Author: UllalaVani

Kannada News From Coastal Karnataka

ಪಾವೂರು: ಎಸ್‍ಡಿಪಿಐ ಪಾವೂರು ಗ್ರಾಮ ಸಮಿತಿಯಿಂದ ಪಾವೂರು ಪಂಚಾಯತ್ ಬಳಿ ಆರಂಭಿಸಲಾದ ಮಾಹಿತಿ ಮತ್ತು ಸೇವಾ ಕೇಂದ್ರವನ್ನು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಉದ್ಘಾಟಿಸಿದರು.ಎಸ್‍ಡಿಪಿಐ ಪಾವೂರು ಗ್ರಾಮಾಧ್ಯಕ್ಷ ಎಂ. ಕೆ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಇಕ್ಬಾಲ್, ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಎಸ್‍ಡಿಟಿಯು ಕ್ಷೇತ್ರಾಧ್ಯಕ್ಷ ಇರ್ಷಾದ್ ಅಬೂಬಕ್ಕರ್, ಪಾವೂರು ಗ್ರಾಮ ಪಂಚಾಯತ್‍ಅಧ್ಯಕ್ಷೆ ಖಮರುನ್ನಿಸಾ, ಉಪಾಧ್ಯಕ್ಷ ಮುಹಮ್ಮದ್ ಅನ್ಸಾ ರ್, ಸದಸ್ಯರಾದ ಇಕ್ಬಾಲ್ ಇನೋಳಿ, ರಿಝ್ವಾನ್ ಮಲಾರ್, ವಲೇರಿಯನ್ ಡಿಸೋಜ, ಖತೀಜಾ ಲತೀಫ್, ಮಾಜಿ ಸದಸ್ಯರಾದ ನಾಸೀರ್ ಮಲಾರ್, ಮಹಮ್ಮದ್ ಬದ್ರಿಯಾ ನಗರ, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಶರೀಫ್, ಮೆಹರುನ್ನಿಸಾ ಬಶೀರ್, ಅಕ್ರಂ ಹಸನ್, ಸಿರಾಜುದ್ದೀನ್ ಅರ್ಖಾನ, ಹೈದರ್ ಅಡ್ಕರೆಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಸಮೀರ್ ಟಿಪ್ಪುನಗರ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ: ಕರ್ನಾಟಕದಲ್ಲಿ ಜು. 19ಮತ್ತು 22ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದ್ದು, ಕೇರಳ ರಾಜ್ಯದಿಂದ ದ.ಕ.ಜಿಲ್ಲೆಗೆ 441 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು ಮಂಗಳೂರು ತಾಲೂಕು ವ್ಯಾಪ್ತಿಗೆ ತಲಪಾಡಿ ಗಡಿಭಾಗದಿಂದ 22 ಪರೀಕ್ಷಾ ಕೇಂದ್ರಗಳಿಗೆ ಸುಮಾರು 125 ವಿದ್ಯಾರ್ಥಿಗಳು ಹಾಜರಾಗಲಿದ್ದು, ಗಡಿ ಚೆಕ್‍ಪೆÇೀಸ್ಟ್‍ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶಪತ್ರ ತೋರಿಸಿ ಗಡಿ ಪ್ರವೇಶ್ಕಕೆ ಅನುಮತಿ ನೀಡಿದ್ದು, ತಲಪಾಡಿಯಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ„ಕಾರಿ ಪ್ರಶಾಂತ್ ಕುಮಾರ್ ಕೆ.ಎಸ್. ತಿಳಿಸಿದರು.ಅವರು ಶನಿವಾರ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ದೈಹಿಕ ಶಿಕ್ಷಣ ಅ„ಕಾರಿ ರಘುನಾಥ್ ಅವರೊಂದಿಗೆ ತಲಪಾಡಿ ಗಡಿಭಾಗದಲ್ಲಿ ಅಗತ್ಯ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.ಈಗಾಗಲೇ ಪರೀಕ್ಷೆಗೆ ಆಗಮಿಸುವ ಗಡಿಭಾಗದ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೇ. 40 ವಿದ್ಯಾರ್ಥಿಗಳು ಹೆತ್ತವರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಸೂಚನೆ ನೀಡಿದ್ದು ಅವರಲ್ಲಿ ಹೆತ್ತವರಿಗೆ ಗಡ ಪ್ರವೇಶಕ್ಕೆ ಆರ್‍ಟಿಪಿಸಿಆರ್ ಕಡ್ಡಾಯ ಮಾಡಲಾಗಿದೆ. ಮಂಗಳೂರು…

Read More

ಉಳ್ಳಾಲ: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಬೀದಿ ಬದಿ ವ್ಯಾಪಾರ ಮಾಡುತ್ತಾ ಬಂದಿದ್ದು ಇವರಿಗೆ ನಮ್ಮ ನಗರ ಸಭೆಯ ಆಡಳಿತ ಉತ್ತಮ ಸಹಕಾರ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿಯೂ ವ್ಯಾಪಾರಿಗಳು ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಾರ್ಯವನ್ನು ಮುಂದುವರೆಸಿಕೊಂಡು ನಗರಸಭೆಯ ಅ„ಕಾರಿಗಳೊಂದಿಗೆ ಅನ್ಯೋನ್ಯತೆಯನ್ನು ಉಳಿಸಿಕೊಂಡು ಹೋಗಬೇಕು ಎಂದು ಉಳ್ಳಾಲ ನಗರಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಅಭಿಪ್ರಾಯಪಟ್ಟರು.ಕೇಂದ್ರ ವಸತಿ ಮತ್ತು ವ್ಯವಹಾರ ಮಂತ್ರಾಲಯ, ಭಾರತ ಸರಕಾರ , ನವದೆಹಲಿ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು, ದ.ಕ.ಜಿಲ್ಲಾಡಳಿತ ಮತ್ತು ಉಳ್ಳಾಲ ನಗರ ಸಭೆ ವತಿಯಿಂದ ಉಳ್ಳಾಲ ನಗರ ಸಭಾ ಸಮುದಾಯ ಭವನದಲ್ಲಿ ಶನಿವಾರ ನಡೆದ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ ನಲ್ಮ್) ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿ„ ಯೋಜನೆಯಡಿ “ಸಂಕಲ್ಪದಿಂದ ಸಿದ್ಧಿ” ನಾನೂ ಕೂಡ ಡಿಜಿಟಲ್ 2.0 ಮತ್ತು ಸ್ವ-ನಿ„ಯಿಂದ ಸಮೃದ್ಧಿ ವಿಶೇಷ…

Read More

ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಸರಕಾರದ ಆದೇಶದಂತೆ 2020-21 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ಸಮೀಕ್ಷೆ ಕಾರ್ಯ ಶೇ100 ಪೂರ್ಣಗೊಂಡಿದ್ದು, ವಾರ್ಡ್‍ವಾರು ಸರ್ವೆ ಕಾರ್ಯ ಮಾಡಿದ ಮಾಹಿತಿಯನ್ನು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ಸರ್ವೆ ಕಾರ್ಯಕ್ಕೆ ಸಂಬಂಧಪಟ್ಟಂತೆ ಆಕ್ಷೇಪಣೆಗಳು ಇದ್ದಲ್ಲಿ ಜು.22ರೊಳಗೆ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೋಮೇಶ್ವರ ಪುರಸಭಾ ಆಡಳಿತಾ„ಕಾರಿ ಮದನ್‍ಮೋಹನ್ ಮತ್ತು ಮುಖ್ಯಾ„ಕಾರಿ ವಾಣಿ.ವಿ.ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೊಣಾಜೆ: ಯಕ್ಷಗಾನ ಕಲಾವಿದ ಪುರುಷೋತ್ತಮ ಪೂಂಜರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಹಿಮ್ಮೇಳ, ಮುಮ್ಮೇಳ ಹಾಗೂ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯೊಂದಿಗೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಇಂತಹ ಮಹಾನ್ ಕಲಾವಿದರ ಸೇವೆ ಇನ್ನಷ್ಟು ಅಗತ್ಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರು ಗುಣಮುಖರಾಗಿ ಯಕ್ಷಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ 25 ಸಾವಿರ ರೂ ಚೆಕ್‍ನ್ನು ವಿತರಿಸಿ ಮಾತನಾಡಿದರು.ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪುರುಷೋತ್ತಮ ಪೂಂಜ ಅವರ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಮಂಗಳ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದು ಯಕ್ಷಗಾನ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ…

Read More

ಉಳ್ಳಾಲ: ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುವ ಸಂದರ್ಭದಲ್ಲೇ ವಿದ್ಯುತ್ ಬಿಲ್ ಅನ್ನೂ ಏರಿಕೆ ಮಾಡಲಾಗಿದೆ. ಕೋವಿಡ್ ಸಂಧಿಗ್ಧ ಸ್ಥಿತಿಯಲ್ಲೂ ಜನಸಾಮಾನ್ಯನ ಪರವಾಗಿ ನಿಲ್ಲದ ಸರಕಾರಗಳು ಜನವಿರೋಧಿಯಾಗಿದೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.ಅವರು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಸಿಪಿಐಎಂ ಉಳ್ಳಾಲ ವಲಯ ಸಮಿತಿ ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ವಿದ್ಯುತ್ ದರ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಪೆಟ್ರೋಲ್, ಡಿಸೀಲ್, ಗ್ಯಾಸ್, ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಕೈಗಾರಿಕೆಗಳು ಬಂದ್ ಆಗಿವೆ, ಉದ್ಯೋಗವಿಲ್ಲದೆ ನಿರುದ್ಯೋಗದ ಸ್ಥಿತಿಯಲ್ಲಿದ್ದಾರೆ. ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದಾರೆ. ಆದರೂ ಸರಕಾರ ವಿದ್ಯುತ್ ಬಿಲ್ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಕಳೆದ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಘೋಷಿಸಿದ ಸಹಾಯಧನ ಈವರೆಗೆ ತಲುಪಿಲ್ಲ. ಶೀಘ್ರವೇ ಸರಕಾರ ಜನರ ಬಗ್ಗೆ ಕಾಳಜಿ ವಹಿಸಿ ವಿದ್ಯುತ್ ಬಿಲ್‍ನಲ್ಲಿ ಕಡಿತಗೊಳಿಸಿ…

Read More

ಉಳ್ಳಾಲ: ಫ್ಲ್ಯಾಟ್ ಒಳಗಡೆ ನುಗ್ಗಿದ ಆರೋಪಿಯೋರ್ವ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಮನೆಯೊಳಗಿದ್ದ ಸಿಸಿಟಿವಿಯನ್ನು ಕಳವು ನಡೆಸಿದ್ದು, ಅಲ್ಲದೆ ಆರೋಪಿ ಸಹಿತ ಆತನ ಸಹೋದರ ಈ ಹಿಂದೆಯೂ 160 ಗ್ರಾಂ ಚಿನ್ನ ಇದೇ ಮನೆಯಿಂದ ಕಳವುಗೈದಿರುವ ಕುರಿತು ಮಹಿಳೆಯೋರ್ವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕುತ್ತಾರು ಜಂಕ್ಷನ್ ನಲ್ಲಿರುವ ಸಿಲಿಕಾನಿಯಾ ಅಪಾರ್ಟ್‍ಮೆಂಟ್ ನ ಡೋರ್ ನಂ. 1207 ನಲ್ಲಿರುವ ಖತೀಜಾ ಮೆಹಸರ್ ಎಂಬವರ ಫ್ಲ್ಯಾಟ್‍ನಲ್ಲಿ ಕಳವು ನಡೆದಿದೆ.ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ ಮತ್ತು ಆತನ ಸಹೋದರ ಮೊಹಮ್ಮದ್ ಸಿರಾಜ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆದೀ ಪೈಕಿ ಅಬ್ದುಲ್ ಮುನೀರ್ ನನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜು.2 ರಂದು ಅಬ್ದುಲ್ ಮುನೀರ್ ಫ್ಲ್ಯಾಟ್ ನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯೊಳಗೆ ನುಗ್ಗಿ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಸಿಸಿಟಿವಿ ಕಳವು ನಡೆಸಿದ್ದಾನೆ. ಈತ ಫ್ಲ್ಯಾಟ್ ಒಳಗೆ ಹೋಗಿರುವ ಕುರಿತು ಫ್ಲ್ಯಾಟ್ ಹೊರಗಡೆ ಇರುವ ಸಿಸಿಟಿವಿಯಲ್ಲಿ…

Read More

ಉಳ್ಳಾಲ: ಉಳ್ಳಾಲದಾದ್ಯಂತ ಮಳೆ ಮುಂದುವರೆದಿದ್ದು, ಗಾಳಿ ಮಳೆಯಿಂದ ಉಳ್ಳಾಲ ಉಳಿಯ ಮತ್ತು ಹೊೈಗೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು , ಸೋಮೇಶ್ವರ ಮತ್ತು ಉಳ್ಳಾಲದಲ್ಲಿ ಸಮುದ್ರದ ಅಬ್ಬರ ಮುಂದುವರೆದಿದ್ದು ಯಾವುದೇ ಹಾನಿ ವರದಿಯಾಗಿಲ್ಲ.ಉಳಿಯದ ಶೈನಿ ಡಿ.ಸೋಜಾ ವರ ಮನೆಯ ಛಾವಣಿ ಕುಸಿದು ಬಿದ್ದು ಹಾನಿಯಾದರೆ, ಹೊೈಗೆಯ ಫೆಲಿಕ್ಸ್ ಡಿ.ಸೋಜಾ ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಉಳಿದಂತೆ ಉಳ್ಳಾಲದಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶುಕ್ರವಾರ ಯಾವುದೇ ಹಾನಿ ಸಂಭವಿಸಿಲ್ಲ. ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಸಂಪೂಣರ ಬಂದ್ ಆಗಿದ್ದು ಸ್ಥ;ಳೀಯ ನಿವಾಸಿಗಳು ಖಾಸಗಿ ಜಾಗದಲ್ಲಿ ನಡೆದುಕೊಂಡು ಮನೆ ಸೇರುತ್ತಿದ್ದಾರೆ.

Read More

ಸೋಮೇಶ್ವರ,: ಪ್ರಧಾನ ಮಂತ್ರಿ ಸ್ವ-ನಿ„ ಯೋಜನೆಯಲ್ಲಿ ದ.ಕ ಜಿಲ್ಲೆಯ ಹೆಚ್ಚಿನ ಬ್ಯಾಂಕುಗಳು ಸಾಲ ಮಂಜೂರು ಮಾಡಿದ್ದರಿಂದ ಈ ಯೋಜನೆಯ ಪ್ರಗತಿಯಲ್ಲಿ ಕರ್ನಾಟಕದಲ್ಲೇ ದ.ಕ. ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ, ಇದಕ್ಕೆ ಸಾಲಾ ನೀಡುರಯವ ಬ್ಯಾಂಕುಗಳ ಪಾತ್ರವೂ ಮಹತ್ವದ್ದಾಗಿದ್ದು, ವ್ಯಾಪಾರಸ್ಥರು ಪಡೆದ ಸಾಲವನ್ನು ಸದುಪಯೋಗಡಿಸುವುದರೊಂದಿಗೆ ಕೊರೋನಾ ಮಾರ್ಗಸೂಚಿ ಪಾಲಿಸಿ, ಕೊರೋನಾ ಲಸಿಕೆ ಖಡ್ಡಾಯವಾಗಿ ಹಾಕಿಸಿ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರನಡೆಸಬೇಕು ಎಂದು ್ನ ಸೋಮೇಶ್ವರ ಪುರಸಭಾ ಮುಖ್ಯಾ„ಕಾರಿ ವಾಣಿ.ವಿ.ಆಳ್ವ ಅಭಿಪ್ರಾಯಪಟ್ಟರು.ಕೇಂದ್ರ ವಸತಿ ಮತ್ತು ವ್ಯವಹಾರ ಮಂತ್ರಾಲಯ, ಭಾರತ ಸರಕಾರ, ನವದೆಹಲಿ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು, ದ.ಕ.ಜಿಲ್ಲಾಡಳಿತ ಮತ್ತು ಸೋಮೇಶ್ವರ ಪುರಸಭೆ ವತಿಯಿಂದ ಸೋಮೇಶ್ವರ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ ನಲ್ಮ್) ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಃ ಯೋಜನೆಯಡಿ “ಸಂಕಲ್ಪದಿಂದ ಸಿದ್ಧಿ” ನಾನೂ ಕೂಡ ಡಿಜಿಟಲ್ 2.0 ಮತ್ತು ಸ್ವ-ನಿಃಯಿಂದ ಸಮೃದ್ಧಿ ವಿಶೇಷ ಮೇಳಕ್ಕೆ ಚಾಲನೆ ನೀಡಿ…

Read More

ಉಳ್ಳಾಲ: ಲಾಕ್ಡೌನ್ ತೆರವು ಬಳಿಕ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 35 ಮಂದಿ ಕಳವು ಆರೋಪಿಗಳ ಪೆರೇಡ್ ನಡೆಯಿತು.ಉಳ್ಳಾಲ ಠಾಣಾ ವ್ಯಾಪ್ತಿಯ ಜಾನುವಾರು ಕಳವು ಮತ್ತು ಮನೆ ಕಳವು ಪ್ರಕರಣಗಳು ಇರುವಂತಹ ಆರೋಪಿಗಳನ್ನು ಠಾಣೆಗೆ ಕರೆಯಿಸಿ ಠಾಣಾಧಿಕಾರಿ ಪೆರೇಡ್ ನಡೆಸಿದರು. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 60 ಮಂದಿ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಿದ್ದಾರೆ. ಅವರೆಲ್ಲರಿಗೂ ಠಾಣಾಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆಯಲ್ಲಿ 35 ಮಂದಿ ಠಾಣೆಗೆ ಹಾಜರಾಗಿದ್ದಾರೆ. ಉಳಿದ 25 ಮಂದಿ ಹಾಜರಾಗಲಿಲ್ಲ. . ಎಲ್ಲರನ್ನು ಉಳ್ಳಾಲ ಠಾಣೆಯ ಕಚೇರಿ ಎದುರುಗಡೆ ವಿಚಾರಣೆ ನಡೆಸಿದ ಠಾಣಾಧಿಕಾರಿಗಳು ಎಲ್ಲರಿಗೂ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 107, 110 ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಿಡಲಾಗಿದೆ.ಈ ಸಂದರ್ಭ ಠಾಣಾಧಿಕಾರಿ ಸಂದೀಪ್, ಉಪ ನಿರೀಕ್ಷಕರಾದ ಪ್ರದೀಪ್, ರೇವಣ್ಣ ಸಿದ್ಧಯ್ಯ, ಶಿವು ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Read More