

ಉಳ್ಳಾಲ: ಗ್ರಾಮದಲ್ಲಿ 44 ಮಂದಿ ಪರೀಕ್ಷೆ ಮಾಡಿಸಿರುವವರ ಪೈಕಿ 21 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಗಂಭೀರ ವಿಚಾರ. ಕೂಡಲೇ ಎಲ್ಲರೂ ಜಾಗರೂಕರಾಗಿ ಜಿಲ್ಲಾಡಳಿತದ ಕ್ರಮದೊಂದಿಗೆ ಕೈಜೋಡಿಸಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಮಂಜನಾಡಿ ಗ್ರಾಮ ಪಂಚಾಯತ್ ನ ದಿ.ಯು.ಟಿ ಫರೀದ್ ಸಭಾಂಗಣದಲ್ಲಿ ಜರಗಿದ ಕೋವಿಡ್-19 ಟಾಸ್ಕ್ ಫೆÇೀಸ್9 ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ಅನುಗುಣವಾಗಿ ಟಾಸ್ಕ್ ಫೆÇೀಸ್9 ಕಾರ್ಯನಿರ್ವಹಿಸುತ್ತಾ ಮುಂದುವರಿಯಬೇಕು. ಲಾಕ್ ಡೌನ್ ಕೊರೊನಾಕ್ಕೆ ಔಷಧಿಯಲ್ಲ. ಹಿಂದೆ ಲಾಕ್ಡೌನ್ ಮಾಡಿದ ನಂತರವೂ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಬಂದಿದೆ. ಸಮರ್ಪಕವಾಗಿ ತಳಮಟ್ಟದಲ್ಲಿ ಆಕ್ಷನ್ ಪ್ಲಾನ್ ರಚಿಸಿದಲ್ಲಿ ಮಾತ್ರ ನಿಯಂತ್ರಣ ಸಾಧ್ಯ. ಗ್ರಾಮಮಟ್ಟ ಮಾತ್ರವಲ್ಲ ವಾಡ್9 ಮಟ್ಟದಲ್ಲೂ ಸಮಿತಿಯನ್ನು ರಚನೆ ಮಾಡಬೇಕು. ಪಾಸಿಟಿವ್ ಪ್ರಕರಣ ಕುರಿತು ಮಾಹಿತಿ ಗ್ರಾ.ಪಂ ಸದಸ್ಯರಲ್ಲಿ ಇರಬೇಕು. ಕೋವಿಡ್ ಟೆಸ್ಟ್ ನೀಡಿದವರು ವರದಿ ಬರುವವರೆಗೆ ಸುತ್ತಾಡದಂತೆ ಬೀಟ್ ಪೆÇಲೀಸರು ಕ್ರಮಕೈಗೊಳ್ಳಬೇಕು. ಅದನ್ನು ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದರು.
ಉಪತಹಶೀಲ್ದಾರ್ ವಿನೋದಾ ಯಸ್. ರಾವ್ , ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಎಂ.ಜೆ.ನಾಗರಾಜ್, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ನಸ್ರೀನಾ ಇಕ್ಬಾಲ್, ಉಪಾಧ್ಯಕ್ಷ ವಿನ್ಸೆಂಟ್ ವೇಗಸ್ , ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಮ್ಯ ಕೆ.ಎಸ್, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಿಸ್ರಿಯಾ, ಗ್ರಾಮಕರಣಿಕ ಪ್ರಸಾದ್
ಲೆಕ್ಕ ಸಹಾಯಕ ಮಂಜಪ್ಪ ಎಸ್. ಹೆಚ್ ಕಾರ್ಯಕ್ರಮ ನಿರೂಪಿಸಿದರು.
ಗ್ರಾ.ಪಂ.ಗೆ ಒಂದು ವಾಹನ !
ತುರ್ತು ಸಂದರ್ಭ ಗ್ರಾಮಕ್ಕೊಂದು ವಾಹನದ ಅಗತ್ಯತೆ ಇದೆ. ಗ್ರಾ.ಪಂ ಆಡಳಿತ ಓಮ್ನಿ ವ್ಯಾನ್ ವ್ಯವಸ್ಥೆ ಮಾಡಬೇಕು. ಔಷಧಿ ನೀಡಲು, ಮಾಹಿತಿ ಪಡೆಯಲು ದೂರದೂರು ನಡೆದುಕೊಂಡು ಹೋಗುವ ಆಶಾಕಾರ್ಯಕರ್ತೆಯರಿಗೆ ವಾಹನ ಸಹಕಾರಿಯಾಗಬೇಕು. ವಾಹನದಲ್ಲಿ ಆಕ್ಸಿಜನ್ ಕಿಟ್ ಅಳವಡಿಸುವ ಯೋಜನೆಯನ್ನು ರೂಪಿಸಬೇಕಿದೆ. ವೆಂಟಿಲೇಟರ್ ಸಂಜೀವಿನಿಯಲ್ಲ, ಅಲ್ಲಿಗೆ ಹೋದವರು ಬದುಕುವುದು ತೀರ ಕಡಿಮೆ. ವೆಂಟಿಲೇಟರ್‍ವರೆಗೆ ಗ್ರಾಮಸ್ಥರು ಹೋಗದಂತೆ ಅಧಿಕಾರಿಗಳು ನೋಡಬೇಕು. ಕೊರೊನಾ ಸಾಯುವ ರೋಗವಲ್ಲ. ನಮ್ಮ ಬೇಜವಾಬ್ದಾರಿಯಿಂದಷ್ಟೇ ಸಾಯುತ್ತಿದ್ದಾರೆ. ಆಕ್ಸಿಮೀಟರ್, ಡಿಜಿಟಲ್ ಥರ್ಮೊಮೀಟರ್ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಲ್ಲಿರುವಂತೆ ಗ್ರಾ.ಪಂ ವ್ಯವಸ್ಥೆ ಮಾಡಬೇಕು ಎಂದರು.
21 ಪಾಸಿಟಿವ್ ಪ್ರಕರಣಗಳು !
ಮಂಜನಾಡಿ ಗ್ರಾಮದಲ್ಲಿ 21 ಪ್ರಕರಣಗಳಿವೆ , 19 ಹೋಂ ಐಸೊಲೇಷನ್‍ನಲ್ಲಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಒಂದು ಸಾವು ಸಂಭವಿಸಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಿಸ್ರಿಯಾ ಹೇಳಿದರು.

