ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮನೆ ಗೆ ಕಲ್ಲು ತೂರಾಟ ಪ್ರಕರಣದಲ್ಲಿ ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧಿಸಲಾಗಿದೆ. ವಿ ಎಚ್ ಪಿ ಹಾಗೂ ಬಜರಂಗದಳದ ಕಾರ್ಯಕರ್ತರಾದ ಕಲ್ಲಡ್ಕದ ದಿನೇಶ್ (20) ಮತ್ತು ಭರತ್ (24) ಬಂಧಿತ ಆರೋಪಿಗಳಾಗಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯ ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯಪಾಲರ ಕುರಿತು ಎಂ ಎಲ್ ಸಿ ಐವನ್ ಡಿಸೋಜಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಐವನ್ ಡಿಸೋಜಾ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗಸ್ಟ್ 20 ರ ತಡ ರಾತ್ರಿ ಐವನ್ ಡಿಸೋಜಾ ಅವರ ಮನೆಗೆ ಕಲ್ಲು ತೂರಾಟ ನಡೆದಿತ್ತು. ಬೈಕ್ ನಲ್ಲಿ ಬಂದ ಇಬ್ಬರು ಐವನ್ ಮನೆ ಮೇಲೆ ಕಲ್ಲು ತೂರಿ ಪರಾರಿ ಯಾಗಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿ ಇಬ್ಬರನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Author: UllalaVani
ಮಂಗಳೂರು: “ಭಾರತೀಯ ಧರ್ಮ, ಸಂಸ್ಕೃತಿ ಹಿಂದೂ ಜೀವನ ಮೌಲ್ಯಗಳು, ನಂಬಿಕೆ ಮತ್ತು ಸ್ವಾಭಿಮಾನವನ್ನುರಕ್ಷಿಸಲು ಪ್ರಾರಂಭಗೊಂಡ ವಿಶ್ವದ ಅತೀ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷತ್. 1964 ಆಗಸ್ಟ್ 29ರಂದು ಮುಂಬೈಯ ಸಾಂದೀಪಿನಿ ಆಶ್ರಮದಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷತ್ತಿಗೆ ಈ ವರ್ಷ ಷಷ್ಠಿಪೂರ್ತಿ ಸಂಭ್ರಮ. ಕಳೆದ 60 ವರ್ಷಗಳಲ್ಲಿ ಜಗತ್ತಿನ ಹಿಂದುಗಳನ್ನು ಸಂಘಟಿಸುವ ಕಾರ್ಯದೊಂದಿಗೆ ಹಿಂದೂ ಧರ್ಮದ ಆಚರಣೆ, ಪ್ರಚಾರ, ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು, ಕೆಲಸಕಾರ್ಯಗಳನ್ನು ಮಾಡುತ್ತ ಬಂದಿದೆ“ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.”ಭಾರತ ಮಾತ್ರವಲ್ಲದೆ ಅಮೇರಿಕ,ಕನಡಾ, ಆಫ್ರಿಕಾ, ಇಂಗ್ಲೆಂಡ್, ಹಂಗೇರಿ, ಜರ್ಮನಿ, ಫ್ರಾನ್ಸ್ ಕಿನ್ಯ, ಫಿಜಿ, ಶ್ರೀಲಂಕಾ, ಇಂಡೋನೇಷ್ಯಾ, ಮಾರಿಷಸ್, ಥಾಯ್ಲೆಾಂಡ್, ಮಲೇಷಿಯಾ, ಜಪಾನ್ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯ ನಡೆಯುತ್ತಿದೆ. ಮೊದಲನೆಯ ರಾಷ್ಟ್ರೀಯ ಅಧ್ಯಕ್ಷರಾದ ಮೈಸೂರಿನ ಮಹಾರಾಜರಾದ ಜಯಚಾಮರಾಜ ಒಡೆಯರ್ಇವರ ನೇತೃತ್ವದೊಂದಿಗೆ ದೇಶದಲ್ಲಿ ವಿವಿಧ ಮತಪಂಥಗಳ ಪೂಜ್ಯ ಸಾಧು ಸಂತರು, ಧರ್ಮಾಚಾರ್ಯರು,…
