Author: UllalaVani

Kannada News From Coastal Karnataka

ತೊಕ್ಕೊಟ್ಟು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನೂತನವಾಗಿ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದ ಪಿಲಾರು ದಾರಂದಬಾಗಿಲು ನಿವಾಸಿ ಸಂತೋಷ್ (35) ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸುರಿಬೈಲು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಸಹಸವಾರ ರಂಜಿತ್ ಗಾಯಗೊಂಡಿದ್ದಾರೆ. ಕಲ್ಲಡ್ಕ ಕಡೆಯಿಂದ ಸಾಲೆತ್ತೂರು ಕಡೆಗೆ ಪಿಕಪ್ ವಾಹನವನ್ನು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಸಾಲೆತ್ತೂರು ಕಡೆಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ಸ್ಕೂಟರ್‍ಗೆ ಢಿಕ್ಕಿ ಹೊಡೆದಿದ್ದು, ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು.ಬಂಟ್ವಾಳ ಸರಕಾರಿ ಆಸ್ವತ್ರೆಗೆ ಗಾಯಾಳುಗಳನ್ನು ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ (ಎಸ್ ಕೆ ಡಿ ಆರ್ ಪಿ)ಯಲ್ಲಿ ಸಿಬ್ಬಂದಿಯಾಗಿ ಆಯ್ಕೆಗೊಂಡಿದ್ದ ಇವರು ಧಾರವಾಡದಲ್ಲಿ ತರಬೇತಿ ಮುಗಿಸಿ ಇತ್ತೀಚೆಗೆ ಆಗಮಿಸಿದ್ದರು. ಮೃತರು ತಾಯಿ, ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

Read More

ಉಳ್ಳಾಲ: ಅಪರಿಚಿತ ಕಾರು ಢಿಕ್ಕಿ ಹೊಡೆದು ರಸ್ತೆಗುರುಳಿದ ಸ್ಕೂಟರ್ ಸವಾರನ ಮೇಲೆ ಸಿಟಿ ಬಸ್ ಚಲಿಸಿದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ.66ರ ಎಕ್ಕೂರು ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.ಧೀಮಂತ್ ರಭೀಂದ್ರ ಮೃತರು. ಅತ್ತಾವರದ ಲೆನ್ಸ್ ಕಾರ್ಟ್.ಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ತೊಕ್ಕೊಟ್ಟುವಿನಲ್ಲಿ ಬಾಡಿಗೆ ಮನೆಯನ್ನು ಹೊಂದಿದ್ದರು. ಅಲ್ಲಿಂದ ಇಂದು ಬೆಳಿಗ್ಗೆ ಉದ್ಯೋಗಕ್ಕೆ ತೆರಳುವ ಸಂದರ್ಭ ಇವರಿದ್ದ ಸ್ಕೂಟರಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ರಭೀಂದ್ರ ಅವರ ಮೇಲೆ ಅದೇ ರಸ್ತೆಯಾಗಿ ಚಲಿಸುತ್ತಿದ್ದ ಸಿಟಿ ಬಸ್ ಚಲಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಸಂಚಾರಿ ಠಾಣಾ ಪೊಲೀಸರು ಆಸ್ಪತ್ರೆಗೆ ಕೊಂಡೊಯ್ದರಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ: ಕೊಲೆಯಾದ ಆಕೀಫ್ ಪ್ರಕರಣದ ಆರೋಪಿಯ ಮನೆಯನ್ನು ಗುಟ್ಟಾಗಿ ಸ್ಥಳಾಂತರಿಸಲಾಗುತಿತ್ತು, ಈ ಬಗ್ಗೆ ಪೊಲೀಸ್ ಕಮೀಷನರ್ ಗಮನ ಸೆಳೆದಾಗ ಪ್ರಕ್ರಿಯೆ ನಿಂತಿತ್ತು. ಇದು ಸಾಕ್ಷ್ಯ ನಾಶ ಮಾಡಲು ಮಾಡುತ್ತಿರುವ ತಂತ್ರವಾಗಿದೆ ಎಂದು ಜಸ್ಟಿಸ್ ಫಾರ್ ಆಕಿಫ್ ನಾಗರಿಕರ ಸಮಿತಿ ಕೆಸಿರೋಡ್ ಮುಖಂಡ ಖಲೀಲ್ ತಲಪಾಡಿ ಆರೋಪಿಸಿದ್ದಾರೆ. ಅವರು ಜಸ್ಟಿಸ್ ಫಾರ್ ಆಕಿಫ್ ನಾಗರಿಕರ ಸಮಿತಿ ಕೆಸಿರೋಡ್ ಇದರ ಆಶ್ರಯದಲ್ಲಿ ಕೆಸಿರೋಡ್ ನಲ್ಲಿ ಸೋಮವಾರ ನಡೆಸಿದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಆಕಿಫ್ ನಿಗೂಢ ಕೊಲೆ ಯ ಹಿಂದೆ ಏನಿದೆ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ. ಇದಕ್ಕೆ ಸೂಕ್ತ ಉತ್ತರ ಬೇಕಾಗಿದೆ. ಘಟನೆಯ ದಿನದಂದು ಪೆÇಲೀಸ್ ಕಮಿಷನರ್ ಶಶಿಕುಮಾರ್ ಅವರು ಮನೆ ಮಗನಂತೆ ನೋಡಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಬಾಲಾರೋಪಿಯ ವಾಸ್ತವ ಇದ್ದ ಸ್ಥಳದಿಂದ ಕೆಲವು ಸರಕುಗಳನ್ನು ಗುಟ್ಟಾಗಿ ಸಾಗಾಟ ಮಾಡುವ ಪ್ರಯತ್ನ ನಡೆದಿದೆ.ಈ ಬಗ್ಗೆ ಕಮಿಷನರ್ ಗಮನ ಸೆಳೆದಾಗ ಸಾಗಾಟ ಸ್ಥಗಿತ ಆಗಿತ್ತು. ಆಕಿಫ್ ಕೊಲೆ…

