Author: UllalaVani

Kannada News From Coastal Karnataka

UN NETWORKS ಮಂಜನಾಡಿ : ಮಂಜನಾಡಿಯ ಅಲ್ ಮದೀನ ದಅ್ ವಾ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಂಘಟನೆ ಬಿಶಾರತುಲ್ ಮದೀನಾಕ್ಕೆ 2019-20ನೇ ಶೈಕ್ಷಣಿಕ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಿಝಾರ್ ಬಕ್ರವಳ್ಳಿ ಹಾಸನ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಕಲ್ಮಿಂಜ, ಕೋಶಾಧಿಕಾರಿ ಅಬ್ದುಲ್ ಸಮದ್ ಪರಪ್ಪು, ಉಪಾಧ್ಯಕ್ಷರಾಗಿ ಶಫೀಕ್ ಬೊಳ್ಮಾರ್ ಆಯ್ಕೆಗೊಂಡರು. ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ ಉಧ್ಘಾಟಿಸಿದರು. ದಅ್ ವಾ ಪ್ರಾಂಶುಪಾಲ ಅಬ್ದುಸ್ಸಲಾಂ ಅಹ್ಸನಿ, ಮುನೀರ್ ಸಖಾಫಿ, ಇರ್ಫಾನ್ ನೂರಾನಿ, ಅಶ್ರಫ್ ಸಖಾಫಿ, ರಝಾಖ್, ಇಕ್ಬಾಲ್ ಮರ್ಝೂಖಿ, ಜುನೈದ್ ಮರ್ಝೂಖಿ ಮತ್ತಿತರು ಉಪಸ್ಥಿತರಿದ್ದರು. ನಿಕಟ ಪೂರ್ವ ಕಾರ್ಯದರ್ಶಿ ಶರೀಫ್ ವಲಾಲ್ ವರದಿ ವಾಚಿಸಿದರು. ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿದರು. ಹನೀಫ್ ಕುಂಜತ್ತೂರು ವಂದಿಸಿದರು.

Read More

UN NETWORKS ಯೆನೆಪೋಯ: ಯೋಗ ಕುರಿತು ಒಂದು ಕಾಲದಲ್ಲಿ ಬಹಳಷ್ಟು ತಪ್ಪು ತಿಳುವಳಿಕೆಗಳು ಇದ್ದವು. ಅದೊಂದು ಧಾರ್ಮಿಕ ಸಂಬಂಧಿಸಿದ ವಿಚಾರವಲ್ಲ , ಜೀವನದ ಅವಶ್ಯ ಅಂಗ ಅನ್ನುವುದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಾದ ಬಳಿಕ ಅರಿವು ಮೂಡಿದೆ ಎಂದು ನಿಟ್ಟೆ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯಗಳ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು. ಅವರು ಯೆನೆಪೋಯ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆಯ ಪ್ರಯುಕ್ತ ಮ್ಯಾರಥಾನ್ (ದೀರ್ಘಕಾಲದ) ಯೋಗ ಬೋಧನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಿಂದ ವಿಶ್ವದ 170 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಮಾನಸಿಕ ಒತ್ತಡಗಳಿಂದ ಹಿಡಿದು ಕ್ಯಾನ್ಸರ್ ತಡೆಗಟ್ಟುವಿಕೆಗೆ ಯೋಗಾಭ್ಯಾಸ ಪರಿಣಾಮಕಾರಿ ಅನ್ನುವುದು ಸಾಬೀತಾದ ವಿಚಾರ. ನಿರಂತರ ಯೋಗಾಭ್ಯಾಸದಿಂದ ಜೀವನ ಶೈಲಿಯಲ್ಲೂ ಬದಲಾವಣೆಗಳಾಗುತ್ತವೆ. ಈ ಮೂಲಕ ದುರಾಭ್ಯಾಸಗಳನ್ನು ದೂರವಾಗಿಸಲು ಸಾಧ್ಯ ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೋಭಾರಾಣಿ ಮಾತನಾಡಿ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳು ಸೇರಿ ಜಂಟಿಯಾಗಿ ಆರೋಗ್ಯ ಸುಧಾರಣೆ ಕಾರ್ಯಕ್ರಮಗಳನ್ನು ನಡೆಸಿದಾಗ ಆರೋಗ್ಯ ಕ್ಷೇತ್ರಗಳಲ್ಲಿ ಬಹಳಷ್ಟು…

