UN NETWORKS
ಉಳ್ಳಾಲ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕ್ ಪ್ರೇರಿತ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಉಳ್ಳಾಲ ವೀರ ರಾಣಿ ಅಬ್ಬಕ್ಕ ವೃತ್ತದ ಬಳಿ ಹಣತೆ ಬೆಳಗಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಧಾರ್ಮಿಕ ಪರಿಷತ್‍ನ ಸದಸ್ಯ ಕೃಷ್ಣ ಗಟ್ಟಿ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ, ಭಗವತೀ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಬಾಲಕೃಷ್ಣ ಮಂದಿರ ಅಧ್ಯಕ್ಷ ಸತೀಶ್ ಕುಂಪಲ, ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಶೃಂಗೇರಿ ಮಠ ಕೋಟೆಕಾರು ಶಾಖೆಯ ಉತ್ಸವ ಸಮಿತಿಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರ ಉಳ್ಳಾಲ ಸಮಿತಿಯ ಚಂದ್ರಶೇಖರ ಉಚ್ಚಿಲ್, ಬಿರುವೆರ್ ಕುಡ್ಲ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್, ನಿವೃತ್ತ ಸೇನಾನಿ ಪ್ರವೀಣ್ ಶೆಟ್ಟಿ, ಉಳ್ಳಾಲ ನಗರಸಭೆ ಸದಸ್ಯ ಮಮತಾ ಮೊಗವೀರಪಟ್ನ, ನಮಿತಾ ಗಟ್ಟಿ ಗೀತಾ ಬಾಯಿ, ಮಹಮ್ಮದ್ ಮುಕ್ಕಚೇರಿ, ಮಾಜಿ ಸದಸ್ಯ ದಯಾನಂದ ತೊಕ್ಕೊಟ್ಟು, ಯಶವಂತ ಅಮೀನ್, ಪ್ರಮುಖರಾದ ದೇವದಾಸ್ ಕೊಲ್ಯ, ಸಂಜೀವ ಶೆಟ್ಟಿ, ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಅಧ್ಯಕ್ಷ ರಾಕೇಶ್ ಬೈಪಾಸ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಪದಾಧಿಕಾರಿಗಳಾದ ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು, ರವಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ಚೇತನ್ ಬೈಪಾಸ್, ಕಿರಣ್ ಕೊಲ್ಯ, ನಾರಾಯಣ ಬಿ., ಮೋಹನ್ ಸಾಲ್ಯಾನ್, ಆಸ್ಟಿನ್, ದಾಮೋದರ ನಡಾರ್, ಕೃಷ್ಣ ಪೊನ್ನೊತ್ತೊಡು, ಪ್ರವೀಣ್ ಬಸ್ತಿ,, ಲಕ್ಚೀ ನಾರಾಯಣ, ಸಂತೋಷ್ ಮಾರ್ಲ, ನವೀನ್ ಎ.ಕೆ. ಹಾಗೂ ವಿಠಲ್ ಬಂಗೇರ ಉಪಸ್ಥಿತರಿದ್ದರು.


