UN NETWORKS ಉಳ್ಳಾಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆಯುವ 22ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಶ್ರೀಜಾ ಪ್ರಹ್ಲಾದ್ ಕುಮಾರ್ ಇಂದಾಜೆ, ವೀಣಾ ತಿಮ್ಮಯ್ಯ ಆಶ್ರಯಕಾಲನಿ, ಸ್ಮಿತಾ ಪ್ರವೀಣ್.ಐ ಬಗಂಬಿಲ, ಗೀತಾಂಜಲಿ ಅಭಿಜಿನ್ ಕುಂಪಲ, ಮಧುರ ಅನ್ವಿತ್ ಸಾಮಾನಿ ಮೊಗರು ಬನತಾಡಿ ದಂಪತಿ ನಂದಾದೀಪ ಬೆಳಗಿಸಿ ಚಾಲನೆ ನೀಡಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾಧಿಕಾರಿ ಮಾಧವ ಬಂಗೇರ, ಸಂಘಟನಾ ಕಾರ್ಯದರ್ಶಿ ಪ್ರವೀಣ್.ಎಸ್.ಕುಂಪಲ, ಉತ್ಸವ ಸಮಿತಿಯ ಗೌರವಾಧ್ಯಕ್ಷ ಸೋಮಶೇಖರ್ ಜಗತಾಪ್, ಅಧ್ಯಕ್ಷ ಪ್ರಕಾಶ್ ಕುಂಪಲ, ಸಂಚಾಲಕ ಗಣೇಶ್ ಶಿಲ್ಪಿ, ಕಾರ್ಯದರ್ಶಿ ಚೇತನ್ ಶೆಟ್ಟಿ, ಪದಾಧಿಕಾರಿಗಳಾದ ಅಶೋಕ್ ಕೆ, ಶಿವಾನಂದ ಟೈಲರ್, ಜಗದೀಶ್ ಆಚಾರ್ಯ, ಚನಿಯ ನಾಯ್ಕ್, ನಾಗೇಶ್ ಕುಂಪಲ, ಚಂದ್ರಶೇಖರ್ ಬಿಜೆ, ವೆಂಕಟೇಶ್ ಕುಂಪಲ, ಗೋಪಾಲಕೃಷ್ಣ ರಾವ್, ಚಂದ್ರಹಾಸ್ ಮೂರುಕಟ್ಟ, ವಿಕಾಸ್ ರಾವ್, ಮಹಾಬಲ ಬಂಗೇರ, ಹರೀಶ್ ಅಂಬ್ಲಮೊಗರು, ಅನಿಲ್ ಬಗಂಬಿಲ, ಮಹಿಳಾ ಸಮಿತಿ ಅಧ್ಯಕ್ಷೆ ಮಾಲತಿ…
Author: UllalaVani
UN NETWORKS ಉಳ್ಳಾಲ : ಎಸ್ ವೈಎಸ್ ಕಲ್ಕಟ್ಟ ಶಾಖೆ ಇದರ ಸದಸ್ಯತ್ವ ಅಭಿಯಾನವು ಎಸ್‍ವೈಎಸ್ ಅಧ್ಯಕ್ಷ ಮೋನು ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಕಲ್ಕಟ್ಟ ಜಂಕ್ಷನ್‍ನಲ್ಲಿ ನಡೆಯಿತು.ಅಬ್ದುಲ್ ರಹ್ಮಾನ್ ರಝ್ವಿ ಅಭಿಯಾನವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಕಾಯಕ್ರಮದಲ್ಲಿ ಎಸ್ ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಕಂಡಿಕ ಹಾಜಿ, ಪೊಡಿಯಬ್ಬ ಹಾಜಿ, ಟಿಎಚ್ ಹಸೈನಾರ್, ಮಹ್ಮದ್ ಮಾಸ್ಟರ್, ಅಬ್ದುಲ್ ರಝಾಕ್ ಸಅದಿ ಉಪಸ್ಥಿತರಿದ್ದರು.ಇಬ್ರಾಹಿಂ ಸ್ವಾಗತಿಸಿ ವಂದಿಸಿದರು.