ಕೊಣಾಜೆ: ಶ್ರೀ ಕೃಷ್ಣನ ತತ್ವಾದರ್ಷಗಳು ಸಮಾಜಕ್ಕೆ ದಾರಿದೀಪವಾಗಿದೆ. ಇಂತಹ ಹಬ್ಬಗಳನ್ನು ಎಲ್ಲರೂ ಜೊತೆಗೂಡಿ ಆಚರಿಸಿದರೆ ಸಾಮರಸ್ಯ ಸಮಾಜ ನಿರ್ಮಾಣ ಸಾಧ್ಯ. ಕೊಣಾಜೆ ಪರಿಸರದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಇದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು. ಅವರು ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ ,ಮಂಗಳ ಮೊಸರು ಕುಡಿಕೆ ಉತ್ಸವ ಸಮಿತಿ ಕೊಣಾಜೆ,,ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಕೆಳಗಿನಮನೆ ಕೊಣಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಅಂಗವಾಗಿ ನಡೆದ 21ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದದರು.ಸಮಾರಂಭದ ಉದ್ಘಾಟನೆಯನ್ನು ಶ್ರೀ ಉಲ್ಲಾಳ್ತಿ ಅಮ್ಮನವರ ಕ್ಷೇತ್ರ ಕೊಣಾಜೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ ನೆರೆವೇರಿಸಿದರು.ಅಧ್ಯಕ್ಷತೆಯನ್ನು ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಡಿ ಕುಂದರ್ , ಮೂಡ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ದೇವಣ್ಣಶೆಟ್ಟಿ ,ರಾಜೀವ್ ನಾಯ್ಕ್ …
ಮಂಗಳೂರು: ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿ ಗಳಿಗೆ ಗಾಯವಾಗಿ 180 ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಂತೂರು ಶಾಲೆಯಲ್ಲಿ ಮಂಗಳವಾರ ಸಂಭವಿಸಿದೆ. ವಿದ್ಯಾರ್ಥಿಗಳು ಊಟ ಮಾಡಿ ಹೊರಗೆ ಆಟ ಆಡುತ್ತಿರುವಾಗ ಏಕಾಏಕಿಯಾಗಿ ಮೇಲ್ಚಾವಣಿ ಕುಸಿದಿದೆ.ಅದೃಷ್ಟವಶಾತ್ ಎಲ್ಲ ವಿದ್ಯಾರ್ಥಿಗಳು ಶಾಲೆಯ ಹೊರಗೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದ್ದು ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿ ಗಳಿಗೆ ಗಾಯವಾಗಿದ್ದು 180ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಲಾ ವಿದ್ಯಾರ್ಥಿಗಳ ಪೋಷಕರ ದೌಡಾಯಿಸಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಕುಂತೂರು, ಫೀಲ್ಡ್ ಇಂಜಿನಿಯರ್ ಅಮಾನತ್ತು ಮಾಡಲಾಗಿದೆ.ವಿಪತ್ತು ಪರಿಹಾರ ನಿಧಿಯಲ್ಲಿ ಶಾಲೆ ದುರಸ್ತಿ ಕಾರ್ಯಕ್ಕೆ ಹಣ ನೀಡಿದ್ದರು ಆದರೆ ಶಾಲೆಯಲ್ಲಿ ಮಕ್ಕಳನ್ನಿರಿಸಿಕೊಂಡು ದುರುಸ್ತಿ ಕಾರ್ಯಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ರು ಮುಂದಾಗಿದ್ದರು.ಕಾಮಗಾರಿ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
