UN NETWORKS
ಉಳ್ಳಾಲ: ಗಾಂಧಿ ಹಂತಕ ನಾಥುರಾಂ ಗೋಡ್ಸೆ ಜನ್ಮದಿನಾಚರಣೆ ಆಚರಿಸಿದ ಹಿಂದು ಮಹಾ ಸಭಾ ಕಾರ್ಯಕರ್ತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಅಖಿಲ ಭಾರತೀಯ ಹಿಂದೂ ಮಹಾಸಭಾ ಮುಖಂಡನನ್ನು ಉಳ್ಳಾಲ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಅಖಿಲ ಭಾರತೀಯ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯ ಪ್ರಭಾರಿ, ತೊಕ್ಕೊಟ್ಟು ನಿವಾಸಿ ರಾಜೇಶ್ ಪೂಜಾರಿ ಯಾನೆ ಟಿಕ್ಕಿ ರಾಜ ಬಂಧಿತ . ಮೇ.19 ರಂದು ರಾಜೇಶ್ ಪೂಜಾರಿ ನೇತೃತ್ವದಲ್ಲಿ ಕುಂಪಲದ ಆಶ್ರಯಕಾಲನಿ ನಿವಾಸಿ ವಿಶ್ವನಾಥ್ ಎಂಬವರ ಮನೆಯಲ್ಲಿ ಗೋಡ್ಸೆ ಜನ್ಮದಿನಾಚರಣೆ ಆಚರಿಸಲಾಗಿತ್ತು. ಗೋಡ್ಸೆ ಭಾವಚಿತ್ರ ಇರಿಸಿ ಪುಷ್ಪಾರ್ಚನೆ ನಡೆಸಿದ ಫೋಟೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರ ಆಧಾರದಂತೆ ಉಳ್ಳಾಲ ಪೊಲೀಸ್ ಉಪನಿರೀಕ್ಷಕ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜೇಶ್, ಲೋಹಿತ್, ವಿಶ್ವನಾಥ್ ಪೂಜಾರಿ, ಧರ್ಮೇಂದ್ರ, ಲೋಕೇಶ್ ಎಂಬ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತ ರಾಜೇಶ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


