UN NETWORKS
ಉಳ್ಳಾಲ : ಸೋಮೆಶ್ವರ ಉಚ್ಚಿಲ ಸಮುದ್ರದ ಬಳಿ ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರ ನಾರಾಯಣ ಜೆ.ಉಚ್ಚಿಲ್ (71) ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಳೆದ ಹಲವು ದಶಕಗಳಿಂದ ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿದ್ದ ನಾರಾಯಣ್ ಕಳೆದ ಹಲವು ವರ್ಷಗಳಿಂದ ಟ್ಯೂಬ್ ಬಳಸಿಕೊಂಡು ಏಕಾಂಗಿಯಾಗಿ ಮೀನುಗಾರಿಕೆ ನಡೆಸುತ್ತಿದ್ದರು. ಬೆಳಗ್ಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ಇವರ ಟ್ಯೂಬ್ ಸಮುದ್ರದಲ್ಲಿ ತೇಲಿಕೊಂಡು ಹೋಗುವುದನ್ನು ಸ್ಥಳೀಯ ಮೀನುಗಾರರು ಗಮನಿಸಿ ನಾರಾಯಣ್ ಅವರನ್ನು ಹುಡುಕಾಡಿದಾಗ ಪತ್ತೆಯಾಗಿರಲಿಲ್ಲ.
ಬಳಿಕ ಅವರ ಬನಿಯಾನ್ ಸಮುದ್ರದ ಮದ್ಯೆ ತೇಲುತ್ತಿರುವುದನ್ನು ಗಮನಿಸಿ ಅಲ್ಲಿಗೆ ತೆರಳಿದಾಗ ಮುಳುಗಿ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಮೃತ ನಾರಾಯಣ್ ಅವರ ಪತ್ನಿಆರು ತಿಂಗಳ ಹಿಂದೆ ಮೃತಪಟ್ಟಿದ್ದು, ಮೂವರು ಪುತ್ರಿಯರನ್ನುಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