ಮಂಗಳೂರು: ‘ಮುಂಗಾರುಮಳೆ’ ಸಿನಿಮಾ ಖ್ಯಾತಿಯ ಕನ್ನಡದ ಹಿರಿಯ ನಟಿ ಪದ್ಮಜಾರಾವ್ ಲಕ್ಷ ಲಕ್ಷ ರೂ ವಂಚನೆ ಕೇಸ್ ಸಾಬೀತಾಗಿದ್ದು ವಂಚಿಸಿದ ಹಣ ಇನ್ನು ಮೂರು ತಿಂಗಳಿನ ಒಳಗೆ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಜೈಲು ಶಿಕ್ಷೆ ಗೆ ಮಂಗಳೂರು ಕೋಟ್ ೯ ಆದೇಶ ನೀಡಿದೆ. ಸದ್ಯ ಹಿರಿಯ ನಟಿ ಪದ್ಮಜಾರಾವ್ ಚೆಕ್ ಬೌನ್ಸ್ ಸಂಕಷ್ಟ ಎದುರಿಸಿದ್ದಾರೆ.ವಂಚಿಸಿದ ಹಣ ಪಾವತಿಸದೇ ಇದ್ರೆ ಮೂರು ತಿಂಗಳು ಜೈಲು ಶಿಕ್ಷೆಗೆ ಮಂಗಳೂರು ಕೋರ್ಟ್ ಆದೇಶ ನೀಡಿದೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕುಸುಮಾ ಪಾತ್ರದಲ್ಲಿ ನಟಿಸುತ್ತಿರುವ ಪದ್ಮಜಾ ರಾವ್ ಗೆ ಭಾರೀ ಸಂಕಷ್ಟ ಎದುರಾಗಿದೆ.ಪದ್ಮಜಾ ರಾವ್ ಗೆ 40 ಲಕ್ಷ ರೂಪಾಯಿ ಹಣ ನೀಡಬೇಕು ಅಥವಾ 3 ತಿಂಗಳು ಜೈಲು ಶಿಕ್ಷೆ ಅನುಭವಿಸಲು ಎಂದು ಕೋರ್ಟ್ ಅದೇಶ ನೀಡಿದೆ. ತುಳು, ಕನ್ನಡ ಸಿನಿಮಾ ನಿರ್ದೇಶಕ ಮತ್ತು ನಟ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ನಿರ್ಮಾಣ ಸಂಸ್ಥೆಯಿಂದ ಪದ್ಮಜಾ ರಾವ್ ಸಾಲ ಪಡೆದ ಬಗ್ಗೆ ಆರೋಪ ಕೇಳಿಬಂದಿದ್ದು. ಹಂತ…
ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವ ಮುನಿದ ಸ್ಪೋರಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಕಾಮಗಾರಿ ಗುತ್ತಿಗೆದಾರ ಹಾಗೂ ಆರ್ಕಿಟೆಕ್ಟ್ ಬದುಕಿನಲ್ಲಿ ಅವಘಡದ ಬೆನ್ನಲ್ಲೇ ಅವರ ಕುಟುಂಬ ಎಚ್ಚೆತ್ತುಕೊಂಡಿದೆ. ಕೊನೆಗೂ ಗುಳಿಗ ದೈವದ ಮೊರೆ ಹೋದ ಗುತ್ತಿಗೆದಾರ ಮತ್ತು ಆರ್ಕಿಟೆಕ್ಟ್ ಕುಟುಂಬ ಗುಳಿಗ ದೈವಕ್ಕೆ ಕೋಲ ಕೊಡುವ ಹರಕೆ ಹೊತ್ತುಕೊಂಡಿದೆ. ಇಬ್ಬರೂ ಗುಣಮುಖರಾಗುವಂತೆ ಪ್ರಾರ್ಥಿಸಿ ಕೋಲದ ಹರಕೆ ಪ್ರಾರ್ಥನೆ ಮಾಡಿದೆ. ದೈವದ ಮಾತು ದಿಕ್ಕರಿಸಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರನಿಗೆ ಅನಾರೋಗ್ಯ ಎದುರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶರವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ್ದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿತ್ತು. ಸರಣಿ ಅವಘಡದ ಬೆನ್ನಲ್ಲೇ ಎಚ್ಚೆತ್ತ ಕುಟುಂಬಸ್ಥರಿಂದ ಅ.16ರಂದು ದೈವದ ಮೊರೆ ಹೋಗಿದ್ದಾರೆ. ತಮ್ಮ ಆರೋಗ್ಯ ಶೀಘ್ರ ಚೇತರಿಕೆಗಾಗಿ ಶರವು ಮಹಾಗುಳಿಗ ದೈವಕ್ಕೆ ಮೊರೆ ಹೋಗಿದ್ದಾರೆ. ಸದ್ಯ ಮುಂದಿನ ಕೋಲದಲ್ಲೇ ಅಭಯ ನೀಡುವ ಬಗ್ಗೆ ಕುಟುಂಬಸ್ಥರಿಗೆ ದೈವ ನುಡಿದಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವದ ಮುನಿಸು ಯಾಕೆ? ಸ್ಮಾರ್ಟ್…
