ಕೊಣಾಜೆ : ಕರ್ನಾಟಕ ಸರ್ಕಾರದ ಶಿಕ್ಷಣ ಸುಧಾರಣೆಗಳ ಕಾರ್ಯಕ್ರಮದ ಅಡಿಯಲ್ಲಿ `ವಿದ್ಯಾರ್ಥಿಗಳು ಮತ್ತು ಪೆÇೀಷಕರಿಗೆ ಮಾನಸಿಕ ಸ್ಥೈರ್ಯ ಹಾಗೂ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಆನ್ಲೈನ್ ತರಬೇತಿ’ ಯನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಮುಖ್ಯ ಪೆÇೀಷಕರಾದ ಶಿಕ್ಷಣ ಸುಧಾರಣೆಗಳು ಕರ್ನಾಟಕ ಸರ್ಕಾರ ಹಾಗೂ ಪಿ. ಇ. ಎಸ್ . ವಿಶ್ವವಿದ್ಯಾನಿಯದ ಕುಲಾಧಿಪತಿ ಪೆÇ್ರ. ಎಂ. ಆರ್. ದೊರೆಸ್ವಾಮಿ ಭಾಗವಹಿಸಿದ್ದರುಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಿ ತಮ್ಮ ಭಾಷಣದಲ್ಲಿ “ಕೋವಿಡ್ -19 ಸಂದಿಗ್ಧತೆಯ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಪೆÇೀಷಕರುಗಳಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯ. ಎಲ್ಲರೂ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಸುರಕ್ಷತೆ ಮತ್ತು ಜನರ ಹಿತದೃಷ್ಟಿಯಿಂದ ಸರ್ಕಾರವು ಕಾಲಕಾಲಕ್ಕೆ ತೆಗೆದುಕೊಳ್ಳುವ ಕ್ರಮಗಳನ್ನು ಅನುಸರಿಸಿ ಶೀಘ್ರದಲ್ಲಿ ಕೊರೊನಾಮುಕ್ತ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸಬೇಕು. ಸಂಪನ್ಮೂಲ ವ್ಯಕ್ತಿಗಳು ನೀಡುವ…
Author: UllalaVani
ಉಳ್ಳಾಲ: ಶಾಸಕ ಯು.ಟಿ. ಖಾದರ್ ಅವರು ತೊಕ್ಕೊಟ್ಟು ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಅಳವಡಿಸಲು ಇನ್‍ಫೋಸಿಸ್‍ನಂತಹ ಒಂದೂವರೆ ಕೋಟಿ ರೂ. ಅನುದಾನ ತರುವುದರ ವಿರುದ್ಧ ಭೂಕಬಳಿಕೆ ಸ್ವರೂಪ ನೀಡುವುದು ಶೋಭೆ ತರುವುದಿಲ್ಲ ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಹೇಳಿದರು.ತೊಕ್ಕೊಟ್ಟಿನಲ್ಲಿ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯು.ಟಿ.ಖಾದರ್ ಅವರು ತಾನೊಬ್ಬ ಮುಸ್ಲಿಮ್ ಧರ್ಮೀಯನಾದರೂ ಸಹ ಬಹಳ ಮುತುವರ್ಜಿ ವಹಿಸಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್‍ಫೋಸಿಸ್‍ನಿಂದ ಒಂದೂವರೆ ಕೋಟಿ ರೂ. ಅನುದಾನ ತಂದಿದ್ದಾರೆ. ಆದರೆ ಕೆಲವರು ರಾಜಕೀಯ ಹಗೂ ವೈಯಕ್ತಿಕ ಪ್ರತಿಷ್ಠೆಗಾಗಿ ಭೂಕಬಳಿಕೆ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಇರುವ ಒಂದೂವರೆ ಕೋಟಿ ಅನುದಾನದಲ್ಲಿ ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿಯಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಸಾಧ್ಯ. ಹತ್ತಿರದ ಶವ ಹೂಳುವ 45ಸೆಂಟ್ಸ್ ಜಾಗದಲ್ಲಿ ನಿರ್ಮಿಸೋದಾದರೆ 50ಲಕ್ಷ ರೂ. ಗಳಿಗೂ ಹೆಚ್ಚಿನ ಮೊತ್ತ ಅಗತ್ಯತೆ ಇದೆ ಎಂದು ಕಂಪನಿ ಪ್ರಮುಖರು ಹೇಳಿದ್ದಾರೆ.…
ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್‍ಫೆÇೀಸಿಸ್ ಫೌಂಡೇಷನ್ ವತಿಯಿಂದ 1.7 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯುತ್ ಚಿತಾಗಾರಕ್ಕೆ ಸಂಬಂಧಿಸಿದಂತೆ ಶಿಲಾನ್ಯಾಸಕ್ಕೆ ದಿನ ನಿಗದಿಯಾಗುತ್ತಿದ್ದಂತೆ ವಿದ್ಯುತ್ ಚಿತಾಗಾರದ ನಿರ್ಮಾಣವನ್ನು ರುದ್ರಭೂಮಿಯ ಪಕ್ಕದಲ್ಲಿರುವ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಸಹಿ ಅಭಿಯಾನ ಆರಂಭಗೊಂಡಿದ್ದು, ಗೊಂದಲಗಳ ನಡುವೆ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಈಗಿರುವ ರುದ್ರಭೂಮಿಯ ಕಟ್ಟಿಗೆಯಿಂದ ಶವದಹನ ಮಾಡುವ ಸಿಲಿಕಾನ್ ಶವಾಗಾರದ ಬಳಿಯೇ ವಿದ್ಯುತ್ ಚಿತಾಗಾರ ನಿರ್ಮಾಣದಿಂದ ವಿದ್ಯುತ್ ಚಿತಾಗಾರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಈಗಾಗಲೇ ಒಂದೂವರೆ ಎಕೆರೆ ಪ್ರದೇಶ ರುದ್ರಭೂಮಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸೇರಿದಂತೆ ಇತರ ಟ್ಯಾಂಕ್‍ಗಳ ನಿರ್ಮಾಣದಿಂದ ಬಹುಪಾಲು ಜಾಗ ಕಳೆದುಕೊಂಡಿದ್ದು, ಇದೀಗ ವಿದ್ಯುತ್ ಚಿತಾಗಾರ ನಿರ್ಮಾಣದಿಂದ ಸ್ಥಳದ ಅಭಾವ ಕಾಡುವುದುರಿಂದ ಪಕ್ಕದಲ್ಲೇ ಇರುವ ಖಾಲಿ ಇರುವ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಸಹಿ ಸಂಗ್ರಹಣೆ ನಡೆಸಲಾಯಿತು.ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಪ್ರತಿಕ್ರಿಯಿಸಿ ಈಗಾಗಲೇ 1.57 ಎಕೆರೆ ರುದ್ರಭೂಮಿಯಲ್ಲಿ ನೀರಿನ ಟ್ಯಾಂಕ್…
ದೇರಳಕಟ್ಟೆ: ಸಸ್ಯ ಜೀವತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಮೈಸೂರಿನಲ್ಲಿರುವ ಲ್ಯಾಬ್‍ಲ್ಯಾಂಡ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಂಗಳೂರಿನ ದೇರಳಕಟ್ಟೆಯಲ್ಲಿರುವ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ನಡುವೆ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಒಡಂಬಡಿಕೆ ಏರ್ಪಟ್ಟಿದೆ.ಔಷಧೀಯ ಗುಣವುಳ್ಳ ಸಸ್ಯಗಳು, ಅಂಗಾಂಶ ಅಭಿವೃದ್ಧಿ, ದ್ವಿತೀಯ ಚಯಾಪಚಯ ಕ್ರಿಯೆಗಳು, ಕ್ಲಿನಿಕಲ್ ಸಂಶೋಧನೆ, ಅಣುಬೀಜ ಜೀವವಿಜ್ಞಾನ, ಜೀವಮಾಹಿತಿ ವಿಜ್ಞಾನ, ಜೀವ ಅಂಕಿ-ಅಂಶ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಬಯೋ ಇಂಧನ ಕ್ಷೇತ್ರಗಳಲ್ಲಿ ಜಂಟಿಯಾಗಿ ಸಹಮತದ ಸಂಶೋಧನೆ ನಡೆಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ.ಒಡಂಬಡಿಕೆ ಏರ್ಪಟ್ಟ ವೇಳೆ ಲ್ಯಾಬ್‍ಲ್ಯಾಂಡ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಡಾ| ಸುಧೀರ್ ಶೆಟ್ಟಿ ಹಾಗೂ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಸಹ ಕುಲಪತಿ ಡಾ| ಎಂ.ಎಸ್.ಮೂಡಿತ್ತಾಯ, ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ| ಪ್ರವೀಣ್ ಕುಮಾರ್ ಶೆಟ್ಟಿ, ಜೀವರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ|…
ಇರಾ: ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಬೀಡು ಎಂಬಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅರಣ್ಯೀಕರಣ ಕಾಮಗಾರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿ.ಸೋಜ.ಪಿ. ಮತ್ತು ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಯಿದುಕುಂಞÂ, ಸದಸ್ಯರಾದ ಕೆ. ಪ್ರತಾಪ್ ಚಂದ್ರ, ಅಬ್ದುಲ್ ಹಮೀದ್, ರಮೇಶ್. ಎಸ್. ಪೂಜಾರಿ, ಪಂಚಾಯತ್ ಕಾರ್ಯದರ್ಶಿ ನಳಿನಿ.ಎ.ಕೆ ಮತ್ತಿತರರು ಉಪಸ್ಥಿತರಿದ್ದರು.
