UN NETWORKS ಉಳ್ಳಾಲ : ಪ್ರತೀಯೋರ್ವ ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣ ಕಾರ್ಯದಲ್ಲಿ ರಕ್ಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ ಸಲಹೆಗಾರ ರಫೀಕ್ ಮಾಸ್ಟರ್ ಅಭಿಪ್ರಾಯಪಟ್ಟರು. ಮದನಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ರಕ್ಷಕ ಶಿಕ್ಷಕ ವಿದ್ಯಾರ್ಥಿ ಸಮಾವೇಶ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ರಕ್ಷಕ ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿ ಇದರ ಪೂರ್ಣ ಪ್ರಮಾಣದ ಯಶಸ್ಸಿಗೆ ಶಾಲಾ ಪರಿಸರ ಹಾಗೂ ಮನೆಯ ವಾತಾವರಣ ಪೂರಕ ವೇದಿಕೆಯಾಗಬೇಕು ಎಂದ ಅವರು ವಿದ್ಯಾರ್ಥಿಗಳ ಸತತವಾದ ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಇಂದಿನ ಮಹಾನ ನಾಯಕರಂತಹ ವಿಶೇಷ ಪ್ರತಿಭೆಗಳಾಗಲು ಸಾಧ್ಯವಾಗುವುದು ಜೊತೆಗೆ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳೂ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳು ಎಂದರು. ವಿದ್ಯಾರ್ಥಿಸಂಘ, ಎನ್.ಎಸ್.ಎಸ್, ಕ್ರೀಡಾ ಸಂಘ ಹಾಗೂ ಸಾಹಿತ್ಯ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು…
Author: UllalaVani
UN NETWORKS ಯೇನಪೊಯ : ಬಡ ಜನರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಯುರ್ವೇದ ಮತ್ತು ಹೋಮಿಯೋಪಥಿ ಮಾಹಿತಿ ಮನೆ ಮನೆಗೆ ಮುಟ್ಟುವಂತೆ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ನರಿಂಗಾನ ಪಂಚಾಯತ್‌ನ ಅಧ್ಯಕ್ಷ ಇಸ್ಮಾಯಿಲ್ ಮಿನಂಕೋಡಿ ಅಭಿಪ್ರಾಯಪಟ್ಟರು. ಯೇನಪೊಯ ಆಯುರ್ವೇದ ಮತ್ತು ಹೋಮಿಯೋಪಥಿ ಮೆಡಿ ಕಲ್ ಕಾಲೇಜು ಮತ್ತು ಆಸ್ಪತ್ರೆ ಆಯುಷ್ ಕ್ಯಾಂಪಸ್, ಕೊಲ್ಲರಕೋಡಿ ನರಿಂಗಾನ ಬಂಟ್ವಾಳ ವತಿಯಿಂದ ಕಾಲೇಜಿನ ಆಯುಷ್ ಕ್ಯಾಂಪಸ್‌ನಲ್ಲಿ ಅಂಗನ ವಾಡಿ ಟೀಚರ್ ಮತ್ತು ಕಚೇರಿ ಕೆಲಸಗಾರರಿಗಾಗಿ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಯೇನಪೊಯ ವಿಶ್ವ ವಿದ್ಯಾನಿಲಯದ ಕುಲಪತಿ ಡಾ| ರಘು ವೀರ್ ಮಾತನಾಡಿ, ಆಸ್ಪತ್ರೆ ವತಿಯಿಂದ ಇಂತಹ ಕಾರ್ಯಕ್ರಮ ಮಾಡಿದಾಗ ಬಡರೋಗಿಗಳಿಗೆ, ಜನ ಸಾಮಾನ್ಯರಿಗೆ ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದ.ಕ. ಇದರ ಸಹಾಯಕ ಉಪ ನಿರ್ದೇಶಕ…
UN NETWORKS ಇರಾ : ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛಮೇವ ಜಯತೆ ವಾಹನ ಪ್ರಚಾರಜಾಥ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ನೇತೃತ್ವದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ತುಳಸಿ ಪೂಜಾರಿ, ಮೊಯಿದಿನ್ ಕುಂಞ, ಗೋಪಾಲ ಅಶ್ವತ್ಥಡಿ, ರಮೇಶ್ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಕಾರಿ ನಳಿನಿ ಎ.ಕೆ, ಗ್ರಾಮಸ್ಥರು ಹಾಗು ಪಂಚಾಯತ್ ಸಿಬ್ಬಂದಿ ಪಾಲ್ಗೊಂಡಿದ್ದರು.
