



ಉಳ್ಳಾಲ: ಸಂಕಷ್ಟದ ಸಂದರ್ಭ ಜನರಿಗೆ ಆಶ್ರಯವಾಗುವ ಉದ್ದೇಶದಿಂದ ಅಲೋಶಿಯಸ್ ಸಂಸ್ಥೆ ಜಿಲ್ಲೆಯಾದ್ಯಂತ ಆಹಾರ ಕಿಟ್ ಗಳನ್ನು ಒದಗಿಸುತ್ತಿದೆ. ಆದಷ್ಟು ಬೇಗ ಕೋವಿಡ್ ಮಹಾಮಾರಿ ದೂರವಾಗಿ ಎಲ್ಲರೂ ಎಂದಿನಂತೆ ಜೀವನ ನಡೆಸುವಂತಾಗಲಿ ಎಂದು ಸಂತ ಅಲೋಶಿಯಸ್ ಸಂಸ್ಥೆಯ ಕೋವಿಡ್ ಕೇರ್ ಮುಖ್ಯಸ್ಥ ಫಾ. ಸಿರಿಲ್ ಡಿಮೆಲ್ಲೋ ಹೇಳಿದರು.
ಅವರು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ನೀಡಲಾದ ಆಹಾರ ಕಿಟ್ ಗಳನ್ನು
ಕೃಷ್ಣನಗರ, ಉಚ್ಚಿಲ, ಕುಂಪಲ, ತೊಕ್ಕೊಟ್ಟು ಭಾಗದಲ್ಲಿ ವಿತರಿಸಿ ಮಾತನಾಡಿದರು.
ರೇಡಿಯೋ ಸಾರಂಗ್ ಇನ್ಚಾಜ್೯ ರೋಷನ್ ಡಿಮೆಲ್ಲೋ, ಅಲೋಶಿಯಸ್ ಐಟಿಐ ಕಾಲೇಜು ಪ್ರಾಧ್ಯಾಪಕ ವಿಲ್ಸನ್, ರೀಚಲ್ ಸಮಾಜ ಸೇವಾ ಸಂಸ್ಥೆಯ ನಿರ್ಮಾ ಡಿಸೋಜ, ಸಿರಿಲ್ ಡಿಸೋಜ ಉಪಸ್ಥಿತರಿದ್ದರು.