Read More

ಉಳ್ಳಾಲ: ಯುವತಿಗೆ ಗುಪ್ತಾಂಗ ತೋರಿಸಿದ ಆರೋಪಿಯನ್ನು ದೂರು ದಾಖಲಾದ ಗಂಟೆಯೊಳಗೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಮಾರ್ಗದರ್ಶನದಲ್ಲಿ ಪಿ ಎಸ್ ಐ .ಶಿವಕುಮಾರ್ ಮತ್ತು ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದೆ.ಪಿಲಾರು ನಿವಾಸಿ ಮಹಮ್ಮದ್ ಆರೀಫ್ (27) ಬಂಧಿತ. ಕುತ್ತಾರಿನ ವಿಷ್ಣುಮೂರ್ತಿ ರಸ್ತೆಯ ಮೂಲಕ ಕುತ್ತಾರು ಜಂಕ್ಷನ್ ಕಡೆಗೆ ಕೆಲಸಕ್ಕೆಂದು ತೆರಳುತ್ತಿದ್ದ  ಯುವತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಮಾಸ್ಕ್ ಮತ್ತು ಟೋಪಿ ಧರಿಸಿಕೊಂಡು ಮೊಬೈಲಲ್ಲಿ ಮಾತನಾಡುತ್ತಾ ತನ್ನ ಪ್ಯಾಂಟ್ ಜಾರಿಸಿ ಗುಪ್ತಾಂಗ ತೋರಿಸಿದ್ದಾನೆ ಎನ್ನಲಾಗಿದೆ.ಬೆದರಿದ ಯುವತಿ ಹತ್ತಿರದ ಟೈಲರ್ ಅಂಗಡಿಗೆ ನುಗ್ಗಿ ಸಹಾಯ ಯಾಚಿಸಿದ್ದಾಳೆ. ಕೂಡಲೇ ಅಲ್ಲಿ ನೆರೆದಿದ್ದ ಜನರು ಎಚ್ಚೆತ್ತಾಗ ಗುಪ್ತಾಂಗ ತೋರಿಸಿದಾತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೃತ್ಯ ಎಸಗಿದ ಆರೋಪಿಯ   ಫೋಟೊವನ್ನು  ಕಾರು ಚಾಲಕರೊಬ್ಬರು ಸೆರೆ ಹಿಡಿದಿದ್ದಾರೆ.ಆರೋಪಿ ಈ ಹಿಂದೆಯೂ  ಇದೇ ರೀತಿ ಕೃತ್ಯವನ್ನು ಮಹಿಳೆ ಮುಂದೆ  ಎಸಗಿದ್ದನೆನ್ನಲಾಗಿದೆ. ನೊಂದ ಯುವತಿಯ ತಾಯಿ ಉಳ್ಳಾಲ ಠಾಣೆಗೆ ನೀಡಿದ ದೂರಿನಂತೆ ಆರೋಪಿಯನ್ನು ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.

Read More

ಉಳ್ಳಾಲ: ಮೀನುಗಾರಿಕಾ ದೋಣಿ ಮತ್ತು ಹಡಗು ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಮೀನುಗಾರಿಕಾ ದೋಣಿಯಲ್ಲಿದ್ದ 9 ಮಂದಿ ನಾಪತ್ತೆಯಾಗಿದ್ದು, ಮೂವರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿರುವ ಘಟನೆ ಮಂಗಳೂರು ಬಂದರಿನಿಂದ 60 ನಾಟಿಕಲ್ ಮೈಲು ದೂರವಾದ ಮಂಜೇಶ್ವರ-ಉಳ್ಳಾಲ ಸಮುದ್ರ ಮಧ್ಯದಲ್ಲಿ ಇಂದು ಸಂಭವಿಸಿದೆ.ಉಪ್ಪಳದ ಬೇಕೂರಿನಿಂದ ಮೀನುಗಾರಿಕೆಂದು ಹೊರಟಿದ್ದ ದೋಣಿಗೆ ಸಮುದ್ರ ಮಧ್ಯದಲ್ಲಿ ಸರಕು ಸಾಗಾಟದ ಹಡಗು ಢಿಕ್ಕಿ ಹೊಡೆದಿದೆ. ಪರಿಣಾಮ ದೋಣಿ ಸಂಪೂರ್ಣ ಹಾನಿಗೀಡಾಗಿದ್ದು , ದೋಣಿಯಲ್ಲಿದ್ದ 14 ಮಂದಿ ಮೀನುಗಾರರರು ಸಮುದ್ರ ಪಾಲಾಗಿದ್ದರು. ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಿ ಸದ್ಯ ಮೂವರನ್ನು ರಕ್ಷಿಸಿದ್ದಾರೆ. ಸಮುದ್ರ ಮಧ್ಯದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

Read More

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ಬಹಳಷ್ಟು ಕಾಮಗಾರಿ ನಡೆಸಿದ್ದು ಕನೀರುತೋಟ ರಸ್ತೆ ಕಾಮಗಾರಿ ಆದಷ್ಟು ಬೇಗ ನಡೆಯಲಿ. ಮುಂದಿನ ಬಾರಿ ಚುನಾವಣೆಯಲ್ಲೂ ಜನರ ಆಶೀರ್ವಾದ ಇಲ್ಲಿನ ಜನಪ್ರತಿನಿಧಿಗಳ ಮೇಲೆ ಸದಾ ಇರಲಿ ಎಂದು ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.ಅವರು ಕೊಲ್ಯ ಕನೀರುತೋಟ ರಸ್ತೆ ಗೆ ರೂ. 14 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟಿಕರಣ ಕಾಮಗಾರಿಗೆ ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಚಾಲನೆ ನೀಡಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷರ ಅನುದಾನದಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಲಿದ್ದು ಇನ್ನಷ್ಟು ಅನುದಾನ ಗ್ರಾಮಕ್ಕೆ ಸಿಗುವಂತಾಗಲಿ ಎಂದರು.ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲದಾಸ್, ಕೋಟೆಕಾರು ಶಕ್ತಿಕೇಂದ್ರ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ, ಪ್ರ.ಕಾ ಪುರುಷೋತ್ತಮ್ ಗಟ್ಟಿ, ಹಿರಿಯ ಮುಖಂಡ ಸೀತಾರಾಮ ಬಂಗೇರ, ಕೋಟೆಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರ್ ಕನೀರುತೋಟ, ಮುಖಂಡ ಯಶವಂತ ಅಮೀನ್,…

Read More

ಉಳ್ಳಾಲ: ಬಾಲಕಿಯೋರ್ವಳು ಮನೆಯೊಳಗೆ ಶಾಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಎಂಬಲ್ಲಿ ಶನಿವಾರದಂದು ನಡೆದಿದೆ.ಕಾಸರಗೋಡು ಎಡನೀರು ನಿವಾಸಿ ಕೃಷ್ಣ ನಾಯ್ಕ್ ಎಂಬವರ ಪುತ್ರಿ ಮೇಘಶ್ರೀ (13) ಸಾವನ್ನಪ್ಪಿದ ಬಾಲಕಿ. ಚೆರ್ಕಳ ಎಡನೀರು ಮಠದ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ ಕೋಟೆಕಾರಿನ ಮಾವನ ಮನೆಯಲ್ಲಿ ಒಂದು ತಿಂಗಳಿನಿಂದ ಇದ್ದಳು. ಹಾಡು ಹಾಕಿ ನೃತ್ಯ ಮಾಡುವ ಹವ್ಯಾಸ ಹೊಂದಿದ್ದ ಈಕೆ, ವೇಲು ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮೇಘಶ್ರೀ ಸಾವಿನಲ್ಲಿ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆಮಂದಿಯನ್ನು ಹಾಗೂ ಹೆತ್ತವರನ್ನು ಉಳ್ಳಾಲ ಠಾಣಾ ಪೊಲೀಸರು ವಿಚಾರಣೆಗೆ ತೆಗೆದುಕೊಂಡಿದ್ದರು. ಆ ಬಳಿಕ ಸ್ಥಳ ಮಹಜರು ವೇಳೆ ಬಾಲಕಿ ಕೋಣೆಯ ಬಾಗಿಲು ಹಾಕಿದ್ದು, ಬಾಗಿಲು ಒಡೆದು ನೋಡಿದಾಗ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿರುವುದು ಗೊತ್ತಾಗಿದೆ. ಮೇಘಶ್ರೀ ತನ್ನ ಬಣ್ಣ ಕಪ್ಪು ಎಂಬ ಜಿಗುಪ್ಸೆಯನ್ನು ಹೊಂದಿದ್ದಳು. ಇದರಿಂದ ಬೇಸತ್ತು ಆತ್ಮಹತ್ಯೆ ನಡೆಸಿರುವ ಶಂಕೆಯೂ ಒಂದು ಹಂತದಲಿ ವ್ಯಕ್ತವಾಗಿದೆ. ಆದರೆ ಕಿರಿ…

Read More

ಉಳ್ಳಾಲ: `ಉಳ್ಳಾಲ ದರ್ಗಾ’ ಎಂದೇ ಪ್ರಸಿದ್ಧವಾಗಿರುವ ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಗಳ್‍ರವರ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ಒಂದು ತಿಂಗಳುಗಳ ಕಾಲ ನಡೆಯುವ ‘ಉಳ್ಳಾಲ ಉರೂಸ್’ ಗೆ ದರ್ಗಾ ಆಡಳಿತ ಮಂಡಳಿ ಸಿದ್ಧತೆ ನಡೆಸುತ್ತಿದ್ದು, ಪವಿತ್ರ ರಂಝಾನ್ ಉಪವಾಸ ಮುಗಿದ ತಕ್ಷಣ ಉರೂಸ್ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಲಿದ್ದು, 2021ರ ಅಕ್ಟೋಬರ್ 28ರಿಂದ ನ. 20ರವರೆಗೆ ಉಳ್ಳಾಲ ಉರೂಸ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಶನಿವಾರ ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧಾರ್ಮಿಕ ಶ್ರದ್ಧಾಕೇಂದ್ರವಾಗಿ ದೇಶವಿದೇಶಗಳಿಂದ ಇಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದಲೂ ಧಾರ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. 2020ರಲ್ಲಿ ಉರೂಸ್ ಆಗಬೇಕಾಗಿದ್ದು ಕೋವಿಡ್ 19 ಹಿನ್ನಲೆಯಲ್ಲಿ ಉರುಸ್ ಕಾರ್ಯಕರಮವನ್ನು ಮುಂದೂಡಲಾಗಿತ್ತು ಇದೀಗ ಭಕ್ತಾ„ಗಳು ಉಳ್ಳಾಲ ಉರೂಸ್ ಕುರಿತ ಮಾಹಿತಿಗಾಗಿ ಕಾಯುತ್ತಿದ್ದು, ಉರೂಸು ನಡೆಯುವ 6 ತಿಂಗಳ ಮೊದಲೇ ಸಿದ್ಧತೆ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ದರ್ಗಾ ಸಮಿತಿ…

Read More

ಉಳ್ಳಾಲ: ಬಸ್ – ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ , ಇಬ್ಬರು ಗಾಯಗೊಂಡಿರುವ ಘಟನೆ ನಾಗುರಿ ಸಂಚಾರಿ ಠಾಣಾ ವ್ಯಾಪ್ತಿಯ ಕುತ್ತಾರು ಬಳಿ ಸಂಭವಿಸಿದೆ.ಪೊಳಲಿ  ನಿವಾಸಿ ಮಹಮ್ಮದ್ ಶಾಫಿ (20)ಮೃತರು. ಸಹಸವಾರರಾದ ರಾಣಿಪುರ ನಿವಾಸಿ ಮಹಮ್ಮದ್ ಇಮ್ರಾನ್ (20) ಮತ್ತು  ಕಲ್ಲಡ್ಕ ನಿವಾಸಿ ಮಹಮ್ಮದ್ ಮೌಸೀನ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ.ರಾಣಿಪುರ ಕಡೆಗೆ ಗೆಳೆಯನ ಮನೆಗೆ ತೆರಳುತ್ತಿದ್ದಾಗ ಕುತ್ತಾರು ಕೊರಗಜ್ಜನ ಕಟ್ಟೆ ಬಳಿ ಓವರ್ ಟೇಕ್ ಮಾಡುವ ಧಾವಂತದಲ್ಲಿ ಎದುರು ಕಡೆಯಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಶಾಫಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ‌ . ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ: ಬಡ ವ್ಯಾಪಾರಿಗಳ ಅನುಕೂಲಕ್ಕಾಗಿ ಮತ್ತು ಗ್ರಾಹಕರ ಸ್ನೇಹಿ ವ್ಯವಸ್ಥೆಯಾಗಿ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ ಬಳಿ ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಸ್ಥಾಪಿಸಲಾಗಿದೆ. ಪ್ರಧಾನಿ ಮೋದಿಯವರ ಕನಸಿನಂತೆ ಆತ್ಮನಿರ್ಭರ್ ಗೆ ಪೂರಕ ಮಾದರಿ ಯೋಜನೆಯಾಗಿದೆ ಎಂದು ಗ್ಲೋಬಲ್ ಕಮರ್ಷಿಯಲ್ ಸೆಂಟರ್ ನ ಅಬೂಬಕರ್ ಸಿದ್ದೀಖ್ ಹೇಳಿದರು.ತೊಕ್ಕೊಟ್ಟು ಕಲ್ಲಾಪು ಮಾರುಕಟ್ಟೆಯಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 5 ಎಕರೆ ಪ್ರದೇಶದಲ್ಲಿ 1.5 ಎಕರೆ ಪ್ರದೇಶವನ್ನು ವ್ಯಾಪಾರ ಉದ್ಯಮಕ್ಕೆ ಬಳಸಲಾಗಿದೆ. ಅದರಲ್ಲಿ 200 ರಷ್ಟು ತಾತ್ಕಾಲಿಕ ಶೆಡ್ ರೂಪದ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಹೊರ ಆವರಣದಲ್ಲಿ ರಖಂ ಮತ್ತು ಒಳಾಂಗಣದಲ್ಲಿ ಚಿಲ್ಲರೆ ಅಂಗಡಿಗಳಿರಲಿವೆ. ಉಳಿದ ಭಾಗವನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ಗೆ ಬಳಸಲಾಗುವುದು. ವ್ಯಾಪಾರಿಗಳಿಗೆ ಕೈಗೆಟಕುವ ಬಾಡಿಗೆ ಆಧಾರದಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾದ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ಒಂದು ಡಿಸ್ಪೆನ್ಸರಿ, ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯಗಳು ಇರಲಿವೆ.…

Read More