UN NETWORKS ಉಳ್ಳಾಲ : ನೆರೆಪೀಡಿತ ಉತ್ತರಕನ್ನಡ ಜಿಲ್ಲೆಗಳಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಯ ವೈದ್ಯಕೀಯ ತಂಡವು ನೆರೆ ಸಂತ್ರಸ್ತರಿಗಾಗಿ ಉಚಿತವಾದ ಶಿಬಿರವನ್ನು ಕಾರವಾರದ ಪ್ರಮುಖ 5 ಗಂಜಿಕೇಂದ್ರಗಳಲ್ಲಿ ನಡೆಸುತ್ತಿದ್ದಾರೆ. ಕೆ.ಎಸ್ ಹೆಗ್ಡೆಯ ಆಸ್ಪತ್ರೆ ಯ ತೀವ್ರ ನಿಗಾ ಘಟಕದ ಮುಖ್ಯಧಿಕಾರಿಯಾಗಿರುವ ಡಾ. ನರೇಶ್ ಶೆಣೈ ಹಾಗೂ ವೈದ್ಯಕೀಯ ಅಧಿಕಾರಿ ಡಾ. ಸುದೇಶ್ ಶೆಟ್ಟಿ ಇವರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿಗಳನ್ನು ವಿತರಿಸಲಾಯಿತು.ಪ್ರವಾಹ ಅಥವಾ ನೆರೆ ಬಂದಂತಹ ಸಂದರ್ಭದಲ್ಲಿ ಮನುಷ್ಯನ ಆರೋಗ್ಯದಲ್ಲಿ ವ್ಯತ್ಯಾಸ ಗಳಾಗುತ್ತದೆ. ನಿರಾಶ್ರಿತರಾಗಿರುವವರಿಗೆ ಮಾಸಿಕ ಧೈರ್ಯ ದ ಜೊತೆಗೆ ದೇಹದ ಆರೋಗ್ಯವು ಬೇಕಾಗುತ್ತದೆ. ಎಳೆ ಕಂದಮ್ಮಗಳು, ಮಕ್ಕಳು ಹಾಗೂ ವಯಸ್ಸಾದವರಿಗೆ ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಉಚಿತ ತಪಾಸಣೆಯನ್ನು ನಡೆಸಿದ ಆಸ್ಪತ್ರೆಯ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ಶಿಬಿರಲ್ಲಿ ಆರೋಗ್ಯ ತಪಾಸಣೆ, ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು, ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಉಚಿತ ಔಷಧಿಗಳನ್ನು ಶಿಬಿರದಲ್ಲಿ ನೀಡಲಾಯಿತು.ಸರಕಾರಿ…
Author: UllalaVani
UN NETWORKS ಕುತ್ತಾರು : ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದುಗಳ ಎದುರು ಇನ್ನು ತಮಗೆ ಉಳಿಗಾಲವಿಲ್ಲ ಎಂದು ಅರಿತುಕೊಂಡ ಬ್ರಿಟಿಷರು ಭಾರತೀಯರನ್ನು ಸ್ವತಂತ್ರಗೊಳಿಸಿದರೂ ಭಾರತೀಯರು ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಬಾರದೆಂದು ಹಿಂದು ಮುಸ್ಲಿಂರನ್ನು ಬಹಳ ಯೋಜನಾಬದ್ಧವಾಗಿ ಒಡೆದು ಹಾಕಲು ಹಿಂದು ಮುಸ್ಲಿಂ ನಡುವೆ ಇದ್ದ ಸಾಮರಸ್ಯಕ್ಕೆ ಕೊಳ್ಳಿ ಇಟ್ಟು ಹೋದರು, ಅದನ್ನು ಕೆಲವರು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿರುವುದರಿಂದಲೇ ಭಾರತದಲ್ಲಿ ಶಾಂತಿ ಕದಡುತ್ತಿದೆ ಎಂದು ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಿಂದು ಜಾಗರಣ ವೇದಿಕೆ ಉಳ್ಳಾಲ ಪ್ರಖಂಡ ಆಶ್ರಯದಲ್ಲಿ ಭಾನುವಾರ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದುಗಳು ಈ ದೇಶದ ಗುಲಾಮಿ ಸಂತತಿ, ಅವರು ಆಳಿಸಿಕೊಂಡವರು, ಮುಸ್ಲಿಂ ಸಮುದಾಯ ಅವರನ್ನು ಆಳಿದ ಸಂತಾನ, ಯಾವುದೇ ಕಾರಣಕ್ಕೂ ಹಿಂದುಗಳಿಗೆ ಆಡಳಿತ ಕೊಡಬೇಡಿ. ಅವರ ಜೊತೆ ಯಾವುದೇ ಬಗೆಯ ಸಂಬಂಧ ಇಟ್ಟುಕೊಳ್ಳಬೇಡಿ ಎಂದು ಬ್ರಿಟಿಷರು ಬ್ರಿಟಿಷರು ಮುಸ್ಲಿಂರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿದರು.…
UN NETWORKS ಕುಂಪಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ ಕೃಷ್ಣ ಭಟ್ ಪೂಂಜಾಲಕಟ್ಟೆ ಪೌರೋಹಿತ್ಯದಲ್ಲಿ ನಡೆಯಿತು.
UN NETWORKS ಇರಾ : ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ. ಜಿ. ಪಂ ಹಿ ಪ್ರಾ ಶಾಲೆ ಇರಾ ಪರಪ್ಪು ಮತ್ತು ಇರಾ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಿಂದ ನಿರ್ಮಾಣಗೊಳ್ಳುವ ರಂಗಮಂದಿರಕ್ಕೆ ಮಂಗಳೂರು ಕ್ಷೇತ್ರದ ಶಾಸಕ ಯು. ಟಿ. ಖಾದರ್ ಶಿಲಾನ್ಯಾಸಗೈದರು. ಬಳಿಕ ಮಾತನಾಡಿದ ಅವರು ಕ್ಷೇತ್ರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇರಾ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ರಂಗಮಂದಿರವೂ ಕೂಡ ಸಹಕಾರಿಯಾಗಲಿದೆ. ಶಾಲಾ ಮಕ್ಕಳಿಗೆ ಶುಭ ಹಾರೈಸಿದ ಅವರು ಬಡವನಾಗಿ ಹುಟ್ಟಿದರೂ ಬಡವನಾಗಿಯೇ ಸಾಯಬೇಕಿಲ್ಲ. ಉತ್ತಮ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಬೇಕು ಎಂದು ತಿಳಿಸಿದರು. ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುರ್ನಾಡು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ , ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ಸೈಯದ್ ಪಿ.…
UN NETWORKS ಉಳ್ಳಾಲ : ತ್ಯಾಗ ಬಲಿದಾನದ ಸಂಕೇತವಾಗಿರುವ ಈದುಲ್ ಅಝ್‍ಆ ಹಬ್ಬವನ್ನು ಪರಸ್ಪರ ಅರ್ಥ ಮಾಡಿಕೊಂಡು ಆಚರಿಸಬೇಕಾಗಿದೆ. ಜಾತಿ, ಧರ್ಮ ಇಲ್ಲದೇ ಪ್ರೀತಿ, ಸ್ನೇಹದಿಂದ ಎಲ್ಲ ವರ್ಗ ಸೇರಿ ಹಬ್ಬದ ಮಹತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಈದುಲ್ ಅಝಾ ಹಬ್ಬದ ಪ್ರಯುಕ್ತ ಉಳ್ಳಾಲ ಸಯ್ಯದ್ ಮದನಿ ದರ್ಗಾ ಭೇಟಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ಅವರು ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ ಹಬ್ಬಗಳಿರುವುದು ಮನೋರಂಜನೆಗಾಗಿ ಅಲ್ಲ. ಈದುಲ್ ಅಝಾ ತ್ಯಾಗ ಬಲಿದಾನದ ಹಬ್ಬವಾಗಿದ್ದು ಸೌಹಾರ್ದತೆಯಿಂದ ಆಚರಿಸಬೇಕಾಗಿದೆ.ಒಗ್ಗಟ್ಟು ಪ್ರದರ್ಶಿಸಿ ದೇಶ ಅಭಿವೃದ್ಧಿಯ ಕೆಲಸ ನಮ್ಮಿಂದ ಆಗಬೇಕು ಎಂದರು. ಖತೀಬ ಅಬ್ದುಲ್ ಅಝೀಝ್ ಬಾಖವಿ ಈದ್ ಖುತ್ಬಾ ಮತ್ತು ನಮಾಝ್ ನಿರ್ವಹಿಸಿದರು. ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಕೋಶಾ„ಕಾರಿ ಯು.ಕೆ ಇಲ್ಯಾಸ್, ಆಡಿಟರ್ ಯು.ಟಿ.…
UN NETWORKS ಉಳ್ಳಾಲ : ಕಡಲ್ಕೊರೆತದಿಂದಾಗಿ ತೀವ್ರಹಾನಿಗೊಳಗಾಗಿ ಕೊಚ್ಚಿ ಹೋಗಿರುವ ಉಚ್ಚಿಲ ಬೆಟ್ಟಂಪಾಡಿ ರಸ್ತೆ ಪ್ರದೇಶಕ್ಕೆ ಹಾಗೂ ಪೆರಿಬೈಲ್ ಪ್ರದೇಶಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ಈಗಾಗಲೇ ಚರ್ಚಿಸಲಾಗಿದ್ದು, ಶೀಘ್ರವೇ ಹಾನಿಗೊಳಗಾದ ರಸ್ತೆ ಹಾಗೂ ಮನೆಗಳಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು. ಬಳಿಕ ರಾಷ್ಟ್ರೀಯ ಹೆದ್ದಾರಿ ಉಚ್ಚಿಲ ಕಳೆದ ಹಲವಾರು ಸಮಯದಿಂದ ನೀರು ನಿಂತು, ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಈ ಪ್ರದೇಶಕ್ಕೆ ಭೇಟಿ ನೀಡಿದ ಖಾದರ್ ಅವರು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸಲು ಆದೇಶ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಈಶ್ವರ್ ಉಳ್ಳಾಲ್, ಸುರೇಶ್ ಭಟ್ನಗರ, ದಿನೇಶ್ ಕುಂಪಲ, ವಿಶಾಲ್ ಕೊಲ್ಯ, ಸೋಮೇಶ್ವರ ಮುಖ್ಯಾಧಿಕಾರಿ ವಾಣಿ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಹಾಗೆಯೇ ಮುನ್ನೂರು ಗ್ರಾಮದ ಉಳಿಯ ನೆರೆಪೀಡಿತ ಪ್ರದೇಶಗಳಿಗೆ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
UN NETWORKS ಮಂಗಳೂರು : ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಭಾಗಿತ್ವದಲ್ಲಿ ಕದ್ರಿಯ ಕೆಪಿಟಿಯಲ್ಲಿ ಜಿಲ್ಲಾಡಳಿತದಿಂದ ಆರಂಭಿಸಿರುವ ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಒಂದು ಲಕ್ಷ ಮೌಲ್ಯದ ಮಿನರಲ್ ವಾಟರ್ ಹಾಗೂ ಆಹಾರ ಸಾಮಗ್ರಿಗಳನ್ನು ರವಿವಾರ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಗೋಕುಲ್‌ದಾಸ್ ನಾಯಕ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಬಿಸ್ಕೆಟ್, ಕುಕೀಸ್, ಮಿನರಲ್ ವಾಟರ್ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಹಸ್ತಾಂತರ ಮಾಡಿದ್ದಾರೆ. ಇದು ಶ್ಲಾಘನೀಯ ವಿಚಾರ. ಸಂಗ್ರಹಿಸಿದ ಸಾಮಗ್ರಿಗಳನ್ನು ದ.ಕ. ಜಿಲ್ಲೆಗೆ ಬಳಸಿಕೊಳ್ಳಲಾಗುವುದು. ಹೊರಜಿಲ್ಲೆಯಿಂದಲೂ ಬೇಡಿಕೆ ಬಂದಿದೆ ಎಂದರು. ರಾಜ್ಯದ ವಿವಿಧೆಡೆ ಪ್ರವಾಹ ಉಂಟಾಗಿ ಜನತೆ ಎಲ್ಲ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರಿಗೆ…
UN NETWORKS ಉಳ್ಳಾಲ : ಉಳ್ಳಾಲ ನಗರಸಭೆಯ ಕಲ್ಲಾಪು ವಾರ್ಡಿನ ಪಕ್ಷೇತರ ಕೌನ್ಸಿಲರ್ ಮುಸ್ತಾಕ್ ಪಟ್ಲರವರಿಗೆ ದೈಹಿಕ ಹಲ್ಲೆ ನಡೆದಿರುವುದಕ್ಕೆ ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿ ಮತ್ತು ಪಕ್ಷದ ಆರು ಕೌನ್ಸಿಲರ್ ಗಳು ಖಂಡಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಸ್ತಾಕ್ ಪಟ್ಲರವರನ್ನು ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ,ಎಸ್.ಡಿ.ಪಿ.ಐ.ಕೌನ್ಸಿಲರ್ ರಮೀಝ್ ಕೋಡಿ ಬೇಟಿ ನೀಡಿದರು. ನೆರೆ ಪರಿಹಾರ ರಕ್ಷಣಾ ಕಾರ್ಯದಲ್ಲಿ ನಿರತರಾದ ಮುಸ್ತಾಕ್ ಪಟ್ಲರವರಿಗೆ ರಾಜಕೀಯ ವಿರೋಧಿಗಳ ಕುಮ್ಮಕ್ಕು ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೋಲಿಸ್ ಇಲಾಖೆ ಹಲ್ಲೆ ನಡೆಸಿದವರನ್ನು ಮತ್ತು ಅವರ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಲು ಮತ್ತು ಬಂಧಿಸಲು ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿಯು ಆಗ್ರಹಿಸಿದೆ.
UN NETWORKS ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿದ ಗಾಳಿ ಮಳೆಗೆ ನೇತ್ರಾವತಿ ನದಿ ಉಕ್ಕಿ ಹರಿದು ನದಿ ತಟದ ಪ್ರದೇಶಗಳು ಸೇರಿದಂತೆ ನಡುಗಡ್ಡೆಗಳು(ಕುದ್ರು)ಜಲಾವೃತಗೊಂಡಿದ್ದು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಉಳ್ಳಾಲ ವ್ಯಾಪ್ತಿಯ ವಿವಿಧ ಗ್ರಾಮಗಳ ನದಿ ತಟದ ಸುಮಾರು 300ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಹೆಚ್ಚುನ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ಜಿಲ್ಲಾ„ಕಾರಿ ಭೇಟಿ ನೀಡಿದ್ದು, ಶಾಸಕ ಯು,ಟಿ, ಖಾದರ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಮತ್ತು ಸ್ಥಳೀಯ ಕೌನ್ಸಿಲರ್ ಗಳ ನೇತೃತ್ವದಲ್ಲಿ ಸಂಘ ಸಂಸ್ಥೆಗಳು ಸಂಘಟನೆಗಳ ಯುವಕರು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳ್ಳಾಲ ಭಾಗಶ: ಜಲಾವೃತ : ಉಳ್ಳಾಲ ನಗರಸಭಾ ವ್ಯಾಪ್ತಿಯ ನೇತ್ರಾವತಿ ನದಿ ತಟದ ಭಾಗಶ: ಪ್ರದೇಶಗಳು ಜಲಾವೃತಗೊಂಡಿದೆ. ಉಳ್ಳಾಲದ ಪ್ರಮುಖ ದ್ವೀಪ ಪ್ರದೇಶವಾಗಿರುವ ಉಳ್ಳಾಲ ಉಳಿಯ ವ್ಯಾಪ್ತಿಯಲ್ಲಿ ಸುಮಾರು 25 ಮನೆಗಳು ಜಲಾವೃತಗೊಂಡಿದ್ದು ಇದರಲ್ಲಿ 10 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಉಳ್ಳಾಲ ಹೊೈಗೆ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು…
UN NETWORKS ಕೊಣಾಜೆ : ಗ್ರಂಥಸಂಪಾದನಾ ಶಾಸ್ತ್ರವನ್ನು ಪ್ರಾಚೀನ ಕಾಲದ ಗ್ರಂಥಸಂಪಾದನೆಗಳಿಗಷ್ಟೇ ಸೀಮಿತಗೊಳಿಸದೆ ಆಧುನಿಕ ಕಾಲದ ಹಸ್ತಪ್ರತಿ ಸಾಹಿತ್ಯ ಮತ್ತು ಜನಪದ ಮೌಖಿಕ ಪಠ್ಯಗಳ ಸಂಪಾದನೆಗೂ ಇದನ್ನು ವಿಸ್ತರಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು. ಅವರು ಗುರುವಾರ ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ವಿವಿಯಲ್ಲಿ ಕನ್ನಡ ಗ್ರಂಥ ಸಂಪಾದನೆ: ಹೊಸ ಚಿಂತನೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆದ ವಿಚಾರಸಂಕಿರಣದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.ಪ್ರಾಚೀನ ಕಾಲದ ತಾಳೆಗರಿಯ ಕಾವ್ಯ ವಸ್ತುಶಾಸ್ತ್ರ ಗ್ರಂಥಗಳನ್ನು ಪ್ರಕಟಿಸುವ ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಈ ಶಾಸ್ತ್ರವು ಸಂಕೀರ್ಣವಾದ ಮತ್ತು ಬೆಳವಣಿಗೊಳ್ಳುತ್ತಾ ಬಂದ ಅಧ್ಯಯನ ಶಿಸ್ತು ಆಗಿದೆ. ಗ್ರಂಥ ಸಂಪಾದನಾ ಶಾಸ್ತ್ರವು ಸಾಹಿತ್ಯ ಚರಿತ್ರೆಯ ಚರಿತ್ರೆ ಮತ್ತು ಕವಿ ಕೇಂದ್ರಿತ, ಕೃತಿ ಕೇಂದ್ರಿತ ಹಾಗೂ ಓದುಗ…

