Author: UllalaVani

Kannada News From Coastal Karnataka

ಉಳ್ಳಾಲ: ನಿರಂತರವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಳ್ಳಾಲದಲ್ಲಿ ಸಮುದ್ರ ಕೊರೆತ ಗುರುವಾರವೂ ಮುಂದುವರಿದಿದೆ. ಬಟ್ಟಪ್ಪಾಡಿ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರಕ್ಕೆ ಅಲೆಗಳು ಬಡಿಯುತ್ತಿದೆ. ಬಟ್ಟಪ್ಪಾಡಿ- ಉಚ್ಚಿಲ ಸಂಪರ್ಕಿಸುವ ರಸ್ತೆ ಸಂಪೂರ್ಣ ಸಮುದ್ರಪಾಲಾದರೆ,ಸಮುದ್ರದ ಅಲೆಗಳ ರೌದ್ರ ನರ್ತನಕ್ಕೆ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 11 ಮಂದಿಯ ತಂಡ ಬೆದರಿ ವಾಪಸ್ಸಾಗಿದ್ದಾರೆ.ಪ್ರವಾಸಕ್ಕೆ ಅಂತ ಮಂಗಳೂರು ಬಂದಿದ್ದೆವು. ಉಚ್ಚಿಲದ ರೆಸಾರ್ಟ್‍ನಲ್ಲಿ ತಂಗಿದ್ದೆವು. ಆದರೆ ಇಲ್ಲಿ ಸಿಕ್ಕಾಪಟ್ಟೆ ಮಳೆಯಿಂದ ಸಮುದ್ರ ಅಬ್ಬರಿಸುತ್ತಿದೆ. ಹೀಗಾಗಿ ಇದನ್ನು ನೋಡಿ ಭಯವಾಗುತ್ತಿದೆ, ಇವತ್ತೆ ಬೆಂಗಳೂರು ವಾಪಸ್ಸಾಗುತ್ತಿದ್ದೇವೆ. ಗುರುವಾರ ರಾತ್ರಿ ಅಲೆಗಳ ಅಬ್ಬರ ಜೋರಾಗಿತ್ತು. ನೀರಿಗೆ ಇಳಿಯಲು ಹೋದಾಗ ಅಲೆ ಬಂದು ಬಡಿದಿದೆ.ರೆಸಾರ್ಟ್ ನ ಕುರ್ಚಿ ಎಲ್ಲಾ ಹಾರಿ ಹೋಗಿದೆ, ನೋಡುವಾಗ ಭಯ ಆಗುತ್ತಿದೆ . ನಾವು ಇಲ್ಲಿನ ಬೀಚ್ ನೋಡಲೆಂದು ಬೆಂಗಳೂರಿನಿಂದ 11 ಮಂದಿಯ ತಂಡ ಜು.13 ರಂದು ಬಂದು ತಂಗಿದ್ದೇವೆ. ಆದರೆ ಮಳೆಯಿಂದಾಗಿ ಡೇಂಜರ್ ಆಗಿದೆ. ಮಳೆ ನಿಲ್ಲುವವರೆಗೂ ಯಾರೂ ಇಲ್ಲಿಗೆ ಬರಬೇಡಿ, ತುಂಬಾ ಅಪಾಯಕಾರಿಯಾಗಿದೆ. ಮಳೆ…

Read More

ಉಳ್ಳಾಲ: ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಹಿನ್ನಲೆಯಲ್ಲಿ ಕೊಣಾಜೆ ಮತ್ತು ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ಪೆÇಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಾಸರಗೋಡಿನಿಂದ ಮಂಗಳೂರು ಪ್ರವೇಶಿಸುವ ಎಲ್ಲರ ನೆಗೆಟಿವ್ ವರದಿ ಕಡ್ಡಾಯ ಮಾಡುತ್ತಿದ್ದು, ಸ್ಥಳದಲ್ಲಿಏ ಆರ್‍ಟಿಪಿಸಿಆರ್ ಪರೀಕ್ಷೆಗೆ ವ್ಯವಸ್ತೆ ಮಾಡಿದ್ದು ತಲಪಾಡಿ ಗಡಿಭಾಗದಲ್ಲೂ ಕಟ್ಟು ನಿಟ್ಟಿನ ಕ್ರಮ ಕೊಂಡಿದ್ದಾರೆ.ಮಂಗಳೂರು ಕಮಿಷನರೇಟ್ ಒಳಪಡುವ ಕೊಣಾಜೆ, ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ, ನೆತ್ತಿಲಪದವು, ನಾರ್ಯ, ನಂದರಪಡ್ಪು, ಮುದುಂಗಾರುಕಟ್ಟೆ, ತೌಡುಗೋಳಿ ಪ್ರದೇಶದಲ್ಲಿ ಪೆÇಲೀಸ್ ಬಂದೋಬಸ್ತ್ ಹಾಕಲಾಗಿದೆ. ಗಡಿ ಪ್ರದೇಶದಲ್ಲಿ ಓರ್ವ ಎಎಸ್‍ಐ ನೇತೃತ್ವದಲ್ಲಿ ಪೆÇಲೀಸ್ ತಪಾಸಣೆ ನಡೆಯುತ್ತಿದ್ದು, ತಲಪಾಡಿ ಗಡಿಯ್ಲಲಿ ಆರೋಗ್ಯ ಇಲಾಖೆ ಸೇರಿದಂತೆ ವೈದ್ಯಕೀಯ ಕಾಲೇಜುಗಳ ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಯ ನಿಟ್ಟಿನಲ್ಲಿ ಕೈಜೋಡಿಸಿದ್ದಾರೆ. ಕೇರಳದಿಂದ ತಲಪಾಡಿ ಮಾರ್ಗವಾಗಿ À ಬರುವ ಬಸ್‍ನ ಎಲ್ಲಾ ಪ್ರಯಾಣಿಕರನ್ನು ಇಳಿಸಿ ತಪಾಸಣ ನಡೆಸಿದ ಬಳಿಕವೇ ಮಂಗಳೂರಿಗೆ ಕಳುಹಿಸಲಾಗುತ್ತಿದೆ.

Read More

ಉಳ್ಳಾಲ: ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ತಿರುವು ಬಳಿ ಕಸ ಎಸೆದು ಹೋಗಿದ್ದ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಕಿನ್ಯಾ ಗ್ರಾಮ ಪಂಚಾಯಿತಿನಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ, ವಾಹನ ಸಂಖ್ಯೆ ಆಧಾರದಡಿ ಉಳ್ಳಾಲ ಪೊಲೀಸ್ ಠಾಣೆಗೆ ಆರೋಪಿ ವಿರುದ್ಧ ಕಿನ್ಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕರಣ ದಾಖಲಿಸಿರುವುದಲ್ಲದೆ, ಕಸ ಎಸೆದವನಿಂದಲೇ ಮತ್ತೆ ಕಸವನ್ನು ಹೆಕ್ಕಿಸಿದ ಪ್ರಸಂಗ ಬುಧವಾರ ನಡೆದಿದೆ.ಜು.11 ರಂದು ವ್ಯಕ್ತಿಯೊಬ್ಬ ಕೆಎ-19 ಎಚ್‍ಎ, 1879 ನಂಬರಿನ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಬಂದು ಗೋಣಿಚೀಲದಲ್ಲಿ ತ್ಯಾಜ್ಯ ತಂದು ಎಸೆಯುವಾಗಲೇ ಸಾರ್ವಜನಿಕರು ಫೆÇಟೋ ತೆಗೆದಿದ್ದರು. ಈ ಫೆÇಟೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಲ್ಲದೆ, ಕಿನ್ಯ ಪಂಚಾಯತ್‍ಗೂ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಫೋಟೋದಲ್ಲಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು, ವಾಹನ ಮಾಲೀಕ ಬದ್ರುದ್ದೀನ್ ಇರ್ಫಾನ್ ಉಳ್ಳಾಲ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ದಂಡ ಹಾಕಲಾಗಿದೆ. ಅಲ್ಲದೆ ಸ್ಥಳೀಯರ ಒತ್ತಾಯದಂತೆ ಕಿನ್ಯಾ ಗ್ರಾ.ಪಂ ಇರ್ಫಾನ್ ಅವರಿಂದಲೇ ಬಿಸಾಡಿದ ಕಸವನ್ನು ಹೆಕ್ಕಿಸುವ…

Read More

ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿಮಳೆಗೆ ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಒಳರಸ್ತೆ ಸಮುದ್ರದ ಅಲೆಗಳ ಪಾಲಾದರೆ, ಉಳ್ಳಾಲ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಂಪೌಂಡ್ ಕುಸಿತ ಸೇರಿದಂತೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದೆ.ಸೋಮೇಶ್ವರ ಬೀಚ್ ರಸ್ತೆ ಬಟ್ಟಪ್ಪಾಡಿ ಬಳಿ ಹಾನಿಗೀಡಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ , ಉಚ್ಚಿಲದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಭೇಟಿ ನೀಡಿದ್ದಾರೆ. ಉಳಿದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲದಲ್ಲಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು ಯಾವುದೇ ಹಾನಿಯಾಗಲಿಲ್ಲ. ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಶಾರದಾ ಅವರ ಮನೆಯ ಕಂಪೌಂಡ್ ಕುಸಿದು ಹಾನಿಯಾದರೆ ಅಂಬ್ಲಮೊಗರು ಗ್ರಾಮದ ಮದನಿನಗರ ಇವಾಸಿ ಗಣೇಶ್ ಅವರ ಮನೆಗೆ ಪಕ್ಕದ ಮನೆಯ ಕಂಫೌಂಡ್ ಕುಸಿದು ಹಾನಿಯಾಗಿದೆ.ಸಂತೋಷನಗರ ನಿವಾಸಿ ಸುಂದರ ಎಂಬವರ ಮನೆಗೆ ತಡೆಗೋಡೆ ಕುಸಿದು ಅಪಾರ ಹಾನಿಯಾಗಿದೆ.

Read More

ಉಳ್ಳಾಲ: ಕೃಷಿ ಕ್ಷೇತ್ರ ಆಧುನೀಕರಣಗೊಳ್ಳಬೇಕು, ಬದಲಾವಣೆಗಳಾಗಬೇಕು ಅನ್ನುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಪಾಠ ಹೇಳುವ ಕಾರ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಕೆ. ಅಭಿಪ್ರಾಯಪಟ್ಟರು.ಅವರು ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪಿಲಾರು ಇರ್ನೂರುಗುತ್ತು ಗದ್ದೆಯಲ್ಲಿ ಮಂಗಳವಾರ ಹಮ್ಮಿಕೊಂಡ ಭತ್ತದ ನಾಟಿ ಕಾರ್ಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕೃಷಿ ಮಾಡಿದವನಿಗೆ ಬಡತನವಿಲ್ಲ, ಜಪ ಮಾಡಿದವನಿಗ ಭಯವಿರುವುದಿಲ್ಲ ಅನ್ನುವ ಮಾತಿಗೆ ಒತ್ತು ಕೊಟ್ಟು ವಿದ್ಯಾರ್ಥಿಗಳಿಗೆ ಕೃಷಿಪಾಠ ಹೇಳುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಈ ಮೂಲಕ ಅನ್ನದ ಬೆಲೆಯನ್ನು ವಿದ್ಯಾರ್ಥಿಗಳು ಅರಿಯಲು ಸಾಧ್ಯ ಎಂದರು.ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ದಾಂಡೇಲಿ, ಮೈಸೂರು ಸಹಿತ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳಿದ್ದಾರೆ, ಭತ್ತದ ಮೂಲ ಗೊತ್ತಿರದ ಪರಿಸ್ಥಿತಿ ಇಂದಿನ ವಿದ್ಯಾರ್ಥಿಗಳದ್ದಾಗಿದೆ. ಅದಕ್ಕಾಗಿ ಜ್ಞಾನ ವೃದ್ಧಿಸುವ ಕಾರ್ಯ ಈ ಮೂಲಕ ಆಗಿದೆ . ಕೊರೊನಾ ಸಂದರ್ಭ ಹಳ್ಳಿಗಳಿಗೆ ಮರಳಿರುವ ಮಂದಿ…

Read More

ಉಳ್ಳಾಲ: ಕುಟುಂಬದಲ್ಲಿ ಎಲ್ಲರೂ ಇದ್ದಾರೆ, ಆದರೆ ಒಂದೊಂದು ರುಪಾಯಿಗೂ ಪರದಾಡುವ ಆ ತಾಯಿ ಮಗಳ ಪಾಲಿಗೆ ಅತ್ತೆ, ಒಂದಿಬ್ಬರನ್ನು ಬಿಟ್ಟರೆ ಮತ್ಯಾರೂ ಇಲ್ಲ, ಆದರೆ ಅವರ ಕೈ ಕೂಡಾ ಖಾಲಿಖಾಲಿ. ಒಪ್ಪೊತ್ತಿನ ಆಹಾರಕ್ಕೂ ತಾತ್ವಾರ ಇರುವಾಗ ಮಗಳ ಮದುವೆ ಮಾಡೋದು ಹೇಗೆ? ಉಳಿದಿದ್ದು ಜೀವನಕ್ಕೆ ವಿದಾಯವೊಂದೇ ಮಾರ್ಗ. ಈ ಸಂದರ್ಭದಲ್ಲೇ ಕುಟುಂಬಕ್ಕೆ ಯಾರೂ ಅಲ್ಲದ, ಕನಿಷ್ಟಪಕ್ಷ ಸ್ವಧರ್ಮೀಯರೂ ಅಲ್ಲದ ಕುಟುಂಬ! ತಾಯಿ-ಮಗಳ ಜೀವ ಉಳಿಸುವ ಜೊತೆ ಮುಂದಿನ ಜೀವನಕ್ಕೂ ದಾರಿ ತೋರಿದೆ ಉಳ್ಳಾಲದ ಮುಸ್ಲಿಂ ಕುಟುಂಬ!ಇಂಥದ್ದೊಂದು ಮಾನವೀಯ, ಹೃದಯಸ್ಪರ್ಶಿ, ಸೌಹಾರ್ದತೆಗೆ ಭದ್ರ ಬುನಾದಿಯಾಗುವಂತಹ ಪ್ರಸಂಗವೊಂದು ಉಳ್ಳಾಲದ ಅಲೇಕಳದಲ್ಲಿ ಭಾನುವಾರ ನಡೆದಿದೆ. ಮಂಗಳೂರಿನ ಶಕ್ತಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ಕುಟುಂಬವದು. ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆಯೇ ದುರಂತ ಸಾವು ಕಂಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಮಕ್ಕಳು. ವರ್ಷದ ಹಿಂದೆ ಹಿರಿಯ ಮಗಳಿಗೆ ಮದುವೆಯಾಗಿ ಸಾಲದಿಂದ ಹೊರಬರಲು ಎಲ್ಲವನ್ನೂ ಮಾರಿ, ಖಾಲಿ ಕೈಯೊಂದಿದೆ ನಾಲ್ಕು ತಿಂಗಳ ಹಿಂದೆ ಗೀತಾ ತಾಯಿ, ಮಗಳು ಕವನಾ,…

Read More

ಉಳ್ಳಾಲ,: ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್‍ಫೆÇೀಸಿಸ್ ಪೌಂಡೇಷನ್‍ನಿಂದ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಗೆ ಸ್ಥಳೀಯರಿಂದ ಯಾವುದೇ ವಿರೋಧ ಇಲ್ಲ ಆದರೆ ಈ ಯೋಜನೆಯನ್ನಯನ್ನು ಈ ಹಿಂದೆ ನಿಗದಿ ಪಡಿಸಿದ  ರುದ್ರಭೂಮಿಗೆ ಸೇರಿದ ಖಾಲಿ ಜಾಗದಲ್ಲಿ ನಿರ್ಮಿಸಬೇಕು ಮತ್ತು ಆ ಜಾಗದ ಆರ್‍ಟಿಸಿ ರುದ್ರಭೂಮಿಯ ಹೆಸರಿಗೆ ಆಗಬೇಕು. ಸ್ಥಳೀಯರಿಗೆ ಯಾವುದೇ ಮಾಹಿತಿ ಪಡೆದುಕೊಳ್ಳದೆ ಇಕ್ಕಟ್ಟಾಗಿರುವ ಈಗಿರುವ ರುದ್ರಭೂಮಿಯಲ್ಲಿ ತುರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಸ್ಥಳೀಯರ ವಿರೋದವಿದೆ ಎಂದು ರುದ್ರಭೂಮಿ ಪರಿಸರದ ಹೋರಾಟ ಸಮಿತಿಯ ಮುಂಖಡ ಸಂತೋಷ್ ಕುಮಾರ್ ತಿಳಿಸಿದು. ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕನ ನೆಲೆಯಲ್ಲಿ ಯು.ಟಿ. ಖಾದರ್ ಅವರು ಜಿಲ್ಲಾಡಳಿತ ನೆರವಿನೊಂದಿಗೆ ಉತ್ತಮ ಯೋಜನೆಯನ್ನು ತಂದಿದ್ದಾರೆ ಆದರೆ ಯೋಜನೆ ರೂಪಿಸುವ ಮೊದಲೇ ವಿದ್ಯುತ್ ಚಿತಾಗಾರಕ್ಕೆ ರುದ್ರಭೂಮಿಗೆ ಸೇರಿದ ಖಾಲಿ ಜಾಗವನ್ನು ಬಳಸಿಕೊಳ್ಳಲು ನಿರ್ಣಯ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾಸಕರು ಸ್ಥಳೀಯ ಅಭಿಪ್ರಾಯ ಸಂಗ್ರಹಿಸಿ ಯೋಜನೆ ರೂಪಿಸುವ ಭರವಸೆ ನೀಡಿದ್ದರು.…

Read More

ಉಳ್ಳಾಲ: ಇಲ್ಲಿನ ಕೋಟೆಪುರ ಸಮುದ್ರ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ನಾಲ್ಕು ಲಾರಿ ಸಹಿತ ಮರಳು, ನಾಲ್ಕು ಎಸ್ಕಾರ್ಟ್ ದ್ವಿಚಕ್ರ ವಾಹನಗಳು ಸೇರಿದಂತೆ ಓರ್ವನ ಬಂಧನ ಹಾಗೂ 15 ಮಂದಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕೋಟೆಪುರ ನಿವಾಸಿ ಶಾರುಖ್ ಬಂಧಿತ. ಆರೋಪಿಗಳು ಕೋಟೆಪುರ ಸಮುದ್ರ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ, ಕೇರಳ ಕಡೆಗೆ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಸಿಕ್ಕ ಎರಡು ಲೋಡ್ ಮರಳು ಇದ್ದ ಲಾರಿಗಳು ಹಾಗೂ ಕೇರಳ ಸಾಗಿಸುವವರೆಗೆ ಇವರಿಗೆ ಪೊಲೀಸರಿರುವ ಕುರಿತು ಮಾಹಿತಿ ನೀಡಲು ಎಸ್ಕಾರ್ಟ್ ಇರುವ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More

ಉಳ್ಳಾಲ: ಎರಡು ಮನೆಗಳಿಗೆ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿಗೈದು ಒಂದು ಮನೆಯಿಂದ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಮೂಕಾಂಬಿಕಾ ದೇವಸ್ಥಾನ ಬಳಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ.ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ ವಾಪಸ್ಸಾಗಿದ್ದಾರೆ. ಇವರ ನೆರೆಮನೆಯ ರಾಜೇಶ್ ಎಂಬವರ ಮನೆಯೊಳಕ್ಕೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಪಾಟನ್ನು ಜಾಲಾಡಿ ಮೂರು ವಾಚ್ ಗಳನ್ನು ಕಳವು ನಡೆಸಿದ್ದು, ಈ ವೇಳೆ ಕೋಣೆಯೊಳಗೆ ಮಲಗಿದ್ದ ರಾಜೇಶ್ ಅವರು ಎಚ್ಚೆತ್ತುಕೊಂಡು ಬೊಬ್ಬಿಡಲು ಆರಂಭಿಸಿದ್ದಾರೆ. ಬೊಬ್ಬೆ ಕೇಳಿ ಮೇಲಿನ ಬಾಡಿಗೆ ಮನೆಯಲ್ಲಿರುವ ಮಂದಿ ಕೆಳಗೆ ಓಡಿ ಬರುವಷ್ಟರಲ್ಲಿ ಕಳ್ಳರ ತಂಡ ಪರಾರಿಯಾಗಿದೆ.ಆರು ವರ್ಷಗಳ ಹಿಂದೆ 45 ಪವನ್ಚಿನ್ನಾಭರಣ ದೋಚಿದ್ದ ಮನೆಯಿಂದಲೇ ಕಳವಿಗೆ ಯತ್ನ!2015 ರಲ್ಲಿ ರಾಜೇಶ್ ಅವರ ಮನೆಗೆ ನುಗ್ಗಿದ್ದ ಕಳ್ಳರು…

Read More

ಉಳ್ಳಾಲ: ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್‍ಫೋಸಿಸ್ ಪೌಂಡೇಷನ್‍ನಿಂದ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಗೆ ಸ್ಥಳೀಯರಿಂದ ಯಾವುದೇ ವಿರೋಧ ಇಲ್ಲ ಆದರೆ ಈ ಯೋಜನೆಯನ್ನು ಈ ಹಿಂದೆ ನಿಗದಿ ಪಡಿಸಿದ ರುದ್ರಭೂಮಿಗೆ ಸೇರಿದ ಖಾಲಿ ಜಾಗದಲ್ಲಿ ನಿರ್ಮಿಸಬೇಕು ಮತ್ತು ಆ ಜಾಗದ ಆರ್ಟಿಸಿ ರುದ್ರಭೂಮಿಯ ಹೆಸರಿಗೆ ಆಗಬೇಕು. ಸ್ಥಳೀಯರಿಗೆ ಯಾವುದೇ ಮಾಹಿತಿ ಪಡೆದುಕೊಳ್ಳದೆ ಇಕ್ಕಟ್ಟಾಗಿರುವ ಈಗಿರುವ ರುದ್ರಭೂಮಿಯಲ್ಲಿ ತುರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಸ್ಥಳೀಯರ ವಿರೋಧವಿದೆ ಎಂದು ರುದ್ರಭೂಮಿ ಪರಿಸರದ ಹೋರಾಟ ಸಮಿತಿಯ ಮುಖಂಡ ಸಂತೋಷ್ ಕುಮಾರ್ ತಿಳಿಸಿದರು.ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕನ ನೆಲೆಯಲ್ಲಿ ಯು.ಟಿ. ಖಾದರ್ ಅವರು ಜಿಲ್ಲಾಡಳಿತ ನೆರವಿನೊಂದಿಗೆ ಉತ್ತಮ ಯೋಜನೆಯನ್ನು ತಂದಿದ್ದಾರೆ. ಆದರೆ ಯೋಜನೆ ರೂಪಿಸುವ ಮೊದಲೇ ವಿದ್ಯುತ್ ಚಿತಾಗಾರಕ್ಕೆ ರುದ್ರಭೂಮಿಗೆ ಸೇರಿದ ಖಾಲಿ ಜಾಗವನ್ನು ಬಳಸಿಕೊಳ್ಳಲು ನಿರ್ಣಯ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾಸಕರು ಸ್ಥಳೀಯ ಅಭಿಪ್ರಾಯ ಸಂಗ್ರಹಿಸಿ ಯೋಜನೆ ರೂಪಿಸುವ ಭರವಸೆ ನೀಡಿದ್ದರು.…

Read More