Author: UllalaVani

Kannada News From Coastal Karnataka

UN NETWORKS ಉಳ್ಳಾಲ: ನಿನ್ನೆಯಿಂದ ಮತ್ತೆ ಮಳೆ ಮುಂದುವರಿದ ಪರಿಣಾಮ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯಲ್ಲಿ ನೀರು ತುಂಬಿದ್ದು, ಭಾಸ್ಕರ ಭಟ್ ಎಂಬವರ ಮನೆ ಮತ್ತು ಸಮೀಪದಲ್ಲಿರುವ ದೈವಸ್ಥಾನ ಕೃತಕ ನೆರೆಯಿಂದ ಜಲಾವೃತಗೊಂಡಿದ್ದು, ಮನೆಗೆ ನೀರು ನುಗ್ಗಿದೆ. ಉಳ್ಳಾಲ ನಗರ ಸಭೆ ವತಿಯಿಂದ ತುಂಬಿದ ನೀರು ತೆರವು ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾಸ್ಕರ ಭಟ್ ಕುಟುಂಬಸ್ಥರು ಸಮೀಪದದಲ್ಲಿರುವ ಅವರ ತಮ್ಮ ವಿಶ್ವನಾಥ್ ಭಟ್ ಎಂಬವರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಸೇವಂತಿಗುಡೆಯಲ್ಲಿ ಮೂರು ಕಡೆ ತಡೆಗೋಡೆ ಜರಿದು ಬಿದ್ದು ಹಾನಿಯಾಗಿದೆ. ಈಗಾಗಲೇ ಜಲಾವೃತ್ತಗೊಂಡು ಹಾನಿಯಾದ ಮನೆಗೆ ಪರಿಹಾರ ಕಾರ್ಯ ಒದಗಿಸುವ ವ್ಯವಸ್ಥೆ ನಗರಸಭೆಯಿಂದ ಮುಂದುವರಿದಿದ್ದು, ಈ ನಡುವೆ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮನೆ ಕುಸಿತ, ಜಲಾವೃತ್ತ ಕೆಲವು ಕಡೆ ಆಗಿವೆ. ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಎರಡು ಮನೆಗಳು ಬಾಗಶಃ ಕುಸಿದುಬಿದ್ದಿದ್ದು, ಇಲ್ಲಿಗೆ ಒಟ್ಟು ಆರು ಮನೆಗಳು ಕುಸಿದು ಬಿದ್ದಂತಾಗಿದೆ. ನಿನ್ನೆ ಸುರಿದ ಮಳೆಗೆ ಅಜ್ಜಿನಡ್ಕ ನಿವಾಸಿ ಅಲಿಮಮ್ಮ ಮತ್ತು ಜಲಾಲ್‍ಬಾಗ್…

Read More

UN NETWORKS ಉಳ್ಳಾಲ : ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಸಮುದಾಯದಳ ಕೊಲ್ಯ, ಸೋಮೇಶ್ವರದ ಅಧ್ಯಕ್ಷೆಯಾಗಿ ಸವಿತಾ ಸಂತೋಷ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿತಿನ್ ಕರ್ಕೇರಾ ಮಾಡೂರು. ಕಾರ್ಯದರ್ಶಿಯಾಗಿ ಮಧುಕಿರಣ್ ಗಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶಶಿಕಾಂತ್ ಪರ್ಯತ್ತೂರು, ಕೋಶಾಧಿಕಾರಿಯಾಗಿ ಆನಂದ ಮಲಯಾಳ ಕೊಡಿ, ವೃತ್ತಿಪರ ಸೇವೆಯಲ್ಲಿ, ಜಯದೇವ್, ಸುರೇಶ್ ಬಿ, ದೀಪಕ್ ಕೋಟ್ಯಾನ್, ಯೋಗೀಶ್ ಕುಮಾರ್ ಗಟ್ಟಿ, ಹಣಕಾಸು ಸಮಿತಿಯಲ್ಲಿ ಗಣೇಶ್ ಎಸ್.ಜಿ.ಕೆ, ಸೀತಾರಾಮ ಕರ್ಕೇರಾ, ಲತೀಶ್ ಮಾಡೂರು., ಸಚಿನ್ ಎಸ್, ಸಮುದಾಯ ಸೇವೆಯಲ್ಲಿ, ಹರೀಶ್ ಶೆಟ್ಟಿ, ಶಿರಾಲ್ ಕುಮಾರ್, ಸುಕೇಶ್ ಮಂಜನಾಡಿ, ಚಿತ್ರ,ಆಡಳಿತ ಸಮಿತಿಯಲ್ಲಿ ಕುಸುಮಾಕರ್, ಜಯಪ್ರಕಾಶ್, ಪ್ರಶಾಂತ್ ವೆಂಕುಹಿತ್ಲು, ಅಶೋಕ್ ಕುಮಾರ್, ಪರ್ಯತ್ತೂರು. ಸಾರ್ಜೇಂಟ್ ಎಟ್ ಆರ್ಮ್ ಆಗಿ ಶರಣ್ಯ ಆಯ್ಕೆಗೊಂಡರು.

