UN NETWORKS ಉಳ್ಳಾಲ : ಬಗಂಬಿಲದಲ್ಲಿ ಚೂರಿ ಇರಿತಕ್ಕೊಳಗಾಗಿರುವ ದೀಕ್ಷಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸೋಮ ವಾರ ಹೊರಗಿನವರ ಮಾತಿಗೆ ಸಣ್ಣ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾಳೆ. ಆರೋಪಿ ಸುಶಾಂತ್ ಚೇತರಿಕೆಯಾಗಿದ್ದು, ಆತನ ಮಾನಸಿಕ ಸ್ಥಿತಿ ಅನುಸರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ತುರ್ತು ನಿಗಾದಲ್ಲಿರುವ ದೀಕ್ಷಾಳ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರ ತಂಡ ವಿಶೇಷ ನಿಗಾ ಇರಿಸಿದೆ. ಸಿಟಿ ಸ್ಕ್ಯಾನಿಂಗ್ ನಡೆಸಿದ್ದು, ಹೆಚ್ಚಿನ ತೊಂದರೆಗಳು ಕಂಡು ಬಂದಿಲ್ಲ. ಕಿಡ್ನಿ ಬಳಿ ಹೆಪ್ಪುಗಟ್ಟಿರುವ ರಕ್ತವನ್ನು ಹೊರತೆಗೆಯುವ ಕಾರ್ಯ ನಡೆದಿದೆ. ಉಳಿದಂತೆ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಮಾನಸಿಕ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆಆರೋಪಿ ಸುಶಾಂತ್ ಚೇತರಿಸುತ್ತಿದ್ದು, ಆರೋಗ್ಯ ಸುಧಾರಿಸಿದೆ. 2 ದಿನಗಳಲ್ಲಿ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಪೊಲೀಸರ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶಾಂತ್‌ನ ಜತೆಯಲ್ಲಿ ತಾಯಿ ಇದ್ದಾರೆ. ರಕ್ಷಿಸಿದ ದಾದಿಗೆ ನಿಟ್ಟೆ ವಿವಿಯಿಂದ ಗೌರವಈ ನಡುವೆ ದೀಕ್ಷಾಳ ರಕ್ಷಣೆಗೆ ಮುಂದಾಗಿದ್ದ ದಾದಿಯ ಧೈರ್ಯ…
Author: UllalaVani
UN NETWORKS ಉಳ್ಳಾಲ: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಸರಕಾರದಿಂದ ವಿವಿಧ ಯೋಜನೆಗಳಿದ್ದು, ಇದಕ್ಕೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಳಜಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯವಾಗಿದ್ದು, ನೂತನವಾಗಿ ಆರಂಭಗೊಂಡ ಕಣಚೂರು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಜನವನ್ನು ಈ ಪ್ರದೇಶದ ಜನರು ಪಡೆದುಕೊಳ್ಳಬೇಕು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇದರ ವತಿಯಿಂದ ತಲಪಾಡಿ ಗ್ರಾಮದ ಪಿಲಿಕೂರು ಬಳಿ ನೂತನವಾಗಿ ಸ್ಥಾಪಿಸಿದ ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಚಾಲನೆ ಇದರ ಪ್ರಯುಕ್ತ ಸಮುದಾಯ ಆರೋಗ್ಯ ವಿಭಾಗದ ಆಶ್ರಯ ದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಬಂಡವಾಳ ಹೂಡಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವವರು ಕಡಿಮೆ ಅದರಲ್ಲೂ ಆರೋಗ್ಯಸೇವೆಯನ್ನು ಜನರಿಗೆ ಉಚಿತವಾಗಿ ನೀಡುವ ಕಾರ್ಯ ಕಳೆದ…
