UN NETWORKS
ಮೇರಿಹಿಲ್: ಮೇರಿಹಿಲ್‍ನ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನಿಟ್ಟು ದೀಪ ಬೆಳಗಿಸಿ, ಎರಡು ನಿಮಿಷದ ಮೌನಾಚರಣೆ ಮಾಡಲಾಯಿತು.
ಬಳಿಕ ಮಾತನಾಡಿದ ಜಿಲ್ಲಾ ಸಮಾದೇಷ್ಠ ಡಾ. ಮುರಲೀ ಮೋಹನ ಚೂಂತಾರು ಗಾಂಧೀಜಿಯವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ. ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಎ. ರತ್ನಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ದಲಾಯತ್ ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರ್ ಮತ್ತು ಸನತ್, ಸುನೀಲ್ , ರಮೇಶ್ ಭಂಡಾರಿ. ದಿವಾಕರ, ಮಹೇಶ್ ಹಾಗೂ ಹರಿಪ್ರಸಾದ್ ಉಪಸ್ಥಿತರಿದ್ದರು.


