UN NETWORKS ತಲಪಾಡಿ : ತುಳುನಾಡು ವೈಶಿಷ್ಟ್ಯದ ನಾಡು. ಇಲ್ಲಿ ಆಚರಿಸುವಂತಹ ಪ್ರತಿಯೊಂದು ಆಚರಣೆಯಲ್ಲೂ ಮನುಕುಲಕ್ಕೆ ಪೂರಕವಾಗುವಂತಹ ಅನೇಕ ವಿಚಾರಗಳು ಅಡಕವಾಗಿರುತ್ತದೆ. ಇಂತಹ ಆಚರಣೆಗಳಲ್ಲಿ ಆಟಿ ಕೂಡ ಒಂದಾಗಿದೆ. ನಮ್ಮ ಜೀವನ ಪದ್ಧತಿ ಪ್ರಕೃತಿಯ ಮೇಲೆ ಅವಲಂಬಿತವಾಗಿದ್ದು, ಈ ಪ್ರಕೃತಿಯು ಜನ ಜೀವನಕ್ಕೆ ನೀಡಿದ ಕೊಡುಗೆಯನ್ನು ನಮ್ಮ ಪ್ರಾಚೀನ ತೌಳವರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಅದರಲ್ಲೂ ಪ್ರಾಚೀನ ತುಳುವರ ಪ್ರಾಕೃತಿಕ ಆರಾಧನೆಗೆ ಆಟಿ ತಿಂಗಳೊಂದು ಮಾದರಿಯಾಗಿದ್ದು, ಅದು ತುಳು ಜನರ ಬದುಕಿನ ದಾಟಿಯೂ ಆಗಿತ್ತು ಎಂದು ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಯೊಜಿಸಿದ ಆಟಿಡೊಂಜಿ ತಮ್ಮನ ಎಂಬ ತುಳು ಸಂಸ್ಕೃತಿ ಖಾದ್ಯಗಳ ಸ್ಪರ್ಧಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಶಾರದಾ ಕಾಲೇಜಿನ ಪ್ರಾಂಶುಪಾಲ ಅಷ್ಟಾವಧಾನಿ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಜ್ ಅವರು ತೌಳವ ಸಂಸ್ಕಾರದ ವಿಶೇಷತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನದ ಆಡಳಿತಾಧಿಕಾರಿಯಾದ ವಿವೇಕ್ ತಂತ್ರಿ,…
Author: UllalaVani
UN NETWORKS ತಲಪಾಡಿ : ವಿದ್ಯಾರ್ಥಿಗಳ ಕಲಿಕೆಯು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ನಂತಹ ವೃತ್ತಿಪರ ಕ್ಷೇತ್ರಗಳಲ್ಲಿ ಸೀಟನ್ನು ಪಡೆಯುವುದೇ ಆಗಿರದೆ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಸಾರ್ಥಕತೆಯನ್ನು ಪಡೆಯಬೇಕು ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಇ. ಸಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಜಾನ್ಸನ್ ಟೆಲ್ಲೀಸ್ ಅಭಿಪ್ರಾಯಪಟ್ಟರು. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನಲ್ಲಿ ಕೇಂದ್ರ ಸರಕಾರದ ಅನುದಾನದಿಂದ ಮಂಜುರಾದ ಅಟಲ್ ಟಿಂಕರಿಂಗ್ ಲ್ಯಾಬನ್ನು ಉದ್ಘಾಟಿಸಿ ಮಾತನಾಡಿದರು. ಅಟಲ್ ಟಿಂಕರಿಂಗ್ ಪ್ರಯೋಗಾಲಯವು ವಿದ್ಯಾರ್ಥಿಗಳಿಗೆ ಜೀವನಮುಖಿ ಕೌಶಲಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದ್ದು, ಇದರ ಪ್ರಯೋಜನವನ್ನು ಪಡೆದುಕೊಂಡು ಅದರ ಜ್ಞಾನವನ್ನು ಸಮಾಜದ ಪ್ರಗತಿ ಕಾರ್ಯದಲ್ಲಿ ಬಳಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಯಾವುದೇ ಸಮಸ್ಯೆಯನ್ನು ನಿರ್ಭಯವಾಗಿ ಎದುರಿಸಬೇಕೆಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್ ವಹಿಸಿದ್ದರು. ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್, ಆಡಳಿತಾಧಿಕಾರಿ ವಿವೇಕ್ ತಂತ್ರಿ, ಶಾರದಾ ಡೇ ಬೋರ್ಡಿಂಗ್‍ನ ಪ್ರಾಂಶುಪಾಲ ಮೋಹನ್‍ದಾಸ್ ಹಾಗೂ ಲತಾಂಜಲಿ ರೈ,…
UN NETWORKS ಕೊಣಾಜೆ : ಲಯನ್ಸ್ ಕ್ಲಬ್ ಕಂಕನಾಡಿ ಪಡಿಲ್ ಇದರ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಮತ್ತು ಸದಸ್ಯರು ಕೊಣಾಜೆ ಮುಕ್ತಿ ಭೂಮಿಯ 2 ಎಕರೆ ಪ್ರದೇಶದಲ್ಲಿ ಸುಮಾರು 300 ವಿವಿಧ ತಳಿಯ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು (ಕಿಂಜ, ರಕ್ತಚಂದನ, ಸೀಬೆ, ಮತ್ತಿ, ಮಂಜೊಟ್ಟಿ, ಶಿವನೆ, ಹೊನ್ನೆ, ಶ್ರೀಗಂಧ, ಗಜಮಾವು ಮುಂತಾದ) ನೆಡುವುದರ ಮೂಲಕ ಜಿಲ್ಲಾ ರಾಜ್ಯಪಾಲ ಎಟಞಛಿo ರವರ ಗೋಗ್ರೀನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪ ಅರಣ್ಯಾಧಿಕಾರಿ ರವಿ ಕುಮಾರ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಮುಕ್ತಿ ಭೂಮಿ ಇದರ ಉಸ್ತುವಾರಿ ಪ್ರಸಾದ್ ರೈ ಈವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಕಂಕನಾಡಿ ಪಡಿಲ್ ಇದರ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಮಾಜಿ ಜಿಲ್ಲಾ ಗವರ್ನರ್ ಕೆ ಸಿ ಪ್ರಭು, ಎಂ ಸಿ ಶೆಟ್ಟಿ, ರಘುರಾಮ್ ಶೆಟ್ಟಿ, ಅರವಿಂದ್ ಶೇನೊಯ್, ಕಲ್ಲಾರೆ, ಮಮತಾ ಶೆಟ್ಟಿ, ವಿಜಯಲಕ್ಷ್ಮಿ ರೈ, ದೀಪಾಲಿ, ಮನೋಹರ್ ಶೆಟ್ಟಿ, ಮುಕ್ತಿಭೂಮಿಯ ಕೋಶಾಧಿಕಾರಿ ರವೀಂದ್ರ ರೈ, ಕಾರ್ಯದರ್ಶಿ…
UN NETWORKS ಉಳ್ಳಾಲ :ಮೊಗವೀರ ಸಂಘ ಉಳ್ಳಾಲ ಮೊಗವೀರಪಟ್ಣ ಇದರ ಆಶ್ರಯದಲ್ಲಿ ಉಳ್ಳಾಲ ಮೊಗವೀರ ಸಮಾಜದಿಂದ `ನಮ್ಮ ನಡಿಗೆ ಸೋಮನಾಥನ ಕಡೆಗೆ ಮತ್ತು ಸೋಮೇಶ್ವರ ಶ್ರೀ ಸೋಮನಾಥ ದೇವರಿಗೆ ಸಿಯಾಳಭಿಷೇಕ ಸೋಮವಾರ ನಡೆಯಿತು. ಉಳ್ಳಾಲ ಮೊಗವೀರಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಭಜನೆಯೊಂದಿಗೆ ಸಿಯಾಳಾಭಿಷೇಕ ಮಾಡಿ ಸಮುದ್ರ ರಾಜನಿಗೆ ಬಾಗಿನವನ್ನು ಅರ್ಪಿಸಿ ಮತ್ಸ್ಯ ಸಂಪತ್ತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರಪಟ್ಣ ಉಳ್ಳಾಲದ ಶ್ರೀ ವಿಠೋಭಾ ರುಕುಮಾಯಿ ಭಜನಾ ಮಂದಿರ ಮತ್ತು ಶ್ರೀ ರಾಮ ಭಜನಾ ಮಂದಿರದ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತನಾಡಿ ಶ್ರಾವಣ (ಸೋಣ )ತಿಂಗಳ ಪ್ರಥಮ ಸೋಮವಾರ ಪಾರಂಪರಿಕವಾಗಿ ಉಳ್ಳಾಲ ಮೊಗವೀರ ಸಮಾಜವು ಅನಾದಿ ಕಾಲದಿಂದಲೂ ಶ್ರೀ ಸೋಮನಾಥನಿಗೆ ಸಿಯಾಳಾಭಿಷೇಕ ನಡೆಸುವುದು ಸಂಪ್ರದಾಯವಾಗಿದ್ದು.ಹಿಂದೆ ಮೊಗವೀರ ಸಮಾಜದ ಬಾಂಧವರು ಭಜನೆಯ ಮೂಲಕ ಕಾಲ್ನಡಿಗೆಯಲ್ಲಿ ಬಂದು…
UN NETWORKS ತಲಪಾಡಿ: ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಧ್ಯಾನ ಮಂದಿರದಲ್ಲಿ ಸಂಸ್ಥೆಯ ಕನ್ನಡ ಉಪನ್ಯಾಸಕ ಹಾಗೂ ಸಂಗೀತ ಶಿಕ್ಷಕರಾದ ಗಾನ ಶ್ರೀ ಪುರಸ್ಕೃತ ಸುರೇಶ್ ರಾವ್ ಅತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ರಸಾಯನ ಶಾಸ್ತ್ರ ಉಪನ್ಯಾಸಕಿಯಾದ ಸೌಮ್ಯ ರಾವ್ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ಹಾಗೂ ದ್ವಿತೀಯ ಪಿ.ಯು.ಸಿ.ಯ ಅಕ್ಷರ್ ಮೃದಂಗ ಸಹಕಾರ ನೀಡಿದರು. ದ್ವಿತೀಯ ಪಿ.ಯು.ಸಿ.ಯ ಸುದೇಶ್ ತಬಲಾ ಸಹಕಾರ ನೀಡಿದರು. ದ್ವಿತೀಯ ಪಿ.ಯು.ಸಿ.ಯ ದೀಪ್ತಿ ವಯೋಲಿನ್ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್, ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲ ಸುಷ್ಮಾ ದಿನಕರ್, ಶಾಲಾ ಆಡಳಿತಾಧಿಕಾರಿ ವಿವೇಕ್ ತಂತ್ರಿ ಉಪಸ್ಥಿತರಿದ್ದರು.
UN NETWORKS ಮುನ್ನೂರು : ಡಿವೈಎಫ್‍ಐ ಬಟ್ಟೆದಡಿ ಘಟಕದ ಸಮ್ಮೇಳನ ಕುತ್ತಾರಿನ ತೇವುಲದಲ್ಲಿ ನಡೆಯಿತು. ಸಮ್ಮೆಳನದ ಅಂಗವಾಗಿ ಆಯೋಜಿಸಿದ್ದ ಯುವಜನರ ರ್ಯಾಲಿ ಮತ್ತು ಸಮ್ಮೇಳವನ್ನು ಬಿ.ಕೆ.ಇಮ್ತಿಯಾಜ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿತಿನ್ ಬಂಗೇರ, ಕೃಷ್ಣಮೂರ್ತಿ ತಳೆನೀರು, ಜೀವನ್ ರಾಜ್ ಕುತ್ತಾರ್ ಭಾಗವಹಿಸಿದರು. ಪ್ರತಿನಿಧಿ ಅಧಿವೇಶನಕ್ಕೆ ಸುನಿಲ್ ಕುತ್ತಾರ್ ಮಾರ್ಗದರ್ಶನ ನೀಡಿದರು. ಅ„ವೇಶನದಲ್ಲಿ ಗ್ರಾಮದ ಮತ್ತು ಪ್ರದೇಶದ ಅಭಿವೃದ್ಧಿಗಾಗಿ 7 ಪ್ರಮುಖ ನಿರ್ಣಯಗಳಿಗೆ ಅಂಗೀಕಾರ ದೊರೆಯಿತು.ನಿತಿನ್ ಕುತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕಾಸ್ ಕುತ್ತಾರ್ ಸ್ವಾಗತಿಸಿ, ಪೃಥ್ವಿರಾಜ್ ವಂದಿಸಿದರು. ದೀಕ್ಷಿತ್ ಕಂಪ ಕಾರ್ಯಕ್ರಮ ನಿರೂಪಿಸಿದರು.
UN NETWORKS ಸೋಮೇಶ್ವರ : ಕರಾವಳಿ ಕಲ್ಯಾಣ ಪರಿಷತ್ ಹಾಗೂ ಸೋಮೇಶ್ವರ ಶಕ್ತಿ ಕೇಂದ್ರ ಇದರ ವತಿಯಿಂದ ಸಮುದ್ರ ಪೂಜೆ ಸೋಮೇಶ್ವರ ರುದ್ರಪಾದೆಯ ತಟದಲ್ಲಿ ಶ್ರೀ ಮೂಕಾಂಬಿಕ ದೇವಸ್ಥಾನ, ಕೊಲ್ಯ ಇದರ ಟ್ರಸ್ಟೀ ಮಧುಸೂದನ್ ಆಯರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ ಸುಧಾಕರ್ ಭಂಡಾರಿ, ಚಂದ್ರಹಾಸ ಪಿ. ಕನೀರ್ಥೋಟ ಭಾಗವಹಿಸಿದ್ದರು. ವಿಷ್ಣು ಸಹಸ್ರ ನಾಮದ ನಂತರ ಅರ್ಚಕರಾದ ಸದಾಶಿವ ಐತಾಳ್ ಅವರು ಗಂಗಾ ಮಾತೆಗೆ ಬಾಗಿನ ಸಮರ್ಪಿಸಿದರು. ಡಾಕ್ಟರ್ ಮಾಧವಿ ಕೋಟೆಕಾರು, ಚಂಚಲಕ್ಷಿ, ಸುರೇಖಾ, ರಮಣಿ, ಗುಣವತಿ ಆಚರ್, ವಸಂತ್ ಉಳ್ಳಾಲ್, ಜಯಂತ್ ಉಪಸ್ಥಿತರಿದ್ದರು.
UN NETWORKS ಮುಡಿಪು : ಕರ್ಣಾಟಕ ಬ್ಯಾಂಕ್ ಲಿ. ಹೀಲ್ಸ್ ಮಂಗಳೂರು, ಲಯನ್ಸ್ ಕ್ಲಬ್ ಮುಡಿಪು – ಕುರ್ನಾಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನರಿಂಗಾನ ಇದರ ಜಂಟಿ ಆಶ್ರಯದಲ್ಲಿ ಗ್ರಾಮದ ಎರಡು ಬಡ ಕುಟುಂಬಗಳಿಗೆ ಸೋಲಾರ್ ಲೈಟ್ ಅನುಷ್ಠಾನ ಕಾರ್ಯಕ್ರಮ ಕಲ್ಲರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮೋಹನ್, ವಲಯ ಒಕ್ಕೂಟ ಅಧ್ಯಕ್ಷ ನವೀನ್ ಪಾದಲ್ಪಾಡಿ, ಲಯನ್ಸ್ ಕ್ಲಬ್ ಮುಡಿಪು ಇದರ ಅಧ್ಯಕ್ಷರಾದ ಉಮೇಶ್ ಗಾಂಭೀರ್ ಬೋಳ್ಯಾರುಗುತ್ತು , ಹೀಲ್ಸ್ ಮಂಗಳೂರು ಅಧ್ಯಕ್ಷ ಅಜಿತ್ ಪೂಜಾರಿ , ಸೆಲ್ಕೋ ಮಂಗಳೂರು ವಲಯದ ಮ್ಯಾನೆಜರ್ ರವೀನ ಕುಲಾಲ್ ಹಾಗೂ ಗಣ್ಯ ಅಥಿತಿಗಳ ಉಪಸ್ಥಿತಿಯಲ್ಲಿ ಫಲಾನುಭವಿಗಳಾದ ಪ್ರವೀಣ ನೆತ್ತಿಲಪದವು ಮತ್ತು ತಿಮ್ಮಪ್ಪ ಗೌಡ ಆಳ್ವರಬೆಟ್ಟು ಈ ಎರಡು ಕುಟುಂಬಗಳಿಗೆ ಸೋಲಾರ್ ಲೈಟ್ ವಿತರಿಸಲಾಯಿತು. ನಂತರ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಸೋಲಾರ್ ದೀಪ ಬೆಳಗಿಸಿ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್…
UN NETWORKS ಕೈರಂಗಳ: ಕೈರಂಗಳ ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು. ಶಾಲಾ ಸಂಚಾಲಕ ಟಿ ಜಿ ರಾಜಾರಾಮ ಭಟ್, ಸಂಸ್ಥೆಯ ಮಾರ್ಗದರ್ಶಕ ಪಿ ಶಂಕರ ಭಟ್, ಆಡಳಿತ ಮಂಡಳಿಯ ಹಿರಿಯ ಸದಸ್ಯ ಮುಂಡಾಜೆ ಬಾಲಕೃಷ್ಣ ರೈ ಮೊದಲಾದವರು ಪಾಲ್ಗೊಂಡಿದ್ದರು. ವಿಟ್ಲ ತಾಲೂಕು ಸಹಕಾರ್ಯವಾಹ ವರುಣ್ ಶಂಭೂರು ಬೌದ್ಧಿಕ್ ನಡೆಸಿಕೊಟ್ಟರು. ಶಾಲೆಯ ನೂರಾರು ಮಕ್ಕಳು ಪ್ರೀತಿಯ ಸಂಕೇತವಾದ ರಾಖಿ ಕಟ್ಟಿ ದೇಶಪ್ರೇಮ ಮೆರದರು.
UN NETWORKS ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ಸಹರಾ ಆಸ್ಪತ್ರೆ ಬಳಿ ಬಸ್ಸೊಂದು ನಡು ರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರಕ್ಕೆ ಅಡೆತಡೆಯಾಗಿದ್ದು ಬಳಿಕ ಸ್ಥಳೀಯರು ಸೇರಿ ಬಸ್ಸನ್ನು ಸ್ವಲ್ಪ ದೂರ ದೂಡಿ ಬೇರೆ ವಾಹನಗಳಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿದರೂ ಇಕ್ಕಟ್ಟಿನ ರಸ್ತೆಯಲ್ಲಿ ಪ್ರಯಾಸದಲ್ಲಿ ಘನ ವಾಹನಗಳು ಸಂಚರಿಸುವ ಸ್ಥಿತಿ ನಿರ್ಮಾಣವಾಯಿತು. ಹೆದ್ದಾರಿಯ ಅವೈಜ್ಞಾನಿಕ ರಸ್ತೆ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕಲ್ಲಾಪಿನಿಂದ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ರಸ್ತೆ ಅತ್ಯಂತ ಕಿರಿದಾಗಿದ್ದು ಏಕಮುಖ ಸಂಚಾರದಿಂದ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಸೋಮವಾರ ರಾತ್ರಿ ಮಂಗಳೂರಿನಿಂದ ಇನೋಳಿ ಕಡೆ ಸಂಚರಿಸುವ ಖಾಸಗಿ ಬಸ್ ತಾಂತ್ರಿಕ ತೊಂದರೆಯಿಂದ ರಸ್ತೆ ನಡುವೆ ಕೆಟ್ಟು ನಿಂತ ಪರಿಣಾಮ ತೊಕ್ಕೊಟ್ಟು ಕಡೆ ಸಂಚರಿಸುವ ಎಲ್ಲಾ ವಾಹನಗಳಿಗೆ ತಡೆಯಾಗಿದೆ. ಸುಮಾರು ಒಂದು ಗಂಟೆ ಸ್ಥಳೀಯರು ಕೆಟ್ಟು ನಿಂತ ಬಸ್ಸನ್ನು ಮುಂದೆ ದೂಡಿದ ಬಳಿಕ ಹಿಂದೆ ಸ್ಥಗಿತವಾಗಿದ್ದ ವಾಹನಗಳ ಸಂಚಾರಕ್ಕೆ…

