ಉಳ್ಳಾಲ: ಕೇರಳದಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ನಿರ್ದೇಶನದಂತೆ ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯನ್ನು ಪ್ರವೇಶಿಸುವವರು ಕಡ್ಡಾಯವಾಗಿ ಆರ್ ಟಿ ಪಿಸಿಆರ್ ವರದಿಯನ್ನು ತೋರಿಸಿಯೇ ಒಳಪ್ರವೇಶಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಹೇಳಿದ್ದಾರೆ.ಕೇರಳ ಗಡಿಭಾಗ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ಕೇರಳದಿಂದ ಬರುವ ಮಂದಿಯನ್ನು ತಪಾಸಣೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಕೇರಳ ಮತ್ತು ದ.ಕ ನಡುವೆ ಇರುವ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಸಕ್ರಿಯವಾಗುವಂತೆ ಆದೇಶಿಸಲಾಗಿದೆ. ತಲಪಾಡಿ, ನೆಟ್ಟಣಿಗೆ-ಮುಡ್ನೂರು, ಸಾರಡ್ಕ, ಜಾಲ್ಸೂರು ಭಾಗದ ಚೆಕ್ ಪೋಸ್ಟ್ ಗಳು ನಾಳೆಯಿಂದ 24 ಗಂಟೆಗಳ ಕಾಲ ಕಾರ್ಯಾಚರಿಸಲಿದೆ. ಜನಸಂಚಾರ ಹೆಚ್ಚಿರುವ ಗ್ರಾ.ಪಂ ವ್ಯಾಪ್ತಿಗಳಲ್ಲಿ ಚೆಕ್ ಪೋಸ್ಟ್ ಹಾಕಲು ಸೂಚಿಸಲಾಗಿದೆ. ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹಿಡಿದುಕೊಂಡು ಜಿಲ್ಲೆಯನ್ನು ಪ್ರವೇಶಿಸಬೇಕಿದೆ. ದ.ಕ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಆರೋಗ್ಯ ಸಂಬಂಧ ವಿಚಾರಕ್ಕೆ ದಿನನಿತ್ಯ ಹಲವು ಜನರು ಬರುತ್ತಾರೆ. ಅವರಲ್ಲಿ ರೋಗಿಯ ಆರ್…
Author: UllalaVani
ಉಳ್ಳಾಲ : ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿತರಿಸಿದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಅಸಮರ್ಪಕವಾಗಿದ್ದು ಮುನ್ನೂರು ಗ್ರಾಮದಲ್ಲಿರುವ ಸುಮಾರು ಐನೂರು ಕಟ್ಟಡ ಕಾರ್ಮಿಕರ ಪೈಕಿ ಕೇವಲ ಐವತ್ತೇಳು ಜನರಿಗೆ ಮಾತ್ರ ವಿತರಿಸಿ ಉಳಿದ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮುನ್ನೂರು ಗ್ರಾಮ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರು ಇಂದು ಮುನ್ನೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಂತ್ ನಾಯ್ಕ್ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕೇವಲ 57 ಜನ ಕಾರ್ಮಿಕರಿಗೆ ಕಿಟ್ ಕೊಟ್ಟು ಉಳಿದವರಿಗೆ ಕೊಡದೇ ವಂಚಿಸಿರುವುದು ಅನ್ಯಾಯವಾಗಿದೆ. ಇಲ್ಲಿರುವ 500 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರೆಲ್ಲರೂ ಸಹ ಈ ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವವರೇ ಆಗಿದ್ದಾರೆ. ಹೀಗಿರುವಾಗ ಕೇವಲ 57 ಜನರಿಗೆ ಕೊಟ್ಟು ಉಳಿದವರಿಗೆ ಕೊಡದೇ ವಂಚಿಸಿರುವುದು ಅಮಾನವೀಯವಾಗಿದ್ದು ಕೂಡಲೇ ಬಾಕಿ…
ಉಳ್ಳಾಲ: ವೀಕೆಂಡ್ ಕಪ್ರ್ಯೂನ ಎರಡನೇ ದಿನವಾದ ರವಿವಾರವೂ ಉಳ್ಳಾಲದಾದ್ಯಂತ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣÀ ಬಂದ್ ಆಗಿದ್ದು, ವಾಹನಗಳು ಬೆರಳೆಣಿಕೆಯಷ್ಟೇ ರಸ್ತೆಗಿಳಿದಿದೆ, ಉಳ್ಳಾಲ ಸಮುದ್ರ ತೀರದಲ್ಲಿ ಹವ್ಯಾಸಿ ಮೀನುಗಾರರ ದಂಡೇ ಸಮುದ್ರ ತಟದಲ್ಲಿ ಆಧುನಿಕ ಗಾಳದ ಮೂಲಕ ಮೀನು ಹಿಡಿಯುವ ಮೂಲಕ ವೀಎಂಡ್ ಕಫ್ರ್ಯೂವನ್ನು ಸದುಪಯೋಗಪಡಿಸಿಕೊಂಡರು.ಉಳ್ಳಾಲ ಮತ್ತು ಕೊಣಾಜೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರವೂ ಪೆÇಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ವಾಹನಗಳು ರಸ್ತೆಗಿಳಿಯಿಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಇದ್ದ ಕಾರಣ ಬೆಳಗ್ಗಿನ ಜಾವ ಜನಸಂಖ್ಯೆಯೂ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಕೆಲವು ವಾಹನಗಳು ಪೆÇಲೀಸರ ಕಣ್ಣು ತಪ್ಪಿಸಿ ಸಂಚರಿಸಿದವು. ಮಧ್ಯಾಹ್ನದ ನಂತರ ಉಳ್ಳಾಲ, ತೊಕ್ಕೊಟ್ಟು ಕಡೆಯಿಂದ ಬಂದ 50ಕ್ಕೂ ಹೆಚ್ಚು ಹವ್ಯಾಸಿಗಳು ಆಧುನಿಕ ಗಾಳ ಹಿಡಿದುಕೊಂಡು ಉಳ್ಳಾಲ ಸಮುದ್ರ ತೀರದಲ್ಲಿಮೀನು ಹಿಡಿಯುತ್ತಿರುವುದು ಕಂಡು ಬಂತು.
ಉಳ್ಳಾಲ: ಉಳಿಯದ ಅಳಿವೆ ಬಾಗಿಲಿನ ನೇತ್ರಾವತಿ ನದಿ ತಟದ ಬೀಚ್ ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಈ ಬೀಚ್ ಅಭಿವೃದ್ಧಿ ಸಂದರ್ಭದಲ್ಲಿ ಅಮಲು ಪದಾರ್ಥ, ಸಿಗರೇಟ್ ಸೇರಿದಂತೆ ತ್ಯಾಜ್ಯಮುಕ್ತ ಸುಂದರ ಬೀಚ್ ಆಗಿ ಪರಿವರ್ತಿಸಲು ಸ್ಥಳೀಯರು ಮುಂದಾಗಬೇಕು ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.ಉಳಿಯ ಅಳಿವೆ ಪ್ರದೇಶವಾಗಿರುವ ನೇತ್ರಾವತಿ ನದಿ ತಟದ ರಿವರ್ ಸೈಡ್‍ಗೆ ಭೇಟಿ ನೀಡಿ ಮಾತನಾಡಿ ಸ್ಥಳೀಯರ ಸಮಸ್ಯೆ ಆಲಿಸಿ ಮಾತನಾಡಿದರು. ಈ ಪ್ರದೇಶದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಹೊರಗಿನಿಂದ ಬರುವ ದ್ವಿಚಕ್ರ ವಾಹನ ಚಾಲಕರು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಾರೆ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಉಪಾಧ್ಯಕ್ಷ ಆಯೂಬ್, ಮಾಜಿ ಅಧ್ಯಕ್ಷ ಬಾಝಿಲ್ ಡಿ.ಸೋಜ, ಸದಸ್ಯರಾದಅಶ್ರಫ್, ವೀಣಾ ಉಳಿಯ, ಭಾರತಿ, ಸ್ವಪ್ನಾ ಹರೀಶ್, ರಾಜೇಶ್ ಯಾನೆ ಅಂತ ಗುರಿಕಾರ, ರಾಜೇಶ್ ಬಂಡಸಾಲೆ,ರಿಯಾಝ್, ಸಲೀಂ, ಕಿಂಗ್ ಸ್ಟಾರ್ ಸೇವಾ ಸಮಿತಿ ಉಳಿಯ ಹೊೈಗೆಪ್ರೇಮ್ ಪ್ರಕಾಶ್ ಡಿ.ಸೋಜ , ಕಾರ್ಯದರ್ಶಿ ಪ್ರಮಿತ್ ಡಿ.ಸೋಜ , ಪ್ರಕಾಶ್ ಡಿ.ಸೋಜ…
ಉಳ್ಳಾಲ: ಮೈಸೂರಿನ ಸುತ್ತೂರು ಮಠದ ಮಾದರಿಯಲ್ಲಿ ಉಳ್ಳಾಲದ ಉಳಿಯದಲ್ಲಿ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಕೃಷಿ ಜಾತ್ರೆಯನ್ನು ಹಮ್ಮಿಕೊಳ್ಳುವ ಕಾರ್ಯ ಆಗಬೇಕು ಇದಕ್ಕೆ ಬೇಕಾದ ಬೆಂಬಲವನ್ನು ಶಾಸಕನ ನೆಲೆಯಲ್ಲಿ ಕೊಡಲು ಸಿದ್ಧ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ಉಳಿಯದ ಧರ್ಮರಸರ ಕ್ಷೇತ್ರಕ್ಕೆ ಒಳಪಟ್ಟ ಗದ್ದೆಯಲ್ಲಿ ನೇಜಿ ನಾಟಿಗೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶದ ಕೃಷಿ ಪರಂಪರೆಯನ್ನು ಉಳಿಸಿಕೊಂಡು ಯುವಜನರಿಗೆ ಕೃಷಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಧಾರ್ಮಿಕ ಕ್ಷೇತ್ರಗಳು ತೊಡಗಿಸಿಕೊಳ್ಳಬೇಕು.ಮೈಸೂರಿನಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ದೊಡ್ಡ ಮಟ್ಟದ ಕೃಷಿ ಜಾತ್ರೆ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಉಳಿಯದಲ್ಲೂ ಈ ಕಾರ್ಯ ಆಗಬೇಕು ಕೃಷಿ ಹಿಂದೆ ಹೇಗಿತ್ತು, ಈಗ ಹೇಗಿದೆ ಮತ್ತು ಮುಂದಿನ ಚಿಂತನೆಯನ್ನು ಈ ಜಾತ್ರೆಯಲ್ಲಿ ಅಲವಡಿಸಿಕೊಂಡು ಕೃಷಿ ಇಲಾಖೆಯನ್ನು ಇದರಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದರು.ರೈತರೇ ಬೆನ್ನೆಲುಬು : ದೇಶ ಸ್ವಾತಂತ್ರದ ಸಂದರ್ಭದಲ್ಲಿ 33 ಕೋಟಿ ಜನಸಂಖ್ಯೆ ಇರುವಾಗ ಭಾರತದಲ್ಲಿ ಒಂದು ಹೊತ್ತಿನ ಊಟಕ್ಕೂ ಹೊರದೇಶಕ್ಕೆ ಕೈಚಾಚಬೇಕಿತ್ತು. ಆದರೆ…
ಉಳ್ಳಾಲ: ರಕ್ತದೊತ್ತಡ ತಪಾಸಣೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ಸ್ನೇಹಿತರ ಜೊತೆಗೆ ತೆರಳಿದ್ದ ಯುವಕ ವೈದ್ಯರು ಬಿಪಿ ಚೆಕ್ ಮಾಡುವಷ್ಟರಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ಕುಂಪಲ ಆಶ್ರಯ ಕಾಲನಿ ನಿವಾಸಿ ರಾಜೇಶ್ ರಾವ್ (31) ಹೃದಯಾಘಾತಕ್ಕೆ ಬಲಿಯಾದ ಯುವಕ. ರಾಜೇಶ್ ಅವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ಶುಕ್ರವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು. ವೈದ್ಯರು ಮತ್ತೆ ಸೋಮವಾರ ತಪಾಸಣೆಗೆ ಬರಲು ತಿಳಿಸಿದ್ದರಂತೆ. ಅದರಂತೆ ಇಂದು ಬೆಳಗ್ಗೆ ರಾಜೇಶ್ ಅವರ ಸ್ನೇಹಿತರಾದ ಪ್ರಕಾಶ್ ಕುಂಪಲ, ಶೈಲೇಶ್ ಮೊದಲಾದವರು ರಾಜೇಶನ್ನು ನಗರದ ಕೆಎಂಸಿ ಆಸ್ಪತ್ರೆಗೆ ಉನ್ನತ ತಪಾಸಣೆಗೆ ಕರೆದೊಯ್ದಿದ್ದಾರೆ. ತಪಾಸಣೆಗೆ ತೆರಳುವಾಗ ರಾಜೇಶ್ ಅವರೇ ಕಾರು ಚಲಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತದೊತ್ತಡ ತಪಾಸಣೆ ನಡೆಸುವ ವೇಳೆ ರಾಜೇಶ್ ಕುಸಿದು ಬಿದ್ದಿದ್ದು ಸ್ನೇಹಿತರ ಮುಂದೆಯೇ ಸಾವನ್ನಪ್ಪಿದ್ದಾರೆ.ರಾಜೇಶ್ ಅವರು ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ. ರಾಜೇಶ್ ಅವರು ರಿಕ್ಷಾ ಚಾಲಕರಾಗಿದ್ದು ಕುಂಪಲ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದು ಅಪಾರ ಸ್ನೇಹಿತರನ್ನು ಹೊಂದಿದ್ದರು. ಸ್ನೇಹಿತರೊಂದಿಗೆ…
ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಸ್ ಕರೀಂ ಇವರು ಆಯ್ಕೆಯಾಗಿದ್ದಾರೆ.ಕರೀಂ ಅವರು ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರೂ ಆಗಿದ್ದರು.ಇವರನ್ನು ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಬುಧವಾರ ಮಂಜನಾಡಿಯಲ್ಲಿ ಸನ್ಮಾನಿಸಲಾಯಿತು.
ಮಂಜನಾಡಿ : ಕರ್ನಾಟಕ ಸರಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್ ಮೂಲಕ ನಿರ್ಮಾಣವಾದಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಯು ಟಿ ಖಾದರ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಂಜನಾಡಿಯ ಮೊಂಟೆಪದವು ಪ್ರದೇಶದಲ್ಲಿ ತಲೆಯೆತ್ತಿರುವ ಈ ವಿದ್ಯಾರ್ಥಿನಿಲಯ ಮಂಗಳೂರು ಕ್ಷೇತ್ರದ ಪರಿಶಿಷ್ಟ ವರ್ಗದ ಮಕ್ಕಳಿಗಿಂತಲೂ ಇತರ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲು ಮಾಡಿರುವಂತದ್ದು ಎಂದರು.ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಇನ್ನಷ್ಟು ಮುಂದೆ ಬರಬೇಕು ಎಂಬ ದೂರದೃಷ್ಟಿಯಿಂದಈಗಾಗಲೇ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಲಾಗಿದ್ದು, ಅದರಂತೆ ಶಾಶ್ವತವಾದ ಕಟ್ಟಡವನ್ನು ಕಟ್ಟಿ ಆ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಸದುದ್ದೇಶದಿಂದ ಸರಕಾರ ಸ್ವಂತ ವಿದ್ಯಾರ್ಥಿ ನಿಲಯ ಸ್ಥಾಪಿಸಿದೆ ಎಂದರು.ಕೆಲವೊಂದು ಲೋಪದೋಷಗಳನ್ನು ಮನಗಂಡಿದ್ದು ಸ್ಥಳೀಯವಾಗಿ ಒಂದು ಮೇಲುಸ್ತುವಾರಿ ಸಮಿತಿ ರಚಿಸಿಅವರೊಂದಿಗೆ ಚರ್ಚಿಸಿ ಅವರಿಗೆ ಸಹಕಾರ ನೀಡಲಾಗುವುದು.ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಕಟ್ಟಡ ನಿರ್ಮಿಸಿ ಉದ್ಘಾಟನೆಗೊಂಡ ಬಳಿಕ ತಮ್ಮ ಪಾಡಿಗೆ ತಾವು ಹೋಗದೆ ಕನಿಷ್ಠ ಕೆಲವು ವರ್ಷಗಳ ಕಾಲ ಈ ಕಟ್ಟಡದ ಬಗ್ಗೆನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕಿದೆ. ಕಟ್ಟಡ…
ಕೊಣಾಜೆ : ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ಈ ದೇಶ ಬಲಿಷ್ಠವಾಗುತ್ತದೆ ಹೊರತು ಎಂಪಿ, ಎಂಎಲ್ ಎ, ಜನಪ್ರತಿನಿಧಿಗಳಿಂದ ಸಾಧ್ಯವಿಲ್ಲ. ಹಾಗಾಗಿ ಶಿಕ್ಷಣದಲ್ಲಿ ಸ್ಪರ್ಧೆಗೆ ಸರಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತಿದ್ದು ಶಿಕ್ಷಣಕ್ಕೆ ಆದ್ಯತೆ ನೀಡುವುದೇ ಮುಖ್ಯ ಗುರಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.ಅವರು ಕುರ್ನಾಡು ಮುಡಿಪಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿ.ಸಿ. ವಿತರಿಸಿ ಮಾತನಾಡಿದರು.ಯಾವುದೇ ಅಭಿವೃದ್ಧಿಯಲ್ಲಿ ಕನಿಷ್ಟ ಮುಂದಿನ ಮುವತ್ತು ವರ್ಷಗಳ ದೂರದೃಷ್ಟಿ ಇದೆ. ಇಲ್ಲಿ ಸುಂದರ ಪರಿಸರ, ಸುಂದರ ಕಟ್ಟಡ, ನುರಿತ ಉಪನ್ಯಾಸಕರು, ಸಿಬ್ಬಂದಿ ಎಲ್ಲ ಸೌಲಭ್ಯಗಳಿಂದ ಸುಸಜ್ಜಿತವಾಗಿದ್ದು ಈಗ ಕಲಿಯುತ್ತಿರುವ ವಿದ್ಯಾರ್ಥಿಗಳ ಸಾಧನೆ ಮುಂದೆ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಪೂರಕವಾಗಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಬಹಳಷ್ಟು ಸೌಲಭ್ಯಗಳು ದೊರಕಿದ್ದು ವಿದ್ಯಾರ್ಥಿಗಳು ಸರ್ವಾಂಗೀಣ ಯಶಸ್ಸು ಕಾಣಬೇಕು ಎಂದು ನುಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ ಕಾರ್ಯಕ್ರಮದ…
ಉಳ್ಳಾಲ: ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಸೋಮೇಶ್ವರ ಪುರಸಭೆ ಬಳಿ ನಿವಾಸಿ ಪವನ್ ಭಟ್ (29) ಆತ್ಮಹತ್ಯೆಗೈದಿದ್ದು, ಸಮುದ್ರದ ಅಲೆಯಲ್ಲಿ ಸಿಲುಕಿದ್ದ ಮೃದೇಹವನ್ನು ಸ್ಥಳೀಯ ಮೀನುಗಾರರು ಮತ್ತು ಜೀವರಕ್ಷಕ ಈಜುಗಾರರು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ.ಎಂಬಿಎ ಮತ್ತು ಇಂಜಿನಿಯರಿಂಗ್ ಪದವಿಧರನಾಗಿದ್ದ ಪವನ್ ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಎನ್ನಲಾಗಿದೆ. ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪವನ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ನಡೆಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತನಾಗಿದ್ದ ಪವನ್ ಉತ್ತಮ ಹಾಡುಗಾರ ಹಾಗೂ ಗಿಟಾರ್ ನುಡಿಸುತ್ತಿದ್ದ ಎನ್ನಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಈತ ಮಾನಸಿಕವಾಗಿ ಕುಗಿದ್ದು, ಪ್ರತೀ ದಿನ ಸೋಮೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ. ಬುಧವಾರವೂ ದೇವಸ್ಥಾನಕ್ಕೆ ತೆರಳಿ ಬಳಿಕ ರುದ್ರಪಾದೆಯ ಮೇಲೆಗ ಹೋಗಿದ್ದು ಅಲ್ಲಿಂದ ಆತ್ಮಹತ್ಯೆಗೈದಿದ್ದು, ಸ್ಥಳೀಯರು ನೋಡಿ ಜೀವರಕ್ಷಕ ಈಜುಗಾರರಿಗೆ ಮಾಹಿತಿ ನೀಡಿದ್ದು ಅವರು ಸ್ಥಳ್ಕೆ ಆಗಮಿಸಿದಾಗ ಪವನ್ ಮೃತದೇಹಸಮುದ್ರದ ಅಲೆಯಲ್ಲಿ ಸಿಲುಕಿದ್ದು ಪೆÇಲೀಸರಿಗೆ ಮಾಹಿತಿ ನೀಡಿದ್ದು, ಪೆÇಲೀಸರ ಮಾಹಿತಿಯಂತೆ ಗೃಹರಕ್ಷಕದಳದ ಸಿಬಂದಿ ಪ್ರಸಾದ್…

