Author: UllalaVani

Kannada News From Coastal Karnataka

ಉಳ್ಳಾಲ: ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಸೋಮವಾರ ಶತಮಾನದ ನಂತರ ಶ್ರೀ ಸೋಮನಾಥ ದೇವರ ` ಬ್ರಹ್ಮರಥಾರೋಹಣ-ರಥೋತ್ಸವ , ಸುಡುಮದ್ದು ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು.

Read More

ಉಳ್ಳಾಲ:ವಿಕೇಂಡ್ ಲಾಕ್‍ಡೌನ್‍ಗೆ ಉಳ್ಳಾಲ ಸುತ್ತುಮುತ್ತಲಿನ ಪ್ರದೇಶಗಳು ಸಂಪೂರ್ಣ ಸ್ಥಬ್ದಗೊಂಡಿದ್ದು, ಅಗತ್ಯ ಸಾಮಾಗ್ರಿಗಳ ಖರೀದಿಗೂ ಯಾವುದೇ ನೂಕು ನುಗ್ಗಲು ಇಲ್ಲದೆ ಸಾರ್ವಜನಿಕರು ಸಹಕರಿಸಿದ್ದು, ಉಳ್ಳಾಲವ್ಯಾಪ್ತಿಯಲ್ಲಿ ಪೊಲೀಸರು ವಿವಿದೆಡೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಿದರು.  ವಾರದ ಹಿಂದೆಯೇ ಲಾಕ್‍ಡೌನ್‍ಘೋಷಣೆ ಆಡಿದ್ದರಿಂದ ಜನರು ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿಕೊಂಡು ಹೋಗಿದ್ದಾರೆ. ಮುಖ್ಯವಾಗಿ ತೊಕ್ಕೊಟ್ಟು ಒಳಪೇಟೆ, ಉಳ್ಳಾಲ, ತೊಕ್ಕೊಟ್ಟು ಜಂಕ್ಷನ್, ಕುತ್ತರಾ,  ದೇರಳಕಟ್ಟೆ,ಜಂಕ್ಷನ್‍ಗಳಲ್ಲಿ  ಜನನಿಬಿಡತೆ ಹೆಚ್ಚು ಕಂಡು ಬಂದಿಲ್ಲ.:ರಾಷ್ಟ್ರೀಯ ಹೆದ್ದಾರಿ66 ಸೇರಿದಂತೆ  ತೊಕ್ಕೊಟ್ಟಿನಿಂದ ಉಳ್ಳಾಲ ಸಂಪರ್ಕಿಸುವ ರಸ್ತೆ, ತೊಕ್ಕೊಟ್ಟು ಜಂಕ್ಷನ್ ,  ಗಡಿಪ್ರದೇಶವಾದ ತಲಪಾಡಿಯಲ್ಲಿ  ವಾಹನಗಳ ತಪಾಸಣೆ ನಡೆಯಿತು. ಉಳ್ಳಾಲ ಮತ್ತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ತಪಾಸಣೆ ನಡೆಸಿದರು. : ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ದ.ಕ.ಜಿಲ್ಲಾಡಳಿತದಿಂದ ಕಳೆದ ಕೆಲವು ತಿಂಗಳಿನಿಂದ ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವವರ ಕೋವಿಡ್ ಟೆಸ್ಟ್ ಸೇರಿದಂತೆ ಆರ್‍ಟಿಪಿಸಿಆರ್ ತಪಾಸಣೆಯ ಮಾಹಿತಿ ಪಡೆದುಕೊಳ್ಳಲು ಕೋವಿಡ್ ಚೆಕ್‍ಪೋಸ್ಟ್ ಆರಂಬಿಸಿದ್ದು, ಪೊಲೀಸರು ಮತ್ತು ಹೋಮ್‍ಗಾಡ್ರ್ಸ್ ಕೇರಳದಿಂದ ಮಂಗಳೂರಿಗೆ ಆಗಮಿಸುವವರ ಕೋವಿಡ್ ಟೆಸ್ಟ್…

Read More

ಉಳ್ಳಾಲ:  ತೀಯಾ ಸೇವಾ ಸಹಕಾರ ಸಂಘ (ನಿ) ಇದರ 2021ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತೊಕ್ಕೊಟ್ಟು ಒಳಪೇಟೆಯ ಶಿವಾನಿ ಕಾಂಪ್ಲೆಕ್ಸ್ ನ  ಸಂಘದ ಕಚೇರಿಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಚುನಾಯಿತರಾದ  ದಿನೇಶ್ ಎಂ.ಕುಂಪಲ  ಹಾಗೂ ಉಪಾಧ್ಯಕ್ಷರಾಗಿ  ಸುನಿಲ್ .ಜೆ.ಉಚ್ಚಿಲ ಅಧಿಕಾರ ವಹಿಸಿಕೊಂಡರು. ಪ್ರಕಾಶ್ ಎಂ.ಉಳ್ಳಾಲ್, ನಾಗಪ್ಪ ಬಿ.ಅಡ್ಯಾರ್,  ಅಭಿಜಿತ್ ಬೆಳ್ಚಾಡ, ಮಾಧವ, ಸೂರಜ್, ಸತೀಶ್ ಕುಮಾರ್ ಪುಂಡಿಕಾಯ್, ಉಮೇಶ್ ಕೆ., ರಜನಿ ಕುಮಾರಿ, ಹರಿಣಾಕ್ಷಿ ಹಾಗೂ ಲತಾ ವಿ. ಸಂಘದ ನಿರ್ದೇಶಕರುಗಳಾಗಿ ಅಧಿಕಾರ ಸ್ವೀಕರಿಸಿದರು.ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ  ಅರ್ಚಕರಾದ ಮಂಜಪ್ಪ ಕಾರ್ನವರ್,  ಅಪ್ಪು ಆತಾರ್ ಪದಗ್ರಹಣ ಸಮಾರಂಭ ನೆರವೇರಿಸಿಕೊಟ್ಟರು. ಭಗವತೀ ಬ್ಯಾಂಕ್ ಮಾಜಿ  ಅಧ್ಯಕ್ಷ ಸದಾಶಿವ ಉಳ್ಳಾಲ್,  ಭಗವತಿ  ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ದೇವದಾಸ್ ಕೊಲ್ಯ,   ಕಾಂಗ್ರೆಸ್ ಮುಖಂಡ ಫಾರುಕ್ ಉಳ್ಳಾಲ್, ಉದ್ಯಮಿ ರವಿಶೆಂಕರ್ ಶೆಟ್ಟಿ, ಲಕ್ಷ್ಮಣ್ ವಿ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರ.ಕಾ ನೀರಜ್ ಪಾಲ್ , ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಕೆ ಸುಧೀರ್, ಗಣೇಶ್…

Read More

ಉಳ್ಳಾಲ: ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ತೊಕ್ಕೊಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಹೊರೆ ಕಾಣಿಕೆ ಹಾಗೂ ನೂತನ ಬ್ರಹ್ಮರಥದ ಭವ್ಯ ಮೆರವಣಿಗೆ ಶ್ರೀ ಕ್ಷೇತ್ರ ಸೋಮೇಶ್ವರದವರೆಗೆ ನಡೆಯಿತು.ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಮೆರವಣಿಗೆಗೆ ಶ್ರೀ ಕ್ಷೇತ್ರ ಉಳಿಯದ ಧರ್ಮದರ್ಶಿ ದೇವುಮೂಲ್ಯಣ್ಣ, ಶ್ರೀ ಕ್ಷೇತ್ರ ಮಾಣಿಲದಾಮದ ಶ್ರೀ ಮೋಹನ್‍ದಾಸ್ ಸ್ವಾಮೀಜಿ, ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ರವೀಂದ್ರನಾಥ ರೈ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮತಿ ಪದಾ„ಕಾರಿಗಳು, ಹೊರೆ ಕಾಣಿಕೆ ಸಮಿತಿ ಪದಾ„ಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಂಘಟಟನೆಗಳ ಮುಖಂಡರು, ಧಾರ್ಮಿಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉಳ್ಳಾಲ: ನಿನ್ನೆ ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಕೆ.ಜಿಗಟ್ಟಲೆ ತೂಕವಿದ್ದ ಸ್ವಾಗತ ಕಮಾನೊಂದು ರಸ್ತೆಗೆ ಉರುಳಿದರೆ, ದಶಕಗಳಿಂದ ಬೀರಿ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಹಾಕಲಾದ ಒಂದು ಕೋಲು , ಕೋಲಿನ ಅಳತೆಗೆ ಸಮಾನಾಗಿ ತಟ್ಟಿ , ಅದಕ್ಕೊಂದು ಕೆಎಸ್‍ಆರ್‍ಟಿಸಿ ಬಸ್ಸು ನಿಲುಗಡೆಯ ಸೂಚನೆಯ ನಾಮಫಲಕ ಕನಿಷ್ಟ ಅಂದರೂ 5 ರಿಂದ 6 ಕೆಜಿಯ ಬಸ್ಸು ನಿಲ್ದಾಣ ಮಾತ್ರ ಬೀಳದೆ ತನ್ನ ಬಲಪ್ರದರ್ಶಿಸಿದೆ. ಈ ಕುರಿತು ಬೀರಿ ನಿವಾಸಿ ಯುವಕರು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.`ವೀಕ್ಷಕರೇ, ಭಾರೀ ಮಳೆಗೆ, ಭಾರೀ ಗಾಳಿ ಬರ್ಸಕೆ ಇಡೀ ದ್ವಾರ ಮಗುಚಿಬಿದ್ದಿದೆ. ಆದರೆ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಇಲ್ಲಿವರೆಗೂ ಏನೂ ಆಗಿಲ್ಲ. ಎಂತ ಗಾಳಿ ಬಂದರೂ ಉರುಳದೇ ನಿಂತಿದೆ. ಯಾವ ಬಿರುಗಾಳಿಗೂ ಬಗ್ಗದ ನಮ್ಮ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್. ಕ್ಯಾಮರಾಮೆನ್ ಶಿವಪ್ರಸಾದ್ ಜತೆಗೆ ಸೂರಜ್ ಟಿವಿ 9 ‘ .…

Read More

ಉಳ್ಳಾಲ: ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ. 18ರ ಭಾನುವಾರದಿಂದ ಎಪ್ರಿಲ್ 26ರ ಸೋಮವಾರದವರೆಗೆ ನಡೆಯಲಿದೆ.ಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋಮೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಬಿ. ರವೀಂದ್ರನಾಥ ರೈ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ನವೀಕರಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವಿಷ್ಣಮೂರ್ತಿ, ಪಾರ್ಥಸಾರಥಿ,ಶ್ರೀ ಗೋಪಾಲಕೃಷ್ಣ ಮತ್ತು ಶ್ರೀ ಪಂಚದುರ್ಗಿ , ಕಲ್ಲುರ್ಟಿ -ಕಲ್ಕುಡ, ನಾಗ, ರಕ್ತೇಶ್ವರೀ ಸಾನಿಧ್ಯಗಳ ಪುನರ್‍ಪ್ರತಿಷ್ಠ, ಅಷ್ಟಬಂಧ ಕಲಶಾದಿಗಳು ಕ್ಷೇತ್ರ ತಂತ್ರಿವರ್ಯರರಾದ ವೇದಮೂರ್ತಿ ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಬ್ರಹ್ಮರಥದ ಸಮರ್ಪಣೆಯೂ ನಡೆಯಲಿದೆ ಎಂದರು.ಶ್ರೀ ಕ್ಷೇತ್ರದಲ್ಲಿ ಎ. 18ರಂದು ಭಾನುವಾರ ಗಣಪತಿ ಪ್ರಾರ್ಥನೆ, ಉಗ್ರಾಣ ಮುಹೂರ್ತ ಹಾಗೂ ಚಪ್ಪರ ಮುಹೂರ್ತದೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಬಗೊಳ್ಳಲಿದ್ದು, ಎ. 19ರಂದು ಸೋಮವಾರ ಮಧ್ಯಾಹ್ನ 2.30ಕ್ಕ…

Read More

ಉಳ್ಳಾಲ: ಮಣ್ಣು, ಕಲ್ಲು, ಮರ, ಪ್ರಾಣಿಪಕ್ಷಿಗಳಲ್ಲಿ ದೇವರನ್ನು ಕಾಣುವವರು ಹಿಂದೂಗಳು. ಇಲ್ಲಿ ದೈವೀ ಶಕ್ತಿಯೆದುರು ಅನ್ಯಾಯವೆಸಗಿ ಬದುಕಲು ಸಾಧ್ಯವೇ ಇಲ್ಲ. ಕೆಲವರಿಗೆ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಮಾಡಿದರೆ , ಇನ್ನು ಕೆಲವರಿಗೆ ಭಾನುವಾರ ಪ್ರಾರ್ಥನೆ ಮಾಡಿದಲ್ಲಿ ಮಾತ್ರ ದೇವರು ಸಿಗುತ್ತಾನೆ. ಆದರೆ ಹಿಂದೂ ಧರ್ಮಕ್ಕೆ ಪ್ರತಿನಿತ್ಯವೂ ಪ್ರಾರ್ಥನೆ ಮಾಡಿದಲ್ಲಿ ದೇವರು ಕಾಣುತ್ತಾನೆ ಎಂದು ಆರ್ ಎಸ್ ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿ ಸಮಿತಿ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಕೊರಗತನಿಯ ಸೇವಾ ಸಮಿತಿ (ಕೆಟಿಎಸ್ ಎಸ್ ಬಾಯ್ಸ್ ) ಪಿಲಾರು ಪ್ರಕಾಶನಗರ ದ 10 ನೇ ವಾರ್ಷಿಕೋತ್ಸವ ಹಾಗೂ ಬಿಸು ಪರ್ಬ-2021 ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿ ಮಾತನಾಡಿದರು. ಹಿಂದೂಗಳ ದೇವರ ಆರಾಧನೆಗೆ ನಿಗದಿತ ಸಮಯವಿಲ್ಲ, ದಿನವಿಲ್ಲ, ಧಿಕ್ಕುಗಳಿಲ್ಲ. ಆದರೆ ಕೆಲವರಿಗೆ ಶುಕ್ರವಾರ ನಮಾಜ್ ಮಾಡಿದರೆ ಮಾತ್ರ ದೇವರು ಕಾಣುತ್ತಾನೆ. ಇನ್ನು ಕೆಲವರಿಗೆ ಭಾನುವಾರ ಪ್ರಾರ್ಥನೆ ಮಾಡಿದಲ್ಲಿ ಮಾತ್ರ ದೇವರು…

Read More

ಉಳ್ಳಾಲ: ಪುರಾಣ ಪ್ರಸಿದ್ಧ ಶ್ರೀ ಸೋಮನಾಥ ದೇವರ ಸಾನಿಧ್ಯದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಪ್ರಿಲ್ 18ರಿಂದ 26ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಬುಧವಾರ ಉಳ್ಳಾಲದ ಸಯ್ಯದ್ ಮದನಿ ದರ್ಗಾಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್‍ರವರನ್ನು ಆಮಂತ್ರಣ ಪತ್ರಿಕೆ ನೀಡಿ ಆಮಂತ್ರಿಸಿದರು.ಈ ಸಂದರ್ಭ ಮಾತನಾಡಿದ ಅವರು ಸುಮಾರು ಸಾವಿರದ ಐನೂರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಉಳ್ಳಾಲ ಪ್ರದೇಶಕ್ಕೆ ಹೆಸರು ತಂದುಕೊಟ್ಟ ಪುಣ್ಯಕ್ಷೇತ್ರ, ಕಳೆದ ವರ್ಷ ಕೊರೋನಾ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿತ್ತು.  ಆದರೆ ದೇವರ ಯಾವುದೇ ಕಾರ್ಯ ಅವರ ಅನುಮತಿ ಸಮ್ಮತಿ ಬೇಕು, ಈಗ ಆಕಾಲ ಕೂಡಿ ಬಂದಿದೆ ಎಂದರು.  ಅಲ್ಲದೆ ಸನ್ನಿಧಾನದಲ್ಲಿ ನಡೆಯುವ ಎಲ್ಲಾ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಉತ್ತಮ ರೀತಿಯಲ್ಲಿ ನಡೆಸುವಂತಹ ಭಾಗ್ಯವನ್ನು ದೇವರು ಕಲ್ಪಿಸಿ ಕೊಡಲಿ. ಆ ಮೂಲಕ ಎಲ್ಲಾ ವರ್ಗಗಳ ಜನರು ಭಾಗವಹಿಸಿಕೊಂಡು ಸೌಹಾರ್ಧತೆಯನ್ನು ಮೆರೆಯುವುದರ ಜೊತೆಗೆ ನಾವು ದೇವರ ಮಕ್ಕಳು ಎಂಬ ದೃಷ್ಠಿಯಲ್ಲಿ ಒಂದಾಗಿ…

