UN NETWORKS
ದೇರಳಕಟ್ಟೆ : ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ರಮಳಾನ್ ಪ್ರಭಾಷಣ ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತದ ಅಂತರ್ ರಾಷ್ಟ್ರೀಯ ಪ್ರಭಾಷಣಗಾರ ಅಬುದಾಬಿ ಬ್ರಿಟೀಷ್ ಇಂಟರ್ ನ್ಯಾಷನಲ್ ಸ್ಕೂಲ್ ಉಪಾನ್ಯಾಸಕರು ಆದ ಉಸ್ತಾದ್ ಸಿಂಸಾರುಲ್ ಹಕ್ ಹುದವಿ ರವರು SKSSF ದೇರಳಕಟ್ಟೆ ಶಾಖಾ ಕಚೇರಿಗೆ ಭೇಟಿ ಕೊಟ್ಟರು.


ಈ ಸಂದರ್ಭದಲ್ಲಿ SKSSF ವತಿಯಿಂದ ಅವರನ್ನು ಸನ್ಮಾನಿಸಲಾಯಿತು.ಈ ಒಂದು ಕಾರ್ಯಕ್ರಮದಲ್ಲಿ SKSSF ಕೇಂದ್ರ ಸಮಿತಿ ಸದಸ್ಯ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ.ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಇಲ್ಯಾಸ್, ಡಿಎಸ್.ವೈ.ಎಸ್.ಅಧ್ಯಕ್ಷ ಹಾಜಿ ಮೊಹಮ್ಮದ್ ಅಲಿ,SKSSF ಮಾಜಿ ಅಧ್ಯಕ್ಷರಾದ ಜನಾಬ್ ನೌಫಾಲ್ ಬಿ,ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರಾದ ಹಂಝ HR, ಡಿ.ಎಂ ಮೊಹಮ್ಮದ್, SKSSF ಉಪಾಧ್ಯಕ್ಷರಾದ ಹರ್ಷಾದ್,ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮುನ್ಸಿದ್, ಮೊಹಮ್ಮದ್ ನಡುಪದವು.ಯಾಕೂಬ್ ದೇರಳಕಟ್ಟೆ ಮುಂತಾದವರು ಬಾಗವಹಿಸಿದರು.


