Author: UllalaVani

Kannada News From Coastal Karnataka

UN NETWORKS ಅಸೈಗೋಳಿ : ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹೋದರತೆ ಕಾಪಾಡಲು ಕ್ರೀಡೆ ಸಹಕಾರಿ. ಸೋಲು ಗೆಲುವಿನ ಮೂಲವಾಗಿದ್ದು, ಸೋಲಿಗೆ ಧೃತಿಗೆಡಬಾರದು. ಹತ್ತು ವರ್ಷಗಳ ಹಿಂದೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇತ್ತು, ಆದರೆ ಇಂದು ಮೊಬೈಲ್ ಹಾವಳಿಯಿಂದಾಗಿ ಯುವಸಮುದಾಯ ಕ್ರೀಡೆಯಿಂದ ದೂರವಾಗುತ್ತಿರುವುದು ಖೇದಕರ ಎಂದು ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಅಭಿಪ್ರಾಯಪಟ್ಟರು. ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಭಾನುವಾರ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಡೆದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಅಸೈಗೋಳಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿ, ಕಳೆದ 31 ವರ್ಷಗಳಿಂದ ಮೊಸರುಕುಡಿಕೆ ಪ್ರಯುಕ್ತ ಕ್ರೀಡೋತ್ಸವ ನಡೆಸಲಾಗುತ್ತಿದ್ದು, ಜಾತಿ, ಧರ್ಮಾತೀತವಾಗಿ ಜನ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ದೈಹಿಕ, ಮಾನಸಿಕವಾಗಿಯೂ ಕಲಿಕೆಗೂ ಕ್ರೀಡೆ ಪೂರಕ ಎಂದು ಹೇಳಿದರು. ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ಆಳ್ವ ತೇವುನಾಡುಗುತ್ತು,…

Read More

UN NETWORKS ಮುನ್ನೂರು : ನೆರೆಯಿಂದ ಮುಳುಗಿದ್ದ ನೇತ್ರಾವತಿ ನದಿ ತೀರದ ಮುನ್ನೂರಿನ ಸೋಮನಾಥ ಉಳಿಯ ಪಲ್ಲಗದ್ದೆಯಲ್ಲಿ ` ಬಲೇ ಕೆಸರ್ ಡೊಂಜಿ ದಿನ ಗೊಬ್ಬುಗ, ಬೇನೆ ಬೇಜಾರ್ ಮದಪುಗ’ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕ್ರೀಡಾಕೂಟ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು. ಬೆಳಗ್ಗಿನಿಂದ ಸಂಜೆವರೆಗೆ ಕಬಡ್ಡಿ, ಹಗ್ಗಜಗ್ಗಾಟ, ತ್ರೋಬಾಲ್, ತುಳು ಜಾನಪದ ನೃತ್ಯ ಸ್ಪರ್ಧೆ, ರಿಲೇ, ನಿ ಶೋಧ, ಮೂರು ಕಾಲಿನ ಓಟ, ಬಾಟಲಿಗೆ ನೀರು ತುಂಬಿಸುವುದು, ಉಪ್ಪು ಮೂಟೆ, ದಂಪತಿ ಓಟ, ಸೋಗೆ ಎಳೆಯುವ ಸ್ಪರ್ಧೆ, 100 ಮೀ. ಓಟ, ಮಡಿಕೆ ಒಡೆಯುವುದು, ಹಿಮ್ಮುಖ ಓಟ, ರಸಪ್ರಶ್ನೆ, ಪಿರಮಿಡ್ ರಚನೆ, ಜನ ಕಂಬುಲ, ಬೀಡಿ ಕಟ್ಟುವುದು, ಕಲ್ಲಾಟ, ಚೆನ್ನೆಮಣೆ, ತೆಂಗಿನ ಗರಿ ಹೆಣೆಯುವುದು(ಮಹಿಳೆಯರಿಗೆ), ಮಣ್ಣಿನ ಆಕೃತಿ ರಚನೆ, ತೆಂಗಿನ ಗರಿ ಆಕೃತಿ ರಚನೆ(ಮಕ್ಕಳಿಗೆ) ಸಹಿತ ವಿವಿಧ ಕ್ರೀಡೆಗಳು ನಡೆಯಿತು. ಶ್ರೀ ಸೋಮೇಶ್ವರಿ ದೇವಿ ಮತ್ತು ಶ್ರೀ ನಾಗದೇವರು, ಶ್ರೀ ಅರಸು ಧೂಮಾವತಿ ಬಂಟ ಪರಿವಾರ ದೈವಗಳ ಸೇವಾಸಮಿತಿ ಹಾಗೂ ಆಡಳಿತ ಮಂಡಳಿ,…

Read More

UN NETWORKS ಕೊಲ್ಯ : ಕಳೆದ ಐದು ವರ್ಷಗಳಲ್ಲಿ ಟೈಲರ್ಸ್ ಗಳ ಬಗ್ಗೆ ಧ್ವನಿ ಎತ್ತುವವರು ಯಾರೂ ಇರಲಿಲ್ಲ, ಇದೀಗ ತಾನು ಪ್ರತಿಪಕ್ಷದಲ್ಲಿದ್ದು ಮುಂದೆ ನಡೆಯುವ ಅಧಿವೇಶನದಲ್ಲಿ ಟೈಲರ್ಸ್ ಗಳಿಗೆ ಭವಿಷ್ಯ ನಿಧಿ ಹಾಗೂ ಇನ್ನಿತರ ಪ್ರಮುಖ ಬೇಡಿಕೆಗಳ‌ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಉಳ್ಳಾಲ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾಲೂಕನ್ನಾಗಿ ಘೋಷಿಸಲಾಗಿದ್ದು, ಎಲ್ಲಾ ಇಲಾಖೆಗಳು ಶೀಘ್ರ ಕಾರ್ಯಾರಂಭಗೊಳ್ಳಲಿದೆ. ಮುಂದಿನ ಎರಡು ವರ್ಷಗಳಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹೇಳಿದರು.ಮಂಗಳೂರು ಕಾರ್ಮಿಕ ಉಪ ವಿಭಾಗಾಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ  ಮಾತನಾಡಿ, ವಿವಿಧ ಹಂತದಲ್ಲಿ ಅಸಂಘಟಿತ ವಲಯ ಕಾರ್ಮಿಕರಿದ್ದು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಟೈಲರ್ಸ್ ಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಸರ್ಕಾರದ ಮುಂದಿನ ಸವಲತ್ತುಗಳನ್ನು ನೀಡಲು…

Read More

UN NETWORKS ಉಳ್ಳಾಲ : ಶ್ರೀ ಶಾರದಾ ಸೇವಾ ಟ್ರಸ್ಟ್ ಕೊಲ್ಯ ಇದರ ನೂತನ ಅಧ್ಯಕ್ಷರಾಗಿ ಪ್ರಕಾಶ್ ಎಚ್. ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಮಚಂದ್ರ ಕುಂಪಲ, ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಕನೀರುತೋಟ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಕೆ.ಎಸ್., ಕೋಶಾಧಿಕಾರಿಯಾಗಿ ಮೋಹನ್ ಶೆಟ್ಟಿ ಕುಂಪಲ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಕೊಲ್ಯ, ಟ್ರಸ್ಟಿಗಳಾಗಿ ಕೆ. ಸೀತರಾಮ ಬಂಗೇರ, ಕೆ. ರಮೇಶ್ ಕೊಲ್ಯ, ತೋನ್ಸೆ ಪುಷ್ಕಳ ಕುಮಾರ್, ಲಿಂಗಪ್ಪ ಪೂಜಾರಿ ಕೊಲ್ಯ, ಶ್ರೀನಿವಾಸ್ ಕೊಲ್ಯ, ಪ್ರವೀಣ್ ಕುಜುಮಗದ್ದೆ, ಶೈಲೇಂದ್ರ ಕುಜುಮಗದ್ದೆ, ಸದಾಶಿವ ಕುಂಪಲ, ಯಶೋಧರ ಟಿ. ಆಯ್ಕೆಯಾದರು.

