UN NETWORKS ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ಮತ್ತು ಎನ್ ಆರ್ ತಾಲ್ಲೂಕಿನ ಬಾಳೂರು, ಜಾವಳೆ, ಮಾಗುಂಡಿ, ಬಾಳೆಹೊನ್ನೂರು, ಮಲೆಮನೆ, ಬಣಕಲ್, ಕೊಟ್ಟಿಗೆಹಾರ ಮುಂತಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ಪ್ರವಾಹದಿಂದಾಗಿ ಧ್ವಂಸಗೊಂಡಿರುವ ಮನೆ, ಮುಳುಗಡೆಯಾಗಿರುವ ಮಸೀದಿ, ದೇವಸ್ಥಾನ ಮತ್ತು ನೆರೆ ಸಂತ್ರಸ್ತರು ತಂಗಿರುವ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಿಯೋಗವು ಎಲ್ಲಾ ಸಂತ್ರಸ್ತರಿಗೆ ಸಾಂತ್ವನವನ್ನು ಹೇಳಿತು. ಅಧಿಕಾರಿಗಳೊಂದಿಗೆ ಪರಿಹಾರ ಕಾರ್ಯಚಟುವಟಿಕೆ, ಮನೆಗಳ ಪುನರ್ ನಿರ್ಮಾಣ ಜೀವ ಮತ್ತು ಬೆಳೆ ಹಾನಿ ಪರಿಹಾರದ ಬಗ್ಗೆ ಸಮಾಲೋಚನೆ ನಡೆಸಿ ಸರ್ಕಾರದ ಪರಿಹಾರಗಳು ಶೀಘ್ರವಾಗಿ ಸಂತ್ರಸ್ತರ ಕೈ ಸೇರಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಮಾಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಹಾಬ್, ಬಾಳೆಹೊನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹನೀಫ್, ಸಹಾಯಕ ಕಮಿಷನರ್, ತಹಶೀಲ್ದಾರರು, ಪಿಡಿಒಗಳು ಪೂರಕ ಸ್ಪಂದನೆಯನ್ನು ನೀಡಿದರು ಹಾಗೂ ಪಾಪ್ಯುಲರ್ ಫ್ರಂಟ್ ಮತ್ತು ಎಸ್ಡಿಪಿಐ ಪಕ್ಷದ ಕಾರ್ಯವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಂತರ ಪ್ರವಾಹದ ಸಂದರ್ಭದಲ್ಲಿ ತಕ್ಷಣ ಕಾರ್ಯಾಚರಣೆ…
Author: UllalaVani
UN NETWORKS ಉಚ್ಚಿಲಗುಡ್ಡೆ ಶಾಲೆಉಳ್ಳಾಲ : ಸೋಮೇಶ್ವರ ಪುರಸಭೆ ವ್ಯಾಪ್ತಿಯ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಶಾಲೆಯಲ್ಲಿ ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಧ್ವಜಾರೋಹಣಗೈದರು. ಈ ವೇಳೆ ಪುರಸಭೆ ಸದಸ್ಯ ಇಸ್ಮಾಯಿಲ್ ಉಪಸ್ಥಿತರಿದ್ದರು. ಸಂಕೊಳಿಗೆ ಗ್ರಂಥಾಲಯಸೋಮೇಶ್ವರ ಪುರಸಭೆಯ ಉಚ್ಚಿಲ ಸಂಕೊಳಿಗೆಯ ಪುರಸಭೆ ಗ್ರಂಥಾಲಯದಲ್ಲಿ ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಧ್ವಜಾರೋಹಣಗೈದರು. ಈ ವೇಳೆ ಉಪಾಧ್ಯಕ್ಷೆ ಸುಶೀಲಾ ನಾಯಕ್, ಪಂಚಾಯಿತಿ ಸದಸ್ಯರಾದ ಸಾವಿತ್ರಿ ಗಟ್ಟಿ, ಲೋಲಾಕ್ಷಿ, ರಮಣಿ , ವೀಣಾ, ಸುಮತಿ, ರಿಕ್ಷಾ ಚಾಲಕರು, ಅಂಗನವಾಡಿ ಶಿಕ್ಷಕಿ ಪುಷ್ಪಾ, ಮತ್ತಿತರರು ಉಪಸ್ಥಿತರಿದ್ದರು. ಸೋಮೇಶ್ವರ ಪುರಸಭೆ ಕಚೇರಿ ಸೋಮೇಶ್ವರ ಪುರಸಭಾ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಧ್ವಜಾರೋಹಣಗೈದರು. ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಉಪಾಧ್ಯಕ್ಷೆ ಸುಶೀಲಾ ನಾಯಕ್, ತಾ.ಪಂ ಸದಸ್ಯ ರವಿಶಂಕರ್ ಹಾಗೂ ಎಲ್ಲಾ ಸದಸ್ಯರು, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. ಅವಿನಾಶ್ ಮಹಾದೇವ ಭಜನಾ ಮಂದಿರತಲಪಾಡಿಯ ದೇವಿನಗರದ ಅವಿನಾಶ್ ಮಹಾದೇವ ಭಜನಾ ಮಂದಿರದಲ್ಲಿ ಸ್ಥಳೀಯರಾದ ಮಂಜುನಾಥ್…
