Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ವ್ಯಾಕ್ಸಿನ್ ಟೋಕನ್‍ಗೆ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಕಡ್ಡಾಯ ಪಡೆದುಕೊಳ್ಳಿ : ಶಾಸಕ ಯು.ಟಿ ಖಾದರ್

UllalaVaniBy UllalaVaniJune 15, 2021No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಗ್ರಾಮಮಟ್ಟದಲ್ಲಿ ವ್ಯಾಕ್ಸಿನ್ ಟೋಕನ್ ನೀಡುವ ಸಂದರ್ಭ ಆಧಾರ್ ಕಾರ್ಡ್ ಮೊಬೈಲನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಈ ಮೂಲಕ ಬೇರೆ ಗ್ರಾಮದವರು ವ್ಯಾಕ್ಸಿನ್ ಪಡೆಯುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು
ಮಂಗಳೂರು ತಾಲೂಕಿನ ಮಂಗಳೂರು ಬಿ. (ಉಳ್ಳಾಲ) ಹೋಬಳಿಯ 14 ಗ್ರಾಮಗಳು ಮತ್ತು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು (ಮುಡಿಪು) ಹೋಬಳಿಯ 9 ಗ್ರಾಮಗಳು ಸೇರಿ ಒಟ್ಟು 23 ಗ್ರಾಮಗಳನ್ನೊಳಗೊಂಡ ನೂತನ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಬಳಿಕ ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಳ್ಳಾಲ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಅ„ಕಾರಿಗಳು, ಜನಪ್ರತಿನಿ„ಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮಿಣ ಮಟ್ಟಕ್ಕೂ ಆ್ಯಪ್ ರಚಿಸುವ ಮೂಲಕ ಆಸ್ಪತ್ರೆ ಮಟ್ಟಕ್ಕೆ ಬರುವ ವ್ಯಾಕ್ಸಿನ್ ಗ್ರಾಮ ಮಟ್ಟಕ್ಕೆ ವಿಂಗಡಣೆಗೆ ಸೂಚಿಸುತ್ತೇವೆ. ಈ ಕುರಿತು ಸರಕಾರದ ಗಮನಕ್ಕೆ ತರುತ್ತೇನೆ. ಗ್ರಾಮಕ್ಕೆ ಹೊರಗಿನಿಂದ ಬಂದವರಿಗೆ ವ್ಯಾಕ್ಸಿನ್ ನೀಡಬೇಡಿ. ಗ್ರಾಮದವರಿಗೆ ಟೋಕನ್ ನೀಡಿ. 150 ವ್ಯಾಕ್ಸಿನ್ ಇದ್ದರೆ 300 ಕೂಪನ್ ಒಂದೇ ದಿನ ನೀಡಿ, ಮರುದಿನ ಉಳಿದ 150 ಮಂದಿಗೆ ಟೋಕನ್ ಪ್ರಕಾರ ವ್ಯಾಕ್ಸಿನ ನೀಡಬಹುದು. ಟೋಕನ್ ನೀಡುವ ಸಂದರ್ಭ ಆಧಾರ್ ಕಾರ್ಡು ,ಫೆÇೀನ್ ನಂಬರ್ ಕಡ್ಡಾಯವಾಗಿ ಪಡೆದುಕೊಳ್ಳಿ. ಮುನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ಮಶಾನದ ಬದಿಯಲ್ಲಿರುವ ಜಾಗವನ್ನು ಖಾಸಗಿಯವರು ಲಕ್ಷಾಂತರ ರೂ.ಗೆ ಮಾರಾಟ ಮಾಡುತ್ತಿರುವುದರ ಕುರಿತು ರೆವೆನ್ಯು ಇನ್ಸ್ ಪೆಕ್ಟರ್ , ಗ್ರಾಮಕರಣಿಕರು ತಕ್ಷಣ ಭೇಟಿ ನೀಡಿ ಕ್ರಮಕೈಗೊಳ್ಳಬೇಕು. ಬಸವ ವಸತಿ ಯೋಜನೆ, ಪಿಎಂ.ಐ ಪಟ್ಟಿ ಮಾಡಿ ನೀಡಿದಲ್ಲಿ ಬೆಂಗಳೂರು ಭೇಟಿ ಸಂದರ್ಭ ಸಚಿವರ ಜೊತೆಗೆ ಚರ್ಚಿಸಿ ಮಂಜೂರುಗೊಳಿಸುವ ಪ್ರಯತ್ನ ಮಾಡುತ್ತೇನೆ. ಅಂತಿಮ ಸಂಸ್ಕಾರದ ಹಣ ಮಾರ್ಚ್ ವರೆಗೆ ಬಂದಿದೆ. ಆನಂತರ ಬಂದಿಲ್ಲ. ಅರ್ಜಿಯನ್ನು ಪರಿಷ್ಕರಿಸಿ ಬಾಕಿಯಿರುವವರಿಗೆ ತಕ್ಷಣ ಮಂಜೂರುಗೊಳಿಸಬೇಕಿದೆ. 15 ನೇ ಹಣಕಾಸು ಯೋಜನೆ ರಾಜ್ಯದಲ್ಲೇ ಕಟ್ ಆಗಿದೆ. ಎಂ.ಎಲ್ ಎ ಗ್ರಾಂಟ್ ಕೂಡಾ ಕಟ್ ಆಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಹಿಂದಿನಂತೆ ಮಾಡಲು ಅಸಾಧ್ಯವಾಗಿದೆ. ಕೋವಿಡ್ ಕಾರಣದಿಂದಾಗಿ ರಾಜ್ಯ ಸರಕಾರಕ್ಕೆ ಅನುದಾನ ನೀಡಲು ಅಸಾಧ್ಯವಾಗಿದೆ. ಕಡಲ್ಕೊರೆತ, ನದಿ ಕೊರೆತ , ಗುಡ್ಡ ಜರಿಯುವುದು . ಘಟ್ಟದ ಮೇಲಿನ ನೀರು ನದಿ ಸೇರಿ ಸಮುದ್ರಕ್ಕೆ ಸೇರುವುದು ನನ್ನ ಗ್ರಹಚಾರ. ಜನ ಬೈಯ್ಯುವುದು ಇಲಾಖೆ ಮತ್ತು ನಮ್ಮನ್ನು. ನದಿ ತೀರ ಪ್ರದೇಶದಲ್ಲಿ ಸಣ್ಣ ಬೋಟ್ ಇರಬೇಕು. ಬೋಟ್ ಇರುವವರನ್ನು ತಕ್ಷಣ ಗುರುತಿಸಿ ಇಡುವುದು ಉತ್ತಮ. ಗ್ರಾಮಮಟ್ಟದಲ್ಲಿ ಪ್ರಕೃತಿ ವಿಕೋಪ ಸಭೆಯನ್ನು ತಕ್ಷಣ ಆಯೋಜಿಸಬೇಕು. ಖಾಸಗಿ ಸಂಸ್ಥೆಗಳು ಗ್ರಾಮಕ್ಕೆ ಬರುವುದರಿಂದ ಗ್ರಾಮದ ಅಭಿವೃದ್ಧಿಯಾಗುವುದು. ಇನ್ಫೋಸಿಸ್ ಸಂಸ್ಥೆಯವರು 1 ಕೋಟಿ ರೂ . ವೆಚ್ಚದ ಮುಡಿಪು ಶಾಲೆಗೆ ಶೌಚಾಲಯ, 18 ಕೋಟಿ ನಡುಪದವು-ಮುಡಿಪು ರಸ್ತೆ, 4 ಕೋಟಿ ಮುಡಿಪು ಕಾಲೇಜಿಗೆ ರಸ್ತೆ, 1.80 ಕೋಟಿ ರೂ. ನಲ್ಲಿ ತೊಕ್ಕೊಟ್ಟು ಸ್ಮಶಾನದ ವಿದ್ಯುದ್ದೀಕರಣ. ಅಷ್ಟು ಅನುದಾನ ಸರಕಾರದಿಂದ ನಿರೀಕ್ಷಿಸಲು ಅಸಾಧ್ಯ. ಅಂತಹ ಸಂಸ್ಥೆ ಊರಲ್ಲಿದೆ, ಮುಂದೆಯೂ ಗ್ರಾಮಸ್ಥರಿಗೆ ಸಹಕಾರವಾಗುವ ವಿಶ್ವಾಸವಿದೆ. ಅವರ ಜೊತೆಗೆ ಯುದ್ಧಕ್ಕೆ ಇಳಿಯುವುದರಿಂದ ಲಾಭವಿಲ್ಲ. ಗ್ರಾಮದ ಸಮಸ್ಯೆಗಳಿಗೆ ಜೊತೆಯಾಗಿ ಕುಳಿತು ಸಭೆ ಸೇರಿ ಬಳಿಕ ಪರಿಹರಿಸಬೇಕು.ಸಜಿಪನಡು ಹಿಂದೆ ವಿಟ್ಲ ಕ್ಷೇತ್ರದಲ್ಲಿತ್ತು, ತನ್ನ ಕ್ಷೇತ್ರ ವ್ಯಾಪ್ತಿಗೆ ಬಂದ ಬಳಿಕ ಎಲ್ಲಾ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಹೊಳೆಬದಿಯಿಂದ ತುಂಬೆ ಸೇತುವೆಗೆ ರೂ. 20 ಲಕ್ಷ ಅನುದಾನ ಸರಕಾರದಲ್ಲಿ ಕೇಳಿದ್ದೇನೆ. ಕಾಲುಸಂಕ ಮಾಡುವ ಪ್ರಯತ್ನವನ್ನಾದರೂ ಮಾಡುವ ಚಿಂತನೆಯಿದೆ. ಹರೇಕಳ ಸೇತುವೆ ಕೇಳುವ ಸಂದರ್ಭ ಲೋಕೋಪಯೋಗಿ ಇಲಾಖೆ ಮೂಲಕ ಎರಡು ಸೇತುವೆಗಳನ್ನು ಕೇಳಿದ್ದೆನು. ಒಂದು ಮಂಜೂರಾಗಿ ತುಂಬೆ ಅಣೆಕಟ್ಟಿನಿಂದ 3 ಕಿ.ಮೀ ದೂರದಲ್ಲಿ ಸೇತುವೆ ನಿರ್ಮಿಸುತ್ತಿರುವುದರಿಂದ ಕುಡಿಯುವ ನೀರಿನ ತೊಂದರೆ ಕ್ಷೇತ್ರದಾದ್ಯಂತ ಪರಿಹಾರವಾಗಲಿದೆ ಎಂದರು.