UN NETWORKS ದೇರಳಕಟ್ಟೆ : ಭಗ್ನಪ್ರೇಮಿಯಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಗಂಬಿಲದ ನಿವಾಸಿ ಕಾರ್ಕಳ ಖಾಸಗಿ ಕಾಲೇಜು ವಿದ್ಯಾರ್ಥಿನಿ ದೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ದೀಕ್ಷಾ ಕಳೆದ ಎರಡು ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಮಡುಬರುತ್ತಿದ್ದು ಭಾನುವಾರ ಬೆಳಗ್ಗೆ ಆಕೆ ಕೈಕಾಲುಗಳನ್ನು ಅಲ್ಲಾಡಿಸಿದ್ದಾಳೆ ಎಂದು ಆಸ್ಪತ್ರೆಯಲ್ಲಿದ್ದ ದೀಕ್ಷಾ ಸಂಬಂಧಿಕರು ತಿಳಿಸಿದ್ದಾರೆ. ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ತಾನೂ ಕತ್ತುಸೀಳಿಕೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಆರೋಪಿ ಯುವಕನನ್ನು ಅದೇ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿರಿಸಿ ಪೊಲೀಸ್ ಬಂದೋಬಸ್ತಿನಲ್ಲಿ ಚಿಕಿತ್ಸೆ ಮುಂದುವರಿದಿದ್ದು ಗುಣಮುಖನಾದರೆ ಶೀಘ್ರವೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ. ವಿದ್ಯಾರ್ಥಿನಿಗೆ ಭಾನವಾರ ಎರಡು ಯುನಿಟ್ ರಕ್ತ ನೀಡಲಾಗಿದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 11ರಿಂದ 13ಹಿಮೋಗ್ಲೋಬಿನ್ ಬೇಕಿದ್ದರೂ ದೀಕ್ಷಾಳಲ್ಲಿ ಈಗ 9ಅಂಶವಿದ್ದು ಹಿಮೋಗ್ಲೋಬಿನ್ ಅಂಶದಲ್ಲಿ ಸ್ವಲ್ಪ ಇಳಿಮುಖವಾಗಿದೆ. ಆಸ್ಪತ್ರೆಯ ತಜ್ಞ ಏಳು ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ. ಶಕ್ತಿನಗರದ ರಾಮಕೃಷ್ಣ ಮಿಷನ್ ಸಮೀಪದ ನಿವಾಸಿ…
UN NETWORKS ಕೊಣಾಜೆ : ಧರ್ಮಗಳು ಜಲವಿದೆ, ಆದರೆ ಜನರಿಗೆ ಕುಡಿಯಲು ನೀರು ಒದಗಿಸುವುದು ಮಹಾಧರ್ಮ. ಜಮಾಅತೇ ಇಸ್ಲಾಮೀ ಹಿಂದ್ ಅತ್ಯುತ್ತಮ ಸಂಘಟನೆಯಾಗಿದ್ದು ಸಂಘಟನೆಯವರಾಡುವ ಮಾತು ಕೇವಲ ತೋರ್ಪಡಿಕೆಯಲ್ಲ, ಒಳ್ಳೆಯ ಮನಸ್ಸು ಇದೆ ಎಂದು ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು. ಜಮಾಅತೇ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕ ಹಾಗೂ ಕೊಣಾಜೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೊಣಾಜೆಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಕೊಳವೆ ಬಾವಿ ಸಾರ್ವಜನಿಕರಿಗೆ ಸಮರ್ಪಿಸಿ ಮಾತನಾಡಿದರು.