UN NETWORKS ಕೊಣಾಜೆ : ಮಂಗಳ ಗ್ರಾಮೀಣ ಯುವಕ ಸಂಘ ವತಿಯಿಂದ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು.ಶ್ರೀ ರವೀಂದ್ರ ರೈ ಹರೇಕಳ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಹಾಜಿ ಇಬ್ರಾಹಿಂ ಕೋಡಿಜಾಲ್ ಶುಭ ಕೋರಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಪಂಚಾಯತ್ ಸದಸ್ಯರಾದ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಯುವಕ ಸಂಘದ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಬ್ದುಲ್ ನಾಸಿರ್ ಕೆಕೆ, ಅಚ್ಚುತಾ ಗಟ್ಟಿ, ದಯಾನಂದ ಗಟ್ಟಿ, ಹಬೀಬ್, ಅಶ್ರಫ್, ಹಸನ್ ಕುಂಞಿ ಹಾಜಿ, ಹಮೀದ್ ಕಂಗು, ಹಿತಿಲು ಮಹಮ್ಮದ್ ಹಾಜಿ, ಕೆ ಐ ಅಮೀರ್, ಲತೀಫ್, ಇಬ್ರಾಹಿಂ ಕೆಎಂ, ಜಿಪಿ ಖಾದರ್, ಅಮೀರ್, ಶರೀಫ್, ಅಬ್ದುಲ್ ಖಾದರ್, ಅಂದು, ಜೆಪಿ ಇಬ್ರಾಹಿಂ, ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿ, ಪುಟಾಣಿ ಮಕ್ಕಳು, ಊರಿನ ಅನೇಕ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು. ಕೆಎಂ ಅಬ್ದುಲ್ ರಹಿಮಾನ್ ಸ್ವಾಗತಿಸಿದರು, ನಾಸಿರ್ ಕೆಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
UN NETWORKS ಉಳ್ಳಾಲ : ಗ್ರಾಮೋತ್ಸವ ಇಂಡಿಯಾ ಫೌಂಡೇಶನ್, ಶ್ರೀ ಸ್ವಾಮಿ ಮಾತೃಮಂಡಳಿ, ಹೊಲಿಗೆ ತರಬೇತಿ ಕೇಂದ್ರ ಹಾಗೂ ಸ್ತ್ರೀ ಶಕ್ತಿ ಗುಂಪು ಸೆಕೆಂಡ್ ಕೊಲ್ಯ ಇವರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಮಾತೃಮಂಡಳಿಯ ಅಧ್ಯಕ್ಷೆ ಜಾನಕಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕ ಸೇವಾ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಕುಂಪಲ ವಹಿಸಿ ಮಾತನಾಡಿ ನಮ್ಮ ತುಳುನಾಡಿನ ಸಂಸ್ಕೃತಿ ಆಚರಣೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆ ಇದನ್ನು ಸಂರಕ್ಷಿಸುವ ಕೆಲಸ ನಾವು ಮಾಡಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಗ್ರಾಮೋತ್ಸವ ಇಂಡಿಯಾ ಫೌಂಡೇಶನ್ ಕಾರ್ಯಕ್ರಮ ಸಂಯೋಜಕ ಜೀವನ್, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಗುಲಾಬಿ, ಗುಣವತಿ ಆಚಾರ್, ಸುಲೋಚನಿ ಟೀಚರ್, ಪತಂಜಲಿ ಯೋಗ ಶಿಕ್ಷಕ ಸತ್ಯೋಜಾತ ಉಪಸ್ಥಿತರಿದ್ದರು. ದಿಶಾ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ ಸ್ವಾಗತಿಸಿದರು. ಸೌಮ್ಯ ಯೋಗೀಶ್ ವಂದಿಸಿದರು.