Read More

UN NETWORKS ಉಳ್ಳಾಲ : ಉಳ್ಳಾಲ ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ಸಂಸ್ಥೆಯ ನ್ಯೂ.ಬಿ.ಫ್ರೀ ಸ್ಕೂಲ್ ನಲ್ಲಿ “ಇಕ್ರಾ”ಡೇ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನಶಾಸ್ತ್ರೀಯವಾಗಿ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಆಧುನಿಕ ಶೈಲಿಯಲ್ಲಿ ಕಲಿಸುವಂತಹ ವಿಶೇಷ ಕಲಿಕಾ ಸೌಲಭ್ಯವಿರುವಂತಹ ಪ್ರೀ ಸ್ಕೂಲ್ ಆಗಿದೆ ನ್ಯೂ.ಬಿ. ಇದನ್ನು ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ನಡೆಸಿಕೊಂಡು ಬರುತ್ತಿದೆ ಎಂದರು. ಉಳ್ಳಾಲ ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ಸಂಸ್ಥೆಯ ನ್ಯೂ.ಬಿ.ಫ್ರೀ ಸ್ಕೂಲ್‍ನ ಅಧ್ಯಕ್ಷ ರಶೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸುಂದರಿಭಾಗ್ ಜುಮಾ ಮಸೀದಿಯ ಖತೀಬರಾದ ಶರೀಫ್ ಸಅದಿ ದುಆ ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಮಂಜನಾಡಿ ಅಲ್ ಮದೀನದ ನಿರ್ದೇಶಕರಾದ ಮುಹಮ್ಮದ್ ಕುಂಞ ಅಂಜದಿ, ದ.ಕ.ಜಿಲ್ಲಾ ಎಸ್,ವೈ.ಎಸ್. ಕೋಶಾಧಿಕಾರಿ ಹನೀಫ್ ಹಾಜಿ, ಜಲಾಲುದ್ದೀನ್ ತಂಙಳ್, ಫಾರೂಕ್, ತಾಜುದ್ದೀನ್, ರಮೀಝ್, ಸತ್ತಾರ್, ಮೊದಲಾದವರು ಉಪಸ್ಥಿತರಿದ್ದರು. ಉಳ್ಳಾಲ ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ಸಂಸ್ಥೆಯ ನ್ಯೂ.ಬಿ.ಫ್ರೀ…

Read More

UN NETWORKS ಮಂಗಳೂರು : ಖ್ಯಾತ ದಂತ ವೈದ್ಯ ಬಾಯಿ ಮುಖ ಶಸ್ತ್ರಚಿಕಿತ್ಸಕ ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರು ಅವರ 6ನೇ ಪುಸ್ತಕ “ಸಂಜೀವಿನಿ’ ಭಾಗ ಎರಡು, ಆರೋಗ್ಯ ಮಾರ್ಗದರ್ಶಿ, ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯಿಂದ ನೀಡಲಾಗುವ 2018ನೇ ಸಾಲಿನ ವೈದ್ಯಕೀಯ ವಿಷಯದ ವಿಭಾಗದಲ್ಲಿ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಜುಲೈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿರುವ ಕಚೇರಿಯಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. 25ಸವಿರ ರೂ. ನಗದು, ಪ್ರಶಸ್ತಿ, ಪಾರಿತೋಷಕ ಮತ್ತು ಅಭಿನಂದನಾ ಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ವೈದ್ಯಕೀಯ ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವಿರುವ ವೈದ್ಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಡಾ. ಮುರಲೀ ಮೋಹನ್ ಚೂಂತಾರು ಅವರು ವೈದ್ಯಕೀಯ ಲೇಖಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು ಈವರೆಗೆ ರಕ್ತದಾನ ಜೀವದಾನ, ಕಚಗುಳಿ, ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಸಂಜೀವಿನಿ- ಭಾಗ ಒಂದು,…