Read More

UN NETWORKS ಮುಡಿಪು : ಕಳೆದ ಕೆಲವು ದಿನಗಳಿಂದ ಸುರಿಯುಗತ್ತಿರುವ ಮಳೆಯಿಂದಾಗಿ ಪಜೀರು ಕಂಬ್ಲಪದವಿನ ಇನ್‍ಫೋಸಿಸ್ ಮುಂಭಾಗದಿಂದ ಅರ್ಕಾಣ ಮಾರ್ಗವಾಗಿ ಮಿತ್ತಕೋಡಿ ಸಂಪರ್ಕಿಸುವ ರಸ್ತೆಯ ಅರ್ಕಾಣ ಎಂಬಲ್ಲಿ ಗುಡ್ಡದ ಮಣ್ಣು ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಗುಡ್ಡದ ಮಣ್ಣು ಕುಸಿದ ಪರಿಣಾಮವಾಗಿ ಈ ರಸ್ತೆಯಲ್ಲಿ ದ್ಚಿಚಕ್ರ ವಾಹನಕ್ಕೆ ಮಾತ್ರ ಅವಕಾಶ ನೀಡಿ ಉಳಿದ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಪರ್ಯಾಯವಾಗಿ ಮುಡಿಪು ಕಾಯೆರ್‍ಗೋಳಿಯಾಗಿ ಮಿತ್ತಕೋಡಿ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊಣಾಜೆಯ ಮೂಲಕ ಮೆಲ್ಕಾರ್‍ಗೆ ಸಂಪರ್ಕಿಸಲು ಮುಡಿಪು ಕಾಯೆರ್‍ಗೋಳಿಯಾಗಿಯೇ ಸಂಚರಿಸಬೇಕಿತ್ತು. ಆದರೆ ನಾಲ್ಕೈದು ವರ್ಷಗಳ ಹಿಂದೆ ಕಂಬ್ಲಪದವು ಇನ್ ಪೋಸಿಸ್ ಎದುರಗಡೆಯಿಂದಾಗಿ ಅರ್ಕಾಣದ ಮೂಲಕ ಮಿತ್ತಕೋಡಿಗೆ ಸಂಪರ್ಕಿಸು ನೂತನ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಬಿ.ಸಿ.ರೋಡ್, ಮೆಲ್ಕಾರ್‍ಗೆ ತೆರಳುವವರು ಈ ರಸ್ತೆಯನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಇದೀಗ ಗುಡ್ಡದ ಮಣ್ಣು ಕುಸಿದ ಪರಿಣಾಮ ಹಿಂದೆ ಬಳಸುತ್ತಿದ್ದ ಕಾಯೆರ್‍ಗೋಳಿ ರಸ್ತೆಯನ್ನೇ ಬಳಸಬೇಕಾಗಿದೆ. ಪ್ರತೀವರ್ಷ ಕುಸಿತ : ಅರ್ಕಾಣ ರಸ್ತೆಯ ಬದಿಯಲ್ಲಿ ಎತ್ತರವಾದ ಗುಡ್ಡ ಪ್ರದೇಶವಿದ್ದು, ಇಲ್ಲಿ…