Read More

UN NETWORKS ಉಳ್ಳಾಲ : ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಕೊಲ್ಯ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕೆ.ಸೀತಾರಾಮ ಬಂಗೇರ, ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಜೊತೆ ಕೋಶಾಧಿಕಾರಿಯಾಗಿ ಗುರುಪ್ರಸಾದ್ ಕೆ.ಪಿ., ಉಪಾಧ್ಯಕ್ಷರಾಗಿ ಚಂದ್ರಶೇಖರ್ ಮಾಡೂರು, ಹರೀಶ್ಚಂದ್ರ ಕೊಲ್ಯ, ಪದ್ಮನಾಭ ಕೊಲ್ಯ, ಮನೋಜ್ ಕಟ್ಟೆಮನೆ, ದಿವಾಕರ ಬಗಂಬಿಲ, ಬೇಬಿ ಕುಮಾರ್ ಕೊಲ್ಯ, ಗೌರವ ಸಲಹೆಗಾರರಾಗಿ ಚಂದ್ರಶೇಖರ್ ಉಚ್ಚಿಲ್, ಸೌಂದರ್ಯ ರಮೇಶ್, ಎಡ್ವರ್ಡ್ ಲೋಬೋ, ಪದ್ಮನಾಭ ಶೆಟ್ಟಿ ವರ್ಕಾಡಿ, ಗೋಪಾಲಕೃಷ್ಣ ಎಸ್., ಪುಷ್ಪರಾಜ್ ಕುಜುಮಗದ್ದೆ, ರಾಘವ ಡಿ.ಎನ್. ಶ್ಯಾಮ ಸುಂದರ್ ಜೆಪ್ಪು, ಹರೀಶ್ ಪೂಜಾರಿ ಕೊಲ್ಯ, ಲಲಿತಾ ಸುಂದರ್, ಜೊತೆ ಕಾರ್ಯದರ್ಶಿಯಾಗಿ ಮಹೇಶ್ ಕೊಲ್ಯ, ಸಚಿನ್ ಎಸ್ ಸಾಲಿಯಾನ್, ಆಂತರಿಕ ಲೆಕ್ಕಪರಿಶೋಧಕರಾಗಿ ಮಯೂರ್ ಚಂದ್ ಕೊಲ್ಯ, ಮುಖ್ಯ ಕಾರ್ಯನಿವಾರ್ಹಕರಾಗಿ ಅಶೋಕ್ ಸಂಕೊಳಿಗೆ, ಸಹ ನಿರ್ವಾಹಕರಾಗಿ ಪ್ರವೀಣ್ ಎಕ್ಕೂರ್, ರಂಜಿತ್ ಕಾಸಿಬೆಟ್ಟು, ಸಂತೋಷ್ ಕುಮಾರ್ ಕೊಲ್ಯ, ನಾಗೇಶ್, ಸಾಂಸ್ಕೃತಿಕ ಸಂಚಾಲಕರಾಗಿ ಎಂ. ಚಂದ್ರಶೇಖರ್ ಕುಜುಮಗದ್ದೆ, ಸಹ ಸಂಚಾಲಕರಾಗಿ ಮೋಹನ್…

Read More

UN NETWORKS ಉಳ್ಳಾಲ : ಆದರ್ಶ ಮಿತ್ರ ಮಂಡಳಿ ಕೊಲ್ಯ ಇದರ ನೂತನ ಅಧ್ಯಕ್ಷರಾಗಿ ನವೀನ್ ಗಟ್ಟಿ ಕೊಲ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಮೋಹನ್ ಕೆ.ಪಿ., ದತ್ತೇಶ್ ಕೊಲ್ಯ, ಶ್ರವಣ್ ಕುಜುಮಗದ್ದೆ, ಕಾರ್ಯದರ್ಶಿಯಾಗಿ ಮನೋಜ್ ಕುಜುಮಗದ್ದೆ, ಜೊತೆ ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಹೃತ್ವಿಕ್ ಕೊಲ್ಯ, ಕೋಶಾ„ಕಾರಿಯಾಗಿ ಸಚಿನ್ ಎಸ್. ಸಾಲ್ಯಾನ್ ಕೊಲ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಕೊಲ್ಯ, ಸಂದೀಪ್ ಕೊಲ್ಯ, ಅಶೋಕ್ ಶೆಟ್ಟಿ , ಸಂತೋಷ್ ಕುಮಾರ್, ಕ್ರೀಡಾ ಸಂಚಾಲಕರಾಗಿ ಮಹೇಶ್ ಕೊಲ್ಯ, ಮೋಹನ್ ವೆಂಕಿಹಿತ್ಲು, ಅನುಷ, ಗುರುಪ್ರಸಾದ್ ಕೆ.ಪಿ., ರಿತಿಕ್ ಕೊಲ್ಯ, ನವೀನ್ ಕುಜುಮಗದ್ದೆ, ಪ್ರದೀಪ್ ಕುಜುಮಗದ್ದೆ ಆಯ್ಕೆಯಾದರು.