Read More

UN NETWORKS ತೊಕ್ಕೊಟ್ಟು : ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ದಂಪತಿ ಶವ ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದ ಮನೆಯೊಂದರಲ್ಲಿ ಬುಧವಾರ ಪತ್ತೆಯಾಗಿದೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ನಡೆದ ಘಟನೆ ಕುರಿತು ಶವಮಹಜರಿನಿಂದ ತಿಳಿದುಬರಬೇಕಿದೆ. ಚೆಂಬುಗುಡ್ಡೆ ನಿವಾಸಿ ಪದ್ಮನಾಭ (75) ಮತ್ತು ವಿಮಲ (60) ಮೃತ ದಂಪತಿ. ಬುಧವಾರ ಮಧ್ಯಾಹ್ನ ಅಳಿಯ ಉಮಾನಾಥ್ ಎಂಬವರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಎಲ್ಲಾ ಬಾಗಿಲುಗಳು ಮುಚ್ಚಿದ ರೀತಿಯಲ್ಲಿತ್ತು. ಉಳ್ಳಾಲ ಪೊಲೀಸರು, ಇಬ್ಬರು ಪುತ್ರರು, ಮಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳನೋಡಿದಾಗ ಅಡುಗೆ ಕೋಣೆಯಲ್ಲಿ ದಂಪತಿ ಶವ ಸುಟ್ಟುಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಸೀಮೆಎಣ್ಣೆ ದೀಪ ಕಳಗೆ ಬಿದ್ದಿರುವುದು ಕಂಡುಬಂದಿದೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಅನ್ನುವುದು ಶವಮಹಜರು ಬಳಿಕ ತಿಳಿದುಬರಬೇಕಿದೆ. ಪದ್ಮನಾಭ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ದಿನಾ ಮಗಳ ಜತೆಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದರೂ, ಸಂತಸದಿಂದಲೇ ಇದ್ದರೆಂದು ಪುತ್ರಿ ತಿಳಿಸಿದ್ದಾರೆ. ಮೊಬೈಲ್ ಸ್ವೀಕರಿಸಿರಲಿಲ್ಲ : ವಿಟ್ಲದ…

Read More

UN NETWORKS ಕೊಣಾಜೆ: ಪ್ರಸ್ತುತ 2019-20ರ ಸಾಲಿಗೆ ವಿಶ್ವವಿದ್ಯಾಲಯವು ತುಳು ಎಂ.ಎ. ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಾತನಾಡಿರುವ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಸದ್ರಿ ಕೋರ್ಸ್‌ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುವಂತೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನ್‌ಕಟ್ಟೆ, ಮಂಗಳೂರು ಇಲ್ಲಿ ಸಂಧ್ಯಾ ಕೋರ್ಸಾಗಿ ಕಾರ್ಯ ನಿರ್ವಹಿಸಲ್ಪಡುತ್ತದೆ. ಇದರ ಪ್ರಯೋಜನವನ್ನು ತುಳು ಆಸಕ್ತರು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅಸಕ್ತರು ಅರ್ಜಿ ಹಾಗೂ ಮಾಹಿತಿ ಪುಸ್ತಕಗಳನ್ನು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇನಿಂದ ಪಡೆದುಕೊಳ್ಳಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಪದವೀಧರು ತುಳು ಎಂ.ಎ.ಗೆ ಪ್ರವೇಶ ಪಡೆಯಲು ಆರ್ಹರಾಗಿದ್ದು, ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಅಭ್ಯಾಸ ಮಾಡಿಕೊಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆಯಬಹುದು ಎಂದು ತಿಳಿಸಿದ್ದಾರೆ. ತುಳು ಎಂ.ಎ ಕೋರ್ಸಿನಲ್ಲಿ ತುಳು ಭಾಷೆಯ ಪ್ರಾಚೀನತೆ, ತುಳು ಸಂಸ್ಕೃತಿ, ತುಳುವರ ಆರಾಧನೆಗಳು ತುಳು ಲಿಪಿ ತುಳುವರ ಕೃಷಿ ಪದ್ಧತಿ, ವ್ಯಾಪಾರ ಸೇರಿದಂತೆ ತುಳುವರ ಉದ್ಯಮಶೀಲತೆಯ ವಿಷಯಗಳು ಒಳಗೊಂಡಿದ್ದು, ತುಳುವರು, ತುಳುವ ಸಮಾಜವನ್ನು ಅಧ್ಯಯನ ಮಾಡಲು…

