UN networks ಉಳ್ಳಾಲ: ಇಲ್ಲಿನ ಪೆÇಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿರುವ ನಿಸರ್ಗ ಬಾರ್ ಅಂಡ್ ರೆಸ್ಟೋರೆಂಟ್ ಗೆ ದಾಳಿ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಮಂಗಳೂರು, ಉಳ್ಳಾಲ ಪೆÇಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿರುವ ನಿಸರ್ಗ ಬಾರ್ ಆಂಡ್ ರೆಸ್ಟೋರೆಂಟ್ ಗೆ ದಾಳಿ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪೆÇಲೀಸರು ದಾಳಿ ನಡೆಸಿದ್ದು 50 ಬಾಕ್ಸ್ ನಲ್ಲಿ ಅಡಗಿಸಿಟ್ಟಿದ್ದ 1.53 ಲಕ್ಷ ಮೌಲ್ಯದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ, ಬಾರ್ ನಲ್ಲಿದ್ದ ಚರಣ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿಯಂತೆ ಮದ್ಯವನ್ನು ತೊಕ್ಕೊಟ್ಟಿನ ಹೈ ಸ್ಪಿರಿಟ್ ನಿಂದ ತರಲಾಗಿತ್ತು. ಕಳೆದ ಮೂರು ತಿಂಗಳಿಂದ ಮದ್ಯವನ್ನು ಇಲ್ಲಿ ಸಂಗ್ರಹ ಮಾಡುತ್ತಿದ್ದು ಇಲ್ಲಿಂದ ಕೇರಳಕ್ಕೆ ಸಾಗಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾಗಿ ಪೆÇಲೀಸರು ತಿಳಿಸಿದ್ದಾರೆ.ನಿಸರ್ಗ ಬಾರ್ ದಿವ್ಯರಾಜ್ ಶೆಟ್ಟಿ ಹೆಸರಲ್ಲಿ ಲೈಸನ್ಸ್ ಹೊಂದಿದ್ದು…
Author: UllalaVani
UN networks ಉಳ್ಳಾಲ: ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು, ಸುಮಾರು 80 ಲಕ್ಷ ರೂ ವೆಚ್ಚದ ವಿದ್ಯುತ್ ಚಿತಾಗಾರ ಸದ್ಯದಲ್ಲೇ ನಿರ್ಮಾಣವಾಗಲಿದೆ.ಸುಮಾರು ಐವತ್ತು ವರ್ಷಕ್ಕಿಂತಲೂ ಹೆಳೆಯ ರುದ್ರಭೂಮಿ. ಸುಮಾರು ಎರಡು ಎಕರೆ ಪ್ರದೇಶದಲ್ಲಿರುವ ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಹಲವು ವರ್ಷಗಳಿಂದ ಇತ್ತು.ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೆರ್ಮನ್ನೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಚೆಂಬುಗುಡ್ಡೆ ರುದ್ರಭೂಮಿ ಶವ ಸಂಸ್ಕಾರಕ್ಕೆ ಹೆಚ್ಚು ಬಳಕೆಯಾಗುತ್ತಿರುವ ರುದ್ರಭೂಮಿ ವರ್ಷಕ್ಕೆ ಸುಮಾರು 400ಕ್ಕೂ ಹೆಚ್ಚು ಶವಸಂಸ್ಕಾರ ಈ ರುದ್ರಭೂಮಿಯಲ್ಲಿ ಆಗುತ್ತಿದೆ. ಈ ನಡುವೆ ಕಳೆದ 10 ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ರುದ್ರಭೂಮಿಯ ಸುತ್ತಮುತ್ತ ಮನೆಗಳ ಶಾಲಾ ಕಾಲೇಜುಗಳು ತಲೆ ಎತ್ತಿದ್ದು, ವಾಯುಮಾಲಿನ್ಯವೂ ಇಲ್ಲಿನ ಜನರಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಈ ರುದ್ರಭೂಮಿಯಲ್ಲಿ ಸಾವಿರಗಟ್ಟಲೆ ಕ್ವಿಂಟಾಲ್ ಲೆಕ್ಕದಲ್ಲಿ ಕಟ್ಟಿಗೆಯೂ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆಯಿಡಲಾಗಿತ್ತು. ಸ್ಮಶಾನ ನಿರ್ವಹಣಾ ಸಮಿತಿಯ…
UN networks ಉಳ್ಳಾಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ 19 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಉಗ್ಗಪ್ಪ ಟೈಲರ್ (80) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ವೃತ್ತಿಯಲ್ಲಿ ಟೈಲರ್ ಆಗಿದ್ದವರು, ಆಧ್ಯಾತ್ಮ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಮೃತರು ಅಪಾರ ಬಂಧುಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ .
UN networks ಉಳ್ಳಾಲ: ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಪರಿಸರದ ಅಶಕ್ತರು, ವಲಸೆ ಕಾರ್ಮಿಕರು ಹಾಗೂ ಭಿಕ್ಷುಕರಿಗೆ ಶ್ರೀ ಸಾಯಿ ಪರಿವಾರ್ ವತಿಯಿಂದ ಮಧ್ಯಾಹ್ನದ ಊಟ ವಿತರಿಸಲಾಯಿತು.ಶೃಂಗಾರ್ ಕ್ಯಾಟರರ್ಸ್ ಮಾಲೀಕ ಶ್ರೀನಿವಾಸ್ ಕಾಪಿಕಾಡ್ ಇವರ ಸಹಕಾರದೊಂದಿಗೆ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ ಇವರು ಭಾನುವಾರದ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿ ವಿತರಿಸಿದರು. ಈ ಸಂದರ್ಭ ಸಾಯಿ ಪರಿವಾರ್‍ನ ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ದೀಕ್ಷಿತ್ ಪೂಜಾರಿ ತೊಕ್ಕೊಟ್ಟು, ಸತೀಶ್ ಭಟ್ನಗರ, ಸೂರ್ಯ ಕುಂಪಲ, ಶವಿತ್ ಉಚ್ಚಿಲ್, ಹಿತೇಶ್ ಉಳ್ಳಾಲಬೈಲ್, ಅರುಣ್ ಪೂಜಾರಿ , ಗಣೇಶ್ ಪಂಡಿತ್ ಉಪಸ್ಥಿತರಿದ್ದರು.ಕಳೆದ ಬಾರಿಯ ಲಾಕ್ ಡೌನಿನಲ್ಲೂ ಶ್ರೀ ಸಾಯಿ ಪರಿವಾರ್ ವತಿಯಿಂದ 35 ದಿನಗಳ ಕಾಲ ಅನ್ನದಾನ ನೆರವೇರಿಸಲಾಗಿತ್ತು.
UN networks ಉಳ್ಳಾಲ: ಜನಪದ ವಿದ್ವಾಂಸ ಡಾ. ಅರುಣ್ ಉಳ್ಳಾಲ್ ಎಂಬವರ ಹುಟ್ಟು ಹಬ್ಬದ ದಿನದಂದು ತೊಕ್ಕೊಟ್ಟು ಪರಿಸರದ 150 ಅಶಕ್ತರಿಗೆ ಅನ್ನದಾನ ನೆರವೇರಿಸಿದರು. ಸಾಯಿ ಪರಿವಾರ್ ತೊಕ್ಕೊಟ್ಟು ಆಶ್ರಯದಲ್ಲಿ ಅನ್ನದಾನ ನೆರವೇರಿಸಲಾಯಿತು.ಈ ಸಂದರ್ಭ ಸಾಯಿ ಪರಿವಾರ್ ಟ್ರಸ್ಟ್ ನ ಮಾರ್ಗದರ್ಶಕ ಡಾ. ಅರುಣ್ ಉಳ್ಳಾಲ್, ಟ್ರಸ್ಟಿಗಳಾದ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ಸೂರಿ ಕುಂಪಲ, ದೀಕ್ಷಿತ್ ಪೂಜಾರಿ, ಅರುಣ್ ಪೂಜಾರಿ, ನಾಗೇಶ್, ದೀಪಕ್ ಕುಂಪಲ ಮುಂತಾದವರು ಉಪಸ್ಥಿತರಿದ್ದರು.
UN netowotks ಉಳ್ಳಾಲ: ಕೊರೊನಾ ಸೋಂಕಿನಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದು, ಆರೋಗ್ಯಪೂರ್ಣ ಸಮಾಜದ ನಿರ್ಮಾಣದ ಕಳಕಳಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುವ ಸಲುವಾಗಿ ಸಭೆಯನ್ನು ನಡೆಸಲಾಗಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.ಅವರು ಬಾಲಕೃಷ್ಣ ಮಂದಿರದ ರಜತ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಮಂದಿರದ ಸಭಾಂಗಣದಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬೃಹತ್ ರಕ್ತದಾನ ಶಿಬಿರಕ್ಕೆ ವಿವಿಧ ಸಂಸ್ಥೆಗಳ ಸಹಕಾರ ಹಾಗೆಯೇ ರಜತ ವರ್ಷದ ಬೇರೆ ಬೇರೆ ಸೇವಾ ಯೋಜನೆಗಳಿಗೆ ಇನ್ನಷ್ಟು ಮಂದಿರದ ಆತ್ಮೀಯ ಸಂಸ್ಥೆಗಳನ್ನು ಸೇರಿಸಿ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಸಲಾಗುವುದು ಎಂದರು.ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಸಭೆಯ ನೇತೃತ್ವ ವಹಿಸಿದ್ದರು.ಶ್ರೀ ಸತ್ಯನಾರಾಯಣ ಮಂದಿರ ಬಗಂಬಿಲ, ಹಿಂದೂ ಜಾಗರಣ ವೇದಿಕೆ ಓಂಕಾರ ಘಟಕ ಕುಂಪಲ, ಓಂ ಪ್ರೆಂಡ್ಸ್ ಆಶ್ರಯಕಾಲನಿ, ಛತ್ರಪತಿ ಶಿವಾಜಿ ಪ್ರೆಂಡ್ಸ್ ಲಕ್ಷ್ಮಿಗುಡ್ಡೆ, ಯುವ ಮರಾಠ ಕುಂಪಲ, ಟೀಮ್ ರ್ಯಾಪ್ಟರ್ಸ್, ಕುಂಪಲ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಇವರ ಸಹಯೋಗದಲ್ಲಿ ಸ್ವಯಂ…
UN networks ಉಳ್ಳಾಲ: ಸಾಮಾಜಿಕ ಅಂತರ ಕಾಪಾಡದೆ ಸುಮಾರು ನೂರಕ್ಕೂ ಅಧಿಕ ಜನ ಉಳ್ಳಾಲ ಸಮುದಾಯ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತಿರುವ ಬಗ್ಗೆ ವರದಿಯಾಗಿದೆ. ಆನ್ ಲೈನ್ ನಲ್ಲಿ ಫಾರಂ ಭರ್ತಿ ಮಾಡಲು ಸಾಧ್ಯವಾಗದೇ ಕೋವಿಡ್ ವ್ಯಾಕ್ಸಿನೇಷನ್ ನೋಂದಣಿಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನ ಸೇರಿದ್ದಾರೆ. ನೋಂದಣಿ ಕುರಿತು ಸಮುದಾಯ ಆಸ್ಪತ್ರೆ ಸಿಬ್ಬಂದಿಗೂ ಮಾಹಿತಿ ಇರದ ಕಾರಣಸಾರ್ವಜನಿಕರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವೈದ್ಯರಿಂದ ಮನವೊಲಿಸಲು ಯತ್ನ ನಡೆಯುತ್ತಿದೆ.
ಉಳ್ಳಾಲ : ಸ್ನೇಹಿತರ ಜೊತೆಗೆ ತಡರಾತ್ರಿ ನೇತ್ರಾವತಿ ರೈಲ್ವೇ ಸೇತುವೆಗೆ ವಿಹಾರಕ್ಕೆ ತೆರಳಿದ್ದ ಉಳ್ಳಾಲಬೈಲ್ ನಿವಾಸಿ ನಿತಿನ್ (32) ಮೃತದೇಹ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಆಡಂಕುದ್ರು ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ವೇಳೆ ಪತ್ತೆಯಾಗಿದೆ. ನಿತಿನ್ ಸೋಮವಾರ ಮಧ್ಯಾಹ್ನ ಇಬ್ಬರು ಸ್ನೇಹಿತರ ಜೊತೆಗೆ ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ್ದ ಎನ್ನಲಾಗಿದ್ದು ತದನಂತರ ಸಂಜೆ ಮೂವರು ಸೇರಿ ನೇತ್ರಾವತಿ ರೈಲ್ವೇ ಸೇತುವೆ ಬಳಿ ತೆರಳಿದ್ದರು. ಅಲ್ಲಿಂದ ನಿತಿನ್ ನಾಪತ್ತೆಯಾಗಿದ್ದಾರೆ. ಆ ಬಗ್ಗೆ ನಿತಿನ್ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು ಪೊಲೀಸರು ನಿತಿನ್ ಜೊತೆಗಿದ್ದ ಇಬ್ಬರು ಸ್ನೇಹಿತರ ವಿಚಾರಣೆ ನಡೆಸಿದ್ದರು. ಇಂದು ಸಂಜೆ ವೇಳೆ ನಿತಿನ್ ಮೃತದೇಹ ಪತ್ತೆಯಾಗಿದೆ. ಸ್ನೇಹಿತರ ಜೊತೆಗೆ ವಿಹರಿಸುತ್ತಿದ್ದ ಸಂದರ್ಭ ರೈಲು ಬಂದಿತ್ತು. ಇದರಿಂದ ಗಾಬರಿಗೊಂಡು ನಿತಿನ್ ನದಿಗೆ ಹಾರಿದ್ದನೆನ್ನಲಾಗಿದೆ.ನಿತಿನ್ ಅವಿವಾಹಿತರಾಗಿದ್ದು ಈ ಹಿಂದೆ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಕೊರೊನಾ ಲಾಕ್ ಡೌನ್ ನಂತರ ಊರಿಗೆ ಮರಳಿದ್ದು ವೆಲ್ಡರ್ ವೃತ್ತಿ ನಡೆಸುತ್ತಿದ್ದರು.
Un networks ಉಳ್ಳಾಲ: ರಾಜ್ಯ ಮುಖ್ಯ ಕಾರ್ಯದರ್ಶಿಗಳ ಕೋವಿಡ್ ಆದೇಶ ಉಲ್ಲಂಘಿಸಿ ಮತ್ತೆ ಸಾರ್ವಜನಿಕರನ್ನು ಸೇರಿಸಿ ರಥೋತ್ಸವ ನಡೆಸಿದ ಸೋಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ವಿರುದ್ಧ ಮತ್ತೊಂದು ಎಫ್ ಐಆರ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೆಕ್ಷನ್ 188, 269 ಹಾಗೂಸಾಂಕ್ರಾಮಿಕ ರೋಗ ಹರಡುವಿಕೆ ಕಾಯ್ದೆಯ ಸೆಕ್ಷನ್ 5 ರಡಿ ಸೋಮನಾಥೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.26 ರಂದು ಸೋಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಕ್ರಮಕ್ಕೆ ಆಗ್ರಹಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಸೋಮೇಶ್ವರ ಪುರಸಭೆ ಪ್ರಬಂಧಕ ಕೃಷ್ಣ ಎಂಬವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
UN networks ಉಳ್ಳಾಲ: ಪತಿ ಮೃತಪಟ್ಟ ಎರಡು ಗಂಟೆಗಳ ಅವಧಿಯಲ್ಲಿ ಪತ್ನಿಯೂ ಕೊನೆಯುಸಿರೆಳೆದ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಮೃತಪಟ್ಟ ದಂಪತಿಯಾಗಿದ್ದಾರೆ.ನ್ಯುಮೋನಿಯಾದಿಂದ ಬಳಲುತ್ತಿದ್ದ ನಝೀರ್ ಅಹ್ಮದ್ ಅವರಿಗೆ ಬುಧವಾರ ತಡರಾತ್ರಿ ತೀವ್ರ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಕಾರಣದಿಂದ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ದಾರಿಮಧ್ಯೆ 12:30ರ ಕೊನೆಯುಸಿರೆಳೆದರು. ಮೃತದೇಹವನ್ನು ಮನೆಗೆ ತರಲಾಗಿದ್ದು, ಅಂತಿಮ ದರ್ಶನ ಪಡೆದ ನಝೀರ್ ಅಹ್ಮದ್ ಅವರ ಪತ್ನಿ ಜಮೀಲಾ ಅವರು ಪತಿಯ ಅಗಲುವಿಕೆಯಿಂದ ಖಿನ್ನರಾಗಿದ್ದು ಸುಮಾರು 2:30ರ ಸುಮಾರಿಗೆ ಹೃದಯಾಘಾತದಿಂದ ಅವರೂ ಕೊನೆಯುಸಿರೆಳೆದಿದ್ದಾರೆ.ಮುಸ್ಲಿಂ ಲೀಗ್ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಝೀರ್ ಅಹ್ಮದ್ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಎರಡು ಬಾರಿ ನಗರ ಪಂಚಾಯಿತಿಗೆ ಸ್ಪರ್ಧಿಸಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿಯಾಗಿ, 15 ವರ್ಷಗಳ ಕಾಲ ಮೇಲಂಗಡಿ ಉರ್ದು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ…