Read More

ಉಳ್ಳಾಲ: ಮಾಜಿ ಸಚಿವ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ದಾವಣಗೆರೆಯಲ್ಲಿ ಅಪಘಾತವಾಗಿದ್ದು ಖಾದರ್ ಅಪಾಯದಿಂದ ಪಾರಾಗಿದ್ದಾರೆ.ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಬಳಿಯ ಹೆಬ್ಬಾಳದ ರಾಷ್ಟ್ರೀಯ ಹೆದ್ದಾರಿ 4 ರ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೆಳಗಾವಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಖಾದರ್ ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಪ್ರಯಾಣಿಸುತ್ತಿದ್ದರು.ಹಂಪ್ಸ್ ನಲ್ಲಿ ಮುಂದಿನಿಂದ ನಿಧಾನವಾಗಿ ಸಾಗುತ್ತಿದ್ದ ಕಂಟೇನರ್ ಲಾರಿಗೆ ಖಾದರ್ ಅವರ ಕಾರು ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಖಾದರ್ ಮತ್ತು ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರಿನ ಮುಂಭಾಗ ಜಖಂ ಆಗಿದ್ದು ಖಾದರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದಾವಣಗೆರೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಕುರಿತು ದಾವಣಗೆರೆ ಎಸ್.ಪಿ ಹನಮಂತರಾಯ ಅವರೊಂದಿಗೆ ಖಾದರ್ ಅಪಘಾತದ ಮಾಹಿತಿ ನಡೆಸಿದರು.

Read More

ತೊಕ್ಕೊಟ್ಟು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನೂತನವಾಗಿ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದ ಪಿಲಾರು ದಾರಂದಬಾಗಿಲು ನಿವಾಸಿ ಸಂತೋಷ್ (35) ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸುರಿಬೈಲು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಸಹಸವಾರ ರಂಜಿತ್ ಗಾಯಗೊಂಡಿದ್ದಾರೆ. ಕಲ್ಲಡ್ಕ ಕಡೆಯಿಂದ ಸಾಲೆತ್ತೂರು ಕಡೆಗೆ ಪಿಕಪ್ ವಾಹನವನ್ನು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಸಾಲೆತ್ತೂರು ಕಡೆಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ಸ್ಕೂಟರ್‍ಗೆ ಢಿಕ್ಕಿ ಹೊಡೆದಿದ್ದು, ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು.ಬಂಟ್ವಾಳ ಸರಕಾರಿ ಆಸ್ವತ್ರೆಗೆ ಗಾಯಾಳುಗಳನ್ನು ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ (ಎಸ್ ಕೆ ಡಿ ಆರ್ ಪಿ)ಯಲ್ಲಿ ಸಿಬ್ಬಂದಿಯಾಗಿ ಆಯ್ಕೆಗೊಂಡಿದ್ದ ಇವರು ಧಾರವಾಡದಲ್ಲಿ ತರಬೇತಿ ಮುಗಿಸಿ ಇತ್ತೀಚೆಗೆ ಆಗಮಿಸಿದ್ದರು. ಮೃತರು ತಾಯಿ, ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

Read More