UN NETWORKS ಉಳ್ಳಾಲ : ಕೊಡ್ಲಮೊಗರು ಶ್ರೀ ವಾಣೀ ವಿಜಯ ಎ.ಯು.ಪಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್ ಬುಲ್‍ನ ಸಿಕ್ಸರ್ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ವಹಿಸಿದ್ದರು. ಮಂಜೇಶ್ವರದ ಕ್ಷೇತ್ರ ಶಿಕ್ಷಣಾಧಿಕಾರಿ ದಿನೇಶ್ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಅನುಸೂಯ, ಎ.ಡಿ. ಗೈಡ್ ಕುಮಾರಿ, ಡಿ.ಟಿ.ಸಿ ಆಶಾ, ಆದಿನಾರಾಯಣ ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2018ನೇ ಸಾಲಿನಲ್ಲಿ ಹೀರಕ್ ಪದಕ ಮತ್ತು ಗೋ ಏರೋ ಪರೀಕ್ಷೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸುಮಾರು 160 ಶಿಬಿರಾರ್ಥಿಗಳು 3 ಶಿಕ್ಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಸರಳ ಬಿ. ಸ್ವಾಗತಿಸಿದರು. ಜ್ಯೋತಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶಿವಪ್ರಸಾದ್ ವಂದಿಸಿದರು.
UN NETWORKS ಉಳ್ಳಾಲ : ಬಿ.ಜೆ.ಪಿ. ಮಂಗಳೂರು ವಿಧಾನ ಸಭಾ ಕ್ಷೇತ್ರದ ಬೂತ್ ನಂ 42ರ ಗಂಡಿ ವಾರ್ಡ್‍ನಲ್ಲಿ ಚಂದ್ರಹಾಸ್ ಪಂಡಿತಹೌಸ್ ನೇತೃತ್ವದಲ್ಲಿ ಬಿ.ಜೆ.ಪಿ. ಸದಸ್ಯತ್ವ ಅಭಿಯಾನ ನಡೆಯಿತು. ರಕ್ಷಾ ಬಂಧನವನ್ನು ಅಚರಿಸಿ ,ಬಿ.ಜೆ.ಪಿ. ಸದಸ್ಯತ್ವ ನೋಂದಾವಣೆಯನ್ನು ಸಿಹಿ ತಿಂಡಿ ಮತ್ತು ಶ್ರೀಗಂಧದ ಗಿಡ ನೀಡುವ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಬೊಳಿಯರ್, ಸದಸ್ಯತ್ವ ಅಭಿಯಾನದ ಸಂಚಾಲಕರಾದ ಮೋಹನ್ ರಾಜ್ ಕೆ.ಅರ್., ಜಿಲ್ಲಾ ಪ್ರಮುಖ್ ಚಂದ್ರಶೇಖರ ಉಚ್ಚಿಲ್, ಪರಿಸರ ಪ್ರೇಮಿ ಮಾದವ ಉಳ್ಳಾಲ್, ಚಂದ್ರಹಾಸ್ ಗುಂಡ್ಯ, ರವಿ ಸೋವುರ್, ಪುರುಷೋತ್ತಮ ಕಲ್ಲಾಪು, ರಜನೀಶ್ ನ್ಯಾಕ್, ದಿಕ್ಷೀತ್ ಪೂಜಾರಿ, ಗುರು ಪ್ರಸಾದ್ ಭಂಡಾರಿ,ಅನಂದಿ ಹಾಗೂ ವಿಜಯ ಗೆಮ್ಸ್ ಟೀಮ್ ಸದಸ್ಯರು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.
UN NETWORKS ಕೊಣಾಜೆ : ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಯಾವತ್ತಿಗೂ ಮರೆಯದೆ ಅವರ ದೇಶಪ್ರೇಮ, ತ್ಯಾಗಮಯ ಹೋರಾಟದ ಬದುಕನ್ನು ಇಂದಿನ ಯುವ ಸಮುದಾಯ ಅರ್ಥಮಾಡಿಕೊಂಡು ಮುನ್ನಡೆಯಬೇಕು ಎಂದು ಕರ್ನಲ್ ಎ.ಜೆ.ಭಂಡಾರಿ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವಕರು ರಾಷ್ಟ್ರಭಕ್ತಿಯೊಂದಿಗೆ ಸೇನೆ ಸೇರಲು ಮುಂದಾಗಬೇಕು. ಕರ್ನಾಟಕದಲ್ಲಿ ಅದರಲ್ಲೂ ಮಂಗಳೂರಿನಿಂದ ಸೇನೆ ಸೇರುವವರು ಬಹಳ ವಿರಳ. ನಮ್ಮಲ್ಲಿ ಸೇನೆಯ ಬಗ್ಗೆ ಇರುವ ಕೀಳರಿಮೆಯನ್ನು ದೂರಗೊಳಿಸುವುದರೊಂದಿಗೆ ರಾಷ್ಟ್ರ ರಕ್ಷಣೆಯ ಪುಣ್ಯ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಅಲ್ಲದೆ ಇತ್ತೀಚೆಗೆ ಕೆಲವು ಯುವ ಸಮುದಾಯ ಡ್ರಗ್ಸ್ ಮಾಫಿಯಾಗಳಿಗೆ ಬಲಿಯಾಗುತ್ತಿದ್ದು ಜಾಗೃತಗೊಳ್ಳಬೇಕಿದೆ ಎಂದರು. ದ್ವಜಾರೋಹಣ ನೆರವೇರಿಸಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಭಾರತವು ಒಂದು ಕಂಬದ ಡೇರೆಯಲ್ಲ, ಅದು ಸಾವಿರ ಕಂಬದ ಚಪ್ಪರವಾಗಿದೆ. 73ನೇ ಸ್ವಾತಂತ್ರ್ಯವನ್ನು ನಾವು ಆಚರಿಸುವ ಸಂದರ್ಭದಲ್ಲಿ ನಾವು ಇದಕ್ಕಾಗಿ ಹೋರಾಡಿದ ಮಹಾತ್ಮರನ್ನು…
UN NETWORKS ಮುಡಿಪು : ಇಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿರುವವರು 1 ರಿಂದ 7 ನೇ ತರಗತಿವರೆಗಿನ ವಿದ್ಯಾರ್ಥಿಗಳು. ಯಾರೂ ಮಳೆಯಲ್ಲಿ ನಿಲ್ಲುವಂತೆ ಗದರಿಸಿಲ್ಲ, ಬದಲಾಗಿ ಸ್ವಾತಂತ್ರ್ಯ ದಿನ ಆಚರಣೆಯ ಭಾಗವಾಗಿ ತಾವೇ ಖುದ್ದು ಮಳೆಯಲ್ಲೇ ನೆನೆದು ರಾಷ್ಟ್ರಗೀತೆಗೆ ಗೌರವ ಸೂಚಿಸಿದ ರೀತಿಯಿದು. ಇತ್ತೀಚೆಗೆ ರಾಷ್ಟ್ರಧ್ವಜವೊಂದು ರಸ್ತೆಯಲ್ಲಿ ಬಿದ್ದಿರುವುದನ್ನು ಮಕ್ಕಳು ನೋಡಿಯೂ ನೋಡದ ಹಾಗೆ ತಮ್ಮ ಪಾಲಿಗೆ ತಾವು ಸಾಗುತ್ತಿದ್ದರು. ಈ ಕುರಿತು ವೀಡಿಯೋ ಸಾಕಷ್ಟು ವೈರಲ್ ಕೂಡಾ ಆಗಿತ್ತು. ಅಲ್ಲದೆ ವಿದ್ಯಾರ್ಥಿಗಳ ದೇಶಭಕ್ತಿಯ ಕುರಿತು ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಎಬ್ಬಿತ್ತು. ಆದರೆ ಇದಕ್ಕೆ ಸವಾಲೆಂಬಂತೆ ಮುಡಿಪು ಸಮೀಪದ ಸಾಂಬಾರುತೋಟ ದ.ಕ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 25 ರಷ್ಟು ಮಕ್ಕಳು ರಾಷ್ಟ್ರಗೀತೆಯನ್ನು ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ನಿಂತು ಹಾಡಿರುವುದು ಮಕ್ಕಳ ಮನದಲ್ಲಿರುವ ದೇಶಭಕ್ತಿಯ ಜಾಗೃತಿಯಾಯಿತು. ಪಜೀರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಎಸ್ ಮೂಸಾ ಹಾಜಿ ಶಾಲೆಯಲ್ಲಿ ಧ್ವಜಾರೋಹಣಗೈದರು. ಮಳೆಯಲ್ಲೇ ಧ್ವಜಾರೋಹಣಗೈದ ಅತಿಥಿಗಳ ಜತೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕರ್, ಹಸನ್…