ಸಹಾಯಕ ಆಯುಕ್ತ ಮದನ್ ಮೋಹನ್ ಮಾತನಾಡಿ ` ಮುಂಗಾರು ಆರಂಭದಲ್ಲಿ ಹಲವು ಸಮಸ್ಯೆಗಳು ಎದುರಾಗಲಿವೆ. ಗ್ರಾಮಕರಣಿಕರು ಮತ್ತು ಪಿಡಿಓಗಳು ಸಮನ್ವಯತೆಯೊಂದಿಗೆ ಕೆಲಸ ಮಾಡುವುದು ಅಗತ್ಯ. ಬೇರೆಯವರನ್ನು ಹೊಣೆಯಾಗಿಸುವುದನ್ನು ಎಂದಿಗೂ ಸಹಿಸುವುದಿಲ್ಲ. ಅಪಾಯಕಾರಿ ಸ್ಥಿತಿ ಇರುವ ಜಾಗಗಳನ್ನು ಈಗಲೇ ಗುರುತಿಸಿ, ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಾಣಹಾನಿಯನ್ನು ತಡೆಯಬಹುದು. ಇನ್ಫೋಸಿಸ್ ಎದುರುಗಡೆ ಬಹಳಷ್ಟು ಅಪಾಯದಲ್ಲಿ ಮನೆಗಳಿವೆ. ಸೋಮೇಶ್ವರದಲ್ಲಿಯೂ ನೆರೆಹಾವಳಿ ಪ್ರದೇಶ ಇದೆ, ಜು. 15 ರ ನಂತರ ಮಳೆ ಜೋರಾಗುವ ಸಾಧ್ಯತೆ ಇದೆ. ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಇದ್ದು, ಹಾನಿಯಾದ ಪ್ರದೇಶಕ್ಕೆ ತಕ್ಷಣ ಪರಿಹಾರಧನವನ್ನು ನೀಡಬೇಕಿದೆ ಎಂದರು.

