Author: UllalaVani

Kannada News From Coastal Karnataka

UN NETWORKS ತಲಪಾಡಿ : ವಿದ್ಯಾರ್ಥಿಗಳು ಇಂತಹ ವ್ಯಸನದ ಕುರಿತು ಎಚ್ಚರಿಕೆಯಿಂದ ಇರಬೇಕು. ತಮ್ಮ ಸುತ್ತಮುತ್ತಲೂ ಮಾದಕ ವ್ಯಸನದ ವಿರುದ್ಧ ಜಾಗೃತಿಯನ್ನು ಮೂಡಿಸಿ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ತಮ್ಮ ಹಸ್ತವನ್ನು ಜೋಡಿಸಬೇಕು ಎಂದು ಮಂಗಳೂರು ಯೇನೆಪೊಯ ವೈದ್ಯಕೀಯ ಕಾಲೇಜಿನ ಓರಲ್ ಪಥೋಲೊಜಿ ವಿಭಾಗದ ಡಾ| ರುಬೆನ್ ಅಭಿಪ್ರಾಯಪಟ್ಟರು. ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಮಾದಕ ವಸ್ತುಗಳು ಮಾನವನ ಮೆದುಳಿನ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಹದಿಹರೆಯದ ವಿದ್ಯಾರ್ಥಿಗಳು ಮುಖ್ಯವಾಗಿ ಈ ಮಾದಕ ವ್ಯಸನದ ಚಟಕ್ಕೆ ಬಲಿಯಾಗುತ್ತಾರೆ. ಒಮ್ಮೆ ಈ ಚಟದ ದಾಸರಾದರೆ ಇದರಿಂದ ಹೊರ ಬರಲು ತುಂಬಾ ಕಷ್ಟ ಸಾಧ್ಯ. ಮಾದಕ ವ್ಯಸನವು ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಜೀವನದ ಮೇಲೆಯೂ ಪರಿಣಾಮ ಬೀರಿ ಆತನ ನೈತಿಕ ಅಥಪತನಕ್ಕೆ ಕಾರಣವಾಗುತ್ತದೆ. ಆತ ಸಮಾಜಕ್ಕೆ ಕಂಟಕನಾಗುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಮಾದಕ ವ್ಯಸನದ ತೊಂದರೆಯ ಬಗ್ಗೆ ಜಾಗೃತಿಯನ್ನು…

Read More

UN NETWORKS ನರಿಂಗಾನ : ಯೇನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜಿನ ಕ್ರಿಯಾಶಾರೀರ ಹಾಗೂ ಶಲ್ಯತಂತ್ರ ವಿಭಾಗದ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯುಷ್ ಕ್ಯಾಂಪಸ್‍ನಲ್ಲಿ ನಡೆಯಿತು. ಯೇನೆಪೊಯ ಬ್ಲಡ್ ಬ್ಯಾಂಕ್ ಮುಖ್ಯಾ„ಕಾರಿ ಡಾ| ಶರೀಫ್ ಅವರು ‘ರಕ್ತದಾನದ ಮಹತ್ವ’ ಕುರಿತಾದ ಉಪನ್ಯಾಸ ನೀಡಿದರು. ಯೇನೆಪೊಯ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ| ಸಿ.ವಿ. ರಘುವೀರ್ ಅವರು ಮಾತಾನಾಡಿ ‘ರಕ್ತದಾನವೇ ಶ್ರೇಷ್ಠದಾನ’ ಎಂಬುದಾಗಿ ಹೇಳಿದರು. ಯೇನೆಪೊಯ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲ ಡಾ| ಪ್ರಸನ್ನ ಐತಾಳ್ ಉಪಸ್ಥಿತರಿದ್ದರು. ಕ್ರಿಯಾ ಶಾರೀರ ವಿಭಾಗದ ಸಹಪ್ರಾಧ್ಯಪಕ ಡಾ| ಹರಿಕೃಷ್ಣ ಬಿ. ಎನ್. ಸ್ವಾಗತಿಸಿದರು. ಶಲ್ಯತಂತ್ರ ವಿಭಾಗದ ಸಹಪ್ರಾಧ್ಯಪಕ ಡಾ| ದುರ್ಗಾಪ್ರಸಾದ್ ಎ.ವಿ. ವಂದಿಸಿದರು. ಕಾಲೇಜು ವಿದ್ಯಾರ್ಥಿನಿ ಫಾತಿಮಾ ನೂಫ್ ನಿರೂಪಿಸಿದರು.