ಉಳ್ಳಾಲ: ಶೌಚಾಲಯ ಸಮಸ್ಯೆಯ ವಿಚಾರದಲ್ಲಿ ಪಾವೂರು ಗ್ರಾಮದ ಹೆಣ್ಮಕ್ಕಳ ಸಮಸ್ಯೆಗೆ ಸ್ಪಂದಿಸಿ ‘ಉಳ್ಳಾಲವಾಣಿ’ ಪ್ರಕಟಿಸಿದ್ದ ವರದಿಗೆ ಕೊನೆಗೂ ಆಡಳಿತ ವರ್ಗ ಸ್ಪಂದಿಸಿದ್ದು, ಶೌಚಾಲಯ ರಹಿತ ಮನೆಗಳ ಸರ್ವೇ ನಡೆಸಿ ವರದಿ ನೀಡುವಂತೆದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ. ‘ಉಳ್ಳಾಲವಾಣಿ’ ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಮಾಡಿದ್ದು, ಸಮಗ್ರ ಸರ್ವೇ ನಡೆಸಲು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. ಶೌಚಾಲಯವೇ ಇಲ್ಲದೇ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದ ಮಹಿಳೆಯರು, ಮಕ್ಕಳಿಗೆ ಪ್ರತಿಯೊಂದು ಮನೆಗಳಲ್ಲಿ ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿ ವರದಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಗೃಹ ಶೌಚಾಲಯದ ಪ್ರಗತಿಯನ್ನು ತ್ವರಿತವಾಗಿ ಸಾಧಿಸಲು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚನೆ ಮತ್ತು ಕಾರ್ಯಾದೇಶ ವಿತರಣೆ ಪೂರ್ಣಗೊಂಡ ನಂತರ ವಾರಕ್ಕೊಮ್ಮೆ ಪ್ರತಿನಿತ್ಯ ಕಡ್ಡಾಯವಾಗಿ ಶೌಚಾಲಯ ನಿರ್ಮಾಣದ ಕುರಿತು ತಾಲೂಕು ಹಂತದಲ್ಲಿ ಮೇಲ್ವಿಚಾರಣೆ ನಡೆಸುವುದು ಹಾಗೂ ಆ.27 ರಿಂದ ಸೆ.3 ರ ಒಳಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿರುವ ಶೌಚಾಲಯ…
ಮುಡಿಪು: ಇಲ್ಲಿನ ಜನ ಶಿಕ್ಷಣ ಟ್ರಸ್ಟ್ ನಲ್ಲಿ ನಡೆದ ಮಳೆ ನೀರು ಕೊಯ್ಲು ಕೊಳವೆಬಾವಿ ಜಲ ಮರು ಪೂರಣ ಕಾರ್ಯ ಗಾರಕ್ಕೆ ನೆರೆಯ ಉದ್ಯಮಿಗಳಿಬ್ಬರು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸುವ ಮೂಲಕ ಗ್ರಾಮದ ಜಲಸಂರಕ್ಷಣೆಗೆ ಮುನ್ನುಡಿ ಹಾಡಿದ್ದಾರೆ.ಜನ ಶಿಕ್ಷಣ ಟ್ರಸ್ಟ್, ನಿರ್ಮಿತಿ ಕೇಂದ್ರ, ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್, ಚಿತ್ತಾರ ಬಳಗ ಮತ್ತು ಜನ ಜೀವನ ಬಾಳೆಪುಣಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಳೆ ನೀರು ಕೊಯ್ಲು ಅಭಿಯಾನಕ್ಕೆ ಸರ್ವ ರೀತಿಯಲ್ಲೂ ಸಹಕರಿಸುವುದಾಗಿ ಜನ ಜೀವನ ಬಾಳೆಪುಣಿ ಅಧ್ಯಕ್ಷ ರಮೇಶ ಶೇಣವ, ಉದ್ಯಮಿ ರಾಧಕೃಷ್ಣ ರೈ ಉಮಿಯ ತಿಳಿಸಿದ್ದಾರೆ.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾತನಾಡಿ ಪ್ರತಿಯೊಬ್ಬರು ಜಲ ಸಾಕ್ಷರರಾಗಿ ಜಲ ಸಂರಕ್ಷಣೆಯೊAದಿಗೆ ಜಲ ಮರುಪೂರಣ, ನೀರಿಂಗಿಸಲು ಆರಂಭಿಸಿದರೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸ ಬಹುದೆಂದು ತಿಳಿಸಿದ್ದಾರೆ.ಪಿ.ಎ. ಕಾಲೇಜ್ ನ ಫ್ರೊಫೆಸರ್ ಸಿ.ವಿ ಪೂಜಾರ್, ಇರಾ ಪಂ.ಅಧ್ಯಕ್ಷ ಉಮರ್, ಲಯನ್ಸ್ ಅಧ್ಯಕ್ಷ ಮಂಜುನಾಥ ಆಳ್ವ, ಮುಡಿಪು ಪ್ರೌಢ…