UN NETWORKS ಕೊಣಾಜೆ: ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಕಾರ್ಯ ಪ್ರವೃತ್ತವಾದರೆ ಉತ್ತಮ ಮಾದರಿ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು. ಅವರು ದೇರಳಕಟ್ಟೆಯ ನಿಟ್ಟೆ ವಿದ್ಯಾ ಸಂಸ್ಥೆಯ ಸೆಮಿನಾರ್ ಹಾಲ್ ನಲ್ಲಿ ಭಾನುವಾರ ನಡೆದ ರೋಟರಿ ಕ್ಲಬ್ ದೇರಳಕಟ್ಟೆ ಇದರ ನೂತನ ಪದಾಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದೇರಳಕಟ್ಟೆಯ ರೋಟರಿ ಕ್ಲಬ್ ಕಳೆದ ಹಲವು ವರ್ಷದಿಂದ ಉತ್ತಮ ಕಾರ್ಯದೊಂದಿಗೆ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯದೊಂದಿಗೆ ಮುನ್ನಡೆಯಲಿ ಎಂದು ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕನ್ಸೂಮರ್ ಕನ್ಸಲ್ಟೆಂಟ್ ಚಂದ್ರಶೇಖರ್ ಪಿ.ಎಸ್ ಅವರು, ದೇರಳಕಟ್ಟೆ ರೋಟರಿ ಕ್ಲಬ್‍ನ ಹಿಂದಿನ ಅವಯ ಅಧ್ಯಕ್ಷರುಗಳ ಅವಧಿಯಲ್ಲಿಯೂ ಕ್ಲಬ್ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದೆ. ಹಾಗೆಯೇ ಇದೀಗ ಕ್ಲಬ್ ಗೆ ಪ್ರೊ. ರವಿಶಂಕರ್ ರಾವ್ ಅವರ ಸಾರಥ್ಯ ದೊರೆತ್ತಿದ್ದು ಅವರ ಅವಧಿಯಲ್ಲಿ ಸಂಸ್ಥೆಯು ಇನ್ನಷ್ಟು ಬೆಳೆಯಲಿ ಎಂದರು.…
UN NETWORKS ಕುತ್ತಾರು : ಕುತ್ತಾರಿನ ಮುನ್ನೂರು ಸರಕಾರಿ ಶಾಲೆಯ ಅಭಿವೃದ್ಧಿಗೆ ಇನ್ಫೋಸಿಸ್ ಸಂಸ್ಥೆ ಎರಡು ಕೋಟಿ ರೂ. ನೀಡುವ ಮೌಖಿಕ ಭರವಸೆಯನ್ನು ನೀಡಿದೆ. ಮಂಜೂರುಗೊಂಡಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೂತನ ಕಟ್ಟಡಗಳು, ತಲೆ ಎತ್ತಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ವಲಯ ವತಿಯಿಂದ ಮುನ್ನೂರಿನ ದ.ಕ.ಜಿ.ಪಂ. ಹಿ.ಪ್ರಾ ಶಾಲೆಯಲ್ಲಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ವಿಭಾಗದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವ ಕೆಲಸ ಸರಕಾರದ ಐತಿಹಾಸಿಕ ಕಾರ್ಯಕ್ರಮವಾಗಿದೆ. ಹಿಂದೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಹಲವು ಅಡೆತಡೆಗಳಿತ್ತು. ಅದನ್ನು ಹೋಗಲಾಡಿಸಿ ರಾಜ್ಯ ಸರಕಾರ ಕ್ರಾಂತಿಕಾರಿ ನೀತಿಯನ್ನು ಜಾರಿಗೊಳಿಸಿದೆ. ಮಂಗಳೂರು ಕ್ಷೇತ್ರದ ಐದು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದೆ. ಇನ್ನೊಂದು ಭಾಷೆ ದೂರಿ ಬೇರೆ ಭಾಷೆ ಬೆಳೆಸಲು ಅಸಾಧ್ಯ ಎಂದರು. ಸರಕಾರ ಕರ್ನಾಟಕ ಪಬ್ಲಿಕ್ ಶಾಲೆ…
