ಉಳ್ಳಾಲ: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಬಂಟ್ವಾಳ ನಂದಾವರ ನಿವಾಸಿ ಬದ್ರುದ್ದೀನ್ (27) ಬಂಧಿತ. ಮಾ. 19 ರಂದು ತೊಕ್ಕೊಟ್ಟು ಒಳಪೇಟೆಯ ಜಯರಾಜ್ ಎಂಬವರ ಮನೆ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳ 120 ಗ್ರಾಂ ತೂಕದ ಚಿನ್ನಾಭರಣ ಮತ್ತು 3 ಮೊಬೈಲುಗಳನ್ನು ಕಳವು ನಡೆಸಿದ್ದನು.. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಪೊಲೀಸರು ಆತನ ಬಳಿಯಿದ್ದ 95 ಗ್ರಾಂ ಚಿನ್ನ, ಎರಡು ಮೊಬೈಲ್ , ಒಂದು ಬೈಕ್ ಮತ್ತು ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.ರಿಕ್ಷಾ ಚಾಲಕನಾಗಿರುವ ಕುಡಿತದ ದಾಸನಾಗಿದ್ದನು. ಕಳವು ನಡೆಸಿರುವ ಮೂರು ಮೊಬೈಲ್‍ಗಳ ಪೈಕಿ ಒಂದು ಮೊಬೈಲನ್ನು ತನ್ನ ಭಾವ ಇಸ್ಮಾಯಿಲ್ ಎಂಬಾತನಿಗೆ ನೀಡಿದ್ದನು. ಆತ ಅದಕ್ಕೆ ಸಿಮ್ ಹಾಕಿ ಬಳಕೆ ಮಾಡುತ್ತಿದ್ದನು. ಕಳವಾಗಿರುವ ಮೊಬೈಲ್‍ನ ಐಎಂಇಐ ಸಂಖ್ಯೆ ಟ್ರೇಸಿಂಗ್ ನಲ್ಲಿದ್ದುದರಿಂದ ಆರೋಪಿ ಸುಳಿವು ಲಭ್ಯವಾಗಿದೆ.
Author: UllalaVani
ಉಳ್ಳಾಲ: ಕೋವಿಡ್ ಕಾರಣದಿಂದಾಗಿ ಮೃತಪಟ್ಟ 12 ಮಂದಿಗೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಸಂಪ್ರದಾಯದಂತೆ ಸೋಮನಾಥನ ಸನ್ನಿಧಿಯಲ್ಲಿ ಅವರ ಚಿತಾಭಸ್ಮವನ್ನು ಸಮುದ್ರಕ್ಕೆ ಬಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಕೊರೊನಾ ಸೋಂಕಿಗೆ ಬಲಿಯಾದ 12 ಮಂದಿ ನಿರ್ಗತಿಕರಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಮುದ್ರ ತೀರದಲ್ಲಿ ನಡೆಸಿದ ತಿಲಹೋಮ ಮತ್ತು ಚಿತಾಭಸ್ಮವನ್ನು ಸಮುದ್ರಕ್ಕೆ ಬಿಟ್ಟು ಬಳಿಕ ಮಾತನಾಡಿದರು.ರಾಜ್ಯದ ಕಂದಾಯ ಸಚಿವರಾದ ಆರ್.ಅಶೋಕ್ ನೇತೃತ್ವದಲ್ಲಿ ಮೃತ ನಿರ್ಗತಿಕರ ಅಂತರಾತ್ಮಗಳಿಗೆ ಮೋಕ್ಷಪ್ರದ ಆಗಬೇಕು. ನಿರ್ಗತಿಕರು ಮಾತ್ರವಲ್ಲದೆ ಕುಟುಂಬಸ್ಥರು ಬಾರದ ಮಂದಿಯ ಆತ್ಮಕ್ಕೆ ಸದ್ಗತಿ ಸಿಗುವ ಉದ್ದೇಶದಿಂದ ಕಾರ್ಯವನ್ನು ನಡೆಸಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 12 ಮಂದಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಎಲ್ಲರ ಚಿತಾಭಸ್ಮವನ್ನು ಸೋಮೇಶ್ವರದ ಸಮುದ್ರಕ್ಕೆ ಸಮರ್ಪಣೆ ಮಾಡಲಾಗಿದೆ ಎಂದರು.ತಾ.ಪಂ ಸದಸ್ಯ ರವಿಶಂಕರ್ ಸೋಮೇಶ್ವರ ತಿಲ ಹೋಮದಲ್ಲಿ ಕುಳಿತರು.ಈ ಸಂದರ್ಭ ದಿ. ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ,…
ಉಳ್ಳಾಲ: ಮುಂದಿನ ವಿಧಾನಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಎಸ್ ಡಿಪಿಐ ಪಕ್ಷದ ಪ್ರಥಮ ಶಾಸಕರನ್ನು ಕಳುಹಿಸುವ ಎಲ್ಲಾ ಸಂದೇಶಗಳು ಸ್ಪಷ್ಟವಾಗಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಹೇಳಿದರು.ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಹಮ್ಮಿಕೊಂಡಿರುವ 12 ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಎಸ್‍ಡಿಪಿಐ ಪಕ್ಷ ದೇಶದಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಸಿದ್ಧಾಂತವನ್ನು ದೇಶದ ಕೆಲವೊಂದು ಬಕೆಟ್ ಮಾಧ್ಯಮಗಳು ಚಿತ್ರೀಕರಿಸುವ ಯೋಚನೆಗಳಲ್ಲ ಪಕ್ಷದ್ದು. ಹಕ್ಕು ವಂಚಿತ , ಶೋಷಿತ ಸಮುದಾಂiÀiದ ಧ್ವನಿಯಾಗಿ ಜನಸಾಮಾನ್ಯರು ದೇಶದ ಮತ್ತು ರಾಜ್ಯದ ಗದ್ದುಗೆಯಲ್ಲಿ ಧ್ವನಿಯನ್ನು ಮೊಳಗಿಸುವ ಉದ್ದೇಶದಿಂದ ಹುಟ್ಟಿಕೊಂಡಂತಹ ಪಕ್ಷ. ಜಿಲ್ಲೆಯ ಜನ ಪಕ್ಷವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಖುದ್ದಾಗಿ ಜನರೇ ಪಕ್ಷದ ಸದಸ್ಯತ್ವವನ್ನು ಪಡೆಯಲು ಕೇಳಿಕೊಂಡು ಬರುತ್ತಿದ್ದಾರೆ. ಇದನ್ನು ಗಮನಿಸುವಾಗ ರಾಜ್ಯದ ವಿಧಾನಸಭೆಯ ಒಳಗಡೆ ಪ್ರಥಮ ಶಾಸಕರನ್ನು ಎಸ್ ಡಿಪಿಐ ಪಕ್ಷ ದ.ಕ ಜಿಲ್ಲೆಯಿಂದಲೇ ನೀಡಲಿದೆ ಅನ್ನುವ ಸ್ಪಷ್ಟ…
ಮುಡಿಪು: ಸತ್ತುಬಿದ್ದ ಸ್ಥಿತಿಯಲ್ಲಿ ಸುಮಾರು 15 ವರ್ಷದ ಕಾಡೆಮ್ಮೆ (ಬಾಸ್ ಗೌರಸ್ ) ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಕಲ್ಲಮಂಚ ಎಂಬಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಸತ್ತಿರುವುದಾಗಿ ತಿಳಿಸಿದ್ದು ಮರಣೋತ್ತರ ವರದಿ ಬಂದ ಬಳಿಕವಷ್ಟೇ ಮರಣದ ನಿಖರ ಕಾರಣ ತಿಳಿಸಲಾಗುವುದು ಎಂದು ಮಂಗಳೂರು ವಲಯದ ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ತಿಳಿಸಿದ್ದಾರೆ.ಖಾಸಗಿ ತೋಟವೊಂದರಲ್ಲಿ ಕಾಡೆಮ್ಮೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸರಕಾರಿ ಪಶು ವೈದ್ಯಾಧಿಕಾರಿ ಅಶೋಕ್ ಅವರು ಕಾಡೆಮ್ಮೆ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಇಲಾಖಾ ಕಾನೂನಿನಂತೆ ಶವವನ್ನು ವಿಲೇವಾರಿ ನಡೆಸಿದ್ದಾರೆ.ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಲನ್ ಮಾರ್ಗದರ್ಶನದಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಉಳ್ಳಾಲ: ರಾಜ್ಯ ಸರ್ಕಾರ ಕಾರ್ಮಿಕ ವರ್ಗಕ್ಕೆ ಇನ್ನೂ ಸರಿಯಾದ ಪರಿಹಾರ ಘೋಷಿಸದೇ, ಮೆಸ್ಕಾಂ ಬಿಲ್ ಏರಿಕೆ ಮಾಡಿ ಸುಮ್ಮನಿದ್ದು ಕಾಪೆರ್Çರೇಟ್ ಕಂಪೆನಿಗಳ ಪರ ಇರುವುದನ್ನು ಡಿವೈಎಫ್ ಐ ಖಂಡಿಸುತ್ತದೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿ ಆಗ್ರಹಿಸಿ ಚೆಂಬುಗುಡ್ಡೆ ಮೆಸ್ಕಾಂ ಕಚೇರಿ ಎದುರು ಡಿವೈ ಎಫ್ ಐ ಉಳ್ಳಾಲ ವಲಯ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ದೇಶದ್ಯಂತ ತೈಲ ಬೆಲೆ ಏರಿಕೆಯ ಜೊತೆಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಚರಿತ್ರೆಯಲ್ಲಿ ಪ್ರಥಮ. ಕಾರ್ಮಿಕ ವರ್ಗ ದುಡಿಮೆಯೇ ಇಲ್ಲದ ಸ್ಥಿತಿಯಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸಲು ಅಸಾಧ್ಯವಾಗಿದೆ. ಇದರ ನಡುವೆ ಮೆಸ್ಕಾಂ ಇಲಾಖೆ ಮೂಲಕ ವಿದ್ಯುತ್ ಬಿಲ್ ಅನ್ನು ಏರಿಕೆ ಮಾಡಿರುವುದು ಜನರ ಬದುಕುವ ಹಕ್ಕನ್ನು ಕಸಿದಂತಿದೆ . ವಿದ್ಯುತ್ ಬಿಲ್ ಏರಿಕೆಯನ್ನು ಹಿಂಪಡೆದು ಲಾಕ್ ಡೌನ್ ಅವಧಿಯ ಬಿಲ್ ಅನ್ನು ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.ಡಿವೈ ಎಫ್ ಐ…
ಉಳ್ಳಾಲ: ವೈಯಕ್ತಿಕ ಸುಖ ದು:ಖಗಳನ್ನು ಬದಿಗೊತ್ತಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಜೊತೆ ಗೃಹರಕ್ಷಕರು ನಿರಂತರ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತ್ಯಾಗದ ಸೇವೆಯನ್ನು ಗುರುತಿಸಿ ರೇಷನ್ ಕಿಟ್ ನೀಡಿದ ಕಾರಣದಿಂದ ಗೃಹರಕ್ಷಕರು ಮತ್ತಷ್ಟು ಹುರುಪಿನಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಹೇಳಿದರು.ಅವರು ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಚಾರಿಟೇಬಲ್ ಟ್ರಸ್ಟ್ ಇದರ ಸಿಎಸ್ ಆರ್ ವತಿಯಿಂದ ಕಲ್ಲಾಪು ಆಡಂಕುದ್ರು ಸಂತ ಜೋಸೆಫರ ಅನುದಾನಿತ ಶಾಲೆಯಲ್ಲಿ ಸೋಮವಾರದಂದು ನೀಡಲಾದ ಉಚಿತ ರೇಷನ್ ಕಿಟ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಇದರ ಮಂಗಳೂರು ಘಟಕದ ಮಾರುಕಟ್ಟೆ ಪ್ರಬಂಧಕ ಫರ್ತಾನ್ ಮಾತನಾಡಿ , 45 ಮಂದಿ ಗೃಹರಕ್ಷಕರಿಗೆ ಆಹಾರ ಕಿಟ್ ಅನ್ನು ವಿತರಿಸಲಾಗಿದೆ. ಬಂದ ಆದಾಯದಲ್ಲಿ ಶೇ.5 ರಷ್ಟನ್ನು ಸಮಾಜ ಸೇವೆಗೆ ಸಂಸ್ಥೆ…
ಉಳ್ಳಾಲ: ಆರ್ಥಿಕ ಸಂಕಷ್ಟದಿಂದ ನೊಂದು ಎಳೆಯ ಮಗುವಿನ ಎದುರೇ ತಾಯಿಯೋರ್ವಳು ಆತ್ಮಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮನಗರ ಎಂಬಲ್ಲಿ ಇಂದು ಮುಂಜಾನೆ ವೇಳೆ ಬೆಳಕಿಗೆ ಬಂದಿದೆ.ಧರ್ಮನಗರ ನಿವಾಸಿ ಲೋಕೇಶ್ ನಾಯ್ಕ್ ಎಂಬವರ ಪತ್ನಿ ಶುಭ (33) ಆತ್ಮಹತ್ಯೆ ನಡೆಸಿದವರು. ಗುರುವಾರ ತಡರಾತ್ರಿ ವೇಳೆ ಶುಭ ಅವರು ಕೋಣೆಯೊಂದರಲ್ಲಿ ಎರಡೂವರೆ ಹರೆಯದ ಮಗುವಿನ ಜೊತೆಗೆ ಮಲಗಿದ್ದರು. ಪತಿ ಬೇರೆ ಕೋಣೆಯಲ್ಲಿ ಮಲಗಿದ್ದು, ಇಂದು ಬೆಳಿಗ್ಗೆ ಪತಿ ಲೋಕೇಶ್ ಅವರು ಬಾಗಿಲು ತೆರೆದು ನೋಡಿದಾಗ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಹಂಪನಕಟ್ಟೆ ಬಳಿ ಫ್ಲೆಕ್ಸ್ ಅಂಗಡಿಯಲ್ಲಿ ಶುಭ ಅವರು ಕೆಲಸಕ್ಕಿದ್ದರು. ಪತಿ ಲೋಕೇಶ್ ಫ್ಯಾಬ್ರಿಕೇಷನ್ ವೃತ್ತಿಯನ್ನು ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ಬೇಸತ್ತು ಆತ್ಮಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಅತ್ತಾವರದಲ್ಲಿದ್ದ ದಂಪತಿ ವರ್ಷದ ಹಿಂದೆ ಧರ್ಮನಗರದಲ್ಲಿ ಮನೆಯನ್ನು ನಿರ್ಮಿಸಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮೇಶ್ವರ: ಸಮುದ್ರದ ಅಲೆಗಳ ರಭಸ ಕಳೆದ ಎರಡು ದಿನಗಳಿಂದ ಜೋರಾಗಿದ್ದು, ಪರಿಣಾಮ ಸೋಮೇಶ್ವರ ಉಚ್ಚಿಲ ಪ್ರದೇಶದಿಂದ ಬಟ್ಟಪ್ಪಾಡಿ ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಮತ್ತೆ ಎದುರಾಗಿದೆ.2019 ರಲ್ಲಿ ರಸ್ತೆ ಸಮುದ್ರಕ್ಕೆ ಕೊಚ್ಚಿ ಹೋಗಿ ಸ್ಥಳೀಯರು ಪರದಾಡುವಂತಾಗಿತ್ತು. ಪ್ರದೇಶದ ರಸ್ತೆ ಸಂಪರ್ಕ 5 ತಿಂಗಳ ಕಾಲ ಕಡಿದುಹೋಗಿತ್ತು. ಆನಂತರ ಮತ್ತೆ ಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಕಳೆದ ವರ್ಷವೂ ದುರಸ್ತಿಗೊಳಿಸಿದ್ದ ರಸ್ತೆ ಸಂಪೂರ್ಣ ಸಮುದ್ರಪಾಲಾಗಿ ಕಲ್ಲು ಬಂಡೆಗಳ ಮೇಲಿನಿಂದ ಸಾಗುವಂತಾಗಿತ್ತು. ಇದೀಗ ಮತ್ತೆ ಸರಿಪಡಿಸಿರುವ ರಸ್ತೆ ಮತ್ತೆ ಸಮುದ್ರಪಾಲಾಗುವ ಭೀತಿಯನ್ನು ಎದುರಿಸುತ್ತಿದೆ. ಬುಧವಾರ ಬೆಳಗ್ಗಿನಿಂದ ರಸ್ತೆಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ರಸ್ತೆ ಸಂಪೂರ್ಣ ಮತ್ತೆ ಸಮುದ್ರಪಾಲಾಗುವುದರಲ್ಲಿ ಸಂಶಯವಿಲ್ಲ.
ಉಳ್ಳಾಲ: ಸೋಮೇಶ್ವರ ಉಚ್ಚಿಲ ಭಾಗದ ಸಮುದ್ರ ಕೊರೆತದಿಂದ ಹಾನಿಗೊಳಗಾದ ಬಡ ಮೀನುಗಾರ ಕುಟುಂಬಗಳನ್ನು ಏಕಾಏಕಿ ಖಾಲಿ ಮಾಡುವಂತೆ ಆದೇಶಿಸಿರುವ ಜಿಲ್ಲಾಡಳಿತ ಕ್ರಮ ಸರಿಯಲ್ಲ. 100 ವರ್ಷಗಳಿಗಿಂತ ಹಿಂದೆ ಸ್ಥಳದಲ್ಲಿ ವಾಸಿಸುತ್ತಿರುವ ಕುರಿತು ಮಿಸ್ಪಟ್ಟಾ ಇದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜಾಗ ಖಾಲಿ ಮಾಡುವಂತೆ ಹೇಳುತ್ತಿರುವ ಸರಕಾರದ ಕ್ರಮ ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.ಅವರು ಕೊಲ್ಯ ಸಮೀಪ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಸಮುದ್ರ ಕೊರೆತಕ್ಕೆ ಕಪ್ಪು ಕಲ್ಲು ಹಾಕುವ ವ್ಯವಸ್ಥೆ ಇನ್ನೂ ಆಗಿಲ್ಲ. ಬ್ರೇಕ್ ವಾಟರ್ ಒಂದೇ ಕಡೆಯಲ್ಲಿ ಆಗಿದೆ. ತಾತ್ಕಾಲಿಕ ಕಾಮಗಾರಿ ಎರಡು ವರ್ಷಗಳಿಂದ ಕಾಣುತ್ತಿಲ್ಲ. ಮೊದಲಿನ ಹಾಗೆ ಇಟ್ಟ ಕಲ್ಲುಗಳ ಮೇಲೆ ಮತ್ತೆ ಕಲ್ಲು ಹಾಕುತ್ತಿದ್ದಲ್ಲಿ ಕಡಲ್ಕೊರೆತ ಆಗುತ್ತಿರಲಿಲ್ಲ. ಕೋಟ್ಯಂತರ ವ್ಯಯಿಸಿ ಮರಳು ದಿಬ್ಬ ರಚಿಸಿ ಪರಿಹಾರ ಕಂಡುಕೊಳ್ಳುತ್ತಿರುವುದು ಅವೈಜ್ಞಾನಿಕ. ನ್ಯೂನ್ಯತೆಗಳನ್ನು ಸರಿಪಡಿಸದೇ ಇದ್ದಲ್ಲಿ ಬಿಲ್ ಪಾವತಿಯನ್ನೂ ಮಾಡಬಾರದು. ತೌಕ್ತೇ ಚಂಡಾಮಾರುತದಿಂದಾಗಿ ಹಾನಿಗೊಳಗಾದ ಸಂದರ್ಭ ಉಸ್ತುವಾರಿ ಸಚಿವರು, ಮೀನುಗಾರಿಕಾ ಮತ್ತು…
ಉಳ್ಳಾಲ: ಉಳ್ಳಾಲದ ಕೋಟೆಪುರ ಫಿಶ್ ಮಿಲ್ ಫ್ಯಾಕ್ಟರಿಯ ಹಿಂಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಸುಮಾರು3-4 ದಿನಗಳ ಹಿಂದೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆ ಇದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರೀಸುದಾರರಿದ್ದಲ್ಲಿ ಉಳ್ಳಾಲ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