Read More

UN NETWORKS ಉಳ್ಳಾಲ : ಆರ್ಟಿಕಲ್ 370ರದ್ದು ವಿರುದ್ಧ ಉಗ್ರರು ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂಬ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿಯ ಅನುಸಾರ ಶುಕ್ರವಾರ ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸಂಸ್ಥೆಗಳಲ್ಲಿ ಬಾಂಬ್ ಪತ್ತೆ ದಳ, ಶ್ವಾನ ದಳದಿಂದ ಪರಿಶೀಲನೆ ನಡೆಯಿತು. ದುಷ್ಕರ್ಮಿಗಳು ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಕರ್ನಾಟಕದಲ್ಲಿ ಶೈಕ್ಷಣಿಕ ಹಬ್ ಆಗಿ ಗುರುತಿಸಿಕೊಂಡಿರುವ ಕೊಣಾಜೆ ಹಾಗೂ ಉಳ್ಳಾಲ ಭಾಗದ ಪ್ರತಿಷ್ಠಿತ ಸಂಸ್ಥೆಗಳಾದ ಮುಡಿಪಿನ ಇನ್‍ಫೋಸಿಸ್, ಸೂರ್ಯ ಇನ್‍ಫೋಟೆಕ್, ಸೋಮೇಶ್ವರ ದೇವಸ್ಥಾನ ತೀರ,ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ಯೇನೆಪೊಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದೆ.ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶನದಂತೆ ಹೈ ಅಲರ್ಟ್ ಆಗುವ ಸೂಚನೆ ನೀಡಲಾಗಿದೆ.ಇವೆಲ್ಲ ಸಹಜ ರೀತಿಯ ಪರಿಶೀಲನೆ ಪ್ರಕ್ರಿಯೆ ಎಂದು ಕೊಣಾಜೆ ಮತ್ತು ಉಳ್ಳಾಲ ಠಾಣಾಧಿಕಾರಿಗಳು ತಿಳಿಸಿದ್ದಾರೆ.

Read More

UN NETWORKS ಜಪ್ಪಿನಮೊಗರು : ಮಂಗಳೂರಿನ ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ಜಪ್ಪಿನಮೊಗರುವಿನ ಬಲ್ಯಾಯ ಭವನದಲ್ಲಿ `ಆಟಿದ ಕೂಟ’ ಕಾರ್ಯಕ್ರಮವು ಜರುಗಿತು. ಸಭಾ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಚಂದ್ರಶೇಖರ ಬಲ್ಯಾಯ ಪಾತೂರು ಹಾಗೂ ಭಾಸ್ಕರ ಬಲ್ಯಾಯ ಅಸೈಗೋಳಿ ಅತಿಥಿಗಳಾಗಿ ಭಾಗವಹಿಸಿ, ಆಟಿಕೂಟದ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ದಿವಾಕರ್ ಕೆ. ಪಂಡಿತ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆಯ ಸಂಚಾಲಕಿ ಗೀತಾ ಅರುಣ್ ಕುಮಾರ್ ಹಾಗೂ ಯುವ ವೇದಿಕೆ ಸಂಚಾಲಕ ಡಾ. ರಾಜೇಶ್ ಬಲ್ಯಾಯ ಕೆಂಬಾರ್, ಗೌರವಾಧ್ಯಕ್ಷ ಹರಿಶ್ಚಂದ್ರ ಅತ್ತಾವರ, ನಿರ್ದೇಶಕರುಗಳಾದ ಭಾಸ್ಕರ್ ಜಿ.ಬಿ. ಕೆಂಬಾರ್, ಭಾರ್ಗವ ಬಲ್ಯಾಯ ಅಳಪೆ, ಚಂದ್ರಹಾಸ ಟೈಲರ್ ತುಪ್ಪೆಕಲ್ಲು, ಜಯಲಕ್ಷ್ಮೀ ಭಾಸ್ಕರ್ ಕೆಂಬಾರ್ ಉಪಸ್ಥಿತರಿದ್ದರು. ಸಂಘದ ವಕ್ತಾರ ಸುರೇಶ್ ಕುಮಾರ್ ಮಾರಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಯಪ್ರಕಾಶ್ ಪಂಡಿತ್ ಬಬ್ಬುಕಟ್ಟೆ ಸ್ವಾಗತಿಸಿದರು. ಮಲ್ಲಿಕಾ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಉಮಾಲಕ್ಷ್ಮೀ ಕುಡುಪು ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 34ಬಗೆಯ…

