Author: UllalaVani

Kannada News From Coastal Karnataka

UN NETWORKS ಹರೇಕಳ : ಕ್ರೀಡೆ ಮನೋರಂಜನೆ ಮಾತ್ರ ಅಲ್ಲ, ಅದರಲ್ಲಿ ನಾವು ಕಲಿಯಬೇಕಾದಂತಹ ಬಹಳಷ್ಟು ಮೌಲ್ಯಗಳು ಇವೆ. ಕ್ರೀಡೆಯು ನಮಲ್ಲಿ ಪರಸ್ಪರ ಒಗ್ಗೂಡಿಸಿ ಏಕತೆಯ ಭಾವವನ್ನು ಮೂಡಿಸುವುದರೊಂದಿಗೆ ದೈಹಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ನಿವೃತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ ಅವರು ಹೇಳಿದರು. ಅವರು ಹರೇಕಳ ನ್ಯೂಪಡ್ಪುವಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಉಳ್ಳಾಲ ಹೋಬಳಿ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಉದ್ಯಮಿ ಹಾಗೂ ಪಂಚಾಯಿತಿ ಸದಸ್ಯರಾದ ಮಹಾಬಲ ಹೆಗ್ಡೆ ಅವರು ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೂ ಇಂದು ಹೆಚ್ಚಿನ ಅವಕಾಶಗಳು ಸಿಗುತ್ತಿದು ಗ್ರಾಮೀಣ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೀವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ, ದಾನಿ ಅಬ್ದುಲ್ ಮಜೀದ್, ನಿವೃತ್ತ ಶಿಕ್ಷಕ ಲಿಲ್ಲಿ ಡಿಸೋಜ, ಅಂಗನವಾಡಿ ಶಿಕ್ಷಕಿ ಪುಷ್ಪಾ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ…

Read More

UN NETWORKS ತೊಕ್ಕೊಟ್ಟು: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಎಮ್. ಗಜಾನನ್ ಕಾಮತ್ ಮೊದಲ ಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಮಂಗಳೂರಿನ ರಾವ್ ಆ್ಯಂಡ್ ಬಾಸ್ರಿ ಸಂಸ್ಥೆಯ ಲೆಕ್ಕ ಪರಿಶೋಧಕ ಶಿವಕುಮಾರ್ ಅವರಲ್ಲಿ ತರಬೇತಿ ಪಡೆದಿರುವ ಗಜಾನನ್ ಮಂಗಳೂರಿನ ಸುನೀತಾ ಕಾಮತ್ ಮತ್ತು ಎಮ್. ವಸಂತ್ ಕಾಮತ್ ದಂಪತಿಯ ಪುತ್ರ.

Read More

UN NETWORKS ಮುನ್ನೂರು : ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜಲುತೋಟ ಭಾಗದಲ್ಲಿ ಬೃಹತ್ ಬಂಡೆಕಲ್ಲು ಹಾಗೂ ಗುಡ್ಡೆ ಜರಿತ ಉಂಟಾಗಿ ಮನೆ ಕಂಪೌಂಡ್ ಗೆ ಹಾನಿಯಾಗಿ, 250 ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೋಮನಾಥ ಉಳಿಯ ದಿಂದ ರಾಣಿಪುರ ಉಳಿಯ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತವಾಗಿದೆ. ನಾರಾಯಣ ಎಂಬವರ ಮನೆಯ ಕಂಪೌಂಡ್ ಮತ್ತು ರಸ್ತೆಗೆ ಗುರುವಾರ ತಡರಾತ್ರಿ 2.30 ಹೊತ್ತಿಗೆ ಬಂಡೆಕಲ್ಲು ಉರುಳಿದೆ. ರಸ್ತೆಯ ಮೇಲೆಯೇ ಬೃಹತ್ ಗಾತ್ರದ ಕಲ್ಲು ಉರುಳಿದ ಪರಿಣಾಮ ತೆರವುಗೊಳಿಸಲು ಹಲವು ದಿನಗಳು ಬೇಕಾಗಿವೆ. ಅಷ್ಟರವರೆಗೆ ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಲಿದೆ. 20 ವರ್ಷಗಳ ಹಿಂದೆ ರಸ್ತೆ ನಿರ್ಮಾಣದ ಸಂದರ್ಭ ಬಂಡೆಕಲ್ಲಿನ ಗಾತ್ರದಿಂದಾಗಿ ತೆರವುಗೊಳಿಸಲು ಅಸಾಧ್ಯವಾಗಿತ್ತು. ಹಾಗೆಯೇ ಬಿಟ್ಟು ರಸ್ತೆ ನಿರ್ಮಿಸಿದ್ದರಿಂದಾಗಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಭಾಗದಲ್ಲಿ ಜನರು ಬಂಡೆಕಲ್ಲಿನಡಿಯಿಂದ ತೆರಳುವಾಗ ಆತಂಕಪಡುತ್ತಿದ್ದರು. ಅದೃಷ್ಟವಶಾತ್ ಬಂಡೆಕಲ್ಲು ರಾತ್ರಿ ಹೊತ್ತಿನಲ್ಲಿ ಉರುಳಿರುವುದರಿಂದ ರಸ್ತೆಯಲ್ಲಿ ಸಂಚಾರವಿಲ್ಲದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಸಮೀಪದಲ್ಲೇ ಮನೆಯೂ ಇದ್ದು, ಕಂಪೌಂಡಿಗೆ ಮಾತ್ರ ಬಿದ್ದಿರುವುದು ಪವಾಡಸದೃಶವಾಗಿದೆ…

Read More

UN NETWORKS ತೊಕ್ಕೊಟ್ಟು : ಅತಿವೃಷ್ಠಿ ಅನಾವೃಷ್ಠಿಯಿಂದ ತೊಂದರೆಗೆ ಒಳಗಾದ ಎಲ್ಲ ಕುಟುಂಬಗಳಿಗೆ ಸರಕಾರದಿಂದ ಮಂಜೂರಾದ ಸವಲತ್ತುಗಳನ್ನು ಶೀಘ್ರದಲ್ಲಿಯೇ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 1050ಮಂದಿ ನೆರೆ, ಪ್ರವಾಹ ಸಂತ್ರಸ್ತರಿಗೆ ತೊಕ್ಕೊಟ್ಟು ಖಾಸಗಿ ಹಾಲ್‍ನಲ್ಲಿ ಅವರು ಬುಧವಾರ ಪರಿಹಾರದ ಚೆಕ್ ವಿತರಿಸಿದರು. ಪರಿಹಾರ ಸಿಗದ ಕುಟುಂಬಸ್ಥರು ನಿರಾಶೆಯಾಗದೆ ಮೊತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಆ ಕುಟುಂಬಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಭಾಗಶಃ ಹಾನಿ ಹಾಗೂ ಸೊತ್ತು ನಾಶವಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರದ ನೆಲೆಯಲ್ಲಿ ತಲಾ 10ಸಾವಿರ ರೂ. ಗಳ ಚೆಕ್ ವಿತರಿಸಲಾಯಿತು. ರಾಜ್ಯ ಸರಕಾರದ ನೆರೆ ಪರಿಹಾರ ಯೋಜನೆಯ ಮೂಲಕ ಈ ಪರಿಹಾರದ ಚೆಕ್‍ನ್ನು ವಿತರಿಸಲಾಗಿದ್ದು 1050ಮಂದಿ ನೆರೆ ಸಂತ್ರಸ್ತರು ಈ ಯೋಜನೆಯ ಫಲಾನುಭವಿಗಳಾಗಿ ಪ್ರಯೋಜನ ಪಡೆದುಕೊಂಡರು. ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಪುರಸಭೆಯ ಮಾಜಿ…

Read More

UN NETWORKS ನವದೆಹಲಿ : ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕಗೊಳಿಸಲಾಗಿದೆ.ಸತತ ಮೂರು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷದಲ್ಲಿ ರಾಜ್ಯಾಧ್ಯಕ್ಷದಂತಹ ಮಹತ್ವದ ಹುದ್ದೆ ಸಿಗುತ್ತಿರುವುದು ಇದೇ ಮೊದಲು. ಸಾಮಾನ್ಯ ಕಾರ್ಯಕರ್ತನಿಂದ ಸಂಸದರಾಗಿ ಸತತ ಮೂರು ಸಲ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಇದೀಗ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಲಿದುಬಂದಿದ್ದು ಮುಂಬರುವ ದಿನಗಳಲ್ಲಿ ಪಕ್ಷವನ್ನು ರಾಜ್ಯಮಟ್ಟದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ಸವಾಲು ಈ ಯುವ ಸಂಸದರ ಹೆಗಲಿಗೆ ಬಿದ್ದಿದೆ.ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ ಸೈಂಟ್‌ ಫಿಲೋಮಿನಾ ಹೈಸ್ಕೂಲ್‌ ನಲ್ಲಿ ಪ್ರೌಢ ಶಿಕ್ಷಣ ಪಡೆದ ನಳಿನ್‌ ಆ ಕಾಲದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ಆಕರ್ಷಿತರಾಗಿ ತಮ್ಮ 18ನೇ ವಯಸ್ಸಿನಲ್ಲೇ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಹೀಗೆ 12 ವರ್ಷಗಳ ಕಾಲ ಆರ್‌.ಎಸ್‌.ಎಸ್‌. ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಜಿಲ್ಲಾ…

