UN NETWORKS ಹರೇಕಳ : ಉಳ್ಳಾಲ ವ್ಯಾಪ್ತಿಯ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಹಾಗೂ ತಲಪಾಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಇಂದಿರಾ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ತ್ಯಾಗಂ ಹರೇಕಳ : ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಹಾಗೂ ಸ್ಕೌಟ್ ಶಿಕ್ಷಕರಾಗಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಕ್ರೀಡೆ ಮತ್ತು ಸ್ಕೌಟ್‍ನಲ್ಲಿ ಶಾಲೆ ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದು, ಜಿಲ್ಲೆಯಲ್ಲಿ ನಡೆಯುವ ಕ್ರೀಡಾ ಪಂದ್ಯಾಟದಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಪ್ರಚಾರ ಸಂಸ್ಥೆಯಿಂದ `ಕನ್ನಡ ಸಿರಿ’, ಜೆಸಿಐಯಿಂದ ಜೇಸೀ ಸಾಧನಾ ಶ್ರೀ ಪ್ರಶಸ್ತಿ, ಜೇಸೀ ಕಮಲಪತ್ರ, ಮೊಸರು ಕುಡಿಕೆ ಉತ್ಸವದಲ್ಲಿ ಉತ್ತಮ ಸಂಘಟಕ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಇಂದಿರಾಇಂದಿರಾ ಇವರು 1998ರಲ್ಲಿ ಬೆಳ್ತಂಗಡಿಯ…
Author: UllalaVani
UN NETWORKS ಮುಡಿಪು : ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕ ಹಾಗೂ ದೈಹಿಕ ಶಿಕ್ಷಣ ವಿಬಾಗದ ವತಿಯಿಂದ ಮೇಜರ್ ಧ್ಯಾನ್‍ಚಂದ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಯಿತು. .ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ತಮೀಮ್, ಮಹಮದ್ ಶಾಫಿ, ಮಹಮದ್ ಶಮ್‍ಶೀರ್, ಮಹಮದ್ ಶಫೀಕ್(ಕಬ್ಬಡಿ), ಮಹಮದ್ ಮೌಸೂರ್, ಸಂಕೇತ್(ವಾಲಿಬಾಲ್), ರುದ್ರೀಶ್ ಕುಮಾರ್(ಚೆಸ್), ಹಸೀನ(ತ್ರೋಬಾಲ್), ಫೌಸ್ಟಿನ್ ಡಿಸೋಜಾ(ಅತ್ಲೆಟಿಕ್ಸ್), ಹರ್ಷಿತ, ದೀಕ್ಷಿತಾ, ಗುಣವತಿ, ಅಪರ್ಣ ಕುಮಾರಿ(ಲಗೋರಿ) ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಗಿರಿಧರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕುರ್ನಾಡ್ ಪ್ರೌಢಶಾಲೆಯ ಶಿಕ್ಷಕಿ ಜಯಲಕ್ಷ್ಮೀ, ಕಾಲೇಜಿನ ಕ್ರೀಡಾ ಜೊತೆ ಕಾರ್ಯದರ್ಶಿ ಫೌಸ್ಟಿನ್ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ಶುಭ ಕೆ.ಎಚ್. ಸ್ವಾಗತಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
UN NETWORKS ಇನೋಳಿ : ಇನೋಳಿ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಬಿಐಟಿ ಮೈದಾನದಲ್ಲಿ ನಡೆದ ಮಂಗಳೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹ್ಯಾಂಡ್‍ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ಉಳ್ಳಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಉಳ್ಳಾಲ ಭಾರತ್ ಪ್ರೌಢಶಾಲೆ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಉಳ್ಳಾಲ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಉಳ್ಳಾಲ ಭಾರತ್ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಉಳ್ಳಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ನೀರುಮಾರ್ಗ ನವಚೇತನ ಆಂಗ್ಲಮಾಧ್ಯಮ ಶಾಲೆ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ನೀರುಮಾರ್ಗ ನವಚೇತನ ಆಂಗ್ಲಮಾಧ್ಯಮ ಶಾಲೆ ಪ್ರಥಮ ಹಾಗೂ ಉಳ್ಳಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
UN NETWORKS ಬೋಳಿಯಾರ್ : ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಬೋಳಿಯಾರ್ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೋರ್ವರ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು ಬಡ ಕುಟುಂಬ ಕಂಗಾಲಾಗಿದೆ. ಬೋಳಿಯಾರ್ ಗ್ರಾಮದ ಗುಂಡ್ಯ ನಿವಾಸಿ ಪರಿಶಿಷ್ಟ ಪಂಗಡದ ಕಮಲ ಬೈದ ಎಂಬವರ ಮನೆ ಸಂಪೂರ್ಣ ಕುಸಿದಿದೆ. ಈ ಸಂದರ್ಭ ಮನೆಯಲ್ಲಿ ಕಮಲ ಅವರ ಪುತ್ರ ಕೃಷ್ಣ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದರು. ಇವರೆಲ್ಲರೂ ಮನೆ ಬೀಳುವ ಸದ್ದು ಕೇಳಿ ಹೊರಗೋಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳ ಸಹಿತ ವಸ್ತ್ರವೂ ನಾಶವಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಆಚಾರ್ಯ, ಸದಸ್ಯರಾದ ಪ್ರಶಾಂತ್ ಗಟ್ಟಿ, ರೋಹಿನಾಥ್ ಶೆಟ್ಟಿ ಭೇಟಿ ನೀಡಿ ವಾಸಕ್ಕಾಗಿ ಪಕ್ಕದ ಮನೆಯಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಭೇಟಿ ನೀಡಿದರು. ಅಘಾತಕ್ಕೊಳಗಾದ ಕುಟುಂಬ!ಕಮಲ ಅವರ…
UN NETWORKS ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಚಿಂಬುಗುಡ್ಡೆ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಂದ 41 ಸಾವಿರ ಬೆಲೆ ಬಾಳುವ ಗಾಂಜಾ, ಬುಲೆಟ್ ಬೈಕ್ ಮತ್ತು ಆರು ಮೊಬೈಲ್‍ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಲ್ಲಿಕೋಟೆಯ ಪಲಾಯತ್ತಿಲ್ ನಿವಾಸಿ ಮೊಹಮ್ಮದ್ ಸಿನಾನ್ ಪಿ.(21), ತ್ರಿಶ್ಯೂರ್‍ನ ಕನ್ನತ್ತಿಪಡಕ್ಕಿಲ್ ನಿವಾಸಿ ಹಫೀಝ್ ಅಮೀನ್(21), ಕಣ್ಣೂರು ಬೈತೂಲ್ ಇಜಾ ನಿವಾಸಿ ಜುಹೈರ್ ಕೆ.ಪಿ(21), ಕಲ್ಲಿಕೋಟೆ ರಾಮಾನಾಥುರಕ್ಕರ ಪೇರೂಕ್ ನಿವಾಸಿ ಆದರ್ಶ್(20), ಕೋಝಿಕ್ಕೋಡ್ ಚುಂಗಂತಾಮರಶ್ಯೇರ ನಿವಾಸಿ ಮೊಹಮ್ಮದ್ ನಿಹಾಲ್ ಆರ್. ಕೆ(20), ಕೋಝಿಕೋಡ್ ವೆಂಗೋಳಿ ಪುರತ್ತ ನಿವಾಸಿ ಬಿಶ್ರುಲ್ ಹಫೀ(20), ಕೋಝಿಕೋಡ್ ಪುಡಿಯಾಡತ್ತಿಲ್ ನಿವಾಸಿ ಝಾಕಿರ್ ಅಲಿ ಪಿ.(22) ಬಂಧಿತ ಆರೋಪಿಗಳಾಗಿದ್ದು ಆರೋಪಿಗಳಿಂದ 41 ಸಾವಿರ ಮೌಲ್ಯದ 1 ಕಿಲೋ 103ಗ್ರಾಂ ತೂಕದ ಗಾಂಜಾ, ಒಂದು ಲಕ್ಷ ರೂ. ಮೌಲ್ಯದ ಬುಲೆಟ್ ಬೈಕ್ 23 ಸಾವಿರ ಮೌಲ್ಯದ 6 ಮೊಬೈಲ್ ಫೋನ್ ಮತ್ತು…
UN NETWORKS ಉಳ್ಳಾಲ : ಸಮುದ್ರ ತೀರದಲ್ಲಿ ಮಹಿಳೆಯೊಬ್ಬರ ಅರ್ಧ ಕೊಳೆತ ದೇಹ ಪತ್ತೆಯಾಗಿದ್ದು, ಸೊಂಟದ ನಂತರದ ಭಾಗ ಪತ್ತೆಯಾಗದೇ ಇರುವುದರಿಂದ ಪ್ರಕರಣ ನಿಗೂಢವಾಗಿದೆ. ಉಳ್ಳಾಲ ಪೊಲೀಸರು ದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ಸೊಂಟದ ಭಾಗ, ಒಳ ಉಡುಪು ಕಾಲಿನಲ್ಲಿ ಗೆಜ್ಜೆ ಹಾಗೂ ಕಾಲುಂಗುರ ಇರುವ ದೇಹ ಪತ್ತೆಯಾಗಿದೆ. ವಿವಾಹಿತ ಮಹಿಳೆಯ ದೇಹ ಇದಾಗಿದೆ ಎಂದು ಸಂಶಯಿಸಲಾಗಿದೆ. ಆತ್ಮಹತ್ಯೆ ಪ್ರಕರಣವೋ ಕೊಲೆಯೋ ಅನ್ನುವುದು ದೃಢವಾಗಿಲ್ಲ. ಸಮುದ್ರದಲ್ಲಿ ತುಂಬಾ ದಿನ ಇದ್ದು, ಇದರಿಂದಾಗಿ ಅರ್ಧ ದೇಹವನ್ನು ಮೀನು ತಿಂದಿರುವ ಸಾಧ್ಯತೆ ಇರಬಹುದು ಅನ್ನುವುದು ಸ್ಥಳೀಯರ ಅಭಿಪ್ರಾಯವಾದರೂ, ಈವರೆಗೆ ಅರ್ಧದಷ್ಟು ತಿಂದ ಉದಾಹರಣೆ ಇಲ್ಲ. ಮಹಿಳೆಯನ್ನು ಕಡಿದು ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಸಾಧ್ಯತೆಯೂ ಇದೆ ಅನ್ನುವ ಅಭಿಪ್ರಾಯ ಸಾರ್ವ ಜನಿಕ ವಲಯದಿಂದ ಕೇಳಿಬಂದಿದೆ. ಒಂದು ತಿಂಗಳ ಅವಧಿಯಲ್ಲಿ ಮೂರನೇ ಮಹಿಳೆಯ ಮೃತದೇಹ ಉಳ್ಳಾಲ ಠಾಣಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಎರಡು ಪ್ರಕರಣಗಳ ಗುರುತು ಪತ್ತೆಯಾಗಿದೆ. ಬೇರೆಡೆ ಹಾರಿಯೋ ಅಥವಾ ಕೊಲೆಗೈದು ಎಸೆದಿರು ದೇಹ…
UN NETWORKS ಉಳ್ಳಾಲ : ಉಳ್ಳಾಲ ನಗರಸಭೆ ಯ ತ್ಯಾಜ್ಯ ವಿಲೇವಾರಿ ಘಟಕವನ್ನು ಸೋಮೇಶ್ವರದ ಮೂಡ ಸೈಟಿನಲ್ಲಿ ಸ್ಥಾಪಿಸಿರುವುದರ ವಿರುದ್ಧ ಗ್ರಾಮದ ಜನ ಮಂಗಳವಾರ ವಿಲೇವಾರಿಗೆ ಬಂದ 20 ತ್ಯಾಜ್ಯದ ವಾಹನಗಳನ್ನು ವಾಪಸ್ಸು ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಿದರು. ಸೋಮೇಶ್ವರ ಸಮುದ್ರ ತೀರದ ಕೆಲವು ಮೀ. ದೂರದಲ್ಲಿ ಉಳ್ಳಾಲ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕ ಎಂದು ಬೃಹತ್ ಗಾತ್ರದ ಶೀಟ್ ಹಾಕಿರುವ ಗೋಡೌನ್ ರಚಿಸಿದೆ. ಆರಂಭದಲ್ಲಿ ಗ್ರೀನ್ ಲ್ಯಾಂಡ್ ನ ಎಂದು ಗಿಡಗಳ ಮಾರಾಟಕ್ಕೆ ನಸ9ರಿ ರಚಿಸುತ್ತಿರುವುದಾಗಿ ಸುಳ್ಳು ಹೇಳಿತ್ತು. ಬಳಿಕ ಅಬ್ಬಕ್ಕ ಉತ್ಸವದ ಸಂದಭ9 ಮೊಗವೀರಪಟ್ನ ಸಮೀಪ ಅಬ್ಬಕ್ಕ ಉತ್ಸವ ಇರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತ್ಯಾಜ್ಯವವನ್ನು ಮೂಡ ಸೈಟಿನಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸ್ಥಳೀಯರನ್ನು ನಗರಸಭೆ ಅಧಿಕಾರಿಗಳು ನಂಬಿಸುವಲ್ಲಿ ಸಫಲರಾಗಿದ್ದರು. ಆದರೆ ಇದೀಗ ಒಂದು ತಿಂಗಳಿನಿಂದ ಸತತವಾಗಿ ತ್ಯಾಜ್ಯದ ಲಾರಿಗಳನ್ನು ಸ್ಥಳಕ್ಕೆ ತಂದು ತ್ಯಾಜ್ಯ ವಿಲೇವಾರಿ ನಡೆಸುವ ಕೆಲಸವಾಗುತ್ತಿದೆ. ಸ್ಥಳೀಯವಾಗಿ 100ಕ್ಕೂ ಅಧಿಕ ಮನೆಗಳು, ಧಾಮಿ9ಕ ಕೇಂದ್ರ, ಕೆರೆಗಳಿವೆ. ಪ್ರಮುಖವಾಗಿ…
UN NETWORKS ಉಳ್ಳಾಲ : ಧರ್ಮಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುವಂತ ಸಂದೇಶ ಕಳುಹಿಸಿದ ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಬಂಧನ ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ಠಾಣೆ ಎದುರು ಹಮ್ಮಿಕೊಂಡ ಪ್ರತಿಭಟನೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಠಾಣೆಯೆದುರು ಜಮಾಯಿಸಿದ್ದ ಕಾರ್ಯಕರ್ತರು ಪೊಲೀಸರ ಕಟು ಎಚ್ಚರಿಕೆಯಿಂದಾಗಿ ಪ್ರತಿಭಟನೆಯನ್ನು ಮುಂದೂಡಿದ್ದಾರೆ. ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಜೆಡಿಎಸ್ ಮುಖಂಡ ಝಾಕಿರ್ ಹುಸೈನ್ ಅವರನ್ನು ಭಾನುವಾರ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಬ್ಯಾರಿ ಭಾಷೆಯಲ್ಲಿ ಪೊಲೀಸರಿಗೆ , ಎರಡು ಧರ್ಮಗಳ ನಡುವಿನ ವಿಚಾರವನ್ನು ಪ್ರಸ್ತಾಪಿಸಿ ಸಂಘರ್ಷಕ್ಕೆ ಎಡೆ ಮಾಡುವಂತಹ ಸಂದೇಶವನ್ನು ಕಳುಹಿಸಿದ್ದರು. ಇದು ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿ ಮಾಡಿತ್ತು. ಈ ಕುರಿತು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಝಾಕಿರ್ ಹುಸೈನ್ ಅವರನ್ನು ಬಂಧಿಸುವಂತೆ ಆದೇಶಿಸಿದ್ದರು. ಅದರಂತೆ ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸಾಮಾಜಿಕವಾಗಿ ನಡೆಯುತ್ತಿರುವ ಶೋಷಣೆಯನ್ನು ಪ್ರತಿಭಟಿಸಿ ಝಾಕಿರ್ ಮಾತುಗಳನ್ನಾಡಿದ್ದರು. ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾಗಿರುವ…
UN NETWORKS ಪಾನೀರ್ : ಶಿಕ್ಷಕರು ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತವಲ್ಲ, ಇದು ಆಧುನಿಕ, ಸ್ಪರ್ಧಾತ್ಮಕ ಯುಗವಾಗಿದ್ದು ಅವೆಲ್ಲಕ್ಕೂ ಹೊಂದಿಕೊಳ್ಳುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷನ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಆಸಿಸ್ಸಿ ಸೆಂಟ್ರಲ್ ಶಾಲೆ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾಯಸ್ ಎಂದು ಅಭಿಪ್ರಾಯಪಟ್ಟರು. ಪಾನೀರ್ ಮೆರ್ಸಿಯಮ್ಮನವರ ಇಗರ್ಜಿ, ಕೆಥೋಲಿಕ್ ಸಭಾ ವತಿಯಿಂದ ಭಾನುವಾರ ಇಗರ್ಜಿಯಲ್ಲಿ ನಡೆದ ಶಿಕ್ಷಕರ ದಿನದ ಪ್ರಯುಕ್ತ ನಡೆದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಮಕ್ಕಳು ಮನೆಯಲ್ಲಿರುವ ಸಂದರ್ಭ ಮೊಬೈಲ್, ಕಂಪ್ಯೂಟರ್, ಟಿವಿ ಎದುರಲ್ಲೇ ಇರುತ್ತಾರೆ, ಇದರಿಂದಾಗಿ ಅವರಲ್ಲಿ ಇತರ ಚಟುವಟಿಕೆಗಳ ಬಗ್ಗೆ ಯಾವುದೇ ಉತ್ಸಾಹ ಇರುವುದಿಲ್ಲ. ಈ ನಿಟ್ಟಿನಲ್ಲಿ ಪೋಷಕರೂ ಮಕ್ಕಳ ಬಗ್ಗೆ ಕಾಳಜಿ ಹೊಂದಿರಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಮಾತನಾಡಿ, ಇಂದಿನ ಮಕ್ಕಳು ಆಂಗ್ಲಮಾಧ್ಯಮ ಶಾಲೆಗಳಿಗೆ ಹೋಗುತ್ತಿರುವುದರಿಂದ ಹೆಚ್ಚಿನ ಚಟುವಟಿಕೆಗಳು ಇದ್ದು ಒತ್ತಡದ ಜೀವನ ನಡೆಸುತ್ತಿದ್ದಾರೆ, ಇಂತಹ ಸನ್ನಿವೇಶದಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ…
Ullalnews Network ಮಂಗಳೂರು: ಜಿಲ್ಲೆಯ ಪುತ್ತೂರು ತಾಲೂಕಿನ ಕೌಡಿಚ್ಚಾರು ಮಡ್ಯಂಗಲ ಹೆದ್ದಾರಿ ಅವ್ಯವಸ್ಥೆಗೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಮಾಧ್ಯಮದ ವರದಿ ಬಳಿಕವೂ ಎಚ್ಚೆತ್ತುಕೊಳ್ಳದ ಹೆದ್ದಾರಿ ಅಧಿಕಾರಿಗಳೇ ನಾಲ್ಕು ಜೀವಗಳ ಬಲಿಗೆ ನೇರ ಹೊಣೆಯಾಗಿದ್ದಾರೆ ಅನ್ನುವ ಆರೋಪ ಸಾರ್ವಜನಿಕವಾಗಿ ಕೇಳಿಬಂದಿದೆ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿರುವ ಮಗಳನ್ನು ನೋಡಲು ಬಂದಿದ್ದ ಮಡಿಕೇರಿ ಶುಂಟಿಕೊಪ್ಪ ನಿವಾಸಿ ಅಂಚೆ ಇಲಾಖೆ ಸಿಬ್ಬಂದಿ ನಿಡ್ಯಮಲೆ ಅಶೋಕ್ (48), ಪತ್ನಿ ಅತ್ತೂರು ನಲ್ಲೂರು ಶಾಲೆಯ ಶಿಕ್ಷಕಿ ಹೇಮಲತಾ ಮಕ್ಕಳಾದ ಯಶಸ್ ಮತ್ತು ವರ್ಷಾ ಮೃತಪಟ್ಟಿದ್ದಾರೆ. ಕುಟುಂಬ ಬರುತ್ತಿದ್ದ ಆಲ್ಟೋ ಕಾರು ಮಾಣಿ ಮೈಸೂರು ಹೆದ್ದಾರಿಯ ಕೌಡಿಚ್ಚಾರು ಭಾಗದಲ್ಲಿ ತಡೆಬೇಲಿಯಿಲ್ಲದೆ ಕೆಳೆಗೆ ಉರುಳಿ ಕೆರೆಯೊಳಗೆ ಮುಳುಗಿದರಿಂದಾಗಿ ಅವಘಢ ಸಂಭವಿಸಿದೆ. ಪುತ್ತೂರು ಪೊಲೀಸರು ರಾ.ಹೆ ಇಲಾಖೆ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಯಾವ ಸೆಕ್ಷನ್ ದಾಖಲಿಸಿದ್ದಾರೆ ಅನ್ನುವುದು ಗೊತ್ತಿಲ್ಲ?). ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಮಾಣಿ-ಮೈಸೂರು ಹೆದ್ದಾರಿ ಅಭಿವೃದ್ಧಿಯನ್ನು ಕೆ ಆರ್ ಡಿಸಿಎಲ್ ಕೋಟಿಗಟ್ಟಲೆ ಜನರ ತೆರಿಗೆ ಖರ್ಚು ಮಾಡಿ ಕಾಮಗಾರಿ ನಡೆಸಿತ್ತು.…