Read More

UN NETWORKS ತೊಕ್ಕೊಟ್ಟು : ಮಕ್ಕಳ ಸರ್ವಾಂಗಿಣ ಬದುಕಿಗೆ ಪೂರಕವಾದ ವಾತವರಣವನ್ನು ಮನೆಯಲ್ಲಿ ಕಲ್ಪಿಸಿಕೊಡುವ ಕಾರ್ಯ ವಿದ್ಯಾರ್ಥಿಗಳ ಹೆತ್ತವರಿಂದ ಆಗಬೇಕಾಗಿದ್ದು, ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕು ಎಂದು ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ಧರ್ಮಗುರು ಹಾಗೂ ಶಾಲಾ ಸಂಚಾಲಕ ಡಾ| ಫಾ| ಜೆ. ಬಿ ಸಲ್ಡಾನರವರು ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ಪೆರ್ಮನ್ನೂರು. ಇದರ 2019-20ನೇ ಸಾಲಿನ ರಕ್ಷಕ – ಶಿಕ್ಷಕ ಮಾಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ತಜ್ನೆ ಡಾ| ಕೆರೋಲಿನ್ ಡಿ’ಸೋಜ ಅವರು ಪೋಷಕರನ್ನು ಉದ್ದೇಶಿಸಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ತಿಳಿಸಿದರು. ಸಂಚಾರಿ ನಿರೀಕ್ಷಕ ಸುಕುಮಾರ್ ಅವರು ಸಂಚಾರಿ ನಿಯಮದ ಕುರಿತು ಸಂಚಾರಿ ಠಾಣೆಯ ಸಿಬ್ಬಂದಿ ವರ್ಗದವರೊಂದಿಗೆ ಭಾಗವಹಿಸಿ ಮಾಹಿತಿ ನೀಡಿ ಮಕ್ಕಳು ಹಾಗೂ ರಸ್ತೆಯನ್ನು ದಾಟುವಾಗ ಮುಂಜಾಗ್ರತಾ ಕ್ರಮವನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಪೋಷಕರಿಗೆ ತಿಳಿಸಿದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಅನಿತಾ, ಪ್ರಭಾರ ಶಿಕ್ಷಕಿ ಸಿ| ಪ್ಯಾಟ್ಸಿ…

Read More

UN NETWORKS ದೇರಳಕಟ್ಟೆ : ಇನ್ನೇನು ಐದಡಿ ಹೆಜ್ಜೆ ಇಡುತ್ತಿದ್ದರೆ ಆಕೆ ಮನೆ ತಲುಪುತ್ತಿದ್ದಳು, ಆದರೆ ಭಗ್ನಪ್ರೇಮಿಯೋರ್ವ ಸ್ಕೂಟರಿನಲ್ಲಿ ಬಂದು ವಿದ್ಯಾರ್ಥಿನಿ ಮೈಯಿಡೀ 12 ಬಾರಿ ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಲ್ಲದೆ ತಾನೂ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನಿಸಿದ ಕ್ರೂರ ಕೃತ್ಯ ದೇರಳಕಟ್ಟೆಯ ಬಗಂಬಿಲದಲ್ಲಿ ನಿನ್ನೆ ಸಂಜೆ ನಡೆದಿದೆ. ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಖಾಸಗಿ ಕಾಲೇಜಿನ ಮೊದಲ ವರ್ಷದ ಎಂಬಿಎ ವಿದ್ಯಾರ್ಥಿನಿ ಬಗಂಬಿಲ ನಿವಾಸಿ ದೀಕ್ಷಾ (20) ಕೊಲೆಯತ್ನಕ್ಕೆ ಒಳಗಾದವರು. ಶಕ್ತಿನಗರ , ರಾಮಶಕ್ತಿ ಮಿಷನ್ ಸಮೀಪದ ಸುಶಾಂತ್ (28) ಕೊಲೆಗೆ ಯತ್ನಿಸಿದ ಭಗ್ನಪ್ರೇಮಿ. ಶುಕ್ರವಾರ ಕಾಲೇಜು ಮುಗಿಸಿ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರಿನಲ್ಲಿ ಹಿಂಬಾಲಿಸಿಕೊಂಡು ಬಂದ ಪರಿಚಿತ ಸುಶಾಂತ್ , ಆಕೆಯನ್ನು ಅಡ್ಡಗಟ್ಟಿ ಗಲಾಟೆ ನಡೆಸಲು ಆರಂಭಿಸುತ್ತಾನೆ. ಬಳಿಕ ತನ್ನ ಬಳಿಯಿದ್ದ ಚೂರಿಯಿಂದ ಎದೆ, ಹೊಟ್ಟೆಯ ಭಾಗಕ್ಕೆ ಇರಿಯಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿ ಧೀಕ್ಷಾ ಬೊಬ್ಬಿಡುತ್ತಾ ರಸ್ತೆಗೆ ಉರುಳಿದರೂ ಬಿಡದ ದುಷ್ಕರ್ಮಿ ಸುಶಾಂತ್ ಅಲ್ಲಿಯೂ…