Read More

UN NETWORKS ಕೋಟೆಕಾರು : ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯ ತತ್ಕರಕಮಲಸಂಜಾತ ಶ್ರೀ ವಿಧುಶೇಖರ ಭಾರತೀ ಸ್ವಾಮಿಯ 27ನೇ ವರ್ಧಂತ್ಯುತ್ಸವ ಕೋಟೆಕಾರಿನಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಮಹಾಗಣಪತಿ ಹೋಮ, ಆಯುಷ್ಯ ಹೋಮ, ಮಧ್ಯಾಹ್ನ 12.30ರಿಂದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರೊ. ಪಾರೆಂಕಿ ಶಿವಾಜಿ ಅಧಿಕಾರಿ ಶ್ರೀ ಸ್ವಾಮಿಗಳಿಗೆ ಅಭಿನಂದನೆ ಸಮರ್ಪಿಸಿ ಮಾತನಾಡಿದರು. ಉತ್ಸವ ಸಮಿತಿ ಗೌರವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಟಿ. ರಘುರಾಮ ಶೆಟ್ಟಿ, ಹೊಸದುರ್ಗದ ರಾಮಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಎಚ್. ಬಿ. ಪ್ರಭಾಶಂಕರ ರಾವ್, ಮಂಗಳೂರು ಹಾಗೂ ಕಾಸರಗೋಡು ಆರ್ಯ ಯಾನೆ ಮರಾಠ ಸಮಾಜ ಸಂಘದ ಕಾರ್ಯದರ್ಶಿ ರಾಜೇಶ್…

Read More

UN NETWORKS ಉಳ್ಳಾಲ : ಮಾಣಿ-ಉಳ್ಳಾಲ ರಸ್ತೆಯ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ನಿಮಾ9ಣವಾಗಿರುವ ಮರಣ ಗುಂಡಿಯ ಕುರಿತು ಸಂಬಂಧಿತ ಇಲಾಖೆ ನಿರ್ಲಕ್ಷ್ಯ ವಹಿಸಿರುವ ವಿರುದ್ಧ ವಿಜಯ ಗೇಮ್ಸ್ ಟೀಂ ತಂಡದ ನೇತೃಥ್ವದಲ್ಲಿ ರಸ್ತೆಯಲ್ಲಿನ ದೊಡ್ಡ ಗಾತ್ರದ ಹೊಂಡದಲ್ಲಿ ಕಾಗದದ ದೋಣಿ ಬಿಡುವ ಮೂಲಕ ಪ್ರತಿಭಟನೆ ನಡೆಯಿತು. ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿ ರಸ್ತೆಯ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ಹೊಂಡ ನಿಮಾ9ಣವಾಗಿದೆ. ಮಳೆ ಆರಂಭವಾಗುವ ಮುನ್ನವೇ ರಸ್ತೆ ಡಾಮಾರು ಕಿತ್ತುಹೋಗಿತ್ತು. ಮಳೆ ನಂತರ ಹೊಂಡ ದೊಡ್ಡದಾಗುತ್ತಲೇ ಇದೀಗ ಈಜುಕೊಳದಂತೆ ಆಗಿದೆ. ದಿನನಿತ್ಯ ಸಾವಿರಾರು ವಾಹನಗಳು ತೆರಳುವ ರಸ್ತೆಯಲ್ಲಿ ಹೊಂಡದಿಂದಾಗಿ ಹಲವು ಅಪಘಾತಗಳು ಸಂಭವಿಸುತ್ತಲೇ ಇದೆ. ರಾತ್ರಿ ಹೊತ್ತಿನಲ್ಲಿ ಅನೇಕ ದ್ವಿಚಕ್ರ ವಾಹನಗಳು ಹೊಂಡದೊಳಕ್ಕೆ ಬಿದ್ದು ರಸ್ತೆಗೆ ಅಡ್ಡವಾಗಿ ಬೀಳುತ್ತಿದೆ. ಅ.14 ರಂದು ಇಬ್ಬರು ಮಕ್ಕಳು ಹಾಗೂ ದಂಪತಿಯಿದ್ದ ಸ್ಕೂಟರ್ ಹೊಂಡದೊಳಕ್ಕೆ ಬಿದ್ದು ಕುಟುಂಬದ ನಾಲ್ವರು ಗಾಯಗೊಂಡಿದ್ದರು. ನಿರಂತರ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮೌನ ಧೋರಣೆಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ…

Read More