ಹರೇಕಳ: ಹರೇಕಳ ಗ್ರಾಮ ಪಂಚಾಯತ್‍ನ ನೂತನ ಕಟ್ಟಡ ನಿರ್ಮಾಣವಾಗುವ ಸ್ಥಳ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕ ಅ„ಕಾರಿ ಡಾ| ಕುಮಾರ್ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬರ ಮನೆಗೆ ಭೇಟಿ ನೀಡಿದರು.ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬದ್ರುದ್ದೀನ್ ಫರೀದ್ ನಗರ, ಸದಸ್ಯ ಅಬೂಬಕ್ಕರ್ ಸಿದ್ದೀಕ್, ಗುತ್ತಿಗೆಗಾರ ಇಂತಿಯಾಝ್ ಹರೇಕಳ ಉಪಸ್ಥಿತರಿದ್ದರು.
ಇರಾ: ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್ ರೊಂದಿಗೆ ಶಾಸಕರಾದ ಯು. ಟಿ. ಖಾದರ್ ನೇತೃತ್ವದ ನಿಯೋಗ ತೆರಳಿ ಮಾತುಕತೆ ನಡೆಸಿತು.ಮ ಪಂಚಾಯತ್ ಅಧ್ಯಕ್ಷ ಆಗ್ನೇಸ್ ಡಿಸೋಜಾ, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾಧ್ಯಕ್ಷ ಮೊಯಿದು ಕುಂಞ ,ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ ಕೆ ಉಪಸ್ಥಿತರಿದ್ದರು
ಉಳ್ಳಾಲ: ಯೆನೆಪೋಯ ವೈದ್ಯಕೀಯ ವಿಶ್ವವಿದ್ಯಾಲಯದ ಶರೀರ ಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚಿನ ವೈದ್ಯಕೀಯ ವಿಜ್ಞಾನಗಳ ಪ್ರಗತಿಯ ಬಗ್ಗೆ ಅಂತಾರಾಷ್ಟ್ರೀಯ ಇ-ಕಾನ್ಫರೆನ್ಸ್ RAMSIECON 2021 ದೇರಳಕಟ್ಟೆಯ ಯೆನೆಪೋಯ ಸಂಸ್ಥೆಯಲ್ಲಿ ನಡೆಯಿತು.ಗೂಗಲ್ ಮೀಟ್ ಮತ್ತು ಯೂಟ್ಯೂಬ್ ಪ್ಲಾಟ್‍ಫಾರ್ಮ್‍ನ ಮುಖಾಂತರ ಉದ್ಘಾಟನೆ ನಡೆಯಿತು. ಈ ಸಮ್ಮೇಳನವು ಯುವ ಸಂಶೋಧಕರಿಗೆ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ನೂತನ ಆವಿಷ್ಕಾರಗಳ ಬಗ್ಗೆ ತಿಳಿಯಲು ಒಂದು ವೇದಿಕೆಯನ್ನು ಒದಗಿಸಿದೆ. ಭಾರತ ಮತ್ತು ವಿದೇಶಗಳಿಂದ ಸುಮಾರು 238 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು.ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಸಿ.ಎನ್. ಮಾತನಾಡಿ ವೈದ್ಯಕೀಯ ಪ್ರಗತಿಯ ಮಾಹಿತಿ ಮತ್ತು ಬೆಳವಣಿಗೆಗಳನ್ನು ಪ್ರಚುರ ಪಡಿಸುವಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿದ್ದು ಅದು ಸಮಯೋಚಿತವಾದದ್ದು ಎಂದು ಶ್ಲಾಘಿಸಿದರು.ಈ ವೇಳೆ ಯೆನೆಪೋಯ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಬಿ. ಎಚ್. ಶ್ರೀಪತಿ ರಾವ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಯೆನೆಪೆÇೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಡಾ.ಎಂ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಯೆನೆಪೋಯದ ವಿಶ್ವಯವಿದ್ಯಾಲಯದ ಕುಲಸಚಿವ ಡಾ.ಕೆ.ಎಸ್ ಗಂಗಾಧರ ಸೋಮಯಾಜಿ ಮತ್ತು ಪರೀಕ್ಷೆಗಳ ನಿಯಂತ್ರಕ ಡಾ.…
ಮಂಗಳೂರು: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯವು ಜೀವ ವೈದ್ಯಕೀಯ ವಿಜ್ಞಾನ ಮತ್ತು ಮಾಧ್ಯಮ ಹಾಗೂ ಸಂವಹನ ವಿಷಯಗಳಲ್ಲಿ ನಾಲ್ಕು ವರ್ಷಗಳ ಹೊಸ ಬ್ಯಾಚುಲರ್ ಕೋರ್ಸುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಹೊಸ ಕೋರ್ಸುಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಧಾರಿತ ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರೂಪಿಸಲಾದ ಶಿಕ್ಷಣದ ತತ್ವಗಳನ್ನು ಒಳಗೊಂಡಿವೆ ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಮತ್ತು ಬಿ.ಎ (ಆನರ್ಸ್) ಕೋರ್ಸುಗಳು ಅಂತರ ರಾಷ್ಟ್ರೀಯ ಕೋರ್ಸುಗಳಿಗೆ ಅನುಗುಣವಾಗಿದ್ದು, ಹೆಚ್ಚು ಜಾಗತಿಕ ಮನ್ನಣೆಯನ್ನು ಹೊಂದಿರುತ್ತವೆ. ಈ ಕೋರ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳು ಸಿಗಲಿದ್ದು, ಶಿಕ್ಷಣಕ್ಕೆ ಹೆಚ್ಚಿನ ಗೌರವ ಮತ್ತು ಮನ್ನಣೆ ಗಳಿಸಬಹುದಾಗಿದೆ. ಉದಾಹರಣೆಗೆ, ವಿದ್ಯಾರ್ಥಿಗಳು ಮೂರು ವರ್ಷಗಳಲ್ಲಿ ತಮ್ಮಬಿ.ಎಸ್ಸಿ ಅಥವಾ ಬಿ.ಎ ಪದವಿಯೊಂದಿಗೆ ಕೋರ್ಸು ಮುಗಿಸಿ ತೆರಳಬಹುದು ಅಥವಾ ಮುಂದುವರಿಸಿ ನಾಲ್ಕನೇ ವರ್ಷ ಪೂರ್ಣಗೊಳಿಸಿ ಆನರ್ಸ್ ಪದವಿಯೊಂದಿಗೆ ಕೋರ್ಸನ್ನು ಮುಗಿಸಬಹುದು. ಹೆಚ್ಚುವರಿ ವರ್ಷದ ತರಬೇತಿಯು ಇಂಟರ್ನ್…
ಉಳ್ಳಾಲ: ಯೆನೆಪೋಯ ಸಂಸ್ಥೆಯು ಅಂತರಾಷ್ಟ್ರೀಯವಾಗಿ ಅನುಮೋದಿತ ವಾಗಿರುವ ರಷ್ಯಾದ SPUTNIK – V ಎಂಬ ಕೋವಿಡ್-19 ಲಸಿಕೆಯನ್ನು ನೀಡುವ ಅನುಮತಿಯನ್ನು ಪಡೆದುಕೊಂಡಿದೆ.ಕೋವಿಡ್ – 19 ಆರಂಭಗೊಂಡ ಸಮಯದಿಂದ ಯೆನೆಪೋಯ ಸಂಸ್ಥೆಗಳು ತಮ್ಮ ಸಂಫೂರ್ಣ ಸಂಪನ್ಮೂಲಗಳನ್ನು ಕೋವಿಡ್ ಪೀಡಿತ ರೋಗಿಗಳ ಸುಧಾರಣೆಗೆ ಮೀಸಲ್ಪಟ್ಟಿದೆ. ಇದೇ ಗುರಿಯನ್ನು ಮುಂದಿಟ್ಟುಕೊಂಡು ಯೆನೆಪೋಯ ಸಂಸ್ಥೆಯು ಲಸಿಕೆಯನ್ನು ನೀಡುವ ಕರ್ನಾಟಕದ ಪ್ರಪ್ರಥಮ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ.ಲಸಿಕೆಯನ್ನು ಪಡೆಯಲು ಇಚ್ಛಿಸುವ ಫಲಾನುಭವಿಗಳಿಗೆ ಸುಲಭವಾಗಿ ದೊರಕುವಂತೆ ಸಂಸ್ಥೆಯು ದೇರಳಕಟ್ಟೆ, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರಿನಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ.ಸೂಕ್ತವಾದ ಸುರಕ್ಷತ ಮಾರ್ಗಸೂಚಿಗಳನ್ನು ಅನುಸರಿಸಿ ಫಲಾನುಭವಿಗಳಿಗೆ ಲಸಿಕೆ ಫಡೆಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರ್ಕಾರ ಅನುಮೋದಿಸಿದ ದರಗಳಲ್ಲಿ ಲಸಿಕೆ ಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