Read More

UN NETWORKS ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರು ಹಾಗೂ ಉದ್ದಿಮೆ/ ವ್ಯಾಪಾರಸ್ಥರು ಅವರವರ ಮನೆ, ಪರಿಸರ, ಕಟ್ಟಡಗಳಿರುವ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕೆಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ತಿಳಿಸಿದ್ದಾರೆ. ಉಪಯೋಗವಿಲ್ಲದ ಡಬ್ಬ, ಟಿನ್, ಬಕೆಟ್, ಬಾಟಲುಗಳು, ಟಯರುಗಳಲ್ಲಿ ಎಳನೀರಿನ ಚಿಪ್ಪುಗಳಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕಾಗಿದೆ. ನೀರು ತುಂಬಿದ ಟ್ಯಾಂಕ್ ಗಳು, ಓವರ್ ಹೆಡ್ ಟ್ಯಾಂಕುಗಳನ್ನು ಮುಚ್ಚಿಡುವುದು ಮತ್ತು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕಿದೆ. ಹೊಟೇಲ್ ಉದ್ಯಮಿಗಳು ಗ್ರಾಹಕರಿಗೆ ಕುದಿಸಿ ಆರಿಸಿದ ಶುದ್ಧ ಕುಡಿಯುವ ನೀರು ಪೂರೈಸಬೇಕು. ಗ್ಲಾಸಿನ ತಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಹೊಟೇಲ್, ಬೇಕರಿ, ಅಂಗಡಿಗಳಲ್ಲಿ ತಾಜಾ ಹಾಗೂ ಶುಚಿಯಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದು , ನೊಣ ಸಂಪರ್ಕದಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಕಡ್ಡಾಯವಾಗಿ ಆಹಾರಪದಾರ್ಥಗಳನ್ನು ಮುಚ್ಚಿಟ್ಟು ವ್ಯಾಪಾರ ನಡೆಸಬೇಕು. ಗ್ರಾಹಕರಿಗೆ ಪ್ಲಾಸ್ಟಿಕ್ ಕೈಚೀಲಗಳು, ಪ್ಲಾಸ್ಟಿಕ್ ಲೋಟಗಳನ್ನು ನೀಡುವುದನ್ನು ನಿಲ್ಲಿಸಲು ಸೂಚಿಸಲಾಗಿದೆ. ರಾತ್ರಿ ನಿದ್ರಿಸುವಾಗ ಸೊಳ್ಳೆ ಪರದೆ…

Read More

UN NETWORKS ಮುಡಿಪು : ಮುಡಿಪು ಹೋಬಳಿಯಾದರೂ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾದರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಮುಡಿಪು ಗೋಪಾಲಕೃಷ್ಣ ದೇವಸ್ಥಾನದಿಂದ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಆಗಬಹುದಾದ ಖರ್ಚಿನ ರೂಪುರೇಷೆ ವೀಕ್ಷಿಸಿ ಅವರು ಮಾತನಾಡಿದರು.ಮುಡಿಪುವಿನಲ್ಲಿ ಜ್ಞಾನ ಮಂದಿರ, ಇತಿಹಾಸ ಪ್ರಸಿದ್ಧ ಚರ್ಚ್ ,ಕೈಗಾರಿಕಾ ವಲಯ ಇದ್ದು ಮಾದರಿ ರಸ್ತೆ, ಮಾದರಿ ಅಟೋ, ಟೆಂಪೋ, ಟ್ಯಾಕ್ಸಿ, ಲಾರಿ ಸ್ಟ್ಯಾಂಡ್, ಉತ್ತಮ ಬಸ್ ತಂಗುದಾಣ ನಿರ್ಮಿಸಿ ಮಾದರಿ ಜಂಕ್ಷನ್ ನಿರ್ಮಿಸಲಾಗುವುದು. ತೊಕ್ಕೊಟ್ಟಿನಿಂದ ಮುಡಿಪುವರೆಗೆ ಅತ್ಯಂತ ಮಾದರಿ ಹಾಗೂ ವೇಗದ ರಸ್ತೆ ನಿರ್ಮಾಣ ಯೋಜನೆಯಿದ್ದು, ತೊಕ್ಕೊಟ್ಟುವಿನಿಂದ ದೇರಳಕಟ್ಟೆವರೆಗೆ 10ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣಗೊಂಡಿದೆ. ತೊಕ್ಕೊಟ್ಟಿನಿಂದ ಕುತ್ತಾರ್ ರಸ್ತೆ ಅಗಲೀಕರಣಕ್ಕೆ 20ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ…