Read More

UN NETWORKS ತಲಪಾಡಿ : ಬೆನ್ನು ನೋವು, ಸೊಂಟ ನೋವು ಸೇರಿದಂತೆ ಮೂಳೆ ಸವೆತದಿಂದ ತೊಂದರೆಯಾದ ರೋಗಿಗಳಿಗೆ ಈ ಶಿಬಿರ ಪೂರಕವಾಗಿದ್ದು, ಈಗಿರುವ ನೋವು ಶಮನ ಮತ್ತು ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸಿದರಿಗೆ ಸಹಕಾರಿಯಾಗಲಿದೆ ಎಂದು ಶಾರದಾ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ| ರವಿಗಣೇಶ್ ಮೊಗ್ರ ಅಭಿಪ್ರಾಯಪಟ್ಟರು. ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆ ಮತ್ತು ಬೆಂಗಳೂರಿನ ಮೆಡಿಲ್ಯಾಬ್ ಇಂಡಿಯಾ ಸಂಸ್ಥೆಯ ಸಂಟಿ ಆಶ್ರಯದಲ್ಲಿ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಉಚಿತ ಅಸ್ಥಿ (ಮೂಳೆ) ಸಾಂದ್ರತಾ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಶಿಬಿರದಲ್ಲಿ ಸುಮಾರು 100ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿ ಚಿಕಿತ್ಸೆ ಮತ್ತು ಸಲಹೆಯನ್ನು ಪಡೆದುಕೊಂಡರು. ಶಿಬಿರದಲ್ಲಿ ತಜ್ಞ ವೈದ್ಯ ಡಾ| ರವಿಗಣೇಶ್ ಮೊಗ್ರ ಕಾಯಚಿಕಿತ್ಸಾ ಮತ್ತು ಪಂಚಕರ್ಮ ವಿಭಾಗದ ಡಾ| ಅಮೃತ ಟಿ. ಟಿ. ಮತ್ತು ಡಾ| ನಿಖಿಲ್ ಚಂದ್ರನ್ ಸಿ. ಇವರ ಸಲಹೆಯನ್ನು ಪಡೆದರು.

Read More

UN NETWORKS ದೇರಳಕಟ್ಟೆ: ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯಾಗಿದ್ದು, ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೂ ಎಲ್ಲ ಬಾಷೆಯಲ್ಲಿ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ ಸರಕಾರದ ಮಹತ್ವದ ತೀರ್ಮಾನಗಳಲ್ಲಿ ಒಂದಾಗಿದೆ. ಶಾಲೆಗೆ ಸೇರಿರುವ ಎಲ್ಲ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆ ಇಲ್ಲಿ ಎಸ್‌ಡಿಎಂಸಿ ವತಿಯಿಂದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಆಂಗ್ಲ ಶಿಕ್ಷಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಡ ಜನರೂ ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಮೀಡಿಯಂ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಬಂಗಾರ ಅಡವಿಟ್ಟು, ಸಾಲ ಮಾಡಿಯಾದರೂ ಶಾಲೆಗೆ ಸೇರಿಸುತ್ತಾರೆ. ಸರಕಾರದ ಈ ನಿರ್ಧಾರದಿಂದ ಉಚಿತವಾಗಿ ಶಿಕ್ಷಣಕ್ಕೆ ಅವಕಾಶ ಸಿಕ್ಕಿದೆ.ಸರಕಾರ ಪ್ರತಿ ಶಾಲೆಯಲ್ಲಿ ಒಬ್ಬ ಶಿಕ್ಷಕಿಗೆ ತರಬೇತಿ ನೀಡಿ 30 ವಿದ್ಯಾರ್ಥಿಗಳಿಗೆ ಸೀಮಿತ ಮಾಡಿತ್ತು. ಆದರೆ ಕೆಲವೊಂದು ಶಾಲೆಗಳಲ್ಲಿ…

