ಮಂಗಳೂರು: ದೇಶದ್ರೋಹಿ ಹೇಳಿಕೆ ನೀಡಿರುವ ಐವನ್ ಡಿಸೋಜ ಮೇಲೆ ಯಾವುದೇ ರೀತಿಯಾದ ಕಾನೂನು ಕ್ರಮ ಕೈಗೊಂಡಿಲ್ಲ. ರಾಜ್ಯಪಾಲರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ ಇಷ್ಟು ದಿನವಾದರೂ ಐವನ್ ವಿರುದ್ದ ಎಫ್ಐಆರ್ ಆಗಿಲ್ಲ. ಈ ಹಿನ್ನಲೆಯಲ್ಲಿ ಬಿಜೆಪಿ ಯುವಮೋರ್ಛಾ ಆಕ್ರೋಶಗೊಂಡಿದ್ದು ಬುಧವಾರದಂದು ಬೃಹತ್ ರಸ್ತೆ ತಡೆಗೆ ಮುಂದಾಗಿದೆ. ಈ ಬಗ್ಗೆ ಮಂಗಳೂರಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವಮೋರ್ಛಾ ದ.ಕ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಹೇಳಿಕೆ ನೀಡಿದ್ದಾರೆ. ಎಂಎಲ್ ಸಿ ಐವನ್ ಡಿಸೋಜಾ ವಿರುದ್ಧ ಬುಧವಾರ ದ.ಕ ಜಿಲ್ಲೆಯಾದ್ಯಂತ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತದೆ. ಬರ್ಕೆ ಠಾಣೆ ಇನ್ಸ್ಪೆಕ್ಟರ್ ದೂರು ಪಡೆದು ಹಿಂಬರಹ ಕೊಟ್ಟಿದ್ದರು.ಕಾನೂನು ಸಲಹೆ ಪಡೆದು ಎಫ್ಐಆರ್ ದಾಖಲಿಸೋ ಭರವಸೆ ನೀಡಿದ್ದರು. ಆದರೆ 48 ಗಂಟೆ ಕಳೆದರೂ ಎಫ್ಐಆರ್ ದಾಖಲಿಸದೇ ಇದ್ದಾಗ ಮುತ್ತಿಗೆ ನಿರ್ಧಾರ ಮಾಡಿದೆವು. ಆಗಲೂ ಮತ್ತೆ ಭರವಸೆ ಕೊಟ್ಟ ಕಾರಣ ನಾವು ಸುಮ್ಮನಾದೆವು. ಐವನ್ ಡಿಸೋಜಾ ಕ್ಷಮೆ ಕೇಳುವ ಬದಲು ಹೇಳಿಕೆ ಸಮರ್ಥನೆ ಮಾಡುತ್ತಾ ಇದ್ದಾರೆ. ಹೀಗಾಗಿ ನಮಗೆ…
Author: UllalaVani
ಅಡ್ಡೂರು: ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯ ದುರಸ್ತಿ ಕಾರ್ಯದ ಹಿನ್ನಲೆ ಸೇತುವೆ ಬಂದ್ ಮಾಡಲಾಗಿದ್ದು ಇದರಿಂದ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಸಂಕಷ್ಟ ಎದುರಾಗಿತ್ತು. ಇದನ್ನು ಮನವರಿಕೆ ಮಾಡಿಕೊಂಡ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ತಮ್ಮ ವೈಯುಕ್ತಿಕ ನೆಲೆಯಲ್ಲಿ ಮಿನಿ ಬಸ್ಸನ್ನು ಖರೀದಿಸಿ ಉಚಿತ ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ.ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯನ್ನು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿಕೊಂಡವರೇ ಹೆಚ್ಚಾಗಿದ್ದಾರೆ. ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಜನರ ಸದುಪಯೋಗಕ್ಕಾಗಿ ವೈಯಕ್ತಿಕ ನೆಲೆಯಲ್ಲಿ ಮಿನಿ ಬಸ್ ಖರೀದಿಸಿ ಉಚಿತ ವಾಹನದ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್ ಕಲ್ಪಿಸಿದ್ದಾರೆ. ಶನಿವಾರದಂದು ಬೆಳಿಗ್ಗೆ ಪೊಳಲಿ ದೇಗುಲದ ಮುಂಭಾಗದಲ್ಲಿ ಅರ್ಚಕರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಈ ಮಿನಿ ಬಸ್ಗೆ ರಾಜೇಶ್ ನಾಯ್ಕ್ ಉಳಿಪಾಡಿಯವರು ಚಾಲನೆ ನೀಡುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.ಪೊಳಲಿ…
ಪೂತ್ತೂರು: ಮನೆಯಲ್ಲಿ ಕೂಡಿ ಹಾಕಿ ಯುವಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವಿಡಿಯೋದ ತುಣುಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ ಎನ್ನಲಾಗಿದೆ. ಬೊಳಂತರು ನಿವಾಸಿ ರಹೀಮ್ ಎಂಬಾತನ ಮೇಲೆ ಯುವಕರ ಗುಂಪು ತದ್ವಾತದ್ವ ಹಲ್ಲೆ ನಡೆಸಿದ್ದು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.ಎಲ್ಲಿ ಈತನಿಗೆ ಹೊಡೆದಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಪೋಲೀಸ್ ಮೂಲದ ಮಾಹಿತಿ ಪ್ರಕಾರ ಪುತ್ತೂರು ಯುವಕರ ತಂಡ ಹುಡುಗಿ ವಿಚಾರದಲ್ಲಿ ಕೂಡಿ ಹಾಕಿ ಥಳಿಸಲಾಗಿರುವ ಮಾಹಿತಿ ಸಿಕ್ಕಿದೆ.ಈ ಬಗ್ಗೆ ಜಿಲ್ಲೆಯ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ.ಪ್ರಕರಣವನ್ನು ರಾಜಿಯಲ್ಲಿ ಮುಗಿಸಿರೋ ಮಾಹಿತಿ ಲಭ್ಯವಾಗಿದೆ.
ಕುತ್ತಾರು: ಬಿಜೆಪಿ ರಾಜ್ಯ ಫಲಾನುಭವಿ ಪ್ರಕೋಷ್ಠದ ಸದಸ್ಯೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆಯಾಗಿರುವ ಧನಲಕ್ಷ್ಮಿ ಗಟ್ಟಿ ಇವರ ಮುನ್ನೂರು ಬೊಳ್ಳಿ ಬೊಲ್ಪು ಭಂಡಾರ ಬೈಲ್ ಗುಡ್ಡೆಯ ಮನೆಯಲ್ಲಿ ಬೆಳೆಸಲಾದ ಗೆಣಸು ಗದೆಯ ಸ್ವರೂಪವನ್ನು ಪಡೆದುಕೊಂಡಿದೆ. ದೊಡ್ಡ ಗಾತ್ರದಲ್ಲಿ ಬೆಳೆದಿರುವ ಈ ಗೆಣಸು 1 ಕೆ.ಜಿ. ಯಿಂದ ಅಧಿಕ ತೂಕವನ್ನು ಹೊಂದಿದೆ.