Read More

UN NETWORKS ಉಳ್ಳಾಲ : ಉಳ್ಳಾಲ ತೊಕ್ಕೊಟ್ಟು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವ ಪ್ಲಾಸ್ಟಿಕ್ ರಖಂ ಮಳಿಗೆಗೆ ಉಳ್ಳಾಲ ನಗರಸಭೆಯ ಆರೋಗ್ಯ ನಿರೀಕ್ಷಕರ ತಂಡ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿ ವ್ಯಾಪಾರಸ್ಥರಿಗೆ ಮಾರಾಟ ಮಾಡದಂತೆ ಎಚ್ಚರಿಕೆಯನ್ನು ನೀಡಿದೆ. ಉಳ್ಳಾಲದ ಮಾಸ್ತಿಕಟ್ಟೆ ಜಂಕ್ಷನ್ ಮತ್ತು ತೊಕ್ಕೊಟ್ಟುವಿನಲ್ಲಿರುವ ಎರಡು ಪ್ಲಾಸ್ಟಿಕ್ ಮಳಿಗೆಗಳಿಗೆ ದಾಳಿ ನಡೆಸಲಾಗಿದೆ. ದಿಢೀರ್ ದಾಳಿ ನಡೆಸಿ ನಿಷೇಧಿತ ಸುಮಾರು 50 ಕೆ.ಜಿ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮುಂದೆ ಮಾರಾಟ ಮಾಡದಂತೆ ಎಚ್ಚರಿಸಿರುವ ಅಧಿಕಾರಿಗಳು, ಮಾರಾಟ ಮಾಡುವುದು ಕಂಡುಬಂದಲ್ಲಿ ದಂಡ ವಿಧಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಅನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಳ್ಳಾಲ ನಗರಸಭೆ ಆರೋಗ್ಯ ನಿರೀಕ್ಷಕ ಜಯಶಂಕರ್ ಪ್ರಸಾದ್, ಶಾಜಿತ್, ರಾಜೇಶ್ ಹಾಗೂ ಕಿರಿಯ ಅಭಿಯಂತರರಾದ ತುಳಸೀದಾಸ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Read More

UN NETWORKS ಮಂಗಳೂರು : ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮಂಗಳೂರು ದಕ್ಷಿಣ ವಲಯ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರವು ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದ.ಕ.,ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಬ್ಯಾರಿ ಅವರು ಒಬ್ಬ ವಿದ್ಯಾರ್ಥಿಯಲ್ಲಿ ಯಾವ ಪ್ರತಿಭೆ ಇದೆ ಎಂದು ಗಮನಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವವುಳ್ಳದ್ದು. ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಶೈಕ್ಷಣಿಕವಾಗಿ ಕಾರ್ಯ ಚಟುವಟಿಕೆ ಮಾಡುವುದಲ್ಲದೇ, ಸಮಾಜಮುಖಿಯಾಗಿ ರೋಗಿಗಳಿಗೆ, ಆಸಕ್ತರಿಗೆ ದಾನ, ಧರ್ಮ ಮಾಡುವ ಮುಖೇನ ದೈವತ್ವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ವಿಷ್ಣು ಹೆಬ್ಬಾರ್ ಅವರು ಶಾಲೆಯಲ್ಲಿ ಶಿಸ್ತು, ಸಮಾಜದೊಂದಿಗೆ ಬಾಂಧವ್ಯ, ವಿದ್ಯಾರ್ಥಿಗಳ ರಕ್ಷಣೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ದೈಹಿಕ…

Read More

UN NETWORKS ಉಳ್ಳಾಲ: ಒಂದು ವಾರದಲ್ಲಿ ಸಮುದ್ರ ತೀರದಲ್ಲಿರುವ ಟ್ಯಾಂಕ್ ತೆರವುಗೊಳಿಸದೇ ಇದ್ದಲ್ಲಿ ಮೊಗವೀರಪಟ್ನದ ಯುವಕರೆಲ್ಲರೂ ಒಗ್ಗೂಡಿ ಉಗ್ರ ಹೋರಾಟದ ಜತೆಗೆ, ತಾವೇ ಟ್ಯಾಂಕ್ ತೆರವುಗೊಳಿಸುತ್ತೇವೆ ಎಂದು ಉಳ್ಳಾಲ ಮೊಗವೀರಪಟ್ನದ ನಾಗರಿಕರು ಉಳ್ಳಾಲ ಸಮುದ್ರ ತೀರದಲ್ಲಿ ಉಳ್ಳಾಲ ನಗರಸಭೆಯಿಂದ ನಿರ್ಮಿಸಲಾಗಿರುವ ತ್ಯಾಜ್ಯ ಶೇಖರಣಾ ಟ್ಯಾಂಕ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳ್ಳಾಲವೆಂದಲ್ಲಿ ಧಾರ್ಮಿಕ ಸ್ಥಳಗಳಿರುವ ಪ್ರದೇಶ. ಪ್ರವಾಸಿಗರು ಬರುವಂತಹ ಜಾಗ ಉಳ್ಳಾಲ ಸಮುದ್ರ ತೀರ. ಆದರೆ ಅದೇ ಭಾಗದಲ್ಲಿ ಅಕ್ರಮವಾಗಿ ಟ್ಯಾಂಕ್ ನಿರ್ಮಿಸುವ ಕಾಮಗಾರಿ ನಡೆಸಲಾಗಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಕ್ರಮದ ಕುರಿತು ಒಪ್ಪಿಕೊಂಡಿದ್ದು, ಸ್ಥಳಾಂತರಗೊಳಿಸುವ ಕುರಿತು ತಿಳಿಸಿದ್ದಾರೆ. ಆದರೆ ಈವರೆಗೂ ಅದು ಈಡೇರಿಲ್ಲ. ಜೊತೆಗೆ ಅದೇ ಸ್ಥಳದಲ್ಲಿ ಕಸದ ವಿಲೇವಾರಿ ಮಾಡಲು ವಾಹನ ನಿಲ್ಲುತ್ತದೆ. ಪ್ರದೇಶವಿಡೀ ಕಸದ ರಾಶಿಯೇ ತುಂಬಿರುತ್ತದೆ. ಉಳ್ಳಾಲ ಪ್ರದೇಶದ ವಸತಿ ಕಟ್ಟಡ, ಅಂಗಡಿಗಳ , ಮನೆಗಳಿಂದ ಬರುವ ಶೌಚಾಲಯ, ಸ್ನಾನಗೃಹ ತ್ಯಾಜ್ಯ ನೀರನ್ನು ಟ್ಯಾಂಕಿನಲ್ಲಿ ಶೇಖರಿಸಿಡಲಾಗುತ್ತಿದೆ. ಮಳೆಗಾಲದಲ್ಲಿ ಟ್ಯಾಂಕ್ ತುಂಬಿ ತ್ಯಾಜ್ಯ ನೀರಿಡೀ ರಸ್ತೆಯಲ್ಲಿ,…

Read More

UN NETWORKSಇರಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಇದರ ಮುಡಿಪು ವಲಯದ ಇರಾ ಕಾರ್ಯಕ್ಷೇತ್ರದ ಸಿಂಧೂರ ಜ್ಞಾನವಿಕಾಸ ಕೇಂದ್ರವನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಅವರು ಇರಾದ ಅಂಬೇಡ್ಕರ್ ಭವನ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಶಿಕ್ಷಕಿ ನೀತಾ ಕಿರನ್‍ದಾಸ್ ಸಮಾಜ ಹಾಗೂ ಸಂಸ್ಕೃತಿ ಇವುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ನವೀನ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ,ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ನಳಿನಾಕ್ಷಿ ಶೆಟ್ಟಿ, ಮೇಲ್ವಿಚಾರಕಿ ಮೋಹಿನಿ, ಒಕ್ಕೂಟ ಅಧ್ಯಕ್ಷ ಜಯಪ್ರಕಾಶ್ ,ಭಾಸ್ಕರ್, ಅಂಬೇಡ್ಕರ್ ಭವನದ ಆಡಳಿತ ಮಂಡಳಿ ಸದಸ್ಯರಾದ ಚಂದಪ್ಪ ಹಾಗೂ ಪದಾಧಿಕಾರಿ ರಾಘವ ಹಾಗೂ ಮನೋಜ್ ಸೇವಾ ಪ್ರತಿನಿಧಿ ಕವಿತಾ ಉಪಸ್ಥಿತರಿದ್ದರು.

Read More