ಕೊಣಾಜೆ ಗ್ರಾಮಸ್ಥರು ಎಂದಿಗೂ ಜಾತಿ, ಧರ್ಮಕ್ಕೆ ಚ್ಯುತಿ ಬರದಂತೆ ಜೀವನ ಸಾಗಿಸಿಕೊಂಡು ಬಂದಿದ್ದು ಇಲ್ಲಿ ಜೀವಿಸುವವರು ಭಾಗ್ಯವಂತರು. ಅಭಿವೃದ್ಧಿಯಲ್ಲಿ ಪಕ್ಷ, ಬೇಧ ಮರೆತಿರವ ಕಾರಣ ಗ್ರಾಮ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆ ನೀಡಿರುವ ನೀರು ಹತ್ತು ಮನೆಗಳಿಗೆ ಉಪಯೋಗ ಆಗಬೇಕಿದ್ದು , ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು. ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮಹಮ್ಮದ್ ಕುಂಞಿ ಮಾತನಾಡಿ, ಕೊಳವೆ ಬಾವಿಯಲ್ಲಿ ಉತ್ತಮ ನೀರು ಸಿಕ್ಕಿರುವುದು ದೇವನ ಅನುಗ್ರಹ.…
UN NETWORKS ಉಳ್ಳಾಲ : ಲೋಕಸಭಾ ಚುನಾವಣೆ ಸಂದರ್ಭ ಮಂಗಳೂರು ಕ್ಷೇತ್ರದಲ್ಲಿ ಚುನಾವಣಾ ಕಿಚ್ಚು ಹಚ್ಚಲಾಗಿತ್ತು. ಕಳೆದ ಬಾರಿ ಜಿಲ್ಲೆಯಲ್ಲಿ ಶಾಸಕರು ಇರಲಿಲ್ಲ, ಈ ಬಾರಿ ಏಳು ಶಾಸಕರಿದ್ದು ನಾವೆಲ್ಲಾ ಸೇರಿ ಉಳ್ಳಾಲವನ್ನು ಹೆಚ್ಚು ಗಮನ ಹರಿಸುತ್ತೇವೆ, ಐದು ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೆನಪಿಡುವಂತಹ ಯೋಜನೆ ತರಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು. ಮಂಗಳೂರು ಕ್ಷೇತ್ರ ಬಿಜೆಪಿ ವತಿಯಿಂದ ಭಾನುವಾರ ಅಡ್ಕ ಶ್ರೀ ಭಗವತೀ ಸಭಾ ಮಂದಿರದಲ್ಲಿ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಕಳೆದ 28 ವರ್ಷಗಳಿಂದ ಬಿಜೆಪಿ ಸಂಸದನ ಸ್ಥಾನ ಉಳಿಸಿಕೊಂಡು ಬಂದಿದ್ದು ಮಂಗಳೂರು ಕ್ಷೇತ್ರ ಮಾತ್ರ. ಮೋದಿ 2014ರಲ್ಲಿ ಮೋದಿ ಪ್ರಧಾನಿಯಾದಾಗ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬಗ್ಗೆ ಹೇಳಿದ್ದರು. ಇಂದು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಪಡೆಯಲೂ ಅನರ್ಹವಾಗಿದ್ದು ಮೋದಿಯವರ ಮಾತು ನಿಜವಾಗಿದೆ ಎಂದು ಅಭಿಪ್ರಾಯಪಟ್ಟರು.ವಿದಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಇಂದು ಬಿಜೆಪಿ ಹಳ್ಳಿಗಳಲ್ಲೂ ಬಲಿಷ್ಠಗೊಂಡು ದೇಶದಲ್ಲಿ ಅಧಿಕಾರಕ್ಕೆ ಬರಲು ರಾಷ್ಟ್ರಕ್ಕಾಗಿ…
UN NETWORKS ಉಳ್ಳಾಲ : ಉಳ್ಳಾಲ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಶನಿವಾರ ತೊಕ್ಕೊಟ್ಟಿನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯು.ಕೆ.ಯೂಸುಫ್ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅನೀಸ್ ಇಂಜಿನಿಯರ್, ಕಾರ್ಯದರ್ಶಿಯಾಗಿ ಯು.ಎಂ.ಮನ್ಸೂರ್ ಅಹ್ಮದ್, ಜತೆ ಕಾರ್ಯದರ್ಶಿಯಾಗಿ ಸೆಬಾಸ್ಟಿಯನ್ ಡಿಸೋಜ ಹಾಗೂ ಕೋಶಾಧಿಕಾರಿಯಾಗಿ ಯೂಸುಫ್ ಉಳ್ಳಾಲ್ ಆಯ್ಕೆಯಾದರು.