Read More

UN NETWORKS ಉಳ್ಳಾಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಭಜನಾ ಸಂಚಾಲಕ ದಿ| ಸಂಜೀವ ಕುಲಾಲ್ ಅವರ ಶ್ರದ್ಧಾಂಜಲಿ ಸಭೆ ಕುಂಪಲದ ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಯೇನೆಪೋಯ ಮುಖ್ಯಸ್ಥ ಫರ್ಹಾದ್ ನುಡಿನಮನ ಸಲ್ಲಿಸಿದರು. ಮಂದಿರದ ಪೋಷಕ ಕೇಶವದಾಸ್, ವಿಶ್ವ ಹಿಂದು ಪರಿಷತ್ತಿನ ಕಾರ್ಯದರ್ಶಿ ಗೋಪಾಲ ಕುತ್ತಾರ್, ಜಿ.ಪಂ ಸದಸ್ಯೆ ಧನಲಕ್ಷೀ ಗಟ್ಟಿ, ಯೋನೆಪೋಯ ವಿ.ವಿ.ಯ ಮಾನವ ಸಂಪನ್ಮೂಲ ಅಧಿಕಾರಿ ಮಹಾಬಲ ಆಳ್ವ, ಟೈಲರ್ ಅಸೋಸಿಯೇಷನ್ ನ ಕೆ.ಎಸ್.ಆನಂದ್, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಹಿಂದು ಜಾಗರಣ ವೇದಿಕೆಯ ಪ್ರಕಾಶ್ ಕುಂಪಲ, ಬಾಲಕೃಷ್ಣ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಬಿ.ಜೆ., ಮೋಹನ್ ಶೆಟ್ಟಿ, ಮಹಿಳಾ ಪ್ರಮುಖರಾದ ಮಾಲತಿ ಕೇಶವದಾಸ್, ಸುಜಾತ ಶೆಟ್ಟಿ, ಶಶಿಕಲಾ ಗಣೇಶ, ಜಯಲಕ್ಷೀ ಬಿ.ಜೆ., ವಿನಯ ಪ್ರಭಾಕರ್ ಹಾಗೂ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ಮಂದಿರದ ಸದಸ್ಯರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಆಧುನಿಕ ಯುಗದಲ್ಲಿ ಯುವತಿಯರು ದಾರಿ ತಪ್ಪಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಅಬ್ರಾರ್ ವುಮೆನ್ಸ್ ಕಾಲೇಜ್‍ನಂತಹ ಸಂಸ್ಥೆಗಳ ಅಗತ್ಯವಿದೆ. ಇದರಿಂದ ಮಹಿಳೆಯರಿಗೆ ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಅವಕಾಶ ಸಿಗುತ್ತದೆ. ಇಂತಹ ಸಂಸ್ಥೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಸಯ್ಯದ್ ಹಬೀಬುಲ್ಲಾ ತಂಙಳಾ ಪೆರುವಾಯಿ ಹೇಳಿದರು. ಅವರು ದೇರಳಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡ ಅಬ್ರಾರ್ ವುಮೆನ್ಸ್ ಕಾಲೇಜನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬೂಬಕರ್ ಹಾಜಿ ದೇರಳಕಟ್ಟೆ, ಸಯ್ಯದ್ ಆಲವಿ ತಂಙಳ್ ಕಿನ್ಯ, ಎ.ಕೆ. ರಹೀಂ ಅಂಮ್ಜದಿ ಹೊನ್ನಾವರ, ಅಬೂಬಕರ್ ಸಖಾಫಿ ತೋಕೆ, ಹಸನ್ ಹಾಜಿ ಸಾಂಬಾರ್ ತೋಟ, ಇಸುಬು ಬಾವ ಮೊದಲಾದವರು ಉಪಸ್ಥಿತರಿದ್ದರು. ಆರ್.ಕೆ. ಮದನಿ ಅಮ್ಮೆಂಬಳ ಸ್ವಾಗತಿಸಿ ವಂದಿಸಿದರು. ಸಂಸ್ಥೆಯ ಪ್ರಾಂಶುಪಾಲ ಸ್ವಾದೀಕ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Read More