UN NETWORKS ತೊಕ್ಕೊಟ್ಟು : ರಾ.ಹೆ. 66ರ ರಸ್ತೆ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಸೋಮವಾರ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಕಲ್ಲಾಪು ತನಕ ಸುಮಾರು 30ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. ರಾಷ್ಟ್ರೀಯ ಹೆದ್ದಾರಿ, ನವಯುಗ್ ಸಂಸ್ಥೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸೇರಿದಂತೆ ಉಳ್ಳಾಲ ಪೊಲೀಸರು, ಸಂಚಾರಿ ಪೊಲೀಸರು ತೆರವು ಕಾರ್ಯದಲ್ಲಿ ಭಾಗವಹಿಸಿದ್ದರು. ಕಲ್ಲಾಪುವಿನಿಂದ ಬೆಳಗ್ಗೆ ಆರಂಭಗೊಂಡ ತೆರವು ಕಾರ್ಯಾಚರಣೆ ತೊಕ್ಕೊಟ್ಟು ಜಂಕ್ಷನ್, ತೊಕ್ಕೊಟ್ಟು ಮೇಲ್ಸೇತುವೆ, ಕೋಟೆಕಾರು, ಬೀರಿ, ಸೇರಿದಂತೆ ತಲಪಾಡಿ ಬಳಿ ಇದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಒಂದು ತಿಂಗಳ ಹಿಂದೆಯೇ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಎರಡು ದಿನಗಳ ಹಿಂದೆ ಸೋಮವಾರ ತೆರವು ನಡೆಸುವ ಕುರಿತು ಸೂಚನೆ ನೀಡಿದ್ದರು. ಸೋಮವಾರ ತೆರವು ಆರಂಭಗೊಳ್ಳುತ್ತಿದ್ದಂತೆ ಅಂಗಡಿ, ಮಾಲೀಕರು ಸ್ವತ: ತೆರವು ನಡೆಸಿದರೆ, ನವಯುಗ್ ಸಂಸ್ಥೆಯ ಸಿಬ್ಬಂದಿಗಳು ವ್ಯಾಪಾರಿಗಳಿಗೆ ಸಹಕರಿಸಿದರು. ತೆರವು ಕಾರ್ಯಾಚರಣೆಯಲ್ಲಿ ಜೆಸಿಬಿ, ಕ್ರೈನ್, ಪಿಕ್‍ಅಪ್ ವಾಹನಗಳನ್ನು ಬಳಸಿ ವಸ್ತುಗಳ ಸ್ಥಳಾಂತರ ಮಾಡಲಯಿತು.…
UN NETWORKS ದೇರಳಕಟ್ಟೆ : ದೇರಳಕಟ್ಟೆಯ ಯೇನೆಪೊಯ ಹಸಿರು ಸಮುದಾಯ ಯೋಜನೆಯ ಅಂಗವಾಗಿ ಯೇನೆಪೊಯ ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ಕೇಂದ್ರ ಹಾಗೂ ಬೆಳ್ಮ ಗ್ರಾಮ ಪಂಚಾಯಿತಿ ಜಂಟಿಯಾಗಿ ಬೆಳ್ಮ ಗ್ರಾಮ ಪಂಚಾಯಿತಿ ವಠಾರದಲ್ಲಿ ಬೇವು, ಮಹಾಗನಿ, ಮಂದಾರ ಮತ್ತು ಹೊಳೆ ದಾಸಾವಾಳದ ಗಿಡಗಳನ್ನು ನೆಡಲಾಯಿತು. ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕಿ ಡಾ. ಭಾಗ್ಯ ಬಿ. ಶರ್ಮ ಮತ್ತು ಅಧ್ಯಾಪಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ, ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಕಾರ್ಯದರ್ಶಿ ವಾಣಿ ಮತ್ತು ಪಂಚಾಯಿತಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳ್ಮ ಗ್ರಾಮ ಪಂಚಾಯಿತಿಯ ಮಹಮ್ಮದ್ ಕಮಲ್ ಕಾರ್ಯಕ್ರಮ ಸಂಯೋಜಿಸಿದರು.
UN NETWORKS ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಆಶಾ ಕಿರಣವಾಗಿದ್ದು, ಆ ಹಿನ್ನೆಲೆಯಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ನೂತನ ಕಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದರು. ವಿವಿಗೆ ಪ್ರಥಮ ಬಾರಿಗೆ ಜಿಲ್ಲೆಯವರು ಕುಲಪತಿಯಾದ ಹಿನ್ನೆಲೆಯಲ್ಲಿ ಶನಿವಾರ ಕೊಣಾಜೆ ಗ್ರಾಮದ ಮುಖಂಡರ ಅಭಿನಂದನೆಗೆ ಪ್ರತಿಯಾಗಿ ಅವರು ಮಾತನಾಡಿದರು. ಕೊಣಾಜೆ ಗ್ರಾಮದ ಸಮಗ್ರ ಮಾಹಿತಿ ತನ್ನಲ್ಲಿದ್ದು ವಿವಿ ಜೊತೆ ಗ್ರಾಮವೂ ಅಭಿವೃದ್ಧಿ ಕಾಣಬೇಕಾದರೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಸರ್ವರ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಅಬ್ದುಲ್ ರಹ್ಮಾನ್ ಕೋಡಿಜಾಲ್, ದೇವಣ್ಣ ಶೆಟ್ಟಿ, ಸಲೀಂ ಮೇಗಾ ಅಸೈಗೋಳಿ, ಪದ್ಮನಾಭ ಗಟ್ಟಿ, ಶ್ರೀಧರ್, ಅಝರ್ ಕೋಡಿಜಾಲ್, ಉಮ್ಮರ್ ಪಜೀರ್ ಹಾಗೂ ನೌಷಾದ್ ಕೊಣಾಜೆ ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು : ಮರಗಳ ಅವಶ್ಯಕತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯೊಂದಿಗೆ ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಸದಸ್ಯರ ಮನೆಯಲ್ಲಿ ವೃಕ್ಷಾಂಕುರ ರಕ್ಷಾ ಕಾರ್ಯಕ್ರಮ ಮೂಲಕ ಪ್ರತಿಷ್ಠಾನದ ಪದಾಧಿಕಾರಿಗಳಾದ ವೆಂಕಟಗಿರಿ ಕುಂಪಲ, ಕೃಷ್ಣ ಪೊನ್ನೊತ್ತೋಡು, ಶಿವಾಜಿ ಕುತ್ತಾರ್, ರಾಜೇಂದ್ರ ಸೇವಂತಿಗುಡ್ಡೆ, ಲಕ್ಷ್ಮೀ ನಾರಾಯಣ ಪಿಲಾರ್ ಆವರ ಮನೆಯಲ್ಲಿ ಗಿಡ ನೀಡುವುದರೊಂದಿಗೆ ನಡೆಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಗೌರವಧ್ಯಕ್ಷ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಉಪಾಧ್ಯಕ್ಷ ಮೋಹನ್ ಸಾಲ್ಯಾನ್, ಗೋಪಿನಾಥ್ ಬಗಂಬಿಲ, ನವೀನ್ ಎ.ಕೆ., ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಮಾಧ್ಯಮ ಸಂಚಾಲಕ ಪ್ರವೀಣ್ ಕುಂಪಲ, ಗೂಡುದೀಪ ನಾರಾಯಣ ಬಿ., ಸ್ವಚ್ಛತಾ ಸಂಚಾಲಕ ರಾಜೇಶ್ ಯು.ಬಿ. ಹಾಗೂ ಗುರುವಂದನಾ ಸಂಚಾಲಕ ಗಂಗಾಧರ ಅಂಬ್ಲಮೊಗರು ಉಪಸ್ಥಿತಿರಿದ್ದರು.
UN NETWORKS ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದಲ್ಲಿ ಸುಮಾರು 20ವರ್ಷಗಳ ಕಾಲ ಪ್ಲ್ಲಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಜೆ. ಕೇಶವ ಅವರು ಜೂ. 23ರಂದು ವಿಧಿವಶರಾಗಿದ್ದು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಸೋಮವಾರ ಮೇರಿಹಿಲ್ ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಜಿಲ್ಲಾ ಸಮಾದೇಷ್ಠ ಡಾ. ಮುರಲೀ ಮೋಹನ್ ಚೂಂತರ್ ಮಾತನಾಡಿ ಕೇಶವ ಅವರು 1987ರಲ್ಲಿ ಕತೃವ್ಯಕ್ಕೆ ಸೇರಿ ಸುಮಾರು 20ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿ ಪ್ರವಾಹ ರಕ್ಷಣ ಕರ್ತವ್ಯ, ಕಾನೂನು ಸುವ್ಯವಸ್ಥ್ಥೆ ಕರ್ತವ್ಯ,ಚುನಾವಣಾ ಕರ್ತವ್ಯಗಳನ್ನ ಮಾಡಿ ಈ ಸೇವೆ ಬಗ್ಗೆ ಅನೇಕ ಪ್ರಶಸ್ತಿಗಳನ್ನು ಕೂಡ ಪಡೆದಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಕುಟುಂಬಕ್ಕೆ ಈ ನೋವನ್ನು ಮರೆಯುವ ಶಕ್ತಿಯನ್ನು ಆ ದೇವರು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ನುಡಿದರು. ಬಳಿಕ ಒಂದು ನಿಮಿಷ ಮೌನಾಚರಿಸಲಾಯಿತು. ಉಪ ಸಮಾದೇಷ್ಟ ರಮೇಶ್,…