ಹರೇಕಳ : ದೇಶ ಬಯಲುಶೌಚ ಮುಕ್ತ ಎಂದು ಪ್ರಧಾನಿಯವರು ಹೇಳಿಕೆ ನೀಡಿ ಐದು ವರ್ಷಗಳು ಕಳೆದಿದ್ದರೂ, ಉಳ್ಳಾಲ ತಾಲೂಕು ವ್ಯಾಪ್ತಿಗೆ ಬರುವ ಪಾವೂರು ಗ್ರಾಮದ ಮಂಚವುದಡಿ, ಬಾವಲಿಗುರಿ, ಉಗ್ಗನಬೈಲು, ಇನೋಳಿ ಬಿ ಸೈಟ್ ನ ಏಳು ಮನೆಗಳ ನಿವಾಸಿಗಳು ಈಗಲೂ ಬಹಿರ್ದೆಸೆಗೆ ಹೋಗಬೇಕಾಗಿದೆ. ಆರ್ಥಿಕವಾಗಿ ಹಿಂದುಳಿದ, ಹಿಂದುಳಿದ ವರ್ಗದವರೇ ಇರುವ ಏಳು ಮನೆಗಳಲ್ಲಿ ಈಗಲೂ ಶೌಚಾಲಯಗಳೇ ಇಲ್ಲ. ಪಾವೂರು ಗ್ರಾಮದಲ್ಲಿ ಹಾಕಲಾಗಿರುವ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ನಾಮಫಲಕ ಏಳು ಮನೆಗಳ ಪೈಕಿ ಒಂದು ಮನೆಯಲ್ಲಿ ಒಂಟಿ ಮಹಿಳೆಯಿದ್ದು, ಉಳಿದ ಎಲ್ಲಾ ಮನೆಗಳಲ್ಲಿ ಹೆಣ್ಮಕ್ಕಳು ಸೇರಿದಂತೆ ಮಹಿಳೆಯರೇ ಜಾಸ್ತಿಯಿದ್ದಾರೆ. ಅವರೆಲ್ಲರೂ ಈಗಲೂ ಶೌಚಾಲಯ ನಿರ್ಮಿಸಲು ಆರ್ಥಿಕ ಅಡಚಣೆಯಿರುವುದರಿಂದ ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. ಇತ್ತೀಚೆಗೆ ವಿಧಾನಸಭಾ ಚುನಾವಣೆಗೆ ಮತಬೇಟೆಗೆಂದು ತೆರಳಿದ್ದ ಪಕ್ಷದ ಕಾರ್ಯಕರ್ತರನ್ನು ಅಷ್ಟೂ ಮನೆಮಂದಿ ಝಾಡಿಸಿದ್ದಾರೆ. ಆದರೆ ಈ ಪೈಕಿ ನೋವುಂಡ ಕಾರ್ಯಕರ್ತರೊಬ್ಬರು ಗ್ರಾಮ ಪಂಚಾಯಿತಿನ ಕದ ತಟ್ಟಿದ್ದಾರೆ. ಆದರೂ ಅಧಿಕಾರಿಯಿಂದ ಸ್ಪಂಧನೆ ಸಿಗದೇ ಇದ್ದಾಗ ಮೇಲಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ…
ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೊಮೇಶ್ವರ ನಿರ್ದೇಶನದಲ್ಲಿ ತಯಾರಾದ “ಅನರ್ ಕಲಿ” ತುಳು ಸಿನಿಮಾದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು, “ತುಳು ಭಾಷೆಯ ಉಳಿವಿಗಾಗಿ ತುಳು ನಾಟಕ ಮತ್ತು ಸಿನಿಮಾಗಳ ಪಾತ್ರ ಹೆಚ್ಚಿನದಾಗಿದೆ. ಇದ್ಕಕಾಗಿ ಶ್ರಮ ಪಡುತ್ತಿರುವ ಲೈಟ್ ಬಾಯ್ ನಿಂದ ಹಿಡಿದು ಎಲ್ಲರನ್ನು ಈ ಸಂದರ್ಭದಲ್ಲಿ ನೆನೆಯಬೇಕಿದೆ. “ಅನರ್ಕಲಿ” ತುಳು ಸಿನಿಮಾ ಚೆನ್ನಾಗಿದೆ ಎಂದು ಈಗಾಗಲೇ ಪ್ರೇಕ್ಷಕರು ಬೆನ್ನುತಟ್ಟಿದಾರೆ. ಒಂದು ಒಳ್ಳೆಯ ಪ್ರಯತ್ನವನ್ನು ತುಳುನಾಡಿನ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.ನವನೀತ್ ಶೆಟ್ಟಿ ಕದ್ರಿ ಮಾತನಾಡಿ, ”ನಾವು ಬಾಲ್ಯದಲ್ಲಿ ನೋಡುತ್ತಿದ್ದ ಅನರ್ಕಲಿ ವೇಷವನ್ನು ಮತ್ತೊಮ್ಮೆ ತುಳುನಾಡಿನ ಜನರಿಗೆ ಪರಿಚಯಿಸಲು ಚಿತ್ರತಂಡ ಮುಂದಾಗಿದೆ. ಚಿತ್ರ ನೋಡಿದವರು ಪ್ರಶಂಸೆಯ ಮಾತನಾಡಿದ್ದಾರೆ. ಇದು ನಿಜಕ್ಕೂ ಖುಷಿಯ…