UN NETWORKS ಕೊಣಾಜೆ : ಸ್ವಚ್ಛತೆ, ಪ್ರಕೃತಿ ರಕ್ಷಣೆಗಾಗಿ ರಾಜ್ಯ, ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಾದರೆ ಸಂಘ, ಸಂಸ್ಥೆಗಳ ಸಹಕಾರ ಅಗತ್ಯ. ಈ ಬಗ್ಗೆ ಭಾಷಣ ಮಾಡಿದರೆ ಸಾಲದು, ನಿರಂತರ ಅಳವಡಿಸಿಕೊಳ್ಳಬೇಕು ಎಂದು ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು. ಮಂಗಳಾ ಗ್ರಾಮೀಣ ಯುವಕ ಸಂಘ, ಕೊಣಾಜೆ ಗ್ರಾಮ ಪಂಚಾಯಿತಿ ಹಾಗೂ ಯೂತ್ ಫ್ರೆಂಡ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಅಧ್ಯಕ್ಷತೆ ವಹಿಸಿದ್ದರು. ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಮುತ್ತು ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸವಿತಾ, ಮಂಗಳಾ ಗ್ರಾಮೀಣ ಯುವಕ ಸಂಘದ ಸ್ಥಾಪಕಾಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಇಕ್ಬಾಲ್ ಕೊಣಾಜೆ ಇನ್ನಿತರರು ಉಪಸ್ಥಿತರಿದ್ದರು.ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎ.ಕೆ. ವಂದಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಅಚ್ಚುತ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
UN NETWORKS ದೇರಳಕಟ್ಟೆ : ದುಷ್ಕರ್ಮಿ ಸುಶಾಂತ್ ಎಂಬವನಿಂದ ಹಲವು ಬಾರಿ ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿನಿ ಧೀಕ್ಷಾ ಚಿಂತಾಜನಕವಾಗಿದೆ. 48 ರಿಂದ 72 ಗಂಟೆಯವರೆಗೂ ತೀವ್ರ ನಿಗಾ ಘಟಕದಲ್ಲಿರಿಸಬೇಕಿದೆ. ಹೊಲಿಗೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಿದ ಗಾಯಗಳಲ್ಲಿ ಯಾವುದೇ ರೀತಿಯ ಸೋಂಕುಗಳಾಗದೇ ಇದ್ದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಕ್ಷೇಮ ಆಸ್ಪತ್ರೆಯ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ.ನರೇಶ್ ರೈ ತಿಳಿಸಿದ್ದಾರೆ. ಕುತ್ತಿಗೆಯ ಭಾಗದಲ್ಲಿ ಇರಿದ ಗಾಯ ಶ್ವಾಸನಾಳಕ್ಕೆ ತಗುಲಿರುವುದು ಗಂಭೀರ ಗಾಯ, ಎದೆ, ಹೊಟ್ಟೆ, ಎಡಗೈಯ ತೋಳಿನ ಭಾಗದಲ್ಲಿ ಚುಚ್ಚಿದ ಗಾಯಗಳಾಗಿವೆ. ಆಸ್ಪತ್ರೆಗೆ ಕರೆತರುವ ಸಂದರ್ಭ ತೀವ್ರ ರಕ್ತಸ್ರಾವ ಉಂಟಾಗಿ, ಹೆಮರೇಜಿಂಗ್ ಶಾಕ್ ಕೂಡಾ ಆಗಿತ್ತು. ಕೂಡಲೇ ಆಪರೇಷನ್ ಥಿಯೇಟರಿನಲ್ಲಿ ವೈದ್ಯರ ತಂಡ ಸೇರಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಜನರಲ್ ಸರ್ಜನ್ ವಿಭಾಗದವರು ಶ್ವಾಸನಾಳಕ್ಕೆ ಹೊಲಿಗೆ , ಎಡಗೈಯ ತೋಳಿನ ಸೂಕ್ಷ್ಮವಾದ ರಕ್ತನಾಳದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯನ್ನು ಇಎನ್ ಟಿ ವಿಭಾಗ ನಡೆಸಿದೆ, ಎದಯ ಭಾಗದಲ್ಲಾದ ಗಾಯವನ್ನು ಹೃದಯ ವಿಭಾಗ ಹಾಗೂ ಹೊಟ್ಟೆಯ ಸಣ್ಣ ಕರುಳು…