ದ.ಕ.ಜಿಲ್ಲಾ ಸಹಾಯಕ ಆಯುಕ್ತ ಮದನ್ ಮೋಹನ್, ಉಳ್ಳಾಲ ತಾಲೂಕು ನಿಯೋಜಿತ ತಹಶೀಲ್ದಾರ್ ಸಪ್ತಶ್ರೀ, ವಿಶೇಷಾಧಿಕಾರಿ ಅಕ್ರಂ ಬಾಷಾ ನಿಂಗ್‍ಜೋಯಿ., ಮಂಗಳೂರು ತಾಲೂಕು ಕಾರ್ಯನಿರ್ವಹಣಾ„ಕಾರಿ ನಾಗರಾಜ್, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾ„ಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾ„ಕಾರಿ ರಾಜಲಕ್ಷ್ಮಿ, ಪಾಣೆಮಂಗಳೂರು ಹೋಬಳಿ ಕಂದಾಯ ಅ„ಕಾರಿ ರಾಮ, ಉಳ್ಳಾಲ ಹೋಬಳಿ.ಕಂದಾಯ ಅ„ಕಾರಿ ಸ್ಟೀಫನ್, ಉಳ್ಳಾಲ ನಗರಸಭಾ ಕಮಿಷನರ್ ರಾಯಪ್ಪ, ಸೋಮೇಶ್ವರ ಪುರಸಭಾ ಪೌರಾ„ಕಾರಿ ವಾಣಿ ವಿ. ಆಳ್ವ, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾ„ಕಾರಿ ಪ್ರಭಾಕರ್ ಪಾಟೀಲ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಮಲಾರ್ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಉಪಸ್ಥಿತರಿದ್ದರು.
ಬೆಳ್ಮ ಗ್ರಾಮ ಪಂಚಾಯತ್ ಪಿಡಿಓ ನವೀನ್ ಹೆಗ್ಡೆ ನಿರೂಪಿಸಿದರು.

  • ಲಸಿಕೆ ನೀಡುವ ಪ್ರದೇಶದಲ್ಲಿ ಸಾಮಾಜಿಕ ಅಂತರವೇ ಇಲ್ಲ, ಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ, ರಾಜಕೀಯ ಕಾರ್ಯಕ್ರಮಗಳೂ ನಡೆಯುವುದರಿಂದ ಹೇಳಲು ಅಸಾಧ್ಯವಾಗುತ್ತಿದೆ. ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಇರುವ ಅನುದಾನವನ್ನು ಬಳಕೆ ಮಾಡಲು ಸದ್ಯ ಮಾಡಿರುವ ಕ್ರಿಯಾಯೋಜನೆಯನ್ನು ತಿದ್ದುವುದೇ ಕಷ್ಟಕರ. ಬೀದರ್, ಬಿಜಾಪುರದಂತೆ ತುಂಬೆ ಗ್ರಾಮವಿತ್ತು. ಸೇತುವೆ ನಿರ್ಮಾಣದಿಂದ ಬತ್ತಿಹೋದ ಬೋರ್ ವೆಲ್ ಗಳು ತುಂಬಿವೆ.
    ಪ್ರವೀಣ್
    ತುಂಬೆ ಗ್ರಾ.ಪಂ ಅಧ್ಯಕ್ಷರು

*
ಮುನ್ನೂರು ಗ್ರಾಮದಲ್ಲಿ ಸ್ಮಶಾನ, ದಫನ್ ಭೂಮಿ ಬದಿಯ ಸರಕಾರಿ ಜಾಗವನ್ನು ಸೆಂಟ್ಸ್ ಗೆ 1.5 ಲಕ್ಷದಂತೆ ಖಾಸಗಿಯವರು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯವರು ಕ್ರಮವಹಿಸಬೇಕು. ಗ್ರಾಮದಲ್ಲಿ ಗಾಂಜಾ ಹುಡುಗರು ಜಾಸ್ತಿಯಾಗಿದ್ದರೂ , ದೂರು ನೀಡಿದರೂ ಪೆÇಲೀಸರು ಸ್ಪಂಧಿಸುತ್ತಿಲ್ಲ. ಸಾಮಾಜಿಕ ಅಂತರವಿಲ್ಲದೇ ಪಾರ್ಟಿ ನಡೆಯುತ್ತಿದೆ.
ವಿಲ್ಫ್ರೆಡ್
ಮುನ್ನೂರು ಅಧ್ಯಕ್ಷರು

*
ಸಜಿಪನಡು ಅನ್ನುವಂತದ್ದು ಐತಿಹಾಸಿಕ ಸ್ಥಳ , ಜನವಸತಿ ಇರುವ ಸ್ಥಳ. ಸಜಿಪ ಹೊಳೆಬದಿಯಿಂದ ತುಂಬೆಗೆ ಲಘುವಾಹನ ಸೇತುವೆಯಾದರೂ ಅಗತ್ಯ. 20 ಕಿ.ಮೀ ದಾಟಿ ವಿದ್ಯಾರ್ಥಿಗಳು ಆಸ್ಪತ್ರೆ ಮತ್ತು ಶಾಲೆ ಹೋಗಬೇಕಿದೆ. ದೋಣಿ ಮೂಲಕ ದಾಟುವುದೇ ಕಷ್ಟಕರ. ಸಜಿಪನಡು ಗ್ರಾಮಕ್ಕೆ ಲಘುವಾಹನ ಸೇತುವೆಯಾದರೂ ಅಗತ್ಯ ಬೇಕು. ಕಣ್ಣಳತೆ ದೂರದಲ್ಲಿ ಶಾಲೆ, ಆಸ್ಪತ್ರೆಯಿದ್ದರೂ ಹಲವು ಕಿ.ಮೀ ಸಾಗಬೇಕಾಗಿದೆ.

ಅಧ್ಯಕ್ಷರು
ಸಜಿಪನಡು ಗ್ರಾ.ಪಂ

*
ಪಜೀರು ಗ್ರಾಮದ ಸಾಂಬಾರುತೋಟದಲ್ಲಿ ಇನ್ಫೋಸಿಸ್ ಕಂಪೌಂಡ್ ಬಳಿಯಿರುವ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅನುಮತಿ ನೀಡುತ್ತಿಲ್ಲ. ಇದರಿಂದ ಸ್ವಂತ ಜಾಗವಿದ್ದರೂ ಮನೆ ನಿರ್ಮಿಸದ ಸ್ಥಿತಿ ಎಂದು ಪಜೀರು ಗ್ರಾ. ಪಂ ಸದಸ್ಯ ಇಮ್ತಿಯಾಝ್ ಶಾಸಕರಲ್ಲಿ ದೂರಿಕೊಂಡರು. ಇದಕ್ಕೆ ಉತ್ತರಿಸಿದ ಪಜೀರು ಅಭಿವೃದ್ಧಿ ಅಧಿಕಾರಿ ಸ್ಮøತಿ , 2014 ನಲ್ಲಿ ಗ್ರಾ.ಪಂ. ನಲ್ಲಿ ನಡೆದ ಕಾವಲು ಸಮಿತಿ ಸಭೆಯಲ್ಲಿ , ಲೋಕಾಯುಕ್ತ ಪ್ರಕರಣ ಆದ ಬಳಿಕ ಕಂಪೌಂಡಿನಿಂದ 50 ಫೀಟ್ ದೂರ ಮನೆ ನಿರ್ಮಿಸಲು ಅನುಮತಿ ಕೊಡಲು ಸಾಧ್ಯವಿಲ್ಲ ಅನ್ನುವುದನ್ನು ನಿರ್ಣಯಿಸಲಾಗಿತ್ತು. ಇನ್ಫೋಸಿಸ್ ಸಂಸ್ಥೆ ತಡೆಗೋಡೆ ನಿರ್ಮಿಸಿದಲ್ಲಿ ಮಾತ್ರ ಮನೆಗಳನ್ನು ನಿರ್ಮಿಸಬಹುದು ಎಂದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026

ಹರೇಕಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ಸಾರ್ವಜನಿಕರಿಂದ ದೂರು

June 16, 2026

ಕೋಟೆಕಾರು ಪಟ್ಟಣ ಪಂಚಾಯತ್‌ನಲ್ಲಿ ನೂತನ ಡಿಜಿಟಲ್ ನೀರಿನ ಬಿಲ್ ಪಾವತಿ ವ್ಯವಸ್ಥೆಗೆ ಚಾಲನೆ

June 15, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

By UllalaVaniJune 16, 20260

ಉಳ್ಳಾಲ: ಅಪರಿಚಿತ ಗಂಡಸಿನ ಮೃತದೇಹವು ಉಳ್ಳಾಲ ಹೋಯಿಗೆ ಸಮೀಪದ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್…