ತಲಪಾಡಿ: ಭೂಮಿಯ ಪಾವಿತ್ರö್ಯತೆಯನ್ನು ಕಾಪಾಡುವ ಉದ್ದೇಶಗಳ ಜೊತೆಗೆ ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಅವಿನಾಶಿ ಮಹಾದೇವ ಮಾತೃ ಮಂಡಳಿ ದೇವಿನಗರ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನಾರ್ಹ ಎಂದು ಬಿಜೆಪಿ ಮಂಜನಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ನಿತ್ಯಾನಂದ ಭಂಡಾರಿ ಸಾಂತ್ಯ ಹೇಳಿದ್ದಾರೆ.ಉಳ್ಳಾಲ ತಾಲೂಕಿನ ತಲಪಾಡಿ ದೇವಿನಗರದ ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರ ದೇವಿನಗರ ಇಲ್ಲಿ ಇತ್ತೀಚೆಗೆ ಮಂದಿರ ಮತ್ತು ಶ್ರೀ ಅವಿನಾಶಿ ಮಹಾದೇವ ಮಾತೃ ಮಂಡಳಿ ದೇವಿನಗರ ಇದರ ಸಹಯೋಗದಲ್ಲಿ ಹಮ್ಮಿಕೊಂಡ ಆಟಿಡೊಂಜಿ ದಿನ ಕಾರ್ಯಕ್ರಮ ಮತ್ತು ವನ ಮಹೋತ್ಸವ ಪ್ರಯುಕ್ತ ಪ್ರತಿ ಮನೆಗೆ ಗಿಡ ವಿತರಿಸಿಮಾತನಾಡಿದರು.ಮನೆಗೊಂದು ಗಿಡ ಕೊಡುವ ಮುಖೇನ ಪರಿಸರವನ್ನು ಹಾಗೂ ಅದರ ಪಾವಿತ್ರö್ಯತೆಯನ್ನು ಕಾಪಾಡುವ ಕಾರ್ಯಗಳಾಗುತ್ತವೆ. ಅದಕ್ಕೆ ತಕ್ಕುದಾಗಿ ಔಷಧೀಯ ಸತ್ವಗಳುಳ್ಳ ಆಹಾರಗಳನ್ನು ಆಟಿ ತಿಂಗಳಿನಲ್ಲಿ ತಿನ್ನುವ ಹಾಗೂ ತಿನ್ನಿಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಕಾರಿ ಎಂದರು.ಕುಲಾಲ ಸಂಘ ಕೊಲ್ಯ ಇದರ ಕೋಶಾಧಿಕಾರಿ ಪ್ರಕಾಶ್ ಪಿಲಿಕೂರು, ಮಂದಿರದ ಗೌರವ ಸಲಹೆಗಾರ. ಬಿಜೆಪಿ ರಾಜ್ಯ ಪ್ರಕೋಷ್ಠ…
ದೇರಳಕಟ್ಟೆ : ನರ್ಸಿಂಗ್ ವಿದ್ಯಾರ್ಥಿಗಳು ವೈದ್ಯಕೀಯ ವಿಚಾರಗಳ ಬಗ್ಗೆ ಅಧ್ಯಯನದ ಜೊತೆಗೆ ಅಭ್ಯಾಸ ಮಾಡಬೇಕು. ಅಧ್ಯಯನಕ್ಕೆ ಹೆಚ್ಚಿನ ತರಬೇತಿ ಪಡೆಯಬೇಕಾದ ಅಗತ್ಯ ಇದೆ ಎಂದು ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊಫೆಸರ್ ಕ್ಯಾರೊ ಲ್ ಕರಿಷ್ಮಾ ಆಲ್ಫೋನ್ಸ್ ಹೇಳಿದರು.ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಆಶ್ರಯದಲ್ಲಿ ಶನಿವಾರ ತಂತ್ರಜ್ಞಾನ ಮತ್ತು ಕೌಶಲ್ಯ ಎಂಬ ವಿಚಾರದ ಬಗ್ಗೆ ಸ್ಕಿಲ್ ಲ್ಯಾಬ್ ಆಡಿಟೋರಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ವಿಚಾರ ಮಂಡಿಸಿ ಅವರು ಮಾತನಾಡಿದರು.ಇಂದಿನ ಕಾಲಘಟ್ಟದಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುವವರಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಅರಿವು ಮೂಡಿಸುವ ಕೆಲಸ ಆಗಬೇಕು. ಪ್ರಾಥಮಿಕ ಹಂತದಲ್ಲೇ ಶಿಕ್ಷಕರು ಈ ವಿಚಾರದಲ್ಲಿ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಹೆಲ್ತ್ ಕೇರ್ ಸಿಮ್ಯುಲೇಶನ್ ಶಿಕ್ಷಣದ ಮುಖ್ಯಸ್ಥ ಡಾ. ಲುಲು ಶೆರೀಫ್ ಮಾತನಾಡಿ, ಎಲ್ಲದಕ್ಕೂ ಮೊದಲು ನಾಯಕತ್ವ ಬೇಕು.ವಿದ್ಯಾರ್ಥಿಗಳ ಶಿಕ್ಷಣ ನಾಯಕತ್ವ ಕ್ಕೆ ಅನುಗುಣವಾಗಿ…