Read More

UN NETWORKS ಕೈರಂಗಳ : ಕೈರಂಗಳ ಶ್ರೀ ಶಾರದೋತ್ಸವ ನಾಡಹಬ್ಬ ಸಮಿತಿಯ 2019-20ನೇ ಸಾಲಿನ ಅಧ್ಯಕ್ಷರಾಗಿ ಗಿರೀಶ್ ಆಚಾರ್ಯ ಕೈರಂಗಳ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಉಷಾ ರಾಮ್ ದುಗ್ಗಜ್ಜರ ಕಟ್ಟೆ, ಮಾರ್ಗದರ್ಶಕರಾಗಿ ಶಂಕರಭಟ್ ಕೊಲ್ಲರಮಜಲು, ಕೆ.ನಾರಾಯಣ ಹೊಳ್ಳ ನಂದನ, ಕಾರ್ಯದರ್ಶಿಯಾಗಿ ಕೆ.ಅರವಿಂದ ಕೊಲ್ಲರಮಜಲು, ಖಚಾಂಚಿಯಾಗಿ ಕೆ.ಜಿ.ಗಟ್ಟಿ, ಕೌಡೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ರೈ ಆಯ್ಕೆಯಾದರು. ಇತರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

Read More

UN NETWORKS ದೇರಳಕಟ್ಟೆ : ದೇರಳಕಟ್ಟೆ ಮೂರು ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜು ಎದುರುಗಡೆ ಆಗಿ ಕುತ್ತಾರು ಮದನಿನಗರವರೆಗೆ ಚತುಷ್ಪಥಗೊಂಡ ಮಾಣಿ- ಉಳ್ಳಾಲ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯರು ನರಕಯಾತನೆ ಅನುಭವಿಸುವಂತಾಗಿದೆ. ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ, ಡಿವೈಡರ್ ವ್ಯವಸ್ಥೆಯೂ ಅಸಮರ್ಪಕವಾಗಿರುವುದರಿಂದ ನೂತನ ರಸ್ತೆ ಜನರ ಬಲಿ ಪಡೆಯುವಂತಹ ರಸ್ತೆಯಾಗಿ ಮಾರ್ಪಾಡಾಗುತ್ತಿದೆ. 2018-19 ನೇ ಸಾಲಿನಲ್ಲಿ ದೇರಳಕಟ್ಟೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ನಿತ್ಯಾಧರನಗರದ ಬ್ಯಾರೀಸ್ ಮಾಲ್ ವರೆಗೂ ಮೊದಲ ಹಂತದ ಚತುಷ್ಪಥ ಕಾಮಗಾರಿ ನಡೆಸಲಾಗಿತ್ತು. ಮತ್ತೆ ಮೂರು ತಿಂಗಳ ವ್ಯತ್ಯಾಸದಲ್ಲಿ ನಿತ್ಯಾಧರನಗರದಿಂದ ಕುತ್ತಾರು ಮದನಿನಗರವರೆಗಿನ ರಸ್ತೆಯನ್ನು ಎರಡನೇ ಹಂತವಾಗಿ ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲಾಗಿದೆ. ಆಸ್ಪತ್ರೆ, ವೈದ್ಯಕೀಯ ಕಾಲೇಜು, ವಾಣಿಜ್ಯ, ವಸತಿ ಸಂಕೀರ್ಣಗಳು ಹೆಚ್ಚಾದಂತೆ ವಾಹನ ದಟ್ಟಣೆಯೂ ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್ , ಸಚಿವರಾಗಿದ್ದ ಸಂದರ್ಭ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಮತ್ತೆ ಎರಡು ಹಂತಗಳಲ್ಲಿ ತೊಕ್ಕೊಟ್ಟುವರೆಗೂ ಚತುಷ್ಪಥ ರಸ್ತೆಯಾಗಿ ರೂಪಿಸುವ ಯೋಜನೆ ರೂಪಿಸಿದ್ದಾರೆ. ಸ್ಥಳೀಯರಿಗೆ ಸಂಕಟ : ಮಳೆ…

Read More

UN NETWORKS ಇರಾ : ಮಂಗಳೂರು ವಿಧಾನ ಸಭಾ ಶಾಸಕರು, ಮಾಜಿ ಸಚಿವರಾದ ಯು.ಟಿ ಖಾದರ್ ರವರು ಇಂದು ಮಲಿಯಾಳಿ ಬಿಲ್ಲವ ಸಭಾ ಭವನದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಗ್ರಾಮೀಣ ಭಾಗದಲ್ಲಿ ಸಮಸ್ಯೆಗಳನ್ನು ನೀಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗೆ ಅನುಸಾರವಾಗಿ ಹಂತ ಹಂತವಾಗಿ ಮೂಲಭೂತ ಅವಶ್ಯಕತೆ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಈ ಸಂದರ್ಭದಲ್ಲಿ ಶಾಸಕರು ತಿಳಿಸಿದರು. ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಡಿ ಎಸ್ ಗಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ,ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ ಉಮ್ಮರ್,ಗೋಪಾಲ ಅಶ್ವಥಡಿ,ಮೊಯಿದ್ದಿನ್ ಕುಂಞ,ರಮೇಶ್ ಪೂಜಾರಿ, ತುಳಸಿ, ಪಾರ್ವತಿ,ಸವಿತಾ,ಪಂಚಾಯತ್ ಅಭಿವೃದ್ದಿ ಅಧಿಕಾರಿ ನಳಿನಿ ಎ.ಕೆ ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ : ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ವತಿಯಿಂದ ಸೆಪ್ಟಂಬರ್ ನಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165 ನೇ ಜನ್ಮ ದಿನೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೊಣಾಜೆ ಬ್ರಹ್ಮಶ್ರಿ ಸೇವಾ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಪಾವೂರು ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ್ ಅಮೀನ್, ಪ್ರಧಾನ ಕಾರ್ಯದರ್ಶಿಯವರಾದ ರವೀಂದ್ರ ಬಂಗೇರ, ಸದಸ್ಯರಾದ ಗಂಗಾಧರ ಪೂಜಾರಿ, ಲಕ್ಷ್ಮಣ ಸಾಲಿಯಾನ್, ದುಗ್ಗಪ್ಪ ಪೂಜಾರಿ, ಪಿ.ಕೆ.ರಾಮ, ದಯಾನಂದ, ಸುರೇಶ್ ಪೂಜಾರಿ, ಲೋಕೇಶ್, ತಾರನಾಥ, ಜಯಾನಂದ ಅಮೀನ್, ವೇಣುಗೋಪಾಲ್, ಪುರುಷೋತ್ತಮ ಬಂಗೇರ, ಸರಿತಾ, ಪ್ರಭಾಕರ, ರವಿಕಲಾ ಸುಭಾಶ್, ಯಶೋಧರ ಅಂಚನ್, ಪ್ರವೀಣ್ ಪೂಜಾರಿ, ಜಯಂತಿ, ರವಿ ಮಲೆಕುಡಿಯ, ರವೀಂದ್ರ ಮರ್ಕಮೆ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ : ನೆರೆಯಿಂದಾಗಿ ಸಾವಿರಾರು ಕುಟುಂಬಗಳು ಬಹಳಷ್ಟು ತೊಂದರೆಗೆ ಒಳಟ್ಟಿದ್ದು ಕೃಷಿಭೂಮಿ, ಆಸ್ತಿ, ಕಾಪಡಿಕೊಂಡು ಬಂದಿದ್ದು ದಾಖಲೆ ಪತ್ರಗಳು ಸೇರಿದಂತೆ ಬದುಕು ಹೈರಾಣಾಗುವಂತೆ ಮಾಡಿದೆ. ನೆರೆಯಲ್ಲಿ ಕೆಲವರು ಕಡಿಮೆ, ಇನ್ನು ಕೆಲವರಿಗೆ ಹೆಚ್ಚು ನಷ್ಟವುಂಟಾಗಿದ್ದು ಅದರ ಬಗ್ಗೆ ಸದ್ಯಕ್ಕೆ ಲೆಕ್ಕ ಹಾಕುವುದು ಕಷ್ಟದ ಕೆಲಸ. ಹಾಗಾಗಿ ಸಂತ್ರಸ್ತರು ನೆಮ್ಮದಿಯ ಜೀವನ ಸಾಗಿಸಲು ಅಗತ್ಯವಿರುವ ವಸ್ತುಗಳನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ನಾವು ನೀಡುತ್ತಿರುವ ಸಣ್ಣ ಮಟ್ಟದ ಪರಿಹಾರ ಕಿಟ್ ನಿಜವಾಗಿ ತೊಂದರೆ, ಕಷ್ಟ, ನಷ್ಟಕ್ಕೊಳಗಾದವರು ಮಾತ್ರವೇ ಪಡೆಯಬೇಕು. ಅದರ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಅ„ಕಾರಿಗಳಿಗೆ ಸಹಕಾರ ನೀಡುವ ಮೂಲಕ ಅರ್ಹರಿಗೆ ಕಿಟ್ ದೊರಕುವಂತೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ನೆರೆಪೀಡಿತ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕಿದ್ದು ಅದಕ್ಕಾಗಿ ಪ್ಯಾಕೆಟ್ ಕ್ಲೋರಿನ್ ಉಚಿತವಾಗಿ ನೀಡಲಾಗುತ್ತಿದೆ. ವೈದ್ಯರ ತಂಡ ಸಿದ್ಧವಾಗಿ…

Read More

UN NETWORKS ತೌಡುಗೋಳಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಬಿರುಸಾದ ಗಾಳಿಗೆ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ ಗೋವಿಂದ ಗುರುಸ್ವಾಮಿ ಮಾಲೀಕತ್ವದ ಹಂಚಿನ ಕಟ್ಟಡ ಸೋಮವಾರ ರಾತ್ರಿ ಕುಸಿದು ಬಿದ್ದಿದೆ. ಮಳೆಗೆ ಸಂಪೂರ್ಣ ಧರಾಶಾಹಿಯಾಗಿದ್ದು ಸುಮಾರು ಎರಡು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Read More

UN NETWORKS ಇನೋಳಿ : ಈದುಲ್ ಅಝ್ ಹಾ ದೇವನ‌ ಪರೀಕ್ಷೆಯಲ್ಲಿ ಜಯ ಸಾಧಿಸಿದ ಪ್ರವಾದಿ ಇಬ್ರಾಹಿಂ ಮತ್ತು ಇಸ್ಮಾಯಿಲ್ ಅವರ ಸಂದೇಶ ಸಾರುವ ಪವಿತ್ರ ಹಬ್ಬವಾಗಿದ್ದು, ಈ ದಿನದಂದು ವಿಕೃತಿ ಮೆರೆಯದೆ ಹಬ್ಬದ ಪಾವಿತ್ರ್ಯ ಕಾಪಾಡಿ ಎಂದು ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ಖತೀಬ್ ಯು.ಕೆ.ಅಬೂಬಕ್ಕರ್ ಮದನಿ ಹೇಳಿದರು. ಪಾವೂರು ಗ್ರಾಮದ ಇನೋಳಿ ಜಾಮಿಯಾ ಮುಬಾರಕ್ ಮಸೀದಿಯಲ್ಲಿ ಈದುಲ್ ಅಝ್ ಹಾದ ವಿಶೇಷ ನಮಾಝ್ ನೇತೃತ್ವ ವಹಿಸಿ ಮಾತನಾಡಿದರು. ನೀರು, ಗಾಳಿ, ಪ್ರಕೃತಿ ಎನ್ನುವುದು ದೇವನ‌ ಕೊಡುಗೆಯಾಗಿದೆ. ನಾವು ಪ್ರಕೃತಿಯನ್ನು ವಿಕೃತಿ ಮಾಡಿರುವ ಪರಿಣಾಮವಾಗಿ ಇಂದು ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಈ ಮೂಲಕ ದೇವನು ಮಾನವರಿಗೆ ಶಿಕ್ಷೆ ನೀಡುತ್ತಿದ್ದಾನೆ. ಇಂದಿನ ಸಂಕಷ್ಟದ ದಿನಗಳಲ್ಲಿ ನೆರೆ ಪೀಡಿತರನ್ನೂ ಮನದಲ್ಲಿಟ್ಟುಕೊಂಡು ಅವರಿಗೆ ಸಹಾಯಹಸ್ತ ಚಾಚುವ ಮೂಲಕ ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಬೇಕಾಗಿದೆ ಎಂದು ತಿಳಿಸಿದರು.

Read More