Read More

UN NETWORKS ಉಳ್ಳಾಲ : ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದ ತೊಂದರೆಗೊಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡುವ ದೃಷ್ಟಿಯಿಂದ ದೇರಳಕಟ್ಟೆಯಲ್ಲಿ ಬೆಳ್ಮ ಗ್ರಾಮ ನಾಗರಿಕರ ವತಿಯಿಂದ ನೆರೆ ಪರಿಹಾರ ನಿಧಿ ಮತ್ತು ಅಗತ್ಯ ವಸ್ತುಗಳ ಸಂಗ್ರಹ ದೇರಳಕಟ್ಟೆಯಲ್ಲಿ ನಡೆಯಿತು. ಬೆಳ್ಮ ಗ್ರಾಮ ನಾಗರಿಕರು ದೇರಳಕಟ್ಟೆಯಲ್ಲಿರುವ ವಿವಿಧ ಅಂಗಡಿಗಳಿಂದ ಅಗತ್ಯ ವಸ್ತುಗಳ ಸಂಗ್ರಹ ಮಾಡಿದರು. ಈ ಬಗ್ಗೆ ಮಾತನಾಡಿದ ಶಾಸಕ ಯು.ಟಿ. ಖಾದರ್, ವಿಪರೀತ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಬೆಳ್ಮ ಗ್ರಾಮ ನಾಗರಿಕರು ನೆರೆ ಪರಿಹಾರ ಯೋಜನೆ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು. ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್, ಸದಸ್ಯರಾದ ಕಬೀರ್ ದೇರಳಕಟ್ಟೆ, ರಝಾಕ್,ರ ಉಳ್ಳಾಲ ಯೂತ್ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ., ಸಯ್ಯದ್ ಅಲಿ, ಫಾರೂಕ್, ಶರೀರ್ಫ ಕಾನಕೆರೆ, ರವಿರಾಜ್ ಶೆಟ್ಟಿ, ಉಸ್ಮಾನ್ ಕಾನಕೆರೆ, ರವೂಫ್ ರೆಂಜಾಡಿ, ನವೀನ್ ಕುಮಾರ್, ಅಬ್ದುಲ್ ಖಾದರ್ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಬಗಂಬಿಲ : ದ.ಕ.ಜಿಲ್ಲೆಯ ದೇವಸ್ಥಾನಗಳಲ್ಲಿ ಬೆಳ್ಳಿಯ ಪಲ್ಲಕ್ಕಿ ಇದೆಯಾದರೂ ಭಜನಾ ಮಂದಿರದಲ್ಲಿ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾಗಿದೆ ಎಂದು ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಸೋಮವಾರ ಬಗಂಬಿಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಶ್ರೀ ಕೃಷ್ಣ ಕನ್ಮಾಷ್ಠಮಿಯ ಶೋಭಾಯಾತ್ರೆಗೆ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಜತ ಪೀಠ, ಮಂಟಪ, ಬೆಳ್ಳಿ ಪ್ರತಿಮೆಯ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು. ಕುಂಪಲದಲ್ಲಿ ಬಾಲಕೃಷ್ಣ ಮಂದಿರ ನಿರ್ಮಾಣ ಆಗುವಲ್ಲಿ ಸತ್ಯನಾರಾಯಣ ಮಂದಿರದ ಕೊಡುಗೆ ಅಪಾರ. ಈ ಮೂಲಕ ಸಂಘಟನೆಗಳು ಒಂದಾಗಿದ್ದು 28ನೇ ವರ್ಷದ ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಬಹುದಿನಗಳ ಆಶಯದಂತೆ 15 ಲಕ್ಷ ವೆಚ್ಚದಲ್ಲಿ ಬೆಳ್ಳಿಯ ಮಂಟಪ ನಿರ್ಮಾಣವಾಗಿದ್ದು ಇದಕ್ಕೆ ಭಕ್ತರ ಸಹಕಾರ, ದೇವರ ಆಶೀರ್ವಾದ ಕಾರಣ ಎಂದು ತಿಳಿಸಿದರು. ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀ ದುರ್ಗಾಪರಮೇಶ್ವರಿ ಮಂದಿರದ ಪ್ರಧಾನ ಅರ್ಚಕ ಭವಾನಿ ಶಂಕರ್ ಸಾಂತಿ, ಬಾಲಕೃಷ್ಣ ಮಂದಿರದ…

Read More

UN NETWORKS ತೊಕ್ಕೊಟ್ಟು : ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಕೊಡಗು ನೆರೆ ಪೀಡಿತರಿಗೆ ಪರಿಹಾರ ಕಾರ್ಯವನ್ನು ತೊಕ್ಕೊಟ್ಟುವಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು. ನೆರೆ ಪೀಡಿತರಿಗಾಗಿ ಸಂಗ್ರಹಿಸಿದ ಅಗತ್ಯ ಸಾಮಗ್ರಿಗಳನ್ನು ವಾಹನಗಳ ಮೂಲಕ ಕಳುಹಿಸುವ ಕಾರ್ಯಕ್ರಮ ನಡೆಯಿತು. ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರೊಫೆಸರ್ ಹನುಮಾನ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಅಬ್ದುಲ್ ಸಲಾಂ, ವಲಯ ಕಾರ್ಯದರ್ಶಿ ಇಲ್ಯಾಸ್, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಮತ್ತು ಸಂಘಟನಾ ಸದಸ್ಯರು ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಉಳಾಲ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಉಳ್ಳಾಲ : ಒಂಭತ್ತು ಮಾಗಣೆ ಸೀಮೆ ಗಟ್ಟಿಯವರ ಕುಲಸ್ವಾಮಿ ಶ್ರೀ ಸೋಮನಾಥ ಸೇವಾ ಸಮಿತಿ ಅಧ್ಯಕ್ಷರಾಗಿ ಯಾದವ ಗಟ್ಟಿ ಮಡ್ಯಾರ್ ಆಯ್ಕೆಯಾಗಿದ್ದಾರೆ. ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಸಮಿತಿ ಅಧ್ಯಕ್ಷ ಕೆ.ಆರ್. ಗಟ್ಟಿ ಕೊರಂತೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವರಾಮ ಗಟ್ಟಿ ಉಳ್ಳಾಲ ಬೈಲು, ಕೋಶಾಧಿಕಾರಿಯಾಗಿ ಸತ್ಯಮೋಹನ್ ಪಾಂಡೇಶ್ವರ, ಕಾರ್ಯದರ್ಶಿಯಾಗಿ ಭಾಸ್ಕರ ಗಟ್ಟಿ ಕಾಪಿಕಾಡು, ಉಪಾಧ್ಯಕ್ಷರಾಗಿ ಕೆ. ಗೋಪಾಲರ್ಕಷ್ಣ ಕುಂಬ್ಳೆ, ಜೊತೆ ಕಾರ್ಯದರ್ಶಿಗಳಾಗಿ ಸದಾಶಿವ ಕೋಟೆಕಾರು, ಭುಜಂಗ ಗಟ್ಟಿ ಬೆಳ್ಮ ಕಟ್ಟಪುಣಿ ಮತ್ತು ಕಾರ್ಯಕಾರಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Read More

UN NETWORKS ಮುನ್ನೂರು : ಡಿವೈಎಫ್‍ಐ ಬಟ್ಟೆದಡಿ ಘಟಕದ ಅಧ್ಯಕ್ಷರಾಗಿ ಭರತ್ ರಾಜ್ ಡಿ. ಆಯ್ಕೆಯಾಗಿದ್ದಾರೆ. ಕುತ್ತಾರಿನ ತೇವುಲ ನಡೆದ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಸಮ್ಮೇಳನದಲ್ಲಿ ಘಟಕದ ಕಾರ್ಯದರ್ಶಿಯಾಗಿ ಸಂಕೇತ್ ಕಂಪ, ಕೋಶಾಧಿಕಾರಿಯಾಗಿ ಪೃಥ್ವಿರಾಜ್ ಕಬೆಕೋಡಿ, ಉಪಾಧ್ಯಕ್ಷರುಗಳಾಗಿ ಯೋಗಿಶ್ ಎಸ್, ಶ್ರಾವಣ್ ತೇವುಲ, ದಿವ್ಯರಾಜ್ ತೇವುಲ ಮತ್ತು ಜೊತೆ ಕಾರ್ಯದರ್ಶಿಗಳಾಗಿ ಮಿಥುನ್ ರಾಜ್ ಕಂಪ, ದೀಕ್ಷಿತ್ ತೇವುಲ, ನಿತೇಶ್ ಪೂಜಾರಿ ತಲೆನೀರು 15 ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Read More