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಕರ್ನಾಟಕ ಪೊಲೀಸ್ ಇಲಾಖೆಯ ಮಹತ್ವದ ಸುತ್ತೋಲೆ

June 16, 2026

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ : 5.67 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ಮೂವರು ಅರೆಸ್ಟ್

June 16, 2026

ಡೀಸೆಲ್ ಬೆಲೆ ಏರಿಕೆಯಿಂದ ಖಾಸಗಿ ಬಸ್ ಉದ್ಯಮಗೆ ಸಂಕಷ್ಟ: ಟಿಕೆಟ್ ದರ ಪರಿಷ್ಕರಣೆಗೆ ಒತ್ತಾಯ

June 16, 2026
1 2 3 … 1,970 Next
Automatic YouTube Gallery

ಹರೀಶ್ ಉಳ್ಳಾಲರ ಶಿಕ್ಷಣ ಸೇವೆಗೆ ಸಚಿವ ಯು.ಟಿ. ಖಾದರ್ ಶ್ಲಾಘನೆ

ದಿ.ವಿಮಲಾ ಜನಾರ್ಧನ ಸುವರ್ಣ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ;ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ, ಫಲಾನುಭವಿಗಳಿಗೆ ಧನಸಹಾಯ

ಮಂಗಳೂರು ಪುರಭವನದಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಕಾರ್ಯಕ್ರಮಕ್ಕೆ ಚಾಲನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಹರೀಶ್ ಉಳ್ಳಾಲರ ಶಿಕ್ಷಣ ಸೇವೆಗೆ ಸಚಿವ ಯು.ಟಿ. ಖಾದರ್ ಶ್ಲಾಘನೆ
Now Playing
ಹರೀಶ್ ಉಳ್ಳಾಲರ ಶಿಕ್ಷಣ ಸೇವೆಗೆ ಸಚಿವ ಯು.ಟಿ. ಖಾದರ್ ಶ್ಲಾಘನೆ
ದಿ.ವಿಮಲಾ ಜನಾರ್ಧನ ಸುವರ್ಣ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ...
ದಿ.ವಿಮಲಾ ಜನಾರ್ಧನ ಸುವರ್ಣ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ;ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ, ಫಲಾನುಭವಿಗಳಿಗೆ ಧನಸಹಾಯ

ಮಂಗಳೂರು ಪುರಭವನದಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಕಾರ್ಯಕ್ರಮಕ್ಕೆ ಚಾಲನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಬಂಜೆತನದ ಸಮಸ್ಯೆ ಎದುರಿಸುತ್ತಿದ್ದೀರಾ..? ಹಾಗಾದರೆ ಜೂನ್ 20ರಂದು ಇಲ್ಲಿಗೆ ಭೇಟಿ ನೀಡಿ
Now Playing
ಬಂಜೆತನದ ಸಮಸ್ಯೆ ಎದುರಿಸುತ್ತಿದ್ದೀರಾ..? ಹಾಗಾದರೆ ಜೂನ್ 20ರಂದು ಇಲ್ಲಿಗೆ ಭೇಟಿ ನೀಡಿ
ನೋವಾ ಐವಿಎಫ್ ಫರ್ಟಿಲಿಟಿ ವತಿಯಿಂದ ;ಉಚಿತ ಸಂತಾನೋತ್ಪತ್ತಿ ತಪಸಣಾ ಶಿಬಿರ ಜೂನ್ ...
ನೋವಾ ಐವಿಎಫ್ ಫರ್ಟಿಲಿಟಿ ವತಿಯಿಂದ ;ಉಚಿತ ಸಂತಾನೋತ್ಪತ್ತಿ ತಪಸಣಾ ಶಿಬಿರ

ಜೂನ್ 20ರಂದು ಮಂಗಳೂರಿನ ಪಂಪ್‌ವೆಲ್ ಹತ್ತಿರ; ಭೇಟಿ ನೀಡಿ ನಿಮ್ಮ ಪೋಷಕರಾಗುವ ಕನಸನ್ನು ನನಸಾಗಿಸಿಕೊಳ್ಳಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version