ಉಳ್ಳಾಲ: ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ವಲಯ ವಲಯದ ಹಿರಿಯ ಛಾಯಾಗ್ರಾಹಕಅಬ್ದುಲ್ ಮಜೀದ್ ಅವರನ್ನು ಉಳ್ಳಾಲದ ಸ್ವಗೃಹದಲ್ಲಿ ಸನ್ಮಾನಿಸಿದರು.ಕಳೆದ 30 ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಹೊಂದಿದ ಮಜೀದ್ ರವರು, ನಾಟಕ, ಚಲನ ಚಿತ್ರ, ಟೆಲಿ ಫಿಲಂಗಳಲ್ಲಿಯೂ ಅಭಿನಯಿಸಿದ್ದಾರೆ.ಈ ಸಂದರ್ಭ ಕುಟುಂಬಸ್ಥರು ಹಾಗೂ ವಲಯದ ಅಧ್ಯಕ್ಷ ಪ್ರವೀಣ್ ಬೀರಿ, ಕಾರ್ಯದರ್ಶಿ ನಾಗರಾಜ್, ಕೋಶಾಧಿಕಾರಿ ಸಿದ್ದೀಕ್, ಗೌರವಾಧ್ಯಕ್ಷ ತನುಂಜಯ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ ತೊಕ್ಕೊಟ್ಟು, ಕಟ್ಟಡ ಸಮಿತಿ ಸದಸ್ಯರು ಅರುಣ್ ಉಳ್ಳಾಲ್, ಸಂದೇಶ್, ಸಚಿನ್ ಶೆಟ್ಟಿ, ಸುಶಾನ್ ಶೆಟ್ಟಿ, ಕಿರಣ್ ತಲಪಾಡಿ, ಪದ್ಮನಾಭ ಸುವರ್ಣ, ಸಂತೋಷ್ ಮಾರ್ಲ ಹಾಗೂ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು.
ಗ್ರಾಮಚಾವಡಿ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜನ್ಮದಿನೋತ್ಸವ ಸಮಾರಂಭವುಆ.25ರ ಭಾನುವಾರದಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.ಸಂಜೆ 4.30ಕ್ಕೆ ಕೀರ್ತಿ ಶೇಷ ಶ್ರೀ ಭುಜಂಗ ಕೋಟ್ಯಾನ್ ಪಾವೂರು ವೇದಿಕೆಯಲ್ಲಿ ನಡೆಯಲಿರುವಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ಇದರ ಬ್ರಹ್ಮಕಲಶೋತ್ಸವ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು ವಹಿಸಲಿದ್ದು ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ. ಎಲ್, ಧರ್ಮ ನೆರವೇರಿಸಲಿದ್ದಾರೆ.ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಪ್ರತಿಭಾ ಪುರಸ್ಕಾರ ವಿತರಣೆಯನ್ನು ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನಡೆಸಲಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಬಹುಮಾನ ವಿತರಿಸಲಿದ್ದಾರೆ.ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಸುರೇಶ್ ಭಟ್ನಗರ,ಶ್ರೀ ಗೋಕರ್ಣನಾಥ ಕೊ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರು ಎಂ. ರಾಮಚಂದ್ರ ಮಂಗಳೂರು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ…