UN NETWORKS ಅಸೈಗೋಳಿ : ಸಾಮಾಜಿಕ, ಧ್ಯಾನಕ್ಕೆ ಸಂಬಂಧಿಸಿದ ಚರಿತ್ರೆ ಶ್ರೀ ಕೃಷ್ಣನ ಜೀವನದಲ್ಲಿದೆ. ವ್ಯಕ್ತಿತ್ವ, ವಿಶಾಲ ಹೃದಯ ಶ್ರೀ ಕೃಷ್ಣನಲ್ಲಿದ್ದ ಕಾರಣ ಹೆಸರು ಇಂದು ವಿಶ್ವ ವ್ಯಾಪಿಯಾಗಿ ಬೆಳೆಯುವಂತಾಗಿದೆ. ಇಂತಹ ವ್ಯಕ್ತಿತ್ವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು. ಅಸೈಗೋಳಿ ಯುವಕ ಮಂಡಲ ಹಾಗೂ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಶನಿವಾರ ಅಸೈಗೋಳಿ ಮೈದಾನದಲ್ಲಿ ನಡೆದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಭಾರತೀಯರು ಕುಟುಂಬ ಪದ್ದತಿಯಲ್ಲಿ ನಂಬಿಕೆ ಇಟ್ಟಿದ್ದು ಹೆತ್ತವರು ವಯೋವೃದ್ಧರಾದಾಗ ಆಶ್ರಮಕ್ಕೆ ಸೇರಿಸುವ ಮಕ್ಕಳು ಭಾರತದಲ್ಲಿ ಹುಟ್ಟಬಾರದು. ನಮ್ಮ ವಿದ್ಯೆಯ ಕೊಡುಗೆ ಹೆತ್ತವರಿಗೂ, ಸಮುದಾಯಕ್ಕೂ ಸಿಗಬೇಕು. ಅಸೈಗೋಳಿಯಲ್ಲಿ ನಡೆಯುವ ಉತ್ಸವದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸುವುದರಿಂದ ಇಲ್ಲಿ ಮಾನವೀಯತೆ ಕಾಣಲು ಸಾಧ್ಯ ಎಂದು ಹೇಳಿದರು. ಕುರ್ನಾಡು ಗ್ರಾಮ ಪಂಚಾಯಿತಿ ಮಾಜಿ…
UN NETWORKS ಉಪ್ಪಿನಂಗಡಿ : ನಿಝಾಮುದ್ದೀನ್ ಕೆಂಪಿ ರವರ ಸ್ಮರಣಾರ್ಥ ಉಬಾರ್ ಡೋನರ್ಸ್ , ಮಂಬಾಹು ರಹ್ಮ ಚಾರಿಟೇಬಲ್ ಟ್ರಸ್ಟ್ ಬ್ಲಡ್ ಡೋನಸ್ 9 ಮಂಗಳೂರು ಐ.ಎಂ.ಡಬ್ಲ್ಯು ಎ ಪೆರಿಯಡ್ಕ ಸಿಲ್ವರ್ ಸ್ಪೂ ನ್ ಕ್ಯಾಟರರ್ಸ್ ಹಾಗೂ ಮಂಗಳೂರಿನ ಎ.ಜೆ ಅಸ್ಪತ್ರೆಯ ಸಹಯೋಗದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ 200ನೇ ರಕ್ತದಾನ ಶಿಬಿರ ಉಪ್ಪಿನಂಗಡಿಯ ಪೃಥ್ವಿ ಶಾಪಿಂಗ್ ಮುಂಬಾಗದಲ್ಲಿ ನಡೆಯಿತು. ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬ್ ನಝೀರ್ ಅಝ್ ಹರಿ ಬೊಳ್ಮಿನಾರು ದುಅ ಆರ್ಶಿವಚಣಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಮಾಜಿಕ ತಾಣವನ್ನು ದುರುಪಯೋಗ ಅಗುತ್ತಿರುವ ಕಾಲದಲ್ಲಿ ಬ್ಲಡ್ ಡೋನರ್ಸ್ ನ ಯುವಪಡೆ ಸಮಾಜಿಕ ಜಾಲ ತಾಣವನ್ನು ಸಂಪೂರ್ಣವಾಗಿ ಸದ್ದುಪಯೋಗೊಳಿಸಿ ರೋಗಿಗಳಿಗೆ ಅಸರೆಯಟಗುತ್ತಿದ್ದಾರೆ. ಈ ಕಾರ್ಯ ಶ್ಲಾಘನಿಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಅನುಚೇತ್ ಕುಮಾರ್ ಹಾಗೂ ಅಮಾನ್ ಕೆ.ಎ ಮತ್ತು ಸಮಾಜ ಸೇವಕರಾದ ನಝೀರ್ ಹಂಡೇಲ್ ರವರನ್ನು ಸನ್ಮಾನಿಸಲಾಯಿತು. ಎಸ್ ಡಿ ಪಿಐ ರಾಜ್ಯ ಪ್ರ.ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮುಖ್ಯ ಅತಿಥಿಯಾಗಿ…
UN NETWORKS ಪಾನೀರ್ : ಇಂದು ಒತ್ತಡ ಜೀವನದ ಕಾರಣ ಯುವಸಮುದಾಯ ಒಂದೆಡೆ ಸೇರಿ ಪರಸ್ಪರ ಸಂತೋಷ ಹಂಚಿಕೊಳ್ಳುವ ಅವಕಾಶ ಕಡಿಮೆ ಸಿಗುತ್ತಿದೆ, ಇಂತಹ ಸಂದರ್ಭಗಳಲ್ಲಿ ಯುವ ಮಿಲನದಂತಹ ಕಾರ್ಯಕ್ರಮ ಅಯೋಜಿಸುವುದು ಅತೀ ಮುಖ್ಯ ಎಂದು ಆಸಿಸ್ಸಿ ಸೆಂಟ್ರಲ್ ಶಾಲೆ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾಯಸ್ ಅಭಿಪ್ರಾಯಪಟ್ಟರು. ಪಾನೀರ್ ಮೆರ್ಸಿಯಮ್ಮನವರ ಇಗರ್ಜಿ ವತಿಯಿಂದ ಭಾನುವಾರ ನಡೆದ ಇಗರ್ಜಿಯ ಸಭಾಂಗಣದಲ್ಲಿ ನಡೆದ ಯುವ ಮಿಲ್ನ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀವು ಯಾವ ಕುಟುಂಬ, ಯಾವ ಊರಿನಿಂದ ಬಂದಿದ್ದೀರಿ ಎನ್ನುವುದು ಮುಖ್ಯವಲ್ಲ, ನೀವು ಸಮಾಜದಲ್ಲಿ ಯಾವ ರೀತಿ ಬೆರೆಯುತ್ತೀರಿ ಎನ್ನುವುದು ಮುಖ್ಯ. ಯುವ ಮಿಲನ್ ಎಂದರೆ ಕೇವಲ ನರ್ತಿಸುವುದು ಮಾತ್ರ ಎಂದು ಭಾವಿಸದೆ ಇದರಲ್ಲಿ ಭಾಗವಹಿಸಿದವರು ಜೀವನಕ್ಕೆ ಸಂಬಂಧಿಸಿ ಒಂದಷ್ಟು ಅನುಭವ ಪಡೆದುಕೊಂಡು ಕಾರ್ಯಕ್ರಮ ಸಾರ್ಥಕ ಎನಿಸುವಂತೆ ಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಮಾತನಾಡಿ, ಯೌವನ ಎನ್ನುವುದು ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ಯುವ ಮಿಲನ್ ನಲ್ಲಿ ನಡೆಯುವ…
UN NETWORKS ತೊಕ್ಕೊಟ್ಟು : ಈ ಬಾರಿಯ ತೊಕ್ಕೊಟ್ಟು ಮೊಸರುಕುಡಿಕೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಸಾರಥ್ಯದ ಹುಲಿವೇಷಧಾರಿಗಳ ತಂಡ ಹೆಜ್ಜೆಹಾಕಿದೆ. ಓವರ್ ಬ್ರಿಡ್ಜ್ ಫ್ರೆಂಡ್ಸ್ ತೊಕ್ಕೊಟ್ಟು ಇವರ 51 ಹುಲಿ ಹುಲಿವೇಷಧಾರಿಗಳು ತಂಡದಲ್ಲಿ ವೇಷ ಹಾಕಿದ್ದಾರೆ. ಹಲವು ವರ್ಷಗಳಿಂದ ತಂಡ ಹುಲಿವೇಷ ಧರಿಸುತ್ತಿದೆ. ಆದರೆ ಈ ಬಾರಿ ತಂಡದ ಸಾರಥ್ಯವನ್ನು ಮಾಜಿ ಸಚಿವ ಯು.ಟಿ.ಖಾದರ್ ವಹಿಸಿಕೊಂಡಿರುವುದು ವಿಶೇಷವಾಗಿದೆ. ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ಶುಕ್ರವಾರ ತಂಡ ಬಣ್ಣ ಹಚ್ಚಿತ್ತು. ಯುವಕರು, ಹಿರಿಯರು ಮಕ್ಕಳು ಸೇರಿದಂತೆ ಒಟ್ಟು 51 ಮಂದಿ ವೇಷ ಧರಿಸಿದ್ದಾರೆ. ತುಳುನಾಡಿನ ಸಂಸ್ಕೃತಿಗೆ ಸ್ಫೂರ್ತಿ ಕೊಡುವವರು ಇನ್ನಷ್ಟು ಬೇಕಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಂಡದ ಸಾರಥ್ಯ ವಹಿಸಿಕೊಂಡಿರುವೆನು. ತೊಕ್ಕೊಟ್ಟುವಿನಲ್ಲಿ ನಡೆಯುವ ಕೃಷ್ಣ ಜನ್ಮಾಷ್ಠಮಿಗೆ ಹಲವು ವರ್ಷಗಳ ಇತಿಹಾಸವಿದೆ. ಎಲ್ಲರೂ ಸೌಹಾರ್ದಯುತವಾಗಿ ಆಚರಿಸುವ ಉತ್ಸವ ಇದಾಗಿದೆ. ಸಾವಿರಾರು ಜನರು ಸೇರುವ ಉತ್ಸವ ನಾಡಿಗೆ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಂಡದ ನೇತೃತ್ವವನ್ನು…
ಉಳ್ಳಾಲ : ಬಾವಿಗೆ ಬಿದ್ದು ಹುಲಿವೇಷಧಾರಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ವಿದ್ಯಾನಗರ ಎಂಬಲ್ಲಿ ಶುಕ್ರವಾರ ತಡರಾತ್ರಿ ವೇಳೆ ಸಂಭವಿಸಿದೆ. ಮಂಗಳೂರು ಗರೋಡಿ ನಿವಾಸಿ ವಸಂತ ಕುಮಾರ್ (57) ಸಾವನ್ನಪ್ಪಿದವರು. ಕುಂಪಲ ವಿದ್ಯಾನಗರದ ಅನಿಲ್ ಎಂಬವರ ಮನೆಯಲ್ಲಿ ಶವ ಪತ್ತೆಯಾಗಿದೆ. ಶರತ್ ಎಂಬವರ ಮಾಲೀಕತ್ವದ ಹುಲಿವೇಷಧಾರಿಗಳ ತಂಡದಲ್ಲಿ ಬಣ್ಣ ಹಚ್ಚಿದ್ದ ವಸಂತ್ ಅವರು, ಕುಂಪಲ ಮೊಸರುಕುಡಿಕೆ ಉತ್ಸವದ ಟ್ಯಾಬ್ಲೋ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಬಳಿಕ ತಡರಾತ್ರಿಯಿಂದ ನಾಪತ್ತೆಯಾಗಿದ್ದರು. ತಡರಾತ್ರಿ ಬಾವಿಯ ದಂಡೆಯಲ್ಲಿ ಕುಳಿತ ಸಂದರ್ಭ ಆಯತಪ್ಪಿ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ. ಬಾವಿಯ ಮೇಲೆ ಶೀಟು ಹಾಯಿಸಿದ್ದ ಪರಿಣಾಮ ಬಾವಿಯೊಳಕ್ಕೆ ವಸಂತ್ ಅವರು ಬಿದ್ದಿರುವುದು ಗೋಚರಿಸಿರಲಿಲ್ಲ. ತಡರಾತ್ರಿಯಿಡೀ ತಂಡದವರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಸಂಜೆ ವೇಳೆ ಶಾಮಿಯಾನದವರು ಶೀಟು ತೆಗೆಯಲು ಮುಂದಾದ ಸಂದರ್ಭ ವೇಷಧಾರಿಗಳು ಹಾಕುವ ಹುಲಿಯ ತಲೆ ಗೋಚರಿಸಿತ್ತು. ಸಂಶಯಗೊಂಡು ಅಗ್ನಿಶಾಮಕ ದಳದವರಿಗೆ ಕರೆಸಿ, ಬಾವಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ. ಪಣಂಬೂರು ಹಾರ್ಬರ್ ನಲ್ಲಿ ಇಲೇಕ್ಟ್ರೀಷಿಯನ್ ವೃತ್ತಿಯನ್ನು…
UN NETWORKS ಬೋಳಿಯಾರ್ : ಆಂಗ್ಲಮಾಧ್ಯಮ ಶಿಕ್ಷಣದತ್ತ ಆಸಕ್ತರಾಗಿರುವ ಗ್ರಾಮೀಣ ಭಾಗದ ಗದ್ದೆಗಳಲ್ಲಿ ದುಡಿದು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ, ಆದರೆ ಗದ್ದೆಗಳಿಗೆ ಮಕ್ಕಳನ್ನು ಇಳಿಸಿ ಮಣ್ಣಿನ ಗುಣ, ನಮ್ಮ ಸಂಸ್ಕೃತಿ ತಿಳಿಸುವುದರಲ್ಲಿ ಹಿಂದುಳಿದಿದ್ದಾರೆ ಎಂದು ಬೋಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಅಭಿಪ್ರಾಯಪಟ್ಟರು. ಬೋಳಿಯಾರ್ ಗ್ರಾಮದ ಧರ್ಮನಗರದಲ್ಲಿ ಶನಿವಾರ ನಡೆದ14ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ, ಸಮಾಜ ನಮ್ಮನ್ನು ಗುರುತಿಸಿಲ್ಲ ಎಂದು ಕೊರಗುವ ಬದಲು ನಾವು ಸಮಾಜಕ್ಕೇನು ಮಾಡಿದ್ದೇವೆ ಎನ್ನುವ ಬಗ್ಗೆ ಯೋಚಿಸುವುದು ಮುಖ್ಯ. ನಾವು ಸಮಾಜದಲ್ಲಿ ನಡೆಸುವ ಕಾರ್ಯ ಚಟುವಟಿಕೆಗಳು ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ತಿಳಿಸಿದರು. ಪಜೀರ್ ಗೋವನಿತಾಶ್ರಯ ಟ್ರಸ್ಟ್ ನ ಟ್ರಸ್ಟಿ ರವಿ ರೈ ಪಜೀರ್, ಪತ್ರಕರ್ತ ವಿನಯಕೃಷ್ಣ ಭಟ್ ಕುರ್ನಾಡ್, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘದ ಅಧ್ಯಕ್ಷ ವಿಜಯ್ ಕುಮಾರ್ ಪಾವೂರು,…
UN NETWORKS ಕೊಣಾಜೆ: ಹಬ್ಬ ಹರಿದಿನಗಳನ್ನು ನಾವು ಸಾರ್ವಜನಿಕವಾಗಿ ಆಚರಿಸುವುದರಿಂದ ಅದರ ಪ್ರಾಮುಖ್ಯತೆ ಹೆಚ್ಚುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸರ್ವಧರ್ಮಗಳ ಜನರ ಪಾಲ್ಗೊಳ್ಳುವಿಕೆಯಿಂದ ಒಳಗೊಳ್ಳುವಿಕೆ, ಸೌಹಾರ್ದತೆ, ಸಾಮರಸ್ಯದ ಭಾವ ಬೆಳೆಯಲು ಸಾಧ್ಯವಾಗುತ್ತದೆ. ಕೊಣಾಜೆಯಲ್ಲಿ ಮೊಸರುಕುಡಿಕೆ ಉತ್ಸವದ ಅಂಗವಾಗಿ ನಡೆದ ಸರ್ವಧರ್ಮ ಸಮನ್ವಯ ಕಾರ್ಯಕ್ರಮ ಅನುಕರಣೀಯವಾದುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು. ಅವರು ಕೊಣಾಜೆಯ ಮಂಗಳ ಗ್ರಾಮೀಣ ಯುವಕ ಸಂಘ, ಮೊಸರು ಉತ್ಸವ ಸಮಿತಿ ಕೊಣಾಜೆ, ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಕೊಣಾಜೆ ಇದರ ಆಶ್ರಯದಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೊಣಾಜೆಯಲ್ಲಿ ಶುಕ್ರವಾರ ನಡೆದ 16ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಹಾಗೂ ಸರ್ವಧರ್ಮ ಸಮನ್ವಯ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಶ್ರೀಮಂತಿಯನ್ನು ನಾವು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ. ಶ್ರೀಮಂತಿಕೆ ಇರುವುದು ಹೃದಯ ವೈಶಾಲ್ಯತೆಯಲ್ಲಿ. ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡುವುದರೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕಿದೆ. ಮಂಗಳೂರು ವಿವಿಯು ಹಾಗೂ ಪರಿಸರದ ಜನರ ಸಹಕಾರದೊಂದಿಗೆ ಮುನ್ನಡೆಯಲಿದೆ ಎಂದು ಹೇಳಿದರು.…
UN NETWORKS ಕೊಣಾಜೆ : ನಿಜವಾದ ದುಃಖ ಬಾರದೆ ಕೃಷ್ಣನಂತವರು ಮಾತನಾಡುವುದಿಲ್ಲ. ಸಾಂಧರ್ಭಿಕ ಜೀವಂತಿಕೆ ಅಥವಾ ತಲ್ಲಣದಲ್ಲಿಯೇ ಭಗವದ್ಗೀತೆ ಹುಟ್ಟುತ್ತದೆ. ವಿಷಾದ ಇಲ್ಲದೆ ಹುಟ್ಟಿದ ಅನುಗೀತೆಗೆ ಮಹಾಭಾರತದಲ್ಲಿ ಯಾವುದೇ ಪ್ರಾಶಸ್ತ್ಯ ಸಿಕ್ಕಿಲ್ಲ ಎಂದು ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಮಹಾಭಾರತ: ಹೊಸನೋಟ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ನಿರ್ಧಿಷ್ಟವಾದ ವ್ಯಕ್ತಿತ್ವ ಇದೆ. ಕೃಷ್ಣನಿಗೆ ಮಾತ್ರ ಅವ್ಯವಸ್ಥಿತ ಪಾತ್ರ. ಒಂದು ಪಾತ್ರ ಇತಿಹಾಸದ್ದು ಮತ್ತು ಇತಿಹಾಸವನ್ನು ದಾಟಿ ಮಹತ್ವವನ್ನು ಹೊಂದುವಾಗ ಹೀಗೆಯೇ ಆಗುತ್ತದೆ. ಉಳಿದ ಎಲ್ಲಾ ಪಾತ್ರಗಳಿಗೆ ವ್ಯವಸ್ಥಿತ ವ್ಯಕ್ತಿತ್ವ ಪ್ರಾಪ್ತವಾಗುವುದೇ ಈ ಅವ್ಯವಸ್ಥೆಯಿಂದ. ಪೂರ್ವಿಕವೂ ನೂತನವೂ ಆದ ನೆಲೆಯ ಅನುಸಂಧಾನದಲ್ಲಿ ಕೃಷ್ಣನ ಪಾತ್ರ ರೂಪುಗೊಂಡಿದೆ ಎಂದು ಹೇಳಿದರು. ವೇದವನ್ನು ಸರಿಯಾದ…

