UN netowotks
ಉಳ್ಳಾಲ: ಕೊರೊನಾ ಸೋಂಕಿನಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದು, ಆರೋಗ್ಯಪೂರ್ಣ ಸಮಾಜದ ನಿರ್ಮಾಣದ ಕಳಕಳಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುವ ಸಲುವಾಗಿ ಸಭೆಯನ್ನು ನಡೆಸಲಾಗಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಬಾಲಕೃಷ್ಣ ಮಂದಿರದ ರಜತ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಮಂದಿರದ ಸಭಾಂಗಣದಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬೃಹತ್ ರಕ್ತದಾನ ಶಿಬಿರಕ್ಕೆ ವಿವಿಧ ಸಂಸ್ಥೆಗಳ ಸಹಕಾರ ಹಾಗೆಯೇ ರಜತ ವರ್ಷದ ಬೇರೆ ಬೇರೆ ಸೇವಾ ಯೋಜನೆಗಳಿಗೆ ಇನ್ನಷ್ಟು ಮಂದಿರದ ಆತ್ಮೀಯ ಸಂಸ್ಥೆಗಳನ್ನು ಸೇರಿಸಿ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಸಲಾಗುವುದು ಎಂದರು.
ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಸಭೆಯ ನೇತೃತ್ವ ವಹಿಸಿದ್ದರು.
ಶ್ರೀ ಸತ್ಯನಾರಾಯಣ ಮಂದಿರ ಬಗಂಬಿಲ, ಹಿಂದೂ ಜಾಗರಣ ವೇದಿಕೆ ಓಂಕಾರ ಘಟಕ ಕುಂಪಲ, ಓಂ ಪ್ರೆಂಡ್ಸ್ ಆಶ್ರಯಕಾಲನಿ, ಛತ್ರಪತಿ ಶಿವಾಜಿ ಪ್ರೆಂಡ್ಸ್ ಲಕ್ಷ್ಮಿಗುಡ್ಡೆ, ಯುವ ಮರಾಠ ಕುಂಪಲ, ಟೀಮ್ ರ್ಯಾಪ್ಟರ್ಸ್, ಕುಂಪಲ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮೇ 10 ರಂದು ಬೆಳಗ್ಗೆ 7 ರಿಂದ ಆಯೋಜಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾಧಿಕಾರಿ ಸೋಮಶೇಖರ್ ಜಗತಾಪ್, ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್, ಕಾರ್ಯದರ್ಶಿ ಹರೀಶ್ ಮೂರುಕಟ್ಟ, ಬೆಳ್ಳಿ ಹಬ್ಬ ಸಮಿತಿ ಪ್ರಮುಖರಾದ ಕಿಶೋರ್ ಡಿಕೆ, ಅನಿಲ್ ಬಗಂಬಿಲ, ಹರೀಶ್ ಕುಂಪಲ, ದೇವಾನಂದ ಶೆಟ್ಟಿ, ಪ್ರವೀಣ್ ಬಗಂಬಿಲ, ತಿಮ್ಮಯ್ಯ ಆಶ್ರಯಕಾಲನಿ, ಚೇತನ್ ಶೆಟ್ಟಿ, ಅಶ್ವಿತ್ ರಾವ್, ವಿಕಾಸ್ ಕುಂಪಲ, ಕಿರಣ್ ವಿಧ್ಯಾನಗರ ಮತ್ತು ಸಹಯೋಗದ ಸಂಘ ಸಂಸ್ಥೆಗಳ ಪದಾದಿಕಾರಿಗಳು ಉಪಸ್ಥಿತರಿದ್ದರು.
ರಜತ ವರ್ಷದ ವೈದ್ಯಕೀಯ ಸೇವಾ ಯೋಜನೆ ಸಂಚಾಲಕ ಆನಂದ ಮಿತ್ರನಗರ ಸ್ವಾಗತಿಸಿ ನಿರೂಪಿಸಿದರು.