ಮಂಗಳೂರು: ಐವನ್ ಡಿ ಸೋಜ ಒಬ್ಬ ಮೆಂಟಲ್ ಗಿರಾಕಿ, ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ ಇವನ ಮನೆಯ ಮೇಲೆ ಕಲ್ಲೂ ತೂರಾಟವನ್ನು ಇವನ ಹುಡುಗರಿಂದಲೇ ಮಾಡಿಸಿರಬಹುದು ಎಂದು ಶಾಸಕ ಭರತ್ ಶೆಟ್ಟಿ ಕಿಡಿಕಾರಿದ್ದಾರೆ. ಮಂಗಳೂರು ಬಿಜೆಪಿ ಪ್ರತಿಭಟನೆಯಲ್ಲಿ ಏಕವಚನದಲ್ಲಿ ಕಾಂಗ್ರೆಸ್ ಎಂ ಎಲ್ ಸಿ ಐವನ್ ಡಿ ಸೋಜ ವಿರುದ್ಧ ಶಾಸಕ ಭರತ್ ಶೆಟ್ಟಿ ಕಿಡಿಕಾಡಿದರು. ಹೆಲ್ಮೆಟ್ ಹಾಕಿದ ಇಬ್ಬರು ಐವನ್ ಡಿ ಸೋಜ ಮನೆ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ .ಇನ್ನೂ ಹೆಲ್ಮೆಟ್ ಹಾಕಿದ ಇಬ್ಬರು ನಾನು ಹಾಗೂ ವೇದವ್ಯಾಸ್ ಕಾಮತ್ ಎಂದು ಕೇಸ್ ಹಾಕುತ್ತಾರೋ ಗೊತ್ತಿಲ್ಲ .ಸಾಕಷ್ಟು ಕೇಸ್ ಹಾಕಿದ್ದಾರೆ ಇನ್ನೂ ರೌಡಿ ಶೀಟರ್. ಆಗಬಹುದೇನೋ ಗೊತ್ತಿಲ್ಲ. ಐವಾನ್ ರಾಜ್ಯಪಾಲರ ಮನೆಗೆ ನುಗ್ಗಿ ಹೊಡಿಯುತ್ತೇವೆ,ಓಡಿಸುತ್ತೇವೆ ಎಂದು ಹೇಳಿದ್ದರು. ಅವರ ಮೇಲೆ ಕೇಸ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ .ಸರಕಾರ ಇದೆ ಎಂಬ ಕಾರಣಕ್ಕೆ ಪೋಲೀಸರು ನಿಮ್ಮ ಆತ್ಮ ಸಾಕ್ಷಿಯಾಗಿ ಸರಿಯಾಗಿ ಕೆಲಸ ಮಾಡಿ .ಐವಾನ್ ಡಿ ಸೊಜಾ…
ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ಪುರಸಭೆಯ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಎಸ್ ಡಿ ಪಿಐ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದ ಗದ್ದುಗೇಯೆರಿದೆ.ಕಾಂಗ್ರೆಸ್ ನ ವಾಸು ಪೂಜಾರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್ಡಿಪಿಐ ಸದಸ್ಯ ಮೋನಿಶ್ ಆಲಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ.ಒಟ್ಟು 27 ಸದಸ್ಯ ಬಲದ ಪುರಸಭೆಯಲ್ಲಿ ಬಹುಮತಕ್ಕೆ 14 ಮತಗಳ ಅಗತ್ಯವಿದ್ದಿತು. ಕಾಂಗ್ರೆಸ್ 12 ಸ್ಥಾನ ಹೊಂದಿತ್ತಾದರೂ ಕಾಂಗ್ರೆಸ್ ಸದಸ್ಯರೊಬ್ಬರ ರಾಜೀನಾಮೆಯಿಂದ ಕಾಂಗ್ರೆಸ್ ಬಲ 11ಕ್ಕೆ ಕುಸಿದಿತ್ತು. ಬಿಜೆಪಿ 11 ಹಾಗೂ ಎಸ್‌ಡಿಪಿಐ 4 ಸದಸ್ಯರ ಬಲ ಹೊಂದಿತ್ತು 11 ಸ್ಥಾನ ಹೊಂದಿರುವ ಬಿಜೆಪಿಗೆ ಸ್ಥಳೀಯ ಶಾಸಕರು ಮತ್ತು ಸಂಸದರ ಮತ ಸೇರಿ 13 ಮತಗಳಿದ್ದವು. ಆದರೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಮೈತ್ರಿ ಸಾಧಿಸಿ 15 ಮತಗಳ ಬಹುಮತದ ಮೂಲಕ ಅಧಿಕಾರಕ್ಕೆ ಕಾಂಗ್ರೆಸ್ ನ ವಾಸು ಪೂಜಾರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್ಡಿಪಿಐ ಸದಸ್ಯ ಮೋನಿಶ್ ಆಲಿಗೆ ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.

