಮಾಡುವಾಗ ನಾನು ಯಾರಿಗೂ ಹೆದರುವುದಿಲ್ಲ. ನನಗೆ ಶಕ್ತಿ ಕೊಟ್ಟವರು ಅವರೇ ಆಗಿದ್ದಾರೆ. ದುರ್ಬಲ ಜನರಿಗೆ ಶಕ್ತಿ ತುಂಬುವ ಕೆಲಸ ಸರಕಾರದ ಜವಾಬ್ದಾರಿಯಾಗಿದೆ. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ ನಾಡಿನ ಸಂಪತ್ತನ್ನು ಬಡವರಿಗೆ ವಿನಿಯೋಗಿಸುವ ಪ್ರಯತ್ನ ಆಗಿದೆ. ಸಂವಿಧಾನದ ಜವಾಬ್ದಾರಿಯನ್ನು…
UN NETWORKS ಕೊಣಾಜೆ: ಕ್ರೀಡೆಗೆ ಇಂದು ಬಹಳಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಕ್ರೀಡಾಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಶಿಸ್ತು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ ಎಂದು ಅಂತರಾಷ್ಟ್ರೀಯ ವಾಲಿಬಾಲ್ ತರಬೇತುದಾರರಾದ ನಾರಾಯಣ ಆಳ್ವ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮೈದಾನದಲ್ಲಿ ಸೋಮವಾರ ಮಂಗಳೂರು ವಲಯಮಟ್ಟದ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ಹಾಗೂ ಶ್ರೀ ಪಟೇಲ್ ಸೌಕೂರು ಅನಂತಯ್ಯ ಶೆಟ್ಟಿ ಮೆಮೋರಿಯಲ್ ಟ್ರೋಫಿ(ಅಂತರ್‍ವಲಯ) ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯಗಳು ಏರ್ಪಡಿಸುವ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಖಾಸಗಿ ಪಂದ್ಯಾಟಗಳಲ್ಲಿ ಹೆಚ್ಚಿನ ನಗದು ಸಿಗಬಹುದು ಅಷ್ಟೆ. ಆದರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಗೆದ್ದರೆ ಕೀರ್ತಿಯೊ0ದಿಗೆ ನಮ್ಮ ಹೆಸರನ್ನು ಶಾಶ್ವತವಾಗಿ ನೆನಪಿಸುವಂತಹ ಕಾರ್ಯ ಆಗುತ್ತದೆ ಎಂದರು. ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ. ಅವರು, ಮಂಗಳೂರು ವಿಶ್ವವಿದ್ಯಾಲಯವು ಕಳೆದ ಹಲವಾರು ವರ್ಷಗಳಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಅಥ್ಲೆಟಿಕ್ ಹಾಗೂ ಇನ್ನಿತರ…
UN NETWORKS ಉಳ್ಳಾಲ: ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಜನ ತೊಂದರೆಗೊಳಗಾಗುತ್ತಿದ್ದಾರೆ. ಪ್ರಮುಖ ಕುತ್ತಾರು ಜಂಕ್ಷನ್ನಿನಲ್ಲಿ ದಿನನಿತ್ಯ ಮೂಗು ಮುಚ್ಚಿಕೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ. ಹಲವು ಗ್ರಾಮಸಭೆಯಲ್ಲಿ ಚರಂಡಿ ವ್ಯವಸ್ಥೆ ಕುರಿತು ಚರ್ಚಿಸಿದರೂ ಸೂಕ್ತ ಕ್ರಮ ಇನ್ನೂ ಜಾರಿಯಾಗಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂತು. ಸುಭಾಷನಗರದ ಸಮುದಾಯಭವನದಲ್ಲಿ ಶುಕ್ರವಾರ ಜರಗಿದ ಮುನ್ನೂರು ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಗ್ರಾಮದ ಸಮಸ್ಯೆಯ ವಿಚಾರಗಳು ಪ್ರಸ್ತಾಪವಾಯಿತು.ಕುತ್ತಾರು ಭಾಗದಲ್ಲಿ ವಸತಿ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿನಿಂತಿವೆ. ಆದರೆ ಕಟ್ಟಡ ಹೊಂದಿರುವವರು ಚರಂಡಿ ಸಂಸ್ಕರಣಾ ಘಟಕವನ್ನು ನಿರ್ಮಿಸದೆ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಡುವಂತಹ ಕೆಲಸಗಳಾಗುತ್ತಿವೆ. ಇದರಿಂದ ಕುತ್ತಾರು ಜಂಕ್ಷನ್ ಇಡೀ ದುರ್ನಾತ ಬೀರುತ್ತಿದೆ. ಸಂತೋಷನಗರ ವ್ಯಾಪ್ತಿಯಲ್ಲಿ ಮನೆಗಳ ಚರಂಡಿ ನೀರು ಹರಿಯಲು ಸರಿಯಾದ ಜಾಗವಿಲ್ಲದೆ, ಸಾರ್ವಜನಿಕ ರಸ್ತೆಯಲ್ಲೇ ಹರಿಯುತ್ತಿದೆ. ಗ್ರಾಮಕ್ಕೆ ಚರಂಡಿ ಅವ್ಯವಸ್ಥೆ ಗಂಭೀರ ಸಮಸ್ಯೆಯಾಗಿದೆ. ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡರೂ ಸೂಕ್ತ ಚರಂಡಿ ವ್ಯವಸ್ಥೆ ಅನುಷ್ಠಾನವಾಗಿಲ್ಲ ಅನ್ನುವ ಗ್ರಾಮಸ್ಥ ಕಿಶೋರ್…
UN NETWORKS ಮುಡಿಪು: ಮುಡಿಪಿನ ಕುರ್ನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕ್ರಿಕೆಟ್ ಲೀಗ್ ಪಂದ್ಯ ನಡೆಯಿತು. ದೈಹಿಕ ಶಿಕ್ಷಕ ವಿಠ್ಠಲ್ ನಾಯಕ್ ಮಾತನಾಡಿ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಪಟುಗಳಿಗೆ ನಿರಂತರವಾಗಿ ತಮ್ಮನ್ನು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಇತರ ಕ್ರೀಡೆಗಳಾದ ಕಬ್ಬಡಿ, ವಾಲಿಬಾಲ್, ತ್ರೋಬಾಲ್ ಲೀಗ್ ಪಂದ್ಯವನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಮಾತನಾಡಿ ತಮ್ಮ ಕಾಲೇಜಿನ ದಿನಗಳ ಕ್ರೀಡಾಸಕ್ತಿ ಮತ್ತು ಅಂತರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್‍ನಂತೆ ಇತರೆ ಗೇಮ್ಸ್‍ನ್ನು ಪ್ರೋತ್ಸಾಹಿಸುವಂತೆ ತಿಳಿಸಿದರು. ಕಾರ್ಯಕ್ರಮ ಸಂಯೋಜಕಿ ಶುಭ ಕೆ.ಎಚ್. ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಮಹಮ್ಮದ್ ಮೆರ್‍ಜೂಕ್ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಮನ್ಸೂರ್ ಸ್ವಾಗತಿಸಿದರು. ಮಹಮ್ಮದ್ ತ್ವಾಹಿರ್ ಇಕ್ಬಾಲ್ ವಂದಿಸಿದರು.
UN NETWORKS ಉಳ್ಳಾಲ: ಕಲೆಗೆ ಮಂತ್ರ ನಾಟ್ಯಕಲಾ ಗುರುಕುಲದ ಕೊಡುಗೆ ಅಪಾರ, ದೇವರ ಅನುಗ್ರಹದಿಂದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶಾಂತಲಾ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆದ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಇದರ ಆರನೇ ವರ್ಷದ ಗುರುಕುಲ ಉತ್ಸವಕ್ಕೆ ಚಾಲನೆ ಮತ್ತು ಕಥಕ್ ಕಲಾವಿದೆ ಸಂಗೀತ ನಾಟಕ್ ಅಕಾಡೆಮಿ ಪುರಸ್ಕೃತೆ ಉಮಾ ದೋಗ್ರ ಇವರಿಗೆ ನಾಟ್ಯ ಮಾಂತ್ರಿಕ ಬಿರುದು ಪ್ರಧಾನ ಮಾಡಿ ಮಾತನಾಡಿದರು. ನಾಟ್ಯ ಮಾಂತ್ರಿಕ ಬಿರುದು ಪಡೆದ ಕಥಕ್ ಕಲಾವಿದೆ ಉಮಾ ದೋಗ್ರಾ ಮಾತನಾಡಿ ಬಡ ಕುಟುಂಬದಿಂದ ಬಂದಾಕೆ. ಎಂಟು ಮಕ್ಕಳಿದ್ದರೂ ಹೆತ್ತವರು ಕಲೆ ಮತ್ತು ಶಿಕ್ಷಣದ ಕೊರತೆ ಮಾಡದೇ ಇರುವುದರಿಂದ ಇಂದು ರಾಷ್ಟ್ರಪತಿಯಿಂದ ಸನ್ಮಾನ ಸ್ವೀಕರಿಸಿದ್ದೇನೆ ಅನ್ನುವ ಹೆಮ್ಮೆಯಿದೆ. ಶ್ರಮ ವಹಿಸಿದಲ್ಲಿ ಯಶಸ್ಸು ಖಂಡಿತ. ಕನಸುಗಳನ್ನು ಬಿಟ್ಟುಕೊಡದಿರಿ. ಹೃದಯಾಂತರಾಳದ ಪ್ರೀತಿ ಮತ್ತು ಗೌರವವನ್ನು ಮಂತ್ರ ನಾಟ್ಯಕಲಾ ಗುರುಕುಲ ನೀಡಿದೆ ಎಂದರು. ಇದೇ ಸಂದರ್ಭ…
UN NETWORKS ಕೊಣಾಜೆ: ಪಟ್ಟೋರಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ)ಇದರ ಆಶ್ರಯದಲ್ಲಿ ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದುರ್ಗಾಪೂಜೆ ಮತ್ತು 38ನೇ ವರ್ಷದ ಏಕಹಾ ಭಜನೆಯು ನಡೆಯಿತು. ಶನಿವಾರ ಸೂರ್ಯೋದಯಕ್ಕೆ ನಡೆದ ಏಕಾಹ ಭಜನೆಯ ದೀಪಪ್ರಜ್ವಲನೆಯನ್ನು ಕೊಣಾಜೆ ಬೀಡು ತಿರುಮಲೇಶ್ವರ್ ಭಟ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಘುರಾಮ ಕಾಜವ ಪಟ್ಟೋರಿ, ಭಜನಾ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಕಲಾಯಿ, ಕಾರ್ಯದರ್ಶಿ ಮೋಹನ್ ಕಾಟುಕೋಡಿ ಹಾಗೂ ನಾಗಬ್ರಹ್ಮ ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಶುಕ್ರವಾರದಂದು ಸಂಜೆ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದುರ್ಗಾ ಪೂಜೆಯು ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಿತು.