UN NETWORKS ಉಳ್ಳಾಲ : ಬಯೋ ಪ್ಲಾಸ್ಟಿಕ್ ಬಳಕೆ ಹೆಚ್ಚಿಸಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕು. ಹಾಗೆಯೇ ಗಿಡಗಳ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಗಳು ನಡೆಯಬೇಕು ಎಂದು ಉಳ್ಳಾಲದ ಭಾರತ್ ಅನುದಾನಿತ ಪ್ರೌಢಶಾಲಾ ಶಿಕ್ಷಕಿ ಪ್ರಜ್ಞಾ ಉಳ್ಳಾಲ್ ಹೇಳಿದರು. ಉಳ್ಳಾಲದ ಕೆ. ಪಾಂಡ್ಯರಾಜ ಬಲ್ಲಾಳ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರಿಸರ ದಿನ ಮತ್ತು ವನ ಮಹೋತ್ಸವ ಜಂಟಿ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್ ಮಾತನಾಡಿ ಮಿತಿಮೀರಿದ ಪರಿಸರ ನಾಶ ಮತ್ತು ಪ್ರಸ್ತುತ ನಾವು ಅನುಭವಿಸುತ್ತಿರುವ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡು ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮುನ್ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪರಿಸರದ ಕಾಳಜಿಯ ಬಗ್ಗೆ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದರು. ಪದವಿಪೂರ್ವ ಮತ್ತು ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಬಳಿಕ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ನೈ ಝಾ ಸ್ವಾಗತಿಸಿದರು. ಷಹಲ ಕಾರ್ಯಕ್ರಮ ನಿರೂಪಿಸಿದರು. ನಸೀಫ್ ವಂದಿಸಿದರು.ಉಪನ್ಯಾಸಕಿ ನಿಶ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.…
UN NETWORKS ತೊಕ್ಕೊಟ್ಟು : ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ಪೆರ್ಮನ್ನೂರಿನ ಪ್ರಸ್ತುತ 2019-20ನೇ ಸಾಲಿನ ಸಂಸತ್ತಿನ ಉದ್ಘಾಟನೆಯು ನಡೆಯಿತು. ಸಮಾರಂಭದಲ್ಲಿ ಶಾಲಾ ಸಂಚಾಲಕ ಡಾ| ಫಾ| ಜೆ. ಬಿ ಸಲ್ಡಾನ, ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ, ಪ್ರಭಾರ ಶಿಕ್ಷಕಿ ಸಿಸ್ಟರ್ ಪ್ಯಾಟ್ಸಿ ಹಾಗೂ ಸಿಸ್ಟರ್ ಇವೆಂಜಲಿಸ್ತಾ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕನಾಗಿ ನಿಹಾಲ್ ಡಿ’ಸೋಜಾ, ಉಪನಾಯಕಿಯಾಗಿ ಆ್ಯಶಲ್ ಡಿ’ಸೋಜಾ, ವಿರೋಧ ಪಕ್ಷದ ನಾಯಕಿಯಾಗಿ ಮೌನ ಹಾಗೂ ಎಲ್ಲಾ ನೂತನ ಸಚಿವರಿಗೆ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾರವರಿಂದ ಪ್ರಮಾಣ ವಚನ ಬೋಧಿಸಿದರು.ಅಧ್ಯಕ್ಷ ಡಾ| ಫಾ| ಜೆ. ಬಿ ಸಲ್ಡಾನ ಎಲ್ಲಾ ಮಂತ್ರಿಗಳಿಗೆ ಮಂತ್ರಿ ಪದವಿ ನೀಡಿ, ಅವರವರ ಜವಬ್ದಾರಿಯ ಕುರಿತು ತಿಳಿಸಿದರು.

