Author: UllalaVani

Kannada News From Coastal Karnataka

UN NETWORKS ಉಳ್ಳಾಲ : ಹೊಟ್ಟೆನೋವು ಅನ್ನುತ್ತಾ ಕಟ್ಟಡ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಬಾವಾ ಬಿಲ್ಡರ್ಸ್ ನಿರ್ಮಾಣ ಹಂತದ ಕಟ್ಟಡದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಒರಿಸ್ಸಾದ ಮಂಚಗಾಂವ್, ನವರಂಗ್ ಪುರ್‍ನ ಜಗನ್ನಾಥ ಹರಿಜನ ಎಂಬವರ ಪುತ್ರ ಉಮಾಶಂಕರ್ ಹರಿಜನ (29) ಮೃತರು. ಹಲವು ಸಮಯದಿಂದ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಉಮಾಶಂಕರ್ ಶನಿವಾರ ರಾತ್ರಿ ಹೊಟ್ಟೆನೋವು ಎಂದು ಜತೆಗಿದ್ದವರಲ್ಲಿ ತಿಳಿಸಿದ್ದರು. ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗೋಣ ಎಂದು ಸಮಾಧಾನಿಸಿದ ಬಳಿಕ ಎಲ್ಲರೂ ಮಲಗಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ಹೊಟ್ಟೆನೋವು ಎಂದು ಹೇಳುತ್ತಿದ್ದಂತೆ ಉಮಾಶಂಕರ್ ಸಾವನ್ನಪ್ಪಿದ್ದರು. ಸಾವಿನ ನಿಖರ ಕಾರಣ ಶವಮಹಜರು ವರದಿ ಬಳಿಕವಷ್ಟೇ ತಿಳಿದುಬರಬೇಕಿದೆ. ಮನೆಮಂದಿ ಬಂದ ಬಳಿಕ ಶವಮಹಜರು ನಡೆಯಲಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಾಣ ಹಂತದ ಕೆಳ ಅಂತಸ್ತಿನಲ್ಲಿ ನೀರು ತುಂಬಿ ಸ್ಥಳೀಯ ವಸತಿ ಸಂಕೀರ್ಣದಲ್ಲಿ ವಾಸಿಸುವವರಿಗೆ ಅನಾರೋಗ್ಯ ಉಂಟಾಗಿತ್ತು. ಈ ಕುರಿತು ಉಳ್ಳಾಲ ನಗರಸಭೆಗೆ ದೂರು ಬಂದ ಹಿನ್ನೆಲೆಯಲ್ಲಿ, ಪೌರಾಯುಕ್ತರು ಹಾಗೂ ಆರೋಗ್ಯ…

Read More

UN NETWORKS ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್ ಅವರು ಶನಿವಾರ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ರೂಪಾ ನೂತನ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು. ಸಿಂಧು ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ. ಈ ಹಿಂದೆ, 1989 ರಲ್ಲಿ ರಂಜನಿ ಶ್ರೀಕುಮಾರ್ ಅವರು ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಸಿಂದು ಬಿ. ರೂಪೇಶ್ ಅವರು ದ.ಕ. ಜಿಲ್ಲೆಯ 129 ನೇ ಜಿಲ್ಲಾಧಿಕಾರಿ. ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೆರಡೂ ಹುದ್ದೆಗಳಲ್ಲಿ ಮಹಿಳೆಯರಿರುವುದು ವಿಶೇಷ.

Read More

UN NETWORKS ಉಳ್ಳಾಲ: ಧರ್ಮದ ಅಭಿವೃದ್ಧಿಗಾಗಿ ಧಾರ್ಮಿಕ ಕ್ಷೇತ್ರಗಳನ್ನು ನಿರ್ಮಿಸಿ ಬಹಳಷ್ಟು ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುವ ಮೂಲಕ ಮಹತ್ತರ ಸಾಧನೆ ಮಾಡಿದ ಧಾರ್ಮಿಕ ಗುರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಆಗಿದೆ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು. ಅವರು ಅಲ್ ಮದೀನ ವಠಾರದಲ್ಲಿ ಗುರುವಾರ ನಡೆದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ 40ನೇ ದಿನದ ಅನುಸ್ಮರಣೆ ಕಾರ್ಯ ಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಅನುಸ್ಮರಣಾ ಭಾಷಣ ಮಾಡಿದ ಪೇರೋಡ್ ಉಸ್ತಾದ್ ಅವರು ಅಬ್ಬಾಸ್ ಉಸ್ತಾದ್ ಅವರ ಸಾಧನೆಗಳ ಬಗ್ಗೆ ಪ್ರಖ್ಯಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ಧಾರ್ಮಿಕ ಕೇಂದ್ರ ದ ಅಗತ್ಯ ತೆ ಮತ್ತು ಧಾರ್ಮಿಕ ಶಿಕ್ಷಣ ಕೇಂದ್ರ ದ ಅಭಿವೃದ್ಧಿ ಗೆ ಅಬ್ಬಾಸ್ ಉಸ್ತಾದ್ ಮಾಡಿದ ಸಾಧನೆ ಯ ಬಗ್ಗೆ ವಿವರಿಸಿದರು.ರಫೀಕ್ ಸಅದಿ ದೇಲಂಪಾಡಿ, ಅಬ್ದುಲ್ ರಶೀದ್ ಝೈನಿ,ಯೆನೆಪೋಯ ಅಬ್ದುಲ ಕುಂಞ ಮಾತನಾಡಿದರು.ಬಾಯಾರ್ ತಂಙಳ್ ಸಮಾರೋಪ ದುವಾ ಮಾಡಿದರು. ವೇದಿಕೆಯಲ್ಲಿ ಎಸ್‍ವೈಎಸ್…

Read More

UN NETWORKS ತೊಕ್ಕೊಟ್ಟು : ತೊಕ್ಕೊಟ್ಟಿನಲ್ಲಿ ಅತ್ಯುತ್ತಮ ಸುಸಜ್ಜಿತ ಅಬ್ಬಕ್ಕ ಭವನ ನಿರ್ಮಿಸುವ ನಿಟ್ಟಿನಲ್ಲಿ ಎಂಟು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದ್ದು ಗೃಹ ಮಂಡಳಿ ಟೆಂಡರ್ ಪಡೆದಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು, ಅಧ್ಯಯನ ಪೀಠಕ್ಕೂ ಅಗತ್ಯ ಅನುದಾನ ದೊರಕಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ 2019-20ನೇ ಸಾಲಿನ ಅಬ್ಬಕ್ಕ ಉತ್ಸವದ ಪೂರ್ವಭಾವಿಯಾಗಿ ಗುರುವಾರ ತೊಕ್ಕೊಟ್ಟಿನಲ್ಲಿ ನಡೆದಾ ಸಭೆ ಉದ್ಘಾಟಿಸಿ ಮಾತನಾಡಿದರು. ಸ್ವಂತ ಹಣ ಖರ್ಚು ಮಾಡಿಕೊಂಡು ಅಬ್ಬಕ್ಕ ಉತ್ಸವ ಆರಂಭಿಸಲಾಗಿದ್ದು, ಸರ್ಕಾರದಿಂದ ಅನುದಾನ ಬಂದ ಬಳಿಕವೂ ಉತ್ಸವ ಸಮಿತಿಗೆ ಕಪ್ಪುಚುಕ್ಕೆ ಬರುವಂತಹ ಮಾತುಗಳನ್ನು ಹೇಳಿಲ್ಲ, ಉಳ್ಳಾಲ ಭಾಗದ ಜನ ಅಬ್ಬಕ್ಕ ಹೆಸರಲ್ಲಿ ಎಲ್ಲರೂ ಒಗ್ಗಟ್ಟಾಗಬೇಕಿದೆ. ಈ ಬಾರಿಯೂ ಅಬ್ಬಕ್ಕ ಉತ್ಸವ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು ಬೇಡಿಕೆಯನ್ನು ಮನ್ನಿಸಿ ಅಸೈಗೋಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವ ಸಮಿತಿ ಮೂಲಕ ಇನ್ನಿತರ ಸಾಮಾಜಿಕ ಕೆಲಸಗಳೂ ನಡೆಯಬೇಕು.‌ ಉತ್ತಮವಾಗಿ ಕೆಲಸ ಮಾಡುವ ಯಾವುದೇ ಸಂಘಟನೆಗೆ…

Read More

UN NETWORKS ಉಳ್ಳಾಲ : ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಶವ ಉಳ್ಳಾಲ ಕೋಡಿ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ. ಉಳ್ಳಾಲ ಹೊಯ್ಗೆ ನಿವಾಸಿ ಜೋಸೆಫ್ ಮೈಕ್ (56) ಎಂಬವರ ಮೃತದೇಹ ಪತ್ತೆಯಾಗಿದೆ. ಗುರುವಾರ ಬೆಳಗ್ಗಿನಿಂದ ನಾಪತ್ತೆ ಯಾ ಗಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೂ ಮನೆ ಸಮೀಪವೇ ಇದೆ. ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರುವ ಶಂಕೆ ಇದೆ‌ . ಅವಿವಾಹಿತರಾಗಿರುವ ಇವರು ಸಹೋದರರ ಜತೆಗೆ ವಾಸವಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಕೊಣಾಜೆ : ಶಿಕ್ಷಕ ವೃತ್ತಿ ಅಮೂಲ್ಯವಾದ್ದಾಗಿದೆ. ಅದೆಷ್ಟೋ ಜನರನ್ನು ಅಕ್ಷರಲೋಕಕ್ಕೆ ಅಥವಾ ಬೆಳಕಿನ ಲೋಕಕ್ಕೆ ಕೊಂಡೊಯ್ದು ಬದುಕನ್ನು ರೂಪಿಸುವ ಶಿಕ್ಷಕರ ಬಗ್ಗೆ ಇಂದು ದಾರಾವಾಹಿ, ಸಿನಿಮಾಗಳಲ್ಲಿ ಲೇವಡಿ ಮಾಡುವಂತಹದನ್ನು ಕಾಣುತ್ತಿದ್ದು ಇದು ಸಲ್ಲ. ಶಿಕ್ಷಕರನ್ನು ಅಪಮಾನ ಮಾಡದೆ ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ ಎಂದು ಸಾಹಿತಿ ನಾಡೋಜ ಪ್ರೊ.ಹಂಪನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಗುರು-ಶಿಷ್ಯ ಸಂಬಂಧಗಳು ಯಾವತ್ತಿಗೂ ಸಿಹಿಯಾಗಿರಬೇಕು. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ಎಂದಿಗೂ ಮರೆಯದೆ ಕೃತಜ್ಞರಾಗಿರಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಅದ್ಯಾಪಕನಿಗೆ ಬಹಳಷ್ಟು ಸವಾಲುಗಳು ಎದುರಾಗುತ್ತಿರುವುದನ್ನೂ ನಾವು ಗಮನಿಸಬೇಕು ಎಂದು ಹೇಳಿದರು. ನಮ್ಮಲ್ಲಿ ವಿವೇಕ ಎಂಬುದು ಅಗತ್ಯವಾಗಿ ಇರಬೇಕಿದೆ. ವಿವೇಕ ಇಲ್ಲದಿದ್ದರೆ ವಿದ್ಯೆ ಇದ್ದರೂ ಪ್ರಯೋಜನವಿಲ್ಲ. ಆದ್ದರಿಂದ ನಮ್ಮ ಜೀವನದಲ್ಲಿ ಜ್ಞಾನ ದೀಪವನ್ನು ಬೆಳಗಿಸಿ ಬದುಕನ್ನು ರೂಪಿಸುವ ಶಿಕ್ಷಕರನ್ನು ಗೌರವಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಅರಿತುಕೊಂಡು ಈ…

Read More

UN NETWORKS ಕುತ್ತಾರು : ಪಂಡಿತ್ ಹೌಸ್ ನ ವಿಜಯ ಗೇಮ್ಸ್ ಟೀಮ್ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ರಾಗಸುರಭಿ 2.0 ದಿ ಆರ್ಟ್ ಆಫ್ ಮ್ಯೂಸಿಕ್ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿಜಯ ಗೇಮ್ಸ್ ಟೀಂ ಸಕ್ರಿಯ ಯುವಕರ ತಂಡವಾಗಿದ್ದು, ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಊರಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಕಲ್ಪಿಸಲು ಹೋರಾಡಿ ಯಶಸ್ಸನ್ನು ಕಂಡ ತಂಡ ಮುಂದೆಯೂ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು. ಈ ವೇಳೆ ಕಿರಿಯ ತುಳು ವಿದ್ವಾಂಸ ತಕ್ಷೀಲ್ ಎಂ ದೇವಾಡಿಗ, ಹೂಲಾ ಹೂಪ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಆದ್ಯಾ.ಎ, ಹಿಪ್ ಹಾಪ್ ಡ್ಯಾನ್ಸ್ ನ ಈಶಾನ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಕ್ರೀಡಾ ಕ್ಷೇತ್ರದ ಪ್ಲಾರ್ವಿಷಾ ವೆನಿಷಾ ಮೊಂತೇರೊ , ಬಬ್ಬುಕಟ್ಟೆ ಶಾಲೆಯಲ್ಲಿ…

Read More

UN NETWORKS ತೊಕ್ಕೊಟ್ಟು : ಪರಿಸರ ರಕ್ಷಣೆ ನಿಟ್ಟಿನಲ್ಲಿ ತೊಕ್ಕೊ ಟ್ಟಿನಲ್ಲಿ ದಾಳಿ ನಡೆಸಿದ್ದು ಕೃತಕ ನೆರೆ ಸೃಷ್ಟಿಸಿ ಸೊಳ್ಳೆಗಳ ಉತ್ಪಾದನೆಗೆ ಕೊಡುಗೆ ನೀಡುತ್ತಿರುವ ಸ್ಮಾರ್ಟ್ ಸಿಟಿ ಕಟ್ಟಡದ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಉಳ್ಳಾಲ ನಗರಸಭಾ ವ್ಯಾಪ್ತಿ ಯಲ್ಲಿ ಡೆಂಗ್ಯೂ ಸಹಿತ ಹಲವರು ಜ್ವರದಿಂದ ಬಳಲಿದ್ದು ಇದೇ ವೇಳೆ ತೊಕ್ಕೊಟ್ಟುವಿನಲ್ಲಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಸ್ವಚ್ಛತೆ ಪಾಲಿಸುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿತ್ತು. ಇಲ್ಲಿನ ಹಲವು ಕಾರ್ಮಿಕರು ಜ್ವರಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಪಾಲಿಸದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯು.ಟಿ. ಖಾದರ್ ಅವರೇ ಅಧಿಕಾರಿಗಳಿಗೆ ಸೂಚಿಸಿ ದ್ದರು.ಅವರ ಸೂಚನೆ ಪಾಲಿಸಲು ಮುಂದಾದ ನಗರಸಭೆಯ ಅಧಿಕಾರಿ ಗಳು ತೊಕ್ಕೊಟ್ಟಿನಲ್ಲಿ ಸೊಳ್ಳೆ ಉತ್ಪಾದನೆ ಸಹಕಾರ ನೀಡುತ್ತಿದ್ದ ಹಿಂದೂಸ್ತಾನ್ ಬಾವ ಬಿಲ್ಡರ್ಸ್‍ನ ಸ್ಮಾರ್ಟ್ ಸಿಟಿ ಕಟ್ಟಡದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಬುಧವಾರ ಮತ್ತೊಮ್ಮೆ ಕಾರ್ಯಾಚರಣೆ ನಡೆಸಲಾಗಿದ್ದು ಈ ಸಂದರ್ಭ ಹಿಂದಿಗಿಂತಲೂ ಹೆಚ್ಚು ನೀರು ಕಟ್ಟಡದ ಅಡಿಭಾಗದಲ್ಲಿ ನಿಂತಿದ್ದನ್ನು ಕಂಡು ಹರಿಹಾಯ್ದ ಪೌರಾಯುಕ್ತೆ…

Read More

UN NETWORKS ಉಳ್ಳಾಲ : 30 ವರ್ಷಗಳಿಂದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಹಾಗೂ ಉಳ್ಳಾಲ ಪೊಲೀಸರ ನೇತೃತ್ವದ ತಂಡ `ನನ್ನ ಬೀಟ್ ನನ್ನ ಹೆಮ್ಮೆ’ ಜನಸ್ನೇಹಿ  ಬೀಟ್ ವ್ಯವಸ್ಥೆಯಡಿ ಬಂಧಿಸಿದ್ದಾರೆ. 1989 ರ ನ.22 ರಂದು ಕಿನ್ಯಾ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ  ಪಕೀರ್ ಬ್ಯಾರಿ ಎಂಬವರಿಗೆ ಮಹಮ್ಮದ್ ಮತ್ತು ಶೇಖಬ್ಬ ಎಂಬವರು ಹಲ್ಲೆ ನಡೆಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದ ವಿಚಾರಣಗೆ  ಸಂಬಂಧಿಸಿ ಕಿನ್ಯಾ ಬೆಳರಿಂಗೆ ನಿವಾಸಿ  ಶೇಖಬ್ಬ (50) ನ್ಯಾಯಾಲಯಕ್ಕೆ ತೆರಳದೆ ತಲೆಮರೆಸಿಕೊಂಡಿದ್ದರು. ಈತನನ್ನು ಕಿನ್ಯಾ ಗ್ರಾಮದ ಬೆಳರಿಂಗೆ ಬೀಟ್  ಕರ್ತವ್ಯ ನಿರ್ವಹಿಸುತ್ತಿದ್ದ  ಹೆಡ್ ಕಾನ್ಸ್ ಸ್ಟೇಬಲ್ ಸುರೇಶ್  ಎಂಬವರು ಬೀಟ್ ಸದಸ್ಯರಿಂದ ಮಾಹಿತಿ ಸಂಗ್ರಹಿಸಿ ಆತನ ಮನೆಯಿಂದಲೇ ಬಂಧಿಸಿದ್ದಾರೆ.

Read More

UN NETWORKS ಕೊಣಾಜೆ : ಪಿ.ಎ. ಫಿಸಿಯೋಥೆರಪಿ ಕಾಲೇಜು ಮಂಗಳೂರು ಇದರ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ಪಿ.ಎ.ಕಾಲೇಜಿನಲ್ಲಿ ನಡೆಯಿತು. ನಿಟ್ಟೆ ಇನ್ಸಿಟ್ಯೂಟ್ ಆಫ್ ಪಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ. ದಾನೇಶ್ ಕುಮಾರ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಪಿಸಿಯೋಥೆರಪಿಸ್ಟ್ ಗಳು ತಮ್ಮ ವೃತ್ತಿಯನ್ನು ಬದ್ಧತೆಯೊಂದಿಗೆ ಮಾಡುತ್ತಾ, ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ರೋಗಿಗಳ ಆರೈಕೆ ಮಾಡಿದಾಗ ಉತ್ತಮ ಫಲಿತಾಂಶ ಸಿಗುವುದಾಗಿ ಅಭಿಪ್ರಾಯ ಪಟ್ಟರು. ಪಿ. ಎ. ಎಜುಕೇಶನ್ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕರಾದ ಡಾ. ಸರ್ಫ್‍ರಾಝ್ ಜೆ. ಹಾಸಿಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಸಲಹೆಗಳನ್ನು ನೀಡಿದರು. ಪಿ.ಎ. ಎಜುಕೇಶನಲ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕರಾದ ಅಬ್ದುಲ್ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಿ.ಎ. ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಡಾ. ರಮೀಝ್, ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಡಾ. ಸಲೀಮುಲ್ಲಾ ಖಾನ್, ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಝೋಹರಾ ಅಬ್ಬಾಸ್, ಎಂಬಿಎ ವಿಭಾಗದ ಡಾ.…

Read More