UN NETWORKS
ದುಬೈ : ಕರ್ನಾಟಕ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್(ಕರ್ನಾಟಕ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಕ್ಲಬ್) ದುಬೈ ಸರ್ಕಾರಿ ಸಮುದಾಯ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಡೆರಿಯ ದುಬೈಯ ಯುನಿಯನ್ ಮೆಟ್ರೊ ಸ್ಟೇಷನ್ ಹೊರಗಡೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಕ್ತದಾನ ಶಿಬಿರವು ಬೆಳಿಗ್ಗೆ ಯಿಂದ ಮಧ್ಯಾಹ್ನ ತನಕ ನಡೆಯಿತು.






ಸುಮಾರು 60 ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಶಿಬಿರವನ್ನು ಕೆಎಸ್‍ಸಿಸಿ ಕ್ಲಬ್ ಉಪಾಧ್ಯಕ್ಷ ಝಿಯಾವುದ್ದೀನ್ ಉದ್ಘಾಟಿಸಿ, ಸ್ವಯಂಸೇವಕರಿಗೆ ಉತ್ತೇಜನಕಾರಿ ನುಡಿಗಳನ್ನು ನೀಡಿದರು. ಕ್ಲಬ್ ವ್ಯವಸ್ಥಾಪಕ ಮೊಹಮ್ಮದ್ ಶಾಫಿ ಮತ್ತು ಖಜಾಂಚಿ ಮೊಹಮ್ಮದ್ ಫರಾಝ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಕ್ತದಾನ ಶಿಬಿರಕ್ಕೆ ಸಹಕರಿಸಿದ ದುಬೈ ಹೆಲ್ತ್ ಅಥಾರಿಟಿ ಮತ್ತು ಸಮುದಾಯ ಅಭಿವೃದ್ದಿ ಪ್ರಾಧಿಕಾರ ಮತ್ತು ದುಬೈ ಸರ್ಕಾರಕ್ಕೆ ಕೆಎಸ್‍ಸಿಸಿ ಕ್ಲಬ್ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ ಇದೇ ವೇಳೆ ಸ್ವಯಂ ಸೇವಕರು ಮತ್ತು ಬೆಂಬಲಿಗರಿಗೂ ಧನ್ಯವಾದ ಅರ್ಪಿಸಿದ್ದಾರೆ ಮಾತ್ರವಲ್ಲ ಶಿಬಿರದಲ್ಲಿ ರಕ್ತದಾನ ಮಾಡಿ ಸಹಕರಿಸಿದ ಎಲ್ಲಾ ರಕ್ತದಾನಿಗಳನ್ನು ಪ್ರಶಂಸಿಸಿದ್ದಾರೆ.

ರಕ್ತದಾನಿಗಳು ರಕ್ತದಾನ ಮಾಡಿ ಇನ್ನೊಂದು ಜೀವದ ಉಳಿವಿಗೆ ನೆರವಾದ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ


