ಬಾಳೆಪುಣಿ: ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ ಕುಕ್ಕುದಕಟ್ಟೆ ಆದಿವಾಸಿ ಕೊರಗರ ಕಾಲೊನಿಯಲ್ಲಿ ಲಸಿಕೆ ಹಾಕಿಸೋಣ, ಕೊರೊನಾ ತಡೆಯೊಣ ಜಾಗೃತಿ ಕಾರ್ಯಕ್ರಮ ನಡೆಯಿತು. ಜನ ಶಿಕ್ಷಣ ಟ್ರಸ್ಟ್, ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಭಾಗವಹಿಸಿ ಅರಿವೇ ಔಷ„ ಮಾಸ್ಕೇ ಮದ್ದು, ಮನೆಯೇ ಆಸ್ಪತ್ರೆ, ಲಸಿಕೆ ಹಾಕಿಸಿ ಕೊರೊನಾ ಓಡಿಸಿ ಈ ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕೊರಗ ಜನಾಂಗದ ಹಿರಿಯ ಮುಂದಾಳು ಬಳ್ಳು ಕೊರಗ, ಮಾದರಿ ಗ್ರಾಮ ಅಭಿಯಾನದ ಸ್ವಯಂ ಸೇವಕಿ ವಿದ್ಯಾ, ಆಶಾ ಕಾರ್ಯಕರ್ತೆ ವಿಶಾಲಾಕ್ಷಿ ಸಂವಾದದಲ್ಲಿ ಭಾಗವಹಿಸಿದರು
Author: UllalaVani
ಉಳ್ಳಾಲ: ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಬಿಜೆಪಿ ಮಂಗಳೂರು ಕ್ಷೇತ್ರ ವತಿಯಿಂದ ತೊಕ್ಕೊಟ್ಟು ಕಾಪಿಕಾಡಿನ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.ಸಾಂಕೇತಿಕ ಪ್ರತಿಭಟನೆಯಲ್ಲಿ ದಿ. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರಿಸ್ ಪ್ರೈವೆಟ್ ಲಿಮಿಟೆಡ್ ಇದರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ , ಪ್ರ. ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕಾರ್ಯದರ್ಶಿಗಳಾದ ಆನಂದ ಶೆಟ್ಟಿ ,ನವೀನ್ ಶೆಟ್ಟಿ ಕುರ್ನಾಡು ಕೋಟೆಕಾರು ಶಕ್ತಿಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಕಾರ್ಯದರ್ಶಿ ಪುರುಷೋತ್ತಮ ಗಟ್ಟಿ ಪರಿಯತ್ತೂರು, ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಯಶವಂತ ಅಮೀನ್, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಮೋರೆ, ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಹಿಂದುಳಿದ ವರ್ಗಗಳ ಅಧ್ಯಕ್ಷ ರವಿ ಸೋವೂರು, ಕಾರ್ಯದರ್ಶಿ ಭರತ್ ಗಟ್ಟಿ ಕಟ್ಟಪುಣಿ, ರೈತ ಮೋರ್ಚಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಂಜನಾಡಿ, ಕೌನ್ಸಿಲರ್‍ಗಳಾದ ರಾಜೇಶ್ ಯು. ಬಿ. ಗೀತಾಬಾೈ, ಜಿಲ್ಲಾ ಸಮಿತಿ ಸದಸ್ಯರಾದ ಸುಜಿತ್ ಕಂಬ್ಲಪದವು, ಜೀವನ್ ತೊಕ್ಕೊಟ್ಟು…
ಉಳ್ಳಾಲ: ಇಲ್ಲಿನ ಪೊಲೀಸ್ ಠಾಣೆಯಲ್ಲಿ 5ಕ್ಕಿಂತಲೂ ಅಧಿಕ ಪ್ರಕರಣ ಹೊಂದಿದ್ದ ಆರೋಪಿ ಕಾಸರಗೋಡು ಸಮೀಪದ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಚಟ್ಟಂಚಾಲು ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಸೋಮವಾರ ಪತ್ತೆಯಾಗಿದೆ.ಚೆಂಬುಗುಡ್ಡೆ ನಿವಾಸಿ ಹಿದಾಯತ್ (28) ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೇ.5 ರಂದು ಶವಮಹಜರು ಪರೀಕ್ಷೆ ನಡೆಯಲಿದೆ. ಬಳಿಕವಷ್ಟೇ ಸಾವಿನ ಕಾರಣ ತಿಳಿದುಬರಬಹುದು. ಹಿದಾಯತ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ, ಕಳವು, ಜಾನುವಾರು ಕಳವು ಕುರಿತು 5 ಕ್ಕಿಂತಲೂ ಅಧಿಕ ಪ್ರಕರಣಗಳಿವೆ. ಉಪ್ಪಳದಲ್ಲಿ ಕೆಲಸಕ್ಕಿದ್ದ ಹಿದಾಯತ್ ಮೇ.1 ರಿಂದ ನಾಪತ್ತೆಯಾಗಿದ್ದರೆಂದು ತಿಳಿದುಬಂದಿದೆ. ಎ.3 ರಂದು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಚಟ್ಟಂಚಾಲು ಎಂಬಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಹಿದಾಯತ್ ಮೊಬೈಲ್ ಮಾತ್ರ ಪತ್ತೆಯಾಗಿದ್ದು, ಅದರಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿಲ್ಲ. ಮೇಲ್ಪರಂಬ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉಳ್ಳಾಲ: ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ನ ಮೂಲಕ ಪಿಲಾರು ದಾರಂದಬಾಗಿಲು ಮತ್ತು ಕುಂಪಲ ಬಗಂಬಿಲದ ಎರಡು ಅಶಕ್ತ ಕುಟುಂಬಗಳಿಗೆ ತಿಂಗಳ ದಿನಬಳಕೆಯ ದಿನಸಿ ಕಿಟ್ ವಿತರಿಸಲಾಯಿತು.ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಶಕ್ತರಿಗೆ ಅನ್ನದಾನಕ್ಕೆ ಸಹಕರಿಸಿದರು. ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಸ್ಥಾಪಕರೂ ರಾಜ್ ಕೇಟರರ್ಸ್ ನ ಮಾಲಕ ರಾಜೇಶ್ ಕಾಪಿಕಾಡ್ ಎರಡು ಕುಟುಂಬಗಳ ಕಿಟ್ ಗೆ ಸಹಕರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂತೋಷ್ ಬೊಳಿಯಾರ್, ಪ್ರಮುಖರಾದ ಪ್ರಶಾಂತ್ ಕೊಲ್ಯ, ರವಿಶಂಕರ್ ಸೋಮೇಶ್ವರ, ಗಣೇಶ್ , ರೂಪೇಶ್,ಸುಜೀತ್ ಕಂಬ್ಳ ಪದವು, ನವೀನ್ ಶೆಟ್ಟಿ ಕುರ್ನಾಡು,ಮಾಜಿ ಗ್ರಾ.ಪಂ ಸದಸ್ಯ ಪ್ರೇಮಾನಂದ ಪಿಲಾರು, ಬಗಂಬಿಲ ಶಿವಶಕ್ತಿ ಮಿತ್ರ ಮಂಡಳಿಯ ಪ್ರವೀಣ ಐ ಬಗಂಬಿಲ, ಸದಸ್ಯರು,ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಸೂರ್ಯ ಕುಂಪಲ, ದೀಕ್ಷಿತ್ ಪೂಜಾರಿ, ಅರುಣ್, ಕಿಶೋರ್ ಡಿ.ಕೆ. , ಸತೀಶ್ ಚೆಂಬುಗುಡ್ಡೆ,…
ಕೊಣಾಜೆ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಿಕ್ಷಾ ವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಸೋಮವಾರದಂದು ಮುಡಿಪುವಿನಲ್ಲಿ ನಡೆದಿದೆ.ಹೂಹಾಕುವ ಕಲ್ಲು ಸಮೀಪದ ಚಂದ್ರಶೇಖರ್ (೫೮) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಚಂದ್ರಶೇಖರ್ ಅವರು ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮುಡಿಪು ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮುಡಿಪು ಕಡೆಯಿಂದ ಬಾಳೆಪುಣಿ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ್ ತಲೆ ಹಿಂಬದಿಗೆ ತೀವ್ರವಾದ ಗಾಯಗಳಾಗಿದ್ದವು.ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಉಳ್ಳಾಲ: ನೇತ್ರಾವತಿ ನದಿ ತೀರದಿಂದ ಪರವಾನಿಗೆಯಿಲ್ಲದೆ ಮರಳು ಸಾಗಾಟ ನಡೆಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಲಾರಿಗಳ ಚಾಲಕರು, ಮಾಲಕರು , ಉಸ್ತುವಾರಿ ಹಾಗೂ ಲೋಡರ್ ಗಳ ವಿರುದ್ಧ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಕುರಿತು ಪ್ರಕರಣ ದಾಖಲಾಗಿದೆ.ಉಳ್ಳಾಲ ಠಾಣಾ ಪೊಲೀಸರು ಕುತ್ತಾರು ಪ್ರದೇಶದಲ್ಲಿ ರೌಂಡ್ಸ್‍ನಲ್ಲಿದ್ದ ಸಂದರ್ಭ ಎರಡು ಟಿಪ್ಪರ್ ಲಾರಿಗಳನ್ನು ಬರುವುದನ್ನು ಗಮನಿಸಿ ಸಂಶಯಗೊಂಡು ನಿಲ್ಲಿಸಲು ಸೂಚಿಸಿದ್ದರು. ರಸ್ತೆ ಬದಿಯಲ್ಲಿಯೇ ಲಾರಿಗಳನ್ನು ನಿಲ್ಲಿಸಿದ ಚಾಲಕರ ಬಳಿ ಮರಳು ಸಾಗಾಟದ ಪರವಾನಿಗೆಯಿರಲಿಲ್ಲ. ನೇತ್ರಾವತಿ ನದಿಯ ಕಲ್ಲಾಪು ಭಾಗದಿಂದ ಕುತ್ತಾರು ರಸ್ತೆಯಾಗಿ ಮರಳು ಸಾಗಾಟ ನಡೆಸಲಾಗುತಿತ್ತು. ಎರಡು ಲಾರಿಗಳನ್ನು ಮರಳು ಸಮೇತ ವಶಪಡಿಸಿಕೊಂಡಿರುವ ಉಳ್ಳಾಲ ಪೊಲೀಸರು , ಚಾಲಕ ಮೊಹಿಯುದ್ದೀನ್ ಬಾವ, ಪುತ್ತುಬಾವ , ಲಾರಿ ಮಾಲಕರು, ಲೋಡರ್ ಗಳ ವಿರುದ್ಧ ಕೋವಿಡ್ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ಲಕ್ಷ್ಯತನ ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ : ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವನ್ನು ತುರ್ತು ಸ್ಥಿತಿಯಲ್ಲಿ 50 ಆಕ್ಸಿಜನ್ ಬೆಡ್ ಗಳೊಂದಿಗೆ ಸಿದ್ಧ ಪಡಿಸಲಾಗಿದೆ. ಜಿಲ್ಲಾಡಳಿತ ಯೇನೆಪೋಯ ವೈದ್ಯಕೀಯ ಆಸ್ಪತ್ರೆಯೊಂದಿಗೆ ಕೋವಿಡ್ ಕೇರ್ ನಿರ್ವಹಣೆ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ. ಇದರೊಂದಿಗೆ ಆಕ್ಸಿಜನ್ ನಿರ್ವಹಣೆ ( ಕನ್ಸರ್‍ವೇಟರ್)ಘಟಕವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಸ್ಥಾಪಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿ ರೂ.30 ಲಕ್ಷ ರೂ ಬಿಡುಗಡೆಗೊಳಿಸಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ಆರಂಬಿಸುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆಕ್ಸಿಜನ್ ಬೆಡ್ ಗಳ ಸಿದ್ಧತೆಯ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಯೆನೆಪೆÇೀಯ ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೊರೊನ ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಸರ್ವ ಸಿದ್ದತೆಯನ್ನು ನಡೆಸುತ್ತಿದೆ. ಈಗಾಗಲೇ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಖಾಸಗಿ…
ಉಳ್ಳಾಲ: ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್ಫೋಸಿಸ್ ಸಂಸ್ಥೆ ಸಹಕಾರದೊಂದಿಗೆ ನಿರ್ಮಾಣವಾಗಲಿರುವ ವಿದ್ಯುತ್ ಚಿತಾಗಾರದ ನೀಲಿನಕ್ಷೆ ತಯಾರಾಗಿದೆ. ಸ್ಥಳೀಯರ ಆದ್ಯತೆ ಮೇರೆಗೆ ಅವರಿಗೆ ಸಹಕಾರ ಆಗುವಂತ ಸ್ಥಳದಲ್ಲಿ ಚಿತಾಗಾರ ನಿರ್ಮಾಣವಾಗಲಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಜಿಲ್ಲಾಡಳಿತ ಅನುಮತಿ ನೀಡಿರುವ ವಿದ್ಯುತ್ ಚಿತಾಗಾರ ನಿರ್ಮಿಸುವ ಸ್ಥಳದ ಪರಿಶೀಲನೆಯನ್ನು ನಡೆಸಿ ಮಾತನಾಡಿದರು.ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿ ಸಮಿತಿ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ನಿರ್ಮಾಣಕ್ಕಾಗಿ ಹೆಚ್ಚಿನ ಸಹಕಾರ ನೀಡಿದೆ. ಅಲ್ಲಿನ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಲ್ಲಿಸಿದ್ದ ಮನವಿಯಂತೆ ಸ್ಥಳಕ್ಕೆ ಜಿಲ್ಲಾಧಿಕಾರಿಯನ್ನು ಕರೆಸಿ ಮಾತುಕತೆ ನಡೆಸಲಾಗಿತ್ತು. ಇದೀಗ ಕೋವಿಡ್ ಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಇನ್ಫೋಸಿಸ್ ಸಂಸ್ಥೆಯವರ ಸಹಕಾರದ ಜೊತೆಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಅನುಮತಿ ನೀಡಿದ್ದಾರೆ. ಸ್ಥಳೀಯರ ಬೇಕಾದ ಸ್ಥಳದಲ್ಲಿ ಚಿತಾಗಾರ ನಿರ್ಮಿಸಲು ಅಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.ಸ್ಥಳ ಬದಲಾವಣೆಗೆ ಒತ್ತು : ಚಿತಾಗಾರ ನಿರ್ಮಿಸುವ ನಿಗದಿತ ಸ್ಥಳದಲ್ಲಿ ದೈವಸ್ಥಾನ, ನಾಗಬನ ಹಾಗೂ ಶಾಲೆ ಇರುವುದರಿಂದ ಸ್ಮಶಾನದ ಸಮೀಪದ…
ಉಳ್ಳಾಲ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ತೊಂದರೆಯಾದಲ್ಲಿ, ಸಂಶಯಗಳಿದ್ದಲ್ಲಿ ಉಳ್ಳಾಲ ನಗರಸಭೆ ಸಹಾಯವಾಣಿ 8024487311 ಸಂಪರ್ಕಿಸುವಂತೆ ಉಳ್ಳಾಲ ನಗರಸಭೆ ಉಪಾಧ್ಯಕ್ಷ ಐಯೂಬ್ ಮಂಚಿಲ ಹೇಳಿದ್ದಾರೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸಮಗ್ರ ಮಾಹಿತಿ ಕುರಿತು ಬುಧವಾರ ನಡೆಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಹೋಂ ಐಸೊಲೇಷನ್ನಿನಲ್ಲಿ ಇರುವವರ ಕುರಿತು ನಗರಸಭೆ ಸದಸ್ಯರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ನಿಗಾ ವಹಿಸಿ ಯೋಗಕ್ಷೇಮ ವಿಚಾರಿಸಲಾಗುತ್ತಿದೆ. ಕೊರೊನಾ ಸೋಂಕಿತರಿಗಾಗಿ ಹೆಲ್ಪ್ ಲೈನ್ ಅನ್ನು ಆರಂಭಿಸಲಾಗಿದೆ. ಅವಶ್ಯಕತೆ ಬಂದಲ್ಲಿ ನಗರಸಭೆ ವತಿಯಿಂದ ಆಂಬ್ಯುಲೆನ್ಸ್ ಸೇವೆ ನೀಡಲು ಕೂಡ ಸಿದ್ಧರಿದ್ದೇವೆ ಎಂದ ಅವರು ಎಲ್ಲಾ ಧಾರ್ಮಿಕ ಕೇಂದ್ರಗಳು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗಿದೆ .ಮಸೀದಿ ಧ್ವನಿವರ್ಧಕಗಳ ಮೂಲಕವೂ ಪರಿಸರದ ಜನತೆಗೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತಿದೆ. ಪೌರಾಯುಕ್ತರು ಮತ್ತು ತಂಡ ಕೋವಿಡ್ ನಿಗ್ರಹ ಮಾಡುವಲ್ಲಿ ಬಹಳಷ್ಟು ಶ್ರಮಿಸುತ್ತಿದ್ದು, ಜನರು ಅವರೊಂದಿಗೆ ಸಹಕರಿಸಬೇಕು ಎಂದರು.ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್…
UN networks ಉಳ್ಳಾಲ: ಕೋಟೆಕಾರು ಮಂಡಲದಲ್ಲಿ ಕೋವಿಡ್ -19 ತುರ್ತು ನಿರ್ವಹಣಾ ತಂಡ ಕಾರ್ಯಾಚರಣೆ ಆರಂಭಿಸಿದೆ. ಆಸ್ಪತ್ರೆಗಳ ಮಾಹಿತಿಗಾಗಿ:ಅತುಲ್ ಬಗಂಬಿಲ +91 80500 05299ಪ್ರೀತಮ್ ಬಗಂಬಿಲ 98441 86077 ಆಕ್ಸಿಜನ್ ಮತ್ತು ವೆಂಟಿಲೇಟರ್ ಮಾಹಿತಿಗಾಗಿಚಿದಾನಂದ ಮಡ್ಯಾರ್+91 70191 57052ಮೋಹನ್ ರಾಜ್ ಕನೀರ್ ತೋಟ 99802 19655 ವ್ಯಾಕ್ಸಿನೇಶನ್ ಮಾಹಿತಿಗಾಗಿ :ದಿವ್ಯಾ ಮಡ್ಯಾರ್ +91 88618 30474ಸತೀಶ್ ಮಾಡೂರು +91 76194 31649ನವೀನ್ ಮಾಡೂರು 97425 02798 ಅಯುಷ್ಮಾನ್ ಭಾರತದೀನಾಮಣಿ 82173 69132ಪ್ರಮೀಳಾ ಕೊಂಡಾಣ +91 70221 34450 ಔಷಧಿ ಮಾಹಿತಿಗಾಗಿ :ಉದಯಕುಮಾರ್ ಸುಳ್ಳೆಂಜೀರ್ 9901519874ಶೇಖರ್ ಕನೀರ್ ತೋಟ 98456 85915 ರಕ್ತದಾನಆಶಿಕ್ ಮಾಡೂರು +91 7019 020 492ವಿನೂತನ್ ಮಾಡೂರು +91 73533 85390ವಿಜ್ಞೇಶ್ ಕಾಳಿಕಾಂಬ +91 89048 16235

