ಕುಂಪಲ: ಧಾರ್ಮಿಕತೆಯ ಅಡಿಪಾಯದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಶಕ್ತಿಯುತ ಕಾರ್ಯವನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಮಾಡಿದೆ, ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಯಶಸ್ಸು ಖಂಡಿತ ಸಾಧ್ಯ ಅದಕ್ಕೆ ಮಂದಿರವನ್ನು ಸ್ಥಾಪಿಸಿದ ಸತೀಶ್ ಕುಂಪಲರೇ ಇಲ್ಲಿ ಉದಾಹರಣೆ. ಶ್ರೀಕೃಷ್ಣ ನ ಸಾರ್ವಕಾಲಿಕ ಸಂದೇಶಗಳು ಹಿಂದೂ ಸಮಾಜಕ್ಕೆ ಶ್ರೀರಕ್ಷೆಯಾಗಲಿ ಎಂದು ದ.ಕ ಜಿಲ್ಲಾ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು. ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆದ ವಿಜೃಂಭಣೆಯ ಕುಂಪಲಾಷ್ಟಮಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರಬದಲ್ಲಿ ಮಂದಿರದ ಪರವಾಗಿ ಸಂಸದರನ್ನು ಸನ್ಮಾನಿಸಲಾಯಿತು. ಕುಂಪಲ ಎಂಬ ಗ್ರಾಮೀಣ ಪ್ರದೇಶವು ಇಂದು ಜಿಲ್ಲೆಯಾದ್ಯಂತ ಪ್ರಸಿದ್ದಿಗೆ ಬರಲು ಕುಂಪಲ ಶ್ರೀ ಬಾಲಕೃಷ್ಣ ಮಂದಿರವೇ ಪ್ರೇರಣೆ, ಕುಂಪಲಾಷ್ಟಮಿ ನಾಡಹಬ್ಬದ ಮೂಲಕ ಊರಿನ 30 ಕ್ಕೂ ಅಧಿಕ ಸಂಘ ಸಂಸ್ಥೆಗಳು ಒಟ್ಟಾಗಿ ಊರಿನ ಉತ್ಸವದ ಯಶಸ್ಸಿನಲ್ಲಿ 27 ವರ್ಷಗಳಿಂದ ಕೈಜೋಡಿಸಿದೆ ಈ ಮೂಲಕ ಹಿಂದೂ ಸಮಾಜ ಒಗ್ಗಟ್ಟಿಗೆ ಬುನಾದಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು, ಮಂದಿರದ ಅಧ್ಯಕ್ಷರಾದ ಸತೀಶ್…
Author: UllalaVani
ಕೊಣಾಜೆ: ಆ ಮಹಿಳೆ ಕೂಡು ಕುಟುಂಬದ ಜೊತೆಗೆ ಬಾಳಿ ಬದುಕಿದ್ದವರು. ಒಂದೇ ಮನೆಯಲ್ಲಿ ಕುಟುಂಬಿಕರ ಜೊತೆ ಸಂತಸದ ಬದುಕು ಕಳೆದವರು. ಆದರೆ ಕ್ರಮೇಣ ಮನೆಯಲ್ಲಿದ್ದವರೆಲ್ಲಾ ದೂರವಾದ ಮೇಲೆ ಅವರು ಒಬ್ಬಂಟಿಯಾದರು. ಒಪ್ಪೊತ್ತಿನ ಊಟಕ್ಕೂ ಏಕಾಂಕಿಯಾಗಿ ಕಷ್ಟ ಪಟ್ಟರು. ಈ ಹೊತ್ತಲ್ಲಿ ಕೈಯ್ಯಲ್ಲಿ ಕಾಸಿಲ್ಲದೇ ವಿದ್ಯುತ್ ಬಿಲ್ ಕೂಡ ಪಾವತಿಸಲು ಸಾಧ್ಯವಾಗದ ಹಂತಕ್ಕೆ ಅವರ ಇಡೀ ಬದುಕೇ ಸಂಕಷ್ಟಕ್ಕೆ ಸಿಲುಕಿತು. ಕೊನೆಗೆ ಮೆಸ್ಕಾಂನವರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಕಾರಣ ಅವರ ಮನೆಯಿಡೀ ಕತ್ತಲು ಆವರಿಸಿತು. ಆದರೀಗ ಹಲವು ವರ್ಷಗಳ ಬಳಿಕ `ಉಳ್ಳಾಲ ವಾಣಿ’ ಮೂಲಕ ಅವರ ಬದುಕಲ್ಲಿ ಗೃಹಜ್ಯೋತಿ ಬೆಳಗಿಸಿದೆ. ಇದು ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದ ದಾಸರಮೂಲೆ ಮನೆಯ ಒಂಟಿ ಮಹಿಳೆ ವೀಣಾರ ಕರುಳು ಹಿಂಡುವ ಕಥೆ. ಒಂದು ಕಾಲದಲ್ಲಿ ಕೂಡು ಕುಟುಂಬದಲ್ಲಿದ್ದ ವೀಣಾ ಕ್ರಮೇಣ ಎಲ್ಲರನ್ನೂ ಕಳೆದುಕಂಡು ಒಂಟಿಯಾದರು. ಆ ಬಳಿಕ ದಾಸರಮೂಲೆಯ ಮನೆಯಲ್ಲಿ ಬೀಡಿ ಕಟ್ಟಿಕೊಂಡು ಏಕಾಂಗಿಯಾಗಿ ಬದುಕಲು ಆರಂಭಿಸಿದರು. ಈ ಹೊತ್ತಿಗೆ ತುತ್ತು ಅನ್ನಕ್ಕೂ…
ಉಳ್ಳಾಲ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ೭ ನೇ ವೇತನ ಆಯೋಗದಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಅನ್ಯಾಯವಾಗಿದೆ. ಜು.೧, ೨೦೨೨ ರಿಂದ ೨೦೨೪ರ ಜು.೩೧ರ ಅವಧಿಯಲ್ಲಿ ನಿವೃತ್ತಿ ಹೊಂದಿದವರಿಗೆ ಲಕ್ಷಾಂತರ ರೂ. ವ್ಯತ್ಯಾಸ ಉಂಟಾಗಿದೆ. ಇದನ್ನು ರಾಜ್ಯ ಸರಕಾರ ಪರಿಷ್ಕರಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿವೃತ್ತ ಅಧಿಕಾರಿ ಹಾಗೂ ಉಳ್ಳಾಲ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ವೇದಿಕೆ ತಾಲೂಕು ಸಂಚಾಲಕಿ ಮಂಜುಳ ಒತ್ತಾಯಿಸಿದ್ದಾರೆ. ಅವರು ಉಳ್ಳಾಲ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ವೇದಿಕೆ ವತಿಯಿಂದ ತೊಕ್ಕೊಟ್ಟು ಒಳಪೇಟೆ ಸಂತ ಸೆಬಾಸ್ಟಿಯನ್ ಆಡಿಟೋರಿಯಂ ಕಟ್ಟಡದಲ್ಲಿ ನಡೆಸಿದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಒತ್ತಾಯಿಸಿದರು.೭ನೇ ವೇತನ ಆಯೋಗದ ವರದಿಯಲ್ಲಿ ೨೦೨೨ರ ಜು.೧ ರಿಂದ ೨೦೨೪ರ ಜು.೩೧ರ ಅವಧಿಯಲ್ಲಿ ನಿವೃತ್ತರಾದ ವೇತನ ಶ್ರೇಣಿಯ ನಿಗದಿಯನ್ನು ಕಾಲ್ಪನಿಕವಾಗಿ ನಿಗದಿ ಮಾಡುವಂತೆ ಆದೇಶ ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ಈ ಆರ್ಥಿಕ ಸೌಲಭ್ಯವನ್ನು ೨೦೨೪ ರ ಆ.೧ರಲ್ಲಿ ನೀಡುವಂತೆ ಆದೇಶ ದಲ್ಲಿ…
ಕೋಟೆಕಾರು: ಚುನಾವಣೆ ಪೂರ್ವ ಸೇತುವೆ ಬೇಡಿಕೆಯನ್ನಿಟ್ಟು ಬೆಂಬಲಿಸುವ ವಿಶ್ವಾಸವನ್ನಿಟ್ಟದ್ದರು. ಅದರಂತೆ ಉಚ್ಚಿಲ- ಅಜ್ಜಿನಡ್ಕ ಸಂಪರ್ಕಿಸುವ ಜನರಿಗೆ ಸಹಕಾರವಾಗುವಂತೆ ಸೇತುವೆಯನ್ನು ನಿರ್ಮಿಸಲಾಗಿದ್ದು, ಇದು ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಅವರು ಕೋಟೆಕಾರು ಪಟ್ಟಣ ಪಂಚಾಯತ್ ೨೦೨೩-೨೪ನೇ ಸಾಲಿನ ಪಟ್ಟಣ ಪಂಚಾಯತ್ ನಿಧಿಯಡಿ ವಾರ್ಡ್ ಸಂಖ್ಯೆ ೮ ಉಚ್ಚಿಲ ಬಳಿ ರೂ.೩೫ ಲಕ್ಷ ಅಂದಾಜು ಮೊತ್ತದಲ್ಲಿ ನಿರ್ಮಿಸಲಾದ ಸೇತುವೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಪ್ರದೇಶದ ಸೇತುವೆ, ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ನೂತನ ಸೇತುವೆ ಪ್ರದೇಶದ ಅಭಿವೃದ್ಧಿಗೆ ದೊಡ್ಡ ಮಟ್ಟಿನ ವೇದಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಉಚ್ಚಿಲದ ಅಭಿವೃದ್ಧಿಯನ್ನು ಊಹಿಸಲು ಅಸಾಧ್ಯ. ಒಟ್ಟು ಜನರ ಸಹಕಾರದಿಂದ ಉತ್ತಮ ಗುಣಮಟ್ಟದ ಸೇತುವೆಯ ನಿರ್ಮಾಣವಾಗಿದೆ ಎಂದರು. ಈ ಸಂದರ್ಭ ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ತಾ.ಪಂ ಮಾಜಿ ಅಧ್ಯಕ್ಷ ಮುಸ್ತಾಫ ಹರೇಕಳ , ಮಂಗಳೂರು ಮಂಡಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಜಿ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ಕೌನ್ಸಿಲರುಗಳಾದ ಅಹಮ್ಮದ್ ಬಾವಾ ಅಜ್ಜಿನಡ್ಕ ,…
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಹೋಟೆಲ್ ಬಳಿ ಯುವತಿಯೊಬ್ಬಳ ಮೇಲೆ ಯುವಕರ ಗುಂಪೊಂದು ದೌರ್ಜನ್ಯ ಎಸಗಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಯುವತಿಯ ಕೆನ್ನೆಗೆ ಬಾರಿಸಿ ಯುವಕರ ತಂಡದಿಂದ ಪುಂಡಾಟದ ಆರೋಪ ವ್ಯಕ್ತವಾಗಿದೆ. ಯುವತಿ ದೂರು ಕೊಟ್ಟರೂ ಕ್ರಮ ಕೈಗೊಳ್ಳದೇ ಮಂಗಳೂರು ಪೊಲೀಸರು ಪ್ರಭಾವಕ್ಕೆ ಒಳಗಾದ್ರಾ ಎಂಬ ಅನುಮಾನವನ್ನು ಯುವತಿ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಫುಡ್ ಲ್ಯಾಂಡ್ ಹೋಟೆಲ್ ಬಳಿ ಯುವತಿಯ ಮೈ ಕೈ ಮುಟ್ಟಿ ಕೆನ್ನೆಗೆ ಬಾರಿಸಿ ಹಲ್ಲೆ ಆರೋಪ ವ್ಯಕ್ತವಾಗಿದ್ದು, ಸುಮಾರು 10-20 ಜನರಿಂದ ಯುವತಿ ಹಾಗೂ ಕಾರ್ ಡ್ರೈವರ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಆಗಸ್ಟ್ 25 ರಂದು ಲಾಲ್ ಭಾಗ್ ನ ಫುಡ್ ಲ್ಯಾಂಡ್ ಹೋಟೆಲ್ ಗೆ ಆತ್ಮೀಯರೊಂದಿಗೆ ತೆರಳಿದ್ದ ಯುವತಿ ವಾಶ್ ರೂಮ್ ಗೆ ತೆರಳಿದ್ದ ವೇಳೆ ಮಹಿಳೆಯರ ಶೌಚಾಲಯದಲ್ಲಿ ಯುವಕನೊಬ್ಬ ಇದ್ದನಂತೆ. ಬಳಿಕ ಅಲ್ಲಿಂದ ಹೊರ ಬಂದ ಯುವಕರ ಗುಂಪಿನಿಂದ ಅನುಚಿತ ವರ್ತನೆ ಆರೋಪ ಮಾಡಲಾಗಿದೆ. ಈ ಬಗ್ಗೆ ಹೋಟೆಲ್ ಸಿಬ್ಬಂದಿಗೆ ದೂರು ನೀಡಿ ಯುವತಿ…
ಉಳ್ಳಾಲ: ಉಳ್ಳಾಲ ನಗರ ಸಭೆ ಯ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಗುರುವಾರ ನಡೆಯಿತು.ಅಧ್ಯಕ್ಷ ರಾಗಿ ಕಾಂಗ್ರೆಸ್ ನ ಶಶಿ ಕಲಾ, ಉಪಾಧ್ಯಕ್ಷ ರಾಗಿ ಸಪ್ನಾ ಹರೀಶ್ ಆಯ್ಕೆ ಆದರು .ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿ ಕಲಾ ಬಿಜೆಪಿಯಿಂದ ಭವಾನಿ ,ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸಪ್ನಾ ಹರೀಶ್, ಬಿಜೆಪಿ ಯಿಂದ ನಮಿತ , ಎಸ್ ಡಿಪಿಐ ಯಿಂದ ಝರೀನ ರವೂಫ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿಕಲಾ ಪರ 23 ಮತಗಳು, ಬಿಜೆಪಿ ಯ ಭವಾನಿ ಪರ 6 ಮತಗಳು ಚಲಾವಣೆ ಆಗಿದ್ದು, ಇಬ್ಬರು ತಟಸ್ಥ ರಾದರು.ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಗಳು ಇಳಿದಿದ್ದ ಕಾಂಗ್ರೆಸ್ ನ ಸಪ್ನಾ ಹರೀಶ್ 17 ಎಸ್ ಡಿಪಿಐ ಯ ಝರೀನ ರವೂಫ್ ಪರ ಆರು ಬಿಜೆಪಿಯ ನಮಿತ ಪರ ಆರು ಮತಗಳು ಚಲಾವಣೆ ಆದವು.ಇಬ್ಬರು ಜೆಡಿಎಸ್ ಕೌನ್ಸಿಲರ್ ಗಳು ತಟಸ್ಥ ರಾದರು.23 ಮತ ಪಡೆದ ಶಶಿಕಲಾ ಅಧ್ಯಕ್ಷ ರಾಗಿ,17…
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಆಯ್ಕೆಯಾಗಿದ್ದು ಪ್ರವೀಣ್ ಬಗಂಬಿಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದಿವ್ಯಾ ಸತೀಶ್ ಶೆಟ್ಟಿ ತನ್ನ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಹರೀಶ್ ರಾವ್ ವಿರುದ್ದ 12~ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರವೀಣ್ ಬಗಂಬಿಲ ಅವರು ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಜ್ಜಿನಡ್ಕ ಅವರನ್ನು 12- 6 ಅಂತರದಲ್ಲಿ ಸೋಲಿಸಿ ಜಯಗಳಿಸಿದರು.17 ಸದಸ್ಯರನ್ನು ಹೊಂದಿರುವ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 11 ಸ್ಥಾನವನ್ಬು ಹೊಂದಿದ್ದು ಚುನಾವಣೆಯಲ್ಲಿ ಸಂಸದ ಬ್ರಿಜೇಶ್ ಚೌಟ ಮತದಾನ ಮಾಡಿದ್ದರಿಂದ 12 ಮತಗಳನ್ನು ಪಡೆದರೆ ಕಾಂಗ್ರೆಸ್ ನ 4 ಸದಸ್ಯರು, ಪಕ್ಷೇತರ ಮತ್ತು ಎಸ್ ಡಿಪಿಐ ನ 2 ಸದಸ್ಯರು ಪಕ್ಷೇತರ ಅಧ್ಯಕ್ಷ ಮತ್ತು ಕಾಮನಗ್ರೆಸ್ನ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ಮತದಾನ ಮಾಡಿದ್ದರುಕಳೆದ ಹಲವು ವರುಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಕೋಟೆಕಾರು ಪಟ್ಟಣ ಪಂಚಾಯತ್ ಆಗಿ ಮೆರಲ್ದರ್ಜೆಗೆ…
ಉಳ್ಳಾಲ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಆರೋಪಿಗ ಸಹಿತ 15 ಗ್ರಾಂ ಎಂಡಿಎಂಎ ಮಾದಕವಸ್ತುಗಳನ್ನು ಮಂಗಳೂರು ಸಿಸಿಬಿ ಪೊಲೀಸರ ವಶಪಡಿಸಿಕೊಂಡಿದ್ದಾರೆ. ಕಾಸರಗೋಡಿನ ಅಬ್ದುಲ್ ಸಲಾಂ(30), ಹಾಗೂ ಮಂಜೇಶ್ವರದ ಸೂರಜ್ ರೈ ಅಂಕಿ(26) ಬಂಧಿತರು. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಲಪಾಡಿ ಕೆ.ಸಿ. ರೋಡ್ ಬಳಿ ದ್ವಿಚಕ್ರ ವಾಹನದಲ್ಲಿ ಮಶದಕವಸ್ತುಗಳನ್ನು ಮಾರಾಟ ಮಾಡಲು ಯತ್ನ ಮಾಡುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. 75 ಸಾವಿರ ಮೌಲ್ಯದ 15 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ ,2 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕಮಾಪಕ ಹಾಗೂ ಡಿಯೋ ದ್ವಿಚಕ್ರ ವಾಹನವನ್ನು ಪೊಲೀರು ವಶಪಡಿಸಿಕೊಂಡಿದ್ದಾರ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಂಗಳೂರು : ಅ.13 ರಂದು ದುಬೈ ಊದ್ ಮೇತದಲ್ಲಿರುವ ದುಬೈ ಜೆಮ್ ಶಾಲಾ ಸಭಾಂಗಣದಲ್ಲಿ ನಡೆಯುವ ದುಬೈ ಗಡಿನಾಡ ಉತ್ಸವದ ಲಾಂಛನವನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆಗೊಳಿಸಿದರು.ಸಮಾರಂಭದಲ್ಲಿ ಸಂಸದ ಎಂ.ಕೆ.ರಾಘವನ್ , ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ದುಬೈ ಗಡಿನಾಡ ಉತ್ಸವದ ಸಂಚಾಲಕ ಝಡ್ ಎ ಕಯ್ಯಾರ್ ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ : ಕಡಿಮೆ ಅನುದಾನದಲ್ಲಿ ಅತಿ ಹೆಚ್ಚು ಸವಲತ್ತುಗಳೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಜಲಾಲ್ ಬಾಗ್ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡಿದ್ದು, ಇದು ಊರಿನ ಜನರ ಗೌರವ ಹಾಗೂ ಸ್ವಾಭಿಮಾನದ ಸಂಕೇತ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು. ಅವರು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾಡ್೯ ಸಂಖ್ಯೆ 12 ರ ಜಲಾಲ್ ಬಾಗ್ 2 ನೇ ಅಡ್ಡ ರಸ್ತೆ ಬಳಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಿಟಿ) ಯೋಜನೆಯ ರೂ.10 ಲಕ್ಷ ಅನುದಾನದಡಿ ನಿರ್ಮಿಸಿದ ಅಂಗನವಾಡಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹಲವು ವರ್ಷಗಳಿಂದ ಬಾಡಿಗೆ ಮನೆಯನ್ನು ರಚಿಸಿ ಮಕ್ಕಳಿಗಾಗಿ ಊರವರೇ ಸೇರಿಕೊಂಡು ಅಂಗನವಾಡಿ ನಿರ್ಮಿಸಿ, ಅವರಾಗಿಯೇ ಬಾಡಿಗೆಯನ್ನು ಪಾವತಿಸಿ ಬಳಿಕ ಸರಕಾರದಡಿ ತಂದೊಪ್ಪಿಸಿ ಅಧಿಕೃತ ಅಂಗನವಾಡಿಯನ್ನಾಗಿ ರಚಿಸಿದ್ದಾರೆ. ತದನಂತರ ಅಂಗನವಾಡಿ ಕಟ್ಟಡಕ್ಕೆ ಅನುದಾನಕ್ಕೆ ಬೇಡಿಕೆಯಿಟ್ಟು, ಇದೀಗ ಸುಸಜ್ಜಿತ ಕಟ್ಟಡದ ನಿರ್ಮಾಣವಾಗಿದೆ. ಸ್ಥಳದಾನ ನೀಡಿದ ವಕೀಲರಾದ ಮಹಮ್ಮದ್ ಆಲಿ ಹಾಗೂ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಕಟ್ಟಡ ರಚಿಸಿದ ಗುತ್ತಿಗೆದಾರರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ಪ್ರಾಮಾಣಿಕತೆ …