UN NETWORKS ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಷನ್ ಉಳ್ಳಾಲ ವಲಯ ಆಶ್ರಯದಲ್ಲಿ ಉಳ್ಳಾಲ ಅಬ್ಬಕ್ಕ ಸರ್ಕಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮಾಜಿ ಶಾಸಕ ಜಯರಾಮ ಶೆಟ್ಟಿ ಧ್ವಜಾರೋಹಣಗೈದರು. ಸಯ್ಯದ್ ಮದನಿ ದರ್ಗಾ ಉಳ್ಳಾಲ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಭರತ್ ಕುಮಾರ್, ಶ್ರೀ ಚೀರುಂಭ ಭಗವತಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ನಿರ್ಮಲಾ ಕಾನ್ವೆಂಟಿನ ಮುಖ್ಯಸ್ಥೆ ಸಿ.ಎಮ್ಮಾ ಜೋಸೆಫ್, ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಷನ್ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಉಳ್ಳಾಲ್, ಎಸ್.ಕೆ.ಪಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಕುಮಾರ್ ಮಾರ್ಲ, ಉಳ್ಳಾಲದ ಎಎಸ್ ಐ ಮಂಜಪ್ಪ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಯೇಷನ್ ಅಧ್ಯಕ್ಷ ಚಿದಾನಂದ ಎ ಉಪಸ್ಥಿತರಿದ್ದರು.
UN NETWORKS ಉಳ್ಳಾಲ : ಉಳ್ಳಾಲ ಮೊಗವೀರ ಸಂಘದ ಸಹಕಾರದೊಂದಿಗೆ ಉಳ್ಳಾಲ ಶ್ರೀ ವಿಠೋಭ ರುಕ್ಮಾಯಿ ಭಜನಾ ಮಂದಿರದಲ್ಲಿ 86ನೇ ವರ್ಷದ ಸಮುದ್ರಪೂಜೆ ಗುರುವಾರ ಬೆಳಗ್ಗಿನಿಂದ ಸಂಜೆ ತನಕ ಭಜನಾ ಸಂಕೀರ್ತನೆಯೊಂದಿಗೆ ಉಳ್ಳಾಲ ಮೊಗವೀರಪಟ್ನದ ಸಮುದ್ರತಟದಲ್ಲಿ ಜರುಗಿತು. ಬೆಳಗ್ಗೆ ಸೂರ್ಯೋದಯದಿಂದ ಮೊದಲ್ಗೊಂಡು ಸೂರ್ಯಾಸ್ತ ತನಕ ಭಜನೆ ಸಂಕೀರ್ತನೆ ನಡೆಯಿತು. ಸಮುದ್ರರಾಜನಿಗೆ ಕಬ್ಬು, ಹಾಲು, ಹೂ, ಹಣ್ಣು, ಫಲವಸ್ತು, ಸಿಹಿಯಾಳ ಹಾಗೂ ಬಾಗಿನ ಅತ್ಯಂತ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಮಧ್ಯಸ್ಥ ಗಂಗಾಧರ ಸುವರ್ಣ ಮತ್ಸ್ಯ ಸಂಪತ್ತು ದೊರಕುವಂತೆ ಹಾಗೂ ಮೊಗವೀರ ಸಮುದಾಯ ಬಾಂಧವರು ಆರ್ಥಿಕವಾಗಿ ಸದೃಢರಾಗುವಂತೆ ಸಮುದ್ರರಾಜ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಸಮುದ್ರರಾಜನ ವೈಶಿಷ್ಠ್ಯದ ಕುರಿತು ವರ್ಣಿಸಿದರು. ಭಜನಾ ಮಂದಿರದ ಪ್ರಧಾನ ಅರ್ಚಕ ಯಾದವ ಬಂಗೇರ ಹಾಗೂ ತಾರಾನಾಥ ಸುವರ್ಣ, ಮಂದಿರದ ಅಧ್ಯಕ್ಷ ಲೋಕನಾಥ ಪುತ್ರನ್, ಉಪಾಧ್ಯಕ್ಷ ಶಾಂತಾರಾಮ್ ಚಂದನ್, ಗೌರವಾಧ್ಯಕ್ಷ ಗೋವರ್ಧನ್ ಸಾಲಿಯಾನ್, ಕಾರ್ಯದರ್